• Home
 • »
 • News
 • »
 • state
 • »
 • Evening Digest: ಕವಿ ಸಿದ್ದಲಿಂಗಯ್ಯ ನಿಧನದಿಂದ ಪ. ಬಂಗಾಳದಲ್ಲಿ ಘರ್​ವಾಪ್ಸಿವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

Evening Digest: ಕವಿ ಸಿದ್ದಲಿಂಗಯ್ಯ ನಿಧನದಿಂದ ಪ. ಬಂಗಾಳದಲ್ಲಿ ಘರ್​ವಾಪ್ಸಿವರೆಗೆ ಈ ದಿನದ ಓದಲೇಬೇಕಾದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಕವಿ ಸಿದ್ದಲಿಂಗಯ್ಯ ಇನ್ನಿಲ್ಲ


  ಕೋವಿಡ್​ ಸೋಂಕಿನಿಂದಾಗಿ ಕವಿ, ಸಾಹಿತಿ ಡಾ ಸಿದ್ದಲಿಂಗಯ್ಯ ಅವರು ಸಾವನ್ನಪ್ಪಿದ್ದಾರೆ. ಸೋಂಕಿಗೆ ತುತ್ತಾಗಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ನಿಮೋನಿಯಾ ತೀವ್ರಾಗಿದ್ದ ಹಿನ್ನಲೆ ಅವರು ಆರೋಗ್ಯ ಸ್ಥಿತಿ ಬಿಗಾಡಾಯಿಸಿದ್ದು, ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.


  ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ
  ಕೋವಿಡ್​ ಸೋಂಕಿನ ಹಿನ್ನಲೆ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡುವುದಾಗಿ ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಈಗ ಏಕಾಏಕಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ ನಡೆಸುವ ಮೂಲಕ ಶಾಕ್​ ನೀಡಿದೆ. ವಿದ್ಯಾರ್ಥಿಗಳ ತೇರ್ಗಡೆಗೆ ಎರಡು ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸಲು ಪಿಯು ಮಂಡಳಿ ನಿರ್ಧರಿಸಿದೆ. ಪರೀಕ್ಷೆ ಯಾವ ಮಾದರಿ ನಡೆಯಲಿದೆ ಎಂಬುದರ ಕುರಿತು ಪಿಯು ಮಂಡಳಿಯ ವೆಬ್​ಸೈಟ್​ನಲ್ಲಿ ಮಾದರಿ ಪ್ರಶ್ನಾ ಪತ್ರಿಕೆಯನ್ನು ನೀಡಲಾಗಿದೆ. ಈ ಮೂಲಕ ಶಿಕ್ಷಣ ಸಚಿವರ ಮಾತಿನಿಂದ ಪರೀಕ್ಷೆಯಿಲ್ಲ ಎಂದು ಸಂತಸದಿಂದ ವಿದ್ಯಾರ್ಥಿಗಳಿಗೆ ಪಿಯು ಮಂಡಳಿ ಆಘಾತ ನೀಡಿದೆ. ಇಷ್ಟೇ ಅಲ್ಲದೇ, ಪರೀಕ್ಷೆ ಹೇಗೆ ನಡೆಸಬೇಕು. ಯಾವ ರೀತಿ ಮೌಲ್ಯ ಮಾಪನ ನಡೆಸಬೇಕು ಎಂಬ ಕುರಿತು ಕೂಡ ತಿಳಿಸಲಾಗಿದೆ.


  ಟಿಎಂಸಿಗೆ ಮರಳಿದ ಮುಕಲ್​ ರಾಯ್​​
  ಬಿಜೆಪಿ ಪ್ರಬಲ ಪೈಪೋಟಿಯ ನಡುವೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಎರಡನೇ ಬಾರಿ ಸರ್ಕಾರ ರಚಿಸುವಲ್ಲಿ ಸಫಲರಾಗಿದ್ದಾರೆ. ಮಮತಾರ ಈ ವರ್ಚಸ್ಸಿನ ಬೆನ್ನಲ್ಲೇ ಈಗ ತೃಣಮೂಲ ಕಾಂಗ್ರೆಸ್​ನಲ್ಲಿ ಘರ್​ ವಾಪ್ಸಿ ಬೆಳವಣಿಗೆ ಆರಂಭವಾಗಿದೆ. ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ನಾಯಕರ ಮತ್ತೆ ಹಳೆ ಪಕ್ಷದತ್ತ ತಿರುಗಿ ನೋಡುತ್ತಿದ್ದಾರೆ. ಟಿಎಂಸಿ ತೊರೆದು 2017ರಲ್ಲಿ ಬಿಜೆಪಿ ಸೇರಿದ್ದ ಹಿರಿಯ ನಾಯಕ ಮುಕುಲ್​ ರಾಯ್​ ಮತ್ತೆ ಮಾತೃಪಕ್ಷಕ್ಕೆ ಬರಲು ಸಿದ್ಧವಾಗಿದ್ದು, ಇಂದು ಮಧ್ಯಾಹ್ನ ಅವರು ಪಕ್ಷಕ್ಕೆ ಸೇರುವ ಕುರಿತು ಮಮತಾರೊಂದಿಗೆ ಚರ್ಚೆ ನಡೆಸಿದರು


  ಕುತೂಹಲ ಮೂಡಿಸಿದ ಶರದ್ ಪವಾರ್-ಪ್ರಶಾಂತ್ ಕಿಶೋರ್ ಸಭೆ
  ತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರನಾಗಿ ಕೆಲಸ ಮಾಡಿದ್ದ ಪ್ರಶಾಂತ್ ಕಿಶೋರ್​ ಟಿಎಂಸಿ ಮತ್ತು ಡಿಎಂಕೆ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫಲಿತಾಂಶದ ನಂತರ ಸಂದರ್ಶನ ನೀಡಿದ್ದ ಪ್ರಶಾಂತ್ ಕಿಶೋರ್​ ತಾನು ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದರು. ಆದರೆ, ಇದೀಗ ಮಹಾರಾಷ್ಟ್ರ ರಾಜಕಾರಣದ ಮೈತ್ರಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಈ ನಡುವೆಯೇ ಎನ್​ಸಿಪಿ ಪಕ್ಷದ ಮುಖ್ಯಸ್ಥ ಶರದ್​ ಪವಾರ್​ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಇಬ್ಬರೂ ಇಂದು ಮುಂಬೈನಲ್ಲಿ ಸಭೆ ನಡೆಸಿದ್ದು, 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಊಹಾಪೋಹಗಳ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ನಡೆಸಲಾಗುತ್ತಿದೆ.


  ಇನ್ನೆರಡು ವರ್ಷ ನಾನೇ ಸಿಎಂ
  ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲ ಎಂದು ಹೇಳಿ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು. ಈ ಮಾತು ಸಿಎಂ ಬಿಎಸ್​ವೈಗೆ ಇನ್ನಷ್ಟು ಬಲ ತುಂಬಿದೆ. ಇಂದು ಸಿಎಂ​ ಯಡಿಯೂರಪ್ಪ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಂದಿನ ಎರಡು ವರ್ಷ ನಾನೇ ಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ.


  ಪೆಟ್ರೋಲ್​ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ
  ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಪೆಟ್ರೋಲ್ ಬೆಲೆ 1 ಲೀಟರ್​ಗೆ 100 ರೂ. ಗಡಿ ದಾಟಿದೆ. ದೇಶಾದ್ಯಂತ ಗಗನಕ್ಕೇರುತ್ತಿರುವ ಪೆಟ್ರೋಲ್ ಬೆಲೆಯೇರಿಕೆಯನ್ನು ವಿರೋಧಿಸಿ ಇಂದು ಪೆಟ್ರೋಲ್ ಬಂಕ್​ಗಳು ಎದುರು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ ನಡೆದಿದ್ದು, ಈ ವೇಳೆ ಕೈ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯೂ ನಡೆಯಿತು


  ರಾಜ್ಯ ಸರ್ಕಾರದ ವಿರುದ್ಧ ಹೈ ಕೋರ್ಟ್​ ಗರಂ
  ಐಎಂಎ ಕಂಪನಿ ಗ್ರಾಹಕರಿಗೆ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹೈಕೋರ್ಟ್​​ ಸರ್ಕಾರದ ವಿರುದ್ಧ ಚಾಟಿ ಬೀಸಿದೆ. ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ರೋಷನ್​ ಬೇಗ್​ ಆಸ್ತಿ ಜಪ್ತಿಗೆ ಸರ್ಕಾರ ಮೀನಾಮೇಷ ನೋಡುತ್ತಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಸ್ತಿ ಜಪ್ತಿ ಮಾಡಲು ವಿಳಂಬವಾಗಿದೆ ಎಂದು ಸರ್ಕಾರ ಕೋರ್ಟ್​ಗೆ ಸಬೂಬು ಹೇಳಿದೆ. ಇದಕ್ಕೆ ಗರಂ ಆದ ಹೈಕೋರ್ಟ್​ ಸರ್ಕಾರದ ವಿಳಂಬ ನೀತಿ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದೆ


  ಹಿರಿಯ ನಟ- ಪತ್ರಕರ್ತ ಸುರೇಶ್​ ಚಂದ್ರ ಇನ್ನಿಲ್ಲ
  ಹಿರಿಯ ನಟ ಹಾಗೂ ಪತ್ರಕರ್ತ ಸುರೇಶ್​ ಚಂದ್ರ ಅವರು ಇನ್ನು ನೆನೆಪು ಮಾತ್ರ. ಪತ್ರಕರ್ತರಾಗಿದ್ದ ಸುರೇಶ್​ ಚಂದ್ರ ಅವರು ಪತ್ರಿಕೋದ್ಯಮದ ಜತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದರು. ಸುಮಾರು 69 ವರ್ಷದವರಾಗಿದ್ದ ಸುರೇಶ್​ ಚಂದ್ರ ಅವರು ಇಂದು ಕೋವಿಡ್​ನಿಂದಾಗಿ ಇಂದು ಅಪೋಲೋ‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

  Published by:Seema R
  First published: