Evening Digest: ರಾಜ್ಯದಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ವಿಸ್ತರಣೆ: ಯಾವೆಲ್ಲಾ ಹೊಸ ನಿಯಮಗಳು ಜಾರಿ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ನೈಟ್-ವೀಕೆಂಡ್ ಕರ್ಫ್ಯೂ ವಿಸ್ತರಣೆ: ರಾಜ್ಯದಲ್ಲಿ ಕೊರೊನಾ (CORONA) ಸ್ಥಿತಿಗತಿಗಳ ಸಂಬಂಧ ಸಚಿವರು, ಅಧಿಕಾರಿಗಳ ಜೊತೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಹತ್ವದ ಸಭೆ (Meeting) ನಡೆಸಿದರು. ಖುದ್ದು ಸಿಎಂ ಕೊರೊನಾ ಸೋಂಕಿಗೆ ತುತ್ತಾಗಿರುವುದರಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಸಭೆ ಮಾಡಿದರು. ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಳದ ಬಗ್ಗೆ  ವರ್ಚುವಲ್ ಸಭೆಯಲ್ಲಿ ಸಿಎಂ ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡಲು ನಿರ್ಧಾರ ಮಾಡಲಾಯಿತು. ಸದ್ಯ ಜಾರಿಯಲ್ಲಿರುವ ನೈಟ್​​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಅನ್ನು ಈ ತಿಂಗಳ ಅಂತ್ಯವರೆಗೆ ಅಂದರೆ ಜನವರಿ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ತಾಕತ್ತಿದ್ದರೆ ನಮ್ಮ ಮೇಲೆ ಕೇಸ್ ಹಾಕಲಿ..

ಮೇಕೆದಾಟು ಪಾದಯಾತ್ರೆ (Mekedatu Padayatra) ಸಂಬಂಧ ತಾಕತ್ತಿದ್ದರೆ ಇದ್ದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (KPCC President DK Shivakumar) ಹೇಳಿಕೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿರುಗೇಟು ನೀಡಿದರು. ನನಗೆ ಧೈರ್ಯ ಇದೆ, ಕಾನೂನು ಎಲ್ಲರಿಗೂ ಒಂದೇ ಎಂದರು. ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್ ಬಾಡಿ ಲಾಂಗ್ವೆಜ್​​ ಬಗ್ಗೆ ನಾನು ಏನೂ ಹೇಳಲ್ಲ. ಅವರ ಬಾಡಿ ಲಾಂಗ್ವೆಜ್ ಬಗ್ಗೆ ಜನರಿಗೇ ಗೊತ್ತಿದೆ. ಬೆಂಗಳೂರು ಜನರ ರಕ್ಷಣೆ ಮಾಡುವ ದೃಷ್ಟಿಯಿಂದ ಸಮಾಲೋಚನೆ ಆಗ್ತಿದೆ. ಜನರಿಗೆ ಸುಳ್ಳು ಹೇಳ್ತಿದ್ದಾರೆ, ಬೆಂಗಳೂರು ಜನರ ರಕ್ಷಣೆ ದೃಷ್ಟಿಯಿಂದ ಒಂದಷ್ಟು ಚರ್ಚೆ ಆಗ್ತಿದೆ ಎಂದರು.

ಲವರ್​​ಗಾಗಿ ಮದುವೆಯಾದ 5 ದಿನಕ್ಕೆ ಗಂಡನನ್ನು ಬಿಟ್ಟು ಬಂದಳು..

ಪದವಿ ಓದುವಾಗ ಸಹಪಾಠಿಗಳ (Classmates) ನಡುವೆ ಅರಳಿದ ಪ್ರೇಮ ಕಥೆ (Love Story)ಕಳೆದ 8 ವರ್ಷಗಳಿಂದ ನಡೆದಿತ್ತು. ಈ ಮಧ್ಯೆ ಕಳೆದ ವರ್ಷ ಆಕೆಗೆ ಸೊಲ್ಲಾಪುರದ (solapur) ಯುವಕನೊಂದಿಗೆ ಮನೆಯವರು ಮದುವೆ ಮಾಡಿದ್ರು. ಆದ್ರೂ ಸಹ ಬೆನ್ನು ಬಿಡದ ಪ್ರೇಮಿ ಆಕೆಗೆ ಮೇಲಿಂದ ಮೇಲೆ ಕರೆ ಮಾಡಿದ್ದ. ಇದರಿಂದ ಆಕೆ ಮದುವೆಯಾಗಿ ಐದೇ ದಿನಕ್ಕೆ ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿದ್ಲು. ಇತ್ತ ಆಕೆಗಾಗಿ ಕಾಯುತ್ತಿದ್ದ ಪ್ರಿಯತಮನನ್ನು ಬಂದು ಸೇರಿದ್ಲು, ಇಬ್ಬರು ಹೊಸ ಜೀವನ ನಡೆಸಲು ಪ್ಲಾನ್ ಮಾಡಿದ್ರು. ಇದರ ಮಧ್ಯೆ ಆತ ಜನವರಿ 4ರ ರಾತ್ರಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಕೊಲೆ ಮಾಡಿದ್ದು ಪ್ರಿಯತಮೆಯ ಸೋದರ ಎಂಬುದೇ ಇಲ್ಲಿನ ಪ್ರೇಮ್ ಕಹಾನಿಯ ಟ್ವಿಸ್ಟ್.

ಮಹಾಕಾಳಿ ಪಾದದ ಬಳಿ ವ್ಯಕ್ತಿಯ ರುಂಡ ಪತ್ತೆ

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದ ಮಹಾಕಾಳಿ ದೇವಸ್ಥಾನದ (Mahakali Idol) ವಿಗ್ರಹದ ಕೆಳಗೆ ವ್ಯಕ್ತಿಯ ರುಂಡ (Head) ಪತ್ತೆಯಾಗಿರುವ ಭೀಕರ ಘಟನೆ (Horrifying Incident) ಬೆಳಕಿಗೆ ಬಂದಿದೆ. ವ್ಯಕ್ತಿಯ ಹತ್ಯೆ ಮಾಡಿದ ಆರೋಪಿಗಳು ಆತನ ರುಂಡ ತಂದು ಮಹಾಕಾಳಿ ಪಾದದ ಕೆಳಗೆ ಇರಿಸಿದ್ದಾರೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಈ ರೀತಿ ರಸ್ತೆಬದಿ ರುಂಡವನ್ನು ಇಟ್ಟಿರುವ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಇನ್ನು ಪತ್ತೆಯಾಗಿರುವ ರುಂಡದ ವ್ಯಕ್ತಿಯ ಗುರತು (Identity) ಪತ್ತೆ ಆಗಿಲ್ಲ. ವ್ಯಕ್ತಿಯ ದೇಹದ ಭಾಗ ಕೂಡ ಸುತ್ತಮುತ್ತ ಕಂಡು ಬಂದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರಕರಣ ಬೇಧಿಸಲು ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ಎಂಟು ತಂಡಗಳ ರಚನೆ ಮಾಡಿದ್ದಾರೆ.

ಉ.ಪ್ರ. ಸಚಿವ ಮೌರ್ಯ ರಾಜೀನಾಮೆ

ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ವಿಧಾನಸಭೆ ಚುನಾವಣೆಗೆ ಮುನ್ನ ಸಖತ್ ಶಾಕ್ ಸಿಕ್ಕಿದೆ. ಉ.ಪ್ರ.ದಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮುಖ ಎನಿಸಿದ್ದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಅವರು ಬಿಜೆಪಿಯನ್ನ ತೊರೆದು ಸಮಾಜವಾದಿ ಪಕ್ಷ ಸೇರುವ ಸಾಧ್ಯತೆ ಇದೆ. ಮೌರ್ಯ ಅವರ ಜೊತೆ ಮತ್ತೊಬ್ಬ ಸಚಿವ ಹಾಗೂ ನಾಲ್ವರು ಬಿಜೆಪಿ ಶಾಸಕರೂ ‘ಸೈಕಲ್’ ಹತ್ತುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Published by:Kavya V
First published: