Evening Digest: ಅಪ್ಪು ಕನಸ್ಸನ್ನು ಈಡೇರಿಸಲು ಮುಂದಾದ ರಾಜ್ ಕುಟುಂಬ; ಮಗುವನ್ನು ಕೊಂದ ಮಲತಾಯಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಅಪ್ಪು ಕನಸ್ಸನ್ನು ಈಡೇರಿಸಲು ಮುಂದಾದ ರಾಜ್​ ಕುಟುಂಬ: ಚಾಮರಾಜನಗರ ಜಿಲ್ಲೆಯ  ಗಾಜನೂರು (Gajanuru, Chamarajanagara) ಅಂದ್ರೆ ಸಾಕು ನೆನಪಿಗೆ ಬರೋದೊ ಮೇರು ನಟ ಡಾ.ರಾಜಕುಮಾರ್. (Dr Rajkumar)ಡಾ.ರಾಜ್ ಅವರ ತಂದೆ ಪುಟ್ಟಸ್ವಾಮಯ್ಯ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರಿನವರಾದರೂ ಅವರು ಬಾಳಿ ಬದುಕಿದ್ದು ಪತ್ನಿ ಲಕ್ಷ್ಮಮ್ಮ  ಅವರ ತವರೂರು ಗಾಜನೂರಿನಲ್ಲಿ. ಡಾ.ರಾಜ್ ಕುಮಾರ್ ಅವರು ಹುಟ್ಟಿದ್ದು  ಬಾಲ್ಯ ಕಳೆದಿದ್ದು ಗಾಜನೂರಿನಲ್ಲಿ. ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿಅಪ್ಪಟ ಕನ್ನಡರಿಗೇ ಇರುವ  ಗಾಜನೂರು ತಮಿಳುನಾಡಿನ ತಾಳವಾಡಿ ಫಿರ್ಕಾಕ್ಕೆ ಸೇರಿ ಹೋಯ್ತು. ಗಾಜನೂರಿನ ಊರೊಳಗೆ ಡಾ.ರಾಜಕುಮಾರ್ ಜನಿಸಿದ ಪುಟ್ಟ ಹೆಂಚಿನ ಮನೆ ಇದೆ. ಈ ಮನೆಯೆಂದರೆ ಅವರಿಗೆ ಬಹಳವೇ ಅಚ್ಚುಮೆಚ್ಚು ಸ್ಥಳವಾಗಿತ್ತು. ಡಾ.ರಾಜ್ ಕುಮಾರ್ ಅವರು ನಿಧನದರಾದ ನಂತರ ಈ ಮನೆಯನ್ನು ಅವರ ಕುಟುಂಬ ವರ್ಗದವರಿಗೆ ಸ್ಮಾರಕವನ್ನಾಗಿಸುವ ಕನಸಿತ್ತು. ಆದರೆ ಕಾರಣಾಂತರ ಗಳಿಂದ  ಅದು ಸಾಧ್ಯವಾಗಿರಲಿಲ್ಲ. ಇದೀಗ ಅಪ್ಪು ಆಸೆ ಈಡೇರಿಸಲು ಡಾ.ರಾಜ್ ಕುಟುಂಬ ನಿರ್ಧರಿಸಿ ಡಾ.ರಾಜ್ ಜನಿಸಿದ ಈ ಮನೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಈ ಮನೆಯನ್ನು ಮೂಲ ಹೇಗಿತ್ತು ಅದೇ ರೀತಿಯಲ್ಲೇ ದುರಸ್ತಿಪಡಿಸುವ ಕಾರ್ಯ ಕೈಗಿತ್ತಿಕೊಂಡಿದೆ.

ಮಗುವನ್ನು ಕೊಂದ ಮಲತಾಯಿ

ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಕ್ರೂರಿ ಮಲತಾಯಿ 5 ವರ್ಷ ಮಗುವನ್ನು ಅಮಾನುಷವಾಗಿ ಕೊಂದಿದ್ದಾಳೆ. ಸುಮಿತ್ ವಿನೋದ್ ಚವ್ಹಾಣ (5) ಮೃತ ಬಾಲಕ. ಮಲತಾಯಿ ಸವಿತಾ ವಿನೋದ್ ಚವ್ಹಾಣ (22)ಳನ್ನು ಸದ್ಯ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಮಗ ಸಂಪತ್ ಕೊಲೆಗೂ ಯತ್ನಿಸಲಾಗಿದೆ. ಆದರೆ ಮೂರು ವರ್ಷದ ಮಗು ಸಂಪತ್​​ ಅದೃಷ್ಟವಶಾತ್ ಬಜಾವ್ ಆಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಇಬ್ಬರು ನತದೃಷ್ಟ ಮಕ್ಕಳು ವಿನೋದ್ ಹಾಗೂ ಶಾರುಭಾಯಿ ದಂಪತಿಯ ಪುತ್ರರು. ಆರು ತಿಂಗಳ ಹಿಂದೆ ಅನಾರೋಗ್ಯದಿಂದ ತಾಯಿ ಶಾರುಭಾಯಿ ಮೃತಪಟ್ಟರು. ಮೊದಲ ಹೆಂಡತಿ ಸಾವಿನ ಬಳಿಕ ಎರಡು ತಿಂಗಳ ಹಿಂದೆ ಸವಿತಾಳನ್ನು ವಿನೋದ್ ಎರಡನೇ ಮದುವೆಯಾಗಿದ್ದ.ಮೊದಲನೇ ಹೆಂಡತಿಯ ಮಕ್ಕಳು ನನಗ್ಯಾಕೆ ಬೇಕು, ಮುಂದೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಸವಿತಾ ಕೊಲೆ ಮಾಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾಳೆ. ಹಿರಿಯ ಮಗ ಸಮೀತ್ ಕೊರಳಿಗೆ ದಾರ ಹಾಗೂ ಮೊಬೈಲ್​​ ಚಾರ್ಜರ್​​ ವೈಯರ್​​ ಬಳಸಿ ಕೊಲೆ ಮಾಡಿದ್ದಾಳೆ.

ಯಾರದ್ದು ತಪ್ಪು?

ಬೆಂಗಳೂರಿನ ಕೌಶಿಕ್​ (18) ನಿನ್ನೆ ಸ್ನೇಹಿತನೊಂದಿಗೆ ಬೈಕ್​​ ನಲ್ಲಿ ಹೋಗುತ್ತಿದ್ದ ​​, ಇಂದು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾನೆ.  ವಿಜಯನಗರದ ಅತ್ತಿಗುಪ್ಪೆಯಲ್ಲಿ ಬಳಿ ದ್ವಿಚಕ್ರ ವಾಹನದಲ್ಲಿ ಚೇತನ್​​ ಹಾಗೂ ಹಿಂಬದಿಯಲ್ಲಿ ಕೌಶಿಕ್​ ಇಬ್ಬರೂ ಬರುತ್ತಿದ್ದರು. ಅತಿಯಾದ ವೇಗದಲ್ಲಿದ್ದ ಯುವಕರ ಮೇಲೆ ಟ್ರಾಫಿಕ್​ ಪೊಲೀಸರ ಕಣ್ಣು ಬಿದ್ದಿದೆ. ಬೈಕ್​ ಸವಾರರಿಗೆ ಟ್ರಾಫಿಕ್​ ಪೊಲೀಸ್​ ಕೈ ಅಡ್ಡ ಮಾಡಿ ಸೈಡಿಗೆ ಹಾಕುವಂತೆ ಸನ್ನೆ ಮಾಡಿದ್ದಾರೆ. ಗಾಬರಿಕೊಂಡ ಹುಡುಗರು ಟ್ರಾಫಿಕ್​ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬೈಕ್​ ಕಂಟ್ರೋಲ್​ ಗೆ ಸಿಗದೇ ಸ್ಕಿಡ್​ ಆಗಿದೆ. ಕೌಶಿಕ್​ ಗೆ ಗಂಭೀರ ಗಾಯಗಳಾಗಿವೆ, ಬೈಕ್​ ಓಡಿಸುತ್ತಿದ್ದ ಚೇತನ್​​ ಗೆ  ಯಾವುದೇ ಅಪಾಯವಾಗಿಲ್ಲ. ಕೌಶಿಕ್ ತಲೆಗೆ ಗಂಭೀರ ಗಾಯವಾಗಿದ್ದು, ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಯಡವಟ್ಟಿನಿಂದಲೇ ಘಟನೆ ನಡೆದಿದೆ ಅಂತ ಕೌಶಿಕ್​​ ಪೋಷಕರು ಆರೋಪಿಸಿದ್ದಾರೆ. ಯುವಕರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ, ಆಗ ಭಯಗೊಂಡು ವೇಗವಾಗಿ ಹೋಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ.

ಹೊಸ ವರ್ಷ & ಕ್ರಿಸ್ ಮಸ್ ಅದ್ದೂರಿ ಆಚರಣೆಗೆ ನಿರ್ಬಂಧ

ಇನ್ನೇನು ಕ್ರಿಸ್​ಮಸ್ ಹಬ್ಬ ಬರುತ್ತದೆ. ಪ್ರತಿ ವರ್ಷ ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಆಚಾರಿಸಲಾಗುತ್ತಿತ್ತು. ಆದರೆ ಕಳೆದ ವರ್ಷ ಕೊರೊನಾ ಕಾರಣದಿಂದ ಕ್ರಿಸ್​ ಮಸ್  ಮತ್ತು ಹೊಸವರ್ಷದ ಆಚರಣೆಗೆ ನಿರ್ಬಂಧ ಹೇರಲಾಗಿತ್ತು, ಸರಳವಾಗಿ ಆಚರಣೆ ಮಾಡುವಂತೆ ಸರ್ಕಾರ ಆದೇಶಿಸಿತ್ತು, ಹಾಗೆಯೇ ಈ ಬಾರಿ ಸಹ ಕೊರೊನಾ ಹೊಸ ರೂಪಾಂತರ ಓಮೈಕ್ರಾನ್​ ಕಾರಣದಿಂದ ಕ್ರಿಸ್​ಮಸ್​ ಮತ್ತು ಹೊಸವರ್ಷಕ್ಕೆ ಬ್ರೇಕ್​ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.    ರಾಜ್ಯದಲ್ಲಿ ಈಗಾಗಲೇ 2 ಕೊರೊನಾ ರೂಪಾಂತರಿ ಪ್ರಕರಣ ವರದಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ವರ್ಷ & ಕ್ರಿಸ್ ಮಸ್ ಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿ ನಿರ್ಧಾರ ಆಗಲಿದೆ. ಇದುವರೆಗೂ ಬಿಬಿಎಂಪಿಗೆ ಆಚರಣೆಗೆ ಅನುಮತಿ ಕೋರಿ ಯಾವುದೇ ಮನವಿಗಳು ಬಂದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ದುಬೈನಲ್ಲಿ ಕಳುವಾಗಿದ್ದ ಮರಡೋನಾರ 20 ಲಕ್ಷ ಮೌಲ್ಯದ ವಾಚ್​ ಅಸ್ಸಾಂನಲ್ಲಿ ಪತ್ತೆ

ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ (Diego Maradon) ಅವರು ಬಳಕೆ ಮಾಡುತ್ತಿದ್ದ 20 ಲಕ್ಷದ ಮೌಲ್ಯದ ಹ್ಯೂಬ್ಲೆಟ್​ ವಾಚ್​ (Hublot Watch)  ಅಸ್ಸಾಂನಲ್ಲಿ (Assam) ಪತ್ತೆಯಾಗಿದೆ. ದುಬೈನಲ್ಲಿ ಕಳುವಾಗಿದ್ದ ವಾಚ್​​ ಅನ್ನು ಇಂದು ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ನಿವಾಸಿಯೊಬ್ಬರಿಂದ ಈ ವಾಚ್​ ವಶಪಡಿಸಿಕೊಳ್ಳಲಾಗಿದೆ . ಈತ ಇತ್ತೀಚೆಗಷ್ಟೇ ತನ್ನ ನಿವಾಸಕ್ಕೆ ಬಂದಿದ್ದಾಗ ಈ ವಾಚ್​ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್​ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಅಂತರಾಷ್ಟ್ರೀಯ ಸಹಕಾರದ ಮೂಲಕ ಅಸ್ಸಾಂ ಪೊಲೀಸರು ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾಗೆ ಸೇರಿದ ಪರಂಪರೆಯ ಹ್ಯೂಬ್ಲೋಟ್​ ವಾಚ್ ಅನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಸಂಬಂಧ ವಾಜಿದ್ ಹುಸೇನ್ ಅವರನ್ನು ಬಂಧಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Published by:Kavya V
First published: