Evening Digest: ಉಗ್ರರ ದಾಳಿಗೆ ಐವರು ಯೋಧರು ಹುತಾತ್ಮ; ಬೆಂಗಳೂರಲ್ಲಿ ರಜನಿಕಾಂತ್ ಪ್ರತ್ಯಕ್ಷ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಉಗ್ರರ ದಾಳಿಗೆ ಐವರು ಯೋಧರು ಹುತಾತ್ಮ : ಕಾಶ್ಮೀರದಲ್ಲಿ(Jammu Kashmir) ಕಳೆದೊಂದು ವಾರದಿಂದ ಅಟ್ಟಹಾಸ ಮೆರೆಯುತ್ತಿರುವ ಉಗ್ರರು, ಇಂದೂ ತಮ್ಮ ಕ್ರೌರ್ಯವನ್ನ ಮುಂದುವರಿಸಿದ್ದಾರೆ. ಕಾಶ್ಮೀರದ ಪೂಂಚ್(Poonch)​ ಪ್ರದೇಶದಲ್ಲಿ ಭಯೋತ್ಪಾದಕರು(Militants) ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಅಧಿಕಾರಿ ಹಾಗೂ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಗುಡ್ಡ ಗಾಡು ಪ್ರದೇಶಕ್ಕೆ ಉಗ್ರರು ಪರಾರಿಯಾಗಿ ಅವಿತುಕೊಂಡಿದ್ದಾರೆ. ಘಟನೆ ನಡೆಸ ಸ್ಥಳ ಸುತ್ತುವರೆದಿರು ಯೋಧರು ಉಗ್ರರಿಗಾಗಿ ಬೇಟೆ ಮುಂದುವರಿಸಿದ್ದಾರೆ. ಭದ್ರತಾ ಪಡೆಗಳನ್ನ ಕಂಡು ರಣಹೇಡಿಗಳಂತೆ ಉಗ್ರರು ಗುಡ್ಡಗಾಡು ಪ್ರದೇಶಕ್ಕೆ ತೆರಳಿ ಅವಿತುಕೊಂಡು ಕುಳಿತಿದ್ದಾರೆ. ಇನ್ನೂ ನಿನ್ನೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು. ದಕ್ಷಿಣ ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಮಂಜ್ಗಾಮ್​ನಲ್ಲಿ ಈ ದಾಳಿ ನಡೆದಿತ್ತು. ಭದ್ರತಾ ಪಡೆ ಹಾಗೂ ಉಗ್ರರ ಎನ್​ಕೌಂಟರ್​ ವೇಳೆ, ಇಬ್ಬರು ಪೊಲೀಸರು ಗಾಯಗೊಂಡಿದ್ದರು .

ಮೂವರು ಬಾಲಕರು ಪತ್ತೆ

ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ 7 ಜನ ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಮೂವರು ಮಕ್ಕಳು ಪತ್ತೆ ಆಗಿದ್ದಾರೆ. ಬಾಗಲಗುಂಟೆ ಠಾಣ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ನಾಪತ್ತೆಯಾಗಿದ್ದ ಮೂರು ಜನ ಮಕ್ಕಳು ಇಂದು ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಳಿ ಪತ್ತೆಯಾಗಿದ್ದಾರೆ. ಉಪ್ಪಾರಪೇಟೆ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ.‌ ಎಸ್.ಎಸ್.ಎಲ್.ಸಿ ವ್ಯಾಸಾಂಗ ಮಾಡುತ್ತಿದ್ದ ನಂದನ್, ಕಿರಣ್ ,ಪರೀಕ್ಷಿತ್ ಮೂವರು ವಿದ್ಯಾರ್ಥಿಗಳನ್ನು ಉಪ್ಪಾರಪೇಟೆ ಪೊಲೀಸ್ ಠಾಣೆ ರಕ್ಷಿಸಿದ್ದು ಮಕ್ಕಳ‌ ಪೋಷಕರು ಹಾಗೂ ಬಾಗಲಗುಂಟೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಸಹಪಾಠಿಗಳು ಶುಕ್ರವಾರ ಶಾಲೆಯಲ್ಲಿಯೇ ಮನೆ ಬಿಡುವ ನಿರ್ಧಾರ ಮಾಡಿದ್ದರು.  ಪೂರ್ವ ನಿರ್ಧಾರದಂತೆ ಶನಿವಾರ ಬೆಳಗ್ಗೆ ಎಂದಿನಂತೆ ಜಾಗಿಂಗ್ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ 5.30 ಕ್ಕೆ ಮನೆಯಿಂದ ಹೊರಟ್ಟಿದ್ದರು. ಮನೆಯಿಂದ ಹೊರಗೆ ಬಂದಿದ್ದ ಮೂವರು ಮಕ್ಕಳು ತಲಾ ಒಂದೊಂದು ಸಾವಿರ ಹಣ ತಂದಿದ್ದರು ಎನ್ನಲಾಗಿದೆ.

ನಿಖಿಲ್ ಸೋಲಿಗೆ ಸಿದ್ದರಾಮಯ್ಯ ಕಾರಣ

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (siddaramaiah ) ಹಾಗೂ ಎಚ್​.ಡಿ.ಕುಮಾರಸ್ವಾಮಿ (hd kumaraswamy )ಮಧ್ಯೆ ಆರೋಪ-ಪ್ರತ್ಯಾರೋಪಗಳ ಜಟಾಪಟಿ ಮುಂದುವರೆದಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತನ್ನ ಪುತ್ರ ನಿಖಿಲ್​ ಸೋಲಲು ಸಿದ್ದರಾಮಯ್ಯನೇ ಕಾರಣ ಎಂಬ ಎಚ್​ಡಿಕೆ ಆರೋಪಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನನಗೆ ಮಂಡ್ಯದಲ್ಲಿ ಸೋಲಿಸುವ ಶಕ್ತಿ ಇದೆಯಲ್ಲ. ಮಂಡ್ಯದಲ್ಲಿ ಸೋಲಿಸುವ ಶಕ್ತಿಗೆ ಬೆನ್ನು ತಟ್ರಯ್ಯ ಎಂದು ವ್ಯಂಗ್ಯವಾಡಿದರು. ಹಾಗಾದ್ರೆ ಹಾಸನದಲ್ಲಿ ಗೆಲ್ಲಿಸಿದ್ದು ಯಾರು ಎಂದು ಪ್ರಶ್ನಿಸಿದರು. ಕಳೆದ ಲೋಕಸಭಾ ಚುನವಾಣೆಯಲ್ಲಿ ಜೆಡಿಎಸ್​ ಹಾಸನದಲ್ಲಿ ಮಾತ್ರ ಗೆಲುವನ್ನು ಕಂಡಿತ್ತು.

ಹನಿಟ್ರ್ಯಾಪ್ ಮಾಡಿದ್ದ ಮಹಿಳೆ ಸೇರಿ ನಾಲ್ವರ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹನಿಟ್ರ್ಯಾಪ್ (Honey Trap In Bengaluru) ಚಟುವಟಿಕೆಗಳು ಮುಂದುವರಿದಿವೆ.  ಟೆಕ್ಕಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ (Honey Trap Gang) ಒಂದು ಬೆಂಗಳೂರಿನಲ್ಲಿ ಖಾಕಿ ಪಡೆ ಬಲೆಗೆ ಬಿದ್ದಿದೆ. ಟೆಕ್ಕಿಗಳನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಗಾರೆಪಾಳ್ಯ ನಿವಾಸಿ ಟೆಕ್ಕಿಯೊರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್​ಅನ್ನು ಬಂಧಿಸಲಾಗಿದೆ.

ವಿವೇಕನಗರದ ಚರ್ಚ್​ಗೆ ಭೇಟಿ ಕೊಟ್ಟ ತಲೈವ

ಕಾಲಿವುಡ್​ (Kollywood) ಸೂಪರ್​ ಸ್ಟಾರ್​ ರಜಿನಿಕಾಂತ್  (Rajinikanth) ಅವರು ಇದ್ದಕ್ಕಿದ್ದಂತೆ ಬೆಂಗಳೂರಿಗೆ  (Bengaluru)ಬಂದು, ವಿವೇಕನಗರದ  (Viveknagar Church)ಇನ್​ಫೆಂಟ್ರಿ ಚರ್ಚ್​ಗೆ ಭೇಟಿ ಕೊಟ್ಟಿದ್ದಾರೆ. ತಲೈವ ದಿಢೀರ್​ ಎಂದು ಬೆಂಗಳೂರಿಗೆ ಬರಲು ಬಲವಾದ ಕಾರಣವಿದೆ. ಕೆಲ ತಿಂಗಳ ಹಿಂದೆ ಮಗಳಿಗೆ ಅನಾರೋಗ್ಯವಾಗಿದ್ದಾಗ ರಜಿನಿ ವಿವೇಕ್​ನಗರದ ಚರ್ಚ್​ಗೆ ಭೇಟಿ ಕೊಡುವುದಾಗಿ ಹರಕೆ ಮಾಡಿಕೊಂಡಿದ್ದರಂತೆ. ಕೆಲ ತಿಂಗಳ ಹಿಂದೆ ಮಾಡಿಕೊಂಡಿದ್ದ ಹರಕೆಯನ್ನು ತೀರಿಲಸು ರಜಿನಿಕಾಂತ್​ ಬೆಂಗಳೂರಿಗೆ ಬಂದಿದ್ದಾರೆ. ಸಾಮಾನ್ಯರಂತೆ ಚರ್ಚ್​ಗೆ ಭೇಟಿ ಕೊಟ್ಟಿದ್ದ ತಲೈವ ತಮ್ಮ ಸ್ನೇಹಿತರ ಮನೆಗೂ ಹೋಗಿದ್ದಾರೆ. ನಂತರ ಚೆನ್ನೈಗೆ ಮರಳಿದ್ದಾರೆ.
Published by:Kavya V
First published: