Evening Digest: ಪುಟಿನ್ ಬಳಿ ಮಲಮೂತ್ರ ತುಂಬಿದ ಸೂಟ್​​​ಕೇಸ್​: BMTC ನೌಕರರ ನಡುವೆಯೂ ಧರ್ಮ ದಂಗಲ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪುಟಿನ್​​​ ಬಳಿ ಮಲಮೂತ್ರ ತುಂಬಿದ ಸೂಟ್​​ಕೇಸ್ : ಉಕ್ರೇನ್​​ ಮೇಲೆ ಯುದ್ಧ (Ukraine Russia War) ನಡೆಸುತ್ತಿರುವ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್​​ ಪುಟಿನ್​​ (Russian President Vladimir Putin) ಆರೋಗ್ಯದ ಕುರಿತು (Putin Health News) ದಿನಕ್ಕೊಂದು ವದಂತಿಗಳು ಬರುತ್ತಲೇ ಇವೆ. ಇವನೆಲ್ಲಾ ರಷ್ಯಾ ಸರ್ಕಾರ ಅಲ್ಲಗಳೆಯುತ್ತಿದ್ದರೂ ಊಹಾಪೋಹಗಳು ದಿನೇ ದಿನೇ ದಟ್ಟವಾಗುತ್ತಲೇ ಇದೆ. ಇದೀಗ ಪುಟಿನ್​ ಆರೋಗ್ಯದ ಕುರಿತು ಹೊಸ ಮಾಹಿತಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಪುಟಿನ್​​ ಹೊರಗೆ ಎಲ್ಲೇ ಹೋದರೂ ಮಲ-ಮೂತ್ರದ ಪೆಟ್ಟಿಗೆಯನ್ನು ಹೊಯ್ಯುತ್ತಿದ್ದಾರಂತೆ. ತಮ್ಮ ಆರೋಗ್ಯ ಬಗೆಗಿನ ರಹಸ್ಯವನ್ನು ಕಾಪಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಹೊಸ ಮಾಹಿತಿ ಹೇಳುತ್ತಿದೆ. ಪುಟಿನ್​ ಮಲ-ಮೂತ್ರವನ್ನು ಯಾರಾದರೂ ಪರೀಕ್ಷೆಗೆ ಒಳಪಡಿಸಿದರೆ ಪುಟಿನ್​ ಅನಾರೋಗ್ಯದ ಕುರಿತು ಪಕ್ಕಾ ಮಾಹಿತಿ ಸಿಕ್ಕಿ ಬಿಡುತ್ತೆ ಎಂಬ ಆತಂಕದಲ್ಲಿ ಈ ರೀತಿ ಮಲ-ಮೂತ್ರದ ಪೆಟ್ಟಿಗೆಯನ್ನು ಜೋಪಾನವಾಗಿ ಹೊಯ್ಯುತ್ತಿದ್ದಾರಂತೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Putin Poop Case: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಲ-ಮೂತ್ರ ತುಂಬಿದ ಸೂಟ್​​ಕೇಸ್​ ಸದಾ ಇರುತ್ತಂತೆ, ಏಕೆ?

ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆಗಳು; ಇಬ್ಬರ ಸಾವು

ಅಮಾನತುಗೊಂಡಿರುವ ಬಿಜೆಪಿ(BJP) ನಾಯಕಿ ನೂಪುರ್ ಶರ್ಮಾ (Nupur Sharma) ಅವರು ಪ್ರವಾದಿ ಮೊಹಮ್ಮದ್ (Prophet Muhammad) ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆಗಳು (Protests in India) ಹಿಂಸಾರೂಪ ಪಡೆದುಕೊಂಡಿದೆ. ರಾಂಚಿಯಲ್ಲಿ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ ಎಂದು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳು ದೃಢಪಡಿಸಿದರು. ಗಾಯಗೊಂಡ 22 ಮಂದಿಯಲ್ಲಿ 10 ಮಂದಿ ಪೊಲೀಸರು ಮತ್ತು ಇತರರು ಪ್ರತಿಭಟನಾಕಾರರು ಇದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.

BMTC ನೌಕರರ ನಡುವೆಯೂ ಧರ್ಮ ದಂಗಲ್

ರಾಜ್ಯದಲ್ಲಿ ಹಿಜಾಬ್, ಅಜಾನ್, ಮಂದಿರ v/s ಮಸೀದಿ ವಿವಾದದ ಬೆನ್ನಲ್ಲೇ ಇದೀಗ ಮತ್ತೊಂದು ಧರ್ಮ ದಂಗಲ್ (Dharma Dangal ) ಶುರುವಾಗುವ ಸಾಧ್ಯತೆ ಇದ್ದು, ಇದೀಗ ಬಿಎಂಟಿಸಿ (BMTC) ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿ ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರು ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ (School College) ಹಿಜಾಬ್ ವಿವಾದದ ಬೆನ್ನಲ್ಲೇ ಇದೀಗ ಬಿಎಂಟಿಸಿಯಲ್ಲೂ ಟೋಪಿ ಗಿ/s ಕೇಸರಿ ಶಾಲು ವಿವಾದ ಶುರುವಾಗಿದ್ದು, ಬಿಎಂಟಿಸಿ ನೌಕರರು (Employees) ಕಳೆದ ಹಲವು ದಿನಗಳಿಂದ ಕೇಸರಿ ಶಾಲು (Saffron scarf) ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:BMTC ನೌಕರರ ನಡುವೆಯೂ ಧರ್ಮ ದಂಗಲ್​; ಕೇಸರಿ ಶಾಲು ಧರಿಸಿ ಕರ್ತವ್ಯಕ್ಕೆ ಹಾಜರ್​

ಕೋಡಿ ಮಠದ ಶ್ರೀಗಳ ಸ್ಫೋಟಕ ಭವಿಷ್ಯ

ಕೊರೊನಾ (Corona) ಕುರಿತು ಕೋಡಿಮಠದ ಶ್ರೀಗಳು (Kodihalli Swamiji) ಎಚ್ಚರಿಕೆಯ ಭವಿಷ್ಯ  ನುಡಿದ್ದಾರೆ. ಇನ್ನು ಒಂದುವರೆ ವರ್ಷದಲ್ಲಿ ಕೊರೊನಾ ಕಾಲ ಕೊನೆಯಾಗುತ್ತೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ (prediction) ನುಡಿದಿದ್ದಾರೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಕೋವಿಡ್ ಗಾಳಿಯ ಮೂಲಕವೂ ಬರಬಹುದು. ಉಸಿರಾಟದ ತೊಂದರೆಯಾಗಿ ಪ್ರಾಣ ಹಾನಿಯಾಗಹುದು. ಈ ಬಗ್ಗೆ ಮುಂಜಾಗ್ರತೆ (Precaution) ವಹಿಸಿಬೇಕು' ಎಂದು ಸಲಹೆ (Tips) ನೀಡಿದ್ದಾರೆ. ಮಳೆ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಈ ಹಿಂದೆ ಕೆಂಡಾಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಾಗುತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕೆಂಡಾಮಂಡಲ ಆಗ್ತಾ ಇದೆ. ಮುಂಗಾರುಮಳೆ ಇನ್ನೂ ಜಾಸ್ತಿಯಾಗುವ ಲಕ್ಷಣ ಕಾಣ್ತಾ ಇದೆ. ಈ ಬಾರಿ ದೊಡ್ಡ ನಗರಗಳಿಗೆ ತೊಂದರೆ ಹೆಚ್ಚಾಗಲಿದೆ ಎಂದಿದ್ದಾರೆ.

ಬಾಯ್​ಫ್ರೆಂಡ್​ ಮುಂದೆ ರಾಖಿ ಹೇಳಿದ್ದು ಅಂತಿಂಥಾ ಮಾತಲ್ಲ

ರಾಖಿ ಸಾವಂತ್ (Rakhi Sawanth) ಯಾವಾಗಲೂ ಸುದ್ದಿಯಲ್ಲಿರುವ ನಟಿಯರಲ್ಲಿ ಒಬ್ಬರು. ಒಂದೆಲ್ಲ ಒಂದು ಕಾರಣಕ್ಕೆ ಪ್ರಚಾರದಲ್ಲಿರಲು ಅವರಿಗೆ ಇಷ್ಟ ಎಂದರೆ ತಪ್ಪಾಗಲಾರದು. ಅಲ್ಲದೇ ಪತಿ ವಿಚ್ಛೇದಿತ ಪತಿ ರಿತೇಶ್ ಸಿಂಗ್‌ನಿಂದ (Ritesh Singh)  ಬೇರ್ಪಡುವುದಾಗಿ ಘೋಷಿಸಿದಾಗಿನಿಂದ ರಾಖಿ ಸಾವಂತ್ ಸುದ್ದಿಯಲ್ಲಿದ್ದಾರೆ. ನಂತರ ಕೂಡ ಮತ್ತೊಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿರುವುದಾಗಿ ಹೇಳಿದ್ದಲ್ಲದೇ, ಹೊಸ ಗೆಳೆಯ ಆದಿಲ್ ಖಾನ್ (Adil Khan)  ದುರಾನಿಯನ್ನು ಸಹ ಜನರಿಗೆ ಪರಿಚಯ ಮಾಡಿಸಿದ್ದರು. ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇದೀಗ ಅವರು ಮತ್ತೆ ಸಾರ್ವಜನಿಕವಾಗಿ ಕಾಂಡೋಮ್ ಬಗ್ಗೆ ಮಾತನಾಡಿದ್ದು, ಇದು ಕೂಡ ಸುದ್ದಿಯಾಗಿದೆ.
Published by:Kavya V
First published: