Evening Digest: ಸೋನಿಯಾಗೆ ಸಮನ್ಸ್, ಮಕ್ಕಳಿಗೆ ಕಿಚ್ಚನ ಸಹಾಯ! ಈ ಸಂಜೆಯ ಟಾಪ್‌ ನ್ಯೂಸ್‌ಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಮುಂದುವರೆದ ಕಿಚ್ಚನ ಸಮಾಜಮುಖಿ ಕಾರ್ಯ

ಕಲೆಯ ಸೇವೆಗೆ ಬದ್ಧ, ಕರುನಾಡಿಗೆ ಕಿಚ್ಚ ಸ್ವಂತ. ಹೌದು, ಕಿಚ್ಚ ಸುದೀಪ್​ ತಮ್ಮ ನಟನೆಯಷ್ಟೇ ಅಲ್ಲದೇ ಬೇರೆ ವಿಚಾರಕ್ಕೂ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಆ್ಯಸಿಡ್ ದಾಳಿ ಸಂತ್ರಸ್ಥೆಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ಇದೀಗ ಕಿಚ್ಚ ಮತ್ತೊಂದು ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಇಬ್ಬರು ಮಕ್ಕಳು ವಿಧ್ಯಾಭ್ಯಾಸಕ್ಕೆ ಸುದೀಪ್ ಸಹಾಯ ಮಾಡಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್ ನ ಇಬ್ಬರು ವಿಧ್ಯಾರ್ಥಿಗಳ ಬೆನ್ನಿಗೆ ನಿಂತಿದ್ದಾರೆ.

ಎಂಜಿಆರ್, ಜಯಲಲಿತಾಗೆ ಭಾರತ ರತ್ನ ನೀಡಿ!

ತಮಿಳುನಾಡು: ದಕ್ಷಿಣ ಭಾರತದ (South India) ಸೂಪರ್ ಸ್ಟಾರ್ (Super Star), ತಮಿಳು ಚಿತ್ರರಂಗದ (Tamil Film Industry) ಖ್ಯಾತ ನಟ (Famous Actor), ಮಾಜಿ ಮುಖ್ಯಮಂತ್ರಿ ಎಂಜಿಆರ್‌ (MGR) ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮತ್ತೊಂದೆಡೆ ತಮಿಳಿನ ಖ್ಯಾತ ನಟಿ (Famous Actress), ಮಾಜಿ ಮುಖ್ಯಮಂತ್ರಿ (Ex CM), ಅಮ್ಮ ಜಯಲಲಿತಾ (Amma Jayalalitha) ಬಗ್ಗೆಯೂ ಎಲ್ಲರಿಗೂ ಗೊತ್ತಿರುತ್ತೆ. ಇವರಿಬ್ಬರ ಕಾಂಬಿನೇಷನ್ (Combination) ಆ ಕಾಲದ ಸೂಪರ್‌ ಹಿಟ್‌ (Super Hit) ಜೋಡಿಗಳಲ್ಲಿ ಒಂದು. ಇದೀಗ ಈ ಇಬ್ಬರಿಗೂ ಭಾರತ ರತ್ನ (Bharat Ratna) ಕೊಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಇಬ್ಬರು ಮಾಡಿದ ಸಾಧನೆಯಿಂದಾಗಿ ಇವರಿಬ್ಬರು ಭಾರತರತ್ನಕ್ಕೆ ಅರ್ಹ ಎಂಬ ಕೂಗು ಕೇಳಿ ಬಂದಿದೆ. ಎಐಎಡಿಎಂಕೆ ಕೌನ್ಸಿಲ್ ಸಭೆಯಲ್ಲಿ (AIADMK Council Meet) ಎಂಜಿ ರಾಮಚಂದ್ರನ್ ಹಾಗೂ ಜಯಲಲಿತಾ ಇಬ್ಬರಿಗೂ ಭಾರತ ರತ್ನ ಕೊಡಬೇಕು ಅಂತ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿBharat Ratna: ಎಂಜಿಆರ್, ಜಯಲಲಿತಾಗೆ ಭಾರತ ರತ್ನ ನೀಡಿ! ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಶಿಫಾರಸು

ಸೋನಿಯಾ ಗಾಂಧಿಗೆ ಸಂಕಷ್ಟದ ಸುರಿಮಳೆ

ದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ED) ಸೋಮವಾರ, ಜುಲೈ 12ರಂದು ಹೊಸದಾಗಿ ಸಮನ್ಸ್ ಜಾರಿ ಮಾಡಿದೆ. ಜುಲೈ 21 ರಂದು ಏಜೆನ್ಸಿಯ (Enforcement Directorate) ಮುಂದೆ ಹಾಜರಾಗುವಂತೆ ಕಾಂಗ್ರೆಸ್ ಪಕ್ಷದ ಉನ್ನತ ನಾಯಕಿಯಾದ ಸೋನಿಯಾ ಗಾಂಧಿಗೆ (Sonia Gandhi) ಸೂಚಿಸಲಾಗಿದೆ. ಪ್ರಕರಣದಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೋರಿ ಸೋನಿಯಾ ಗಾಂಧಿ ಸಲ್ಲಿಸಿದ್ದ ಮನವಿಯನ್ನು ಫೆಡರಲ್ ಏಜೆನ್ಸಿ ಈ ಹಿಂದೆ ಸ್ವೀಕರಿಸಿತ್ತು. ಜೊತೆಗೆ ಜುಲೈ ಕೊನೆಯ ವಾರದಲ್ಲಿ ಏಜೆನ್ಸಿಯೊಂದಿಗೆ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ತಿಳಿಸಿದೆ.

ಈದ್ಗಾ ಮೈದಾನ ವಿವಾದ, ನಾಳೆ ಚಾಮರಾಜಪೇಟೆ ಬಂದ್

ಬೆಂಗಳೂರು (ಜು. 11) - ಈದ್ಗಾ ಮೈದಾನ ಕಳೆದ ಕೆಲವು ದಿನಗಳಿಂದ ವಿವಾದದಿಂದ ಸುದ್ದಿ ಆಗ್ತಿದೆ. ಸದ್ಯ ಭೂಮಾಲಿಕತ್ವದ ವಿಚಾರವಾಗಿ ಶುರುವಾಗಿದ್ದ ಕಿತ್ತಾಟ, ಇದೀಗ ಬಂದ್ ವರೆಗೆ ತಲುಪಿದೆ. ನಾಳೆ ಚಾಮರಾಜಪೇಟೆ 7 ವಾರ್ಡ್ ಗಳ ಬಂದ್ ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ.  ನಾಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಸಂಪೂರ್ಣವಾಗಿ ಬಂದ್ ಆಗಲಿದೆ. ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಬಂದ್ ಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಕರೆ ನೀಡಿದೆ. ಅನೇಕ ಹಿಂದೂಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಇಂದು ಸಹ ಶಾಲಾ-ಕಾಲೇಜು, ಬೇಕರಿ, ಅಂಗಡಿಗಳಿಗೆ ಸೇರಿದಂತೆ ಮನೆ ಮನೆಗೆ ತೆರಳಿ 20 ಸಾವಿರಕ್ಕೂ ಅಧಿಕ ಕರಪತ್ರಗಳನ್ನ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿBengaluru: ಈದ್ಗಾ ಮೈದಾನ ವಿವಾದ, ನಾಳೆ ಚಾಮರಾಜಪೇಟೆ ಬಂದ್; ಶಾಲಾ-ಕಾಲೇಜಿಗೆ ರಜೆ

ಶಿವಣ್ಣನ ಹುಟ್ಟುಹಬ್ಬಕ್ಕೆ ಮಾನ್ಯತಾ ನಿವಾಸಿಗಳಿಂದ ಸರ್ಪ್ರೈಸ್ ಗಿಫ್ಟ್

ನಾಳೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ (Hattrick Hero) 60ನೇ ವರ್ಷದ ಹುಟ್ಟುಹಬ್ಬ (Birthday) . ಅಪ್ಪು ಇಲ್ಲದಕಾರಣ ತಮ್ಮ ಜನ್ಮದಿನವನ್ನು ಸಂಭ್ರಮಿಸದಿರಲು ಶಿವಣ್ಣ (Shivanna) ನಿರ್ಧಾರ ಮಾಡಿದ್ದಾರೆ. ಆದರೆ ಶಿವಣ್ಣನ ಹುಟ್ಟು ಹಬ್ಬ ಆಚರಣೆ ಇಲ್ಲದಿದ್ದರೆ ಏನಂತೆ, ಟಗರು (Tagaru) ಶಿವನ 60 ನೇ ಹುಟ್ಟು ಹಬ್ಬ ಎಷ್ಟೇ ವರ್ಷಗಳು ಕಳೆದರು ಸದಾ ನೆನಪಿನಲ್ಲಿ ಉಳಿಯುವಂತ ಉಡುಗೊರೆ (Big Gift) ಯೊಂದು ಶಿವಣ್ಣನಿಗೆ ಸಿಕ್ಕಿದೆ. ಶಿವಣ್ಣನ ಹುಟ್ಟುಹಬ್ಬವನ್ನು ಪ್ರತಿವರ್ಷ ಶಿವಸೈನ್ಯ (Shivasainya) ದಸರಾ ಉತ್ಸವದಂತೆ ಆಚರಿಸಿ ಎಂಜಾಯ್ (Enjoy) ಮಾಡುತ್ತಿದ್ದರು.  ಆದರೆ, ಈ ಸಲ ಈ ಸಂಭ್ರಮ ಶಿವಣ್ಣನ ಅಭಿಮಾನಿಗಳ ಅಂಗಳದಲ್ಲಿ ಕಾಣಿಸೋದಿಲ್ಲ. ಆದರು ಶಿವಣ್ಣನ 60ನೇ ಹುಟ್ಟುಹಬ್ಬಎಷ್ಟೇ ವರ್ಷಗಳು ಕಳೆದರು ಸದಾ ನೆನಪಿನಲ್ಲಿ ಉಳಿಯುವಂತ ಉಡು ಗೊರೆಯೊಂದು ಶಿವಣ್ಣನ ಮಡಿಲಿಗೆ ಸೇರಿದೆ.
Published by:Annappa Achari
First published: