Evening Digest: ಎಸಿಬಿಗೆ ಹೈಕೋರ್ಟ್ ಗೇಟ್​​ಪಾಸ್, ಈದ್ಗಾ ಮೈದಾನ ವಿಚಾರದಲ್ಲಿ ಜಮೀರ್​​ಗೆ ಶಾಕ್- ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಎಸಿಬಿಗೆ ಹೈಕೋರ್ಟ್​ ಗೇಟ್​ಪಾಸ್​, ಎಲ್ಲಾ ಕೇಸ್​​ ಲೋಕಾಯುಕ್ತಕ್ಕೆ ಶಿಫ್ಟ್

ಎಸಿಬಿ ರಚನೆ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶದ ಮೂಲಕ ಹೈಕೋರ್ಟ್ ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನ ನೀಡಿದ್ದನ್ನು ರದ್ದುಪಡಿಸಿದೆ.  ಎಸಿಬಿ ಲೋಕಾಯುಕ್ತ (Karnataka Lokayukta) ವ್ಯಾಪ್ತಿಗೆ ನೀಡಿ ಹೈಕೋರ್ಟ್ ಆದೇಶ ಪ್ರಕಟಿಸಿದೆ. ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಹೈಕೋರ್ಟ್ ಪೀಠ ಈ ತೀರ್ಪು ಪ್ರಕಟಿಸಿದೆ.  ಹೈಕೋರ್ಟ್ ಈ ಆದೇಶ  ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ನೀಡಿದ್ದು ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ಮರುಸ್ಥಾಪಿಸಿದಂತಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗಬಾರದು. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು ಎಂಬ ಕಾರಣಕ್ಕೆ ಎಲ್ಲಾ ಪ್ರಕರಣಗಳೂ ಲೋಕಾಯುಕ್ತ ಪೊಲೀಸರಿಗೆ ವರ್ಗಾವಣೆ ಮಾಡುವಂತೆ ಹೈಕೋರ್ಟ್ (Karnataka High Court) ನಿರ್ದೇಶನ ನೀಡಿದೆ.

ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ಜಮೀರ್​ಗಿಲ್ಲ ಅವಕಾಶ

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಹೊತ್ತಲ್ಲೇ ಎದ್ದಿದ್ದ ಈದ್ಗಾ ಮೈದಾನ (Idgah) ವಿವಾದವನ್ನು ಸರ್ಕಾರ ಇಂದು ಇತ್ಯರ್ಥ (Solve) ಪಡಿಸಿದೆ. ಮಾತ್ರವಲ್ಲ ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ (Flag Hoisting) ನಡೆಯುತ್ತೆ. ಬೇರೆ ಯಾರಿಗೂ ಇಲ್ಲಿ ಅವಕಾಶ ಇಲ್ಲ ಅಂತಾ ಕಂದಾಯ ಸಚಿವ (Revenue Minister) ಆರ್​.ಅಶೋಕ್ ಹೇಳಿದ್ದಾರೆ. ಈದ್ಗಾ ಮೈದಾನವನ್ನು ಬಿಟ್ಟುಕೊಡೋ ಮಾತೇ ಇಲ್ಲ ಅಂತಾ ಸಾರುತ್ತಿದ್ದ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ಗೂ ನೋ ಪರ್ಮಿಷನ್ ಅಂತಾ ಸರ್ಕಾರ ಹೇಳಿದೆ. ಜಮೀರ್ ಅಹ್ಮದ್​ ಕೂಡ ಧ್ವಜಾರೋಹಣ ಮಾಡುವಂತಿಲ್ಲ ಅಂತಾ ಸರ್ಕಾರ ಹೇಳಿದೆ. ಸಭೆಯ ವೇಳೆ ಆರ್.ಅಶೋಕ್ ಈದ್ಗಾ ಮೈದಾನ ಅಂತಾನೂ ಕರೆಯಲು ಹಿಂದೇಟು ಹಾಕಿದ ಘಟನೆ ನಡೆಯಿತು.

ಇದನ್ನೂ ಓದಿ: ಎಸಿಬಿ ರಚನೆ ರದ್ದುಗೊಳಿಸಿದ ಹೈಕೋರ್ಟ್; ಎಲ್ಲ ಭ್ರಷ್ಟಾಚಾರ ಪ್ರಕರಣಗಳೂ ಲೋಕಾಯುಕ್ತಕ್ಕೆ ಶಿಫ್ಟ್

 ಕೊಪ್ಪಳದಲ್ಲಿ ಗಲಾಟೆ, ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಕೊಪ್ಪಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಕೊಪ್ಪಳ‌ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ಮಾರಾಮಾರಿ ನಡೆದಿದೆ. ಮಾರಾಮಾರಿಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಯಂಕಪ್ಪ (60) ಮತ್ತು ಪಾಷಾವಲಿ (22) ಸಾವನ್ನಪ್ಪಿದವರು. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ನಂತರದ ಬೆಳವಣಿಗೆಯಲ್ಲಿ ಕಲ್ಲುತೂರಾಟ (Stone Pelting) ನಡೆದಿದ್ದು, ಬೈಕ್​ಗಳು (Bike) ಜಖಂ ಆಗಿದೆ. ಸದ್ಯ ಕೊಪ್ಪಳದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹುಲಿಹೈದರ್ ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: 30 ಜನರಿದ್ದ ದೋಣಿ ನದಿಯಲ್ಲಿ ಪಲ್ಟಿ; ರಕ್ಷಾ ಬಂಧನದ ದಿನವೇ ಭಾರೀ ದುರಂತ

ರಕ್ಷಾಬಂಧನದಂದೇ ಯುಪಿಯಲ್ಲಿ ದೋಣಿ ದುರಂತ

ಉತ್ತರ ಪ್ರದೇಶದಲ್ಲಿ ಭಾರೀ ದೋಣಿ ದುರಂತವೊಂದು (Boat  Accident) ಸಂಭವಿಸಿದೆ.  30ಕ್ಕೂ ಹೆಚ್ಚು ಮಂದಿ ಇದ್ದ ದೋಣಿಯೊಂದು ಯಮುನಾ ನದಿಯ ಮಧ್ಯದಲ್ಲಿ ಮುಳುಗಿದೆ. ಬಂದಾ ಎಂಬಲ್ಲಿ ಈ ಭಾರಿ ದೋಣಿ ಅಪಘಾತ ಸಂಭವಿಸಿದೆ. ದೋಣಿಯಲ್ಲಿದ್ದ ನಾಲ್ಕು ಜನ ಹೇಗೋ ಈಜಿಕೊಂಡು ಪಾರಾಗಿದ್ದಾರೆ. ದೋಣಿ ಮತ್ತು ದೋಣಿಯಲ್ಲಿದ್ದ ಉಳಿದವರು ಪತ್ತೆಯಾಗಿಲ್ಲ. ಜನರ ಹುಡುಕಾಟದಲ್ಲಿ ಎಸ್‌ಡಿಆರ್‌ಎಫ್ ತಂಡಗಳೊಂದಿಗೆ (SDRF Team) ಸ್ಥಳೀಯ ಡೈವರ್‌ಗಳನ್ನು ನಿಯೋಜಿಸಲಾಗಿದೆ. ಆದರೆ ದೋಣಿ ಅಘಾತದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ರಕ್ಷಾ ಬಂಧನದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ದೋಣಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ.

ಉಪ ರಾಷ್ಟ್ರಪತಿಯಾಗಿ ಧನ್​​ಕರ್​​ ಪ್ರಮಾಣವಚನ

ಭಾರತದ ಹೊಸ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಅಭ್ಯರ್ಥಿ ಜಗದೀಪ್ ಧನಕರ್ ಅವರು ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಕರ್ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ನಾಯಕರು ನೂತನ ಉಪರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Published by:Thara Kemmara
First published: