RIP Pervez Musharraf: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಪಾಕಿಸ್ತಾನ (ಜೂನ್ 10): ಪಾಕಿಸ್ತಾನದ (Pakistan) ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (Pervez Musharraf) ಇಂದು (ಜೂನ್ 10) ದುಬೈನಲ್ಲಿ (Dubai) ನಿಧನರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಪರ್ವೇಜ್ ಮುಷರಫ್ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಅವರನ್ನು ದುಬೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. 2013ರಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
Hombale Films: ಮಲಯಾಳಂಗೂ ಹೊಂಬಾಳೆ ಫಿಲ್ಮ್ಸ್ ಗ್ಯಾಂಡ್ ಎಂಟ್ರಿ!
ಕೆಜಿಎಫ್‌ನಲ್ಲಿ (KGF) ಒಂದಲ್ಲ ಅಂತ ಎರಡು ಬಾರಿ ಬಂಗಾರದ ಗಣಿ ಶೋಧಿಸಿದ್ದ ಹೊಂಬಾಳೆ ಫಿಲ್ಮ್ಸ್ (Hombale Films) ಈಗ ಕೇರಳದತ್ತ (Kerala) ದೃಷ್ಟಿ ನೆಟ್ಟಿದೆ. ಹೌದು, ಹೊಂಬಾಳೆ ಫಿಲ್ಮ್ಸ್ ಈಗ ಮಲಯಾಳಂ ಸಿನಿಮಾ (Malayalam Cinema) ನಿರ್ಮಾಣಕ್ಕೆ ಮುಂದಾಗಿದೆ.
ಮಲಯಾಳಂ ಖ್ಯಾತ ನಟ, ಸೂಪರ್ ಸ್ಟಾರ್ (Super Star) ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರ ನಾಯಕತ್ವದಲ್ಲಿ ಹೊಂಬಾಳೆಯ ಚೊಚ್ಚಲ ಮಲಯಾಳಂ ಸಿನಿಮಾ ಮೂಡಿ ಬರಲಿದೆ. ಇದು ಪ್ಯಾನ್ ಇಂಡಿಯಾ (Pan India) ಸಿನಿಮಾವಾಗಿದ್ದು, ಮಲಯಾಳಂ, ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ‘ಟೈಸನ್’ (Tyson) ಅಂತ ಹೆಸರಿಡಲಾಗಿದೆ.
ಇದನ್ನೂ ಓದಿ: Hombale Films: ಮಲಯಾಳಂಗೂ ಹೊಂಬಾಳೆ ಫಿಲ್ಮ್ಸ್ ಗ್ಯಾಂಡ್ ಎಂಟ್ರಿ! ಟೈಸನ್ ಆಗಲಿದ್ದಾರೆ ಸೂಪರ್ ಸ್ಟಾರ್ ಪೃಥ್ವಿರಾಜ್
Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ವಿಧಾನಸಭೆಯಿಂದ ರಾಜ್ಯಸಭೆಗೆ (Rajyasabha Poll) ನಡೆಯುತ್ತಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಮತದಾನ ಆರಂಭಗೊಂಡಿದ್ದು, ಯಾರು ಯಾರಿಗೆ ವೋಟ್ ಮಾಡ್ತಿದ್ದಾರೆ ಎಂಬ ಟೆನ್ಷನ್ ರಾಜಕೀಯ ಮುಖಂಡರ (Political Leaders) ಮುಖದಲ್ಲಿ ಕಾಣಿಸುತ್ತಿದೆ. ವಿಧಾನಸೌಧದಲ್ಲಿ ಎಲ್ಲ ಶಾಸಕರು ಜಮಾವಣೆಗೊಂಡಿದ್ದು, ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (MLA CT Ravi) ಅವರು ದಿಢೀರ್ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಕೊಠಡಿಗೆ ತೆರಳಿದರು. ಕೂಡಲೇ ಬೈ ಮಿಸ್ಟೇಕ್ ಆಗಿ ಬಂದೆ ಎಂದು ಹೇಳಿ ಹೊರ ಬಂದರು.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ.ರವಿ, ಇಷ್ಟು ದಿನದ ಕುತೂಹಲಕ್ಕೆ ಇವತ್ತು ತೆರೆ ಬೀಳಲಿದೆ. ಪೊಲಿಟಿಕಲ್ ಸೀಕ್ರೆಟ್ ಹೇಳುವಂತಿಲ್ಲ. ಇಬ್ಬರು ಮೆರಿಟ್ ಮೇಲೆ ಮತ್ತು ಇನ್ನಿಬ್ಬರು ಅದೃಷ್ಟದ ಮೇಲೆ ಗೆಲ್ಲಲಿದ್ದಾರೆ. ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸವಾಗಿತ್ತು. ಹಾಗಾಗಿ ಹೋಗಿ ಬಂದೆ ಎಂದು ಸಿದ್ದರಾಮಯ್ಯ ಅವರ ಕೋಣೆಗೆ ತೆರಳಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು.
ಪ್ರವಾದಿ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು!
ಬೆಳಗಾವಿ: ಪ್ರವಾದಿ ಮಹಮ್ಮದ್ ಪೈಗಂಬರ್ (Prophet Mohamud Paigambar) ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ (Controversial Statement) ನೀಡಿ ಮುಸ್ಲಿಂ ಸಮುದಾಯದ (Muslim Community) ಕೆಂಗಣ್ಣಿಗೆ ಗುರಿಯಾಗಿರುವ ನೂಪುರ್ ಶರ್ಮಾ (Nupur Sharma) ವಿರುದ್ಧ ಪ್ರತಿಭಟನೆ (Protest) ಮುಂದುವರೆದಿದೆ.
ಇದೀಗ ಪ್ರತಿಭಟನೆ ಒಂದು ಹೆಜ್ಜೆ ಮುಂದೆ ಹೋಗಿದ್ದು, ಬೆಳಗಾವಿಯಲ್ಲಿ (Belagavi) ನೂಪುರ್ ಶರ್ಮಾ ಪ್ರತಿಕೃತಿಗೆ (Replica) ಸಾರ್ವಜನಿಕ ಸ್ಥಳದಲ್ಲೇ (Public Place) ಕಿಡಿಗೇಡಿಗಳು ಗಲ್ಲು (Hang) ಹಾಕಿದ್ದಾರೆ. ನಿನ್ನೆ ರಾತ್ರಿ ಕಿಡಿಗೇಡಿಗಳು ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು ಹಾಕಿದ್ದು, ಬೆಳಗ್ಗೆ ಇದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಇದೀಗ ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆಗಳು (Hindu organizations) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಇದನ್ನೂ ಓದಿ: Nupur Sharma: ಪ್ರವಾದಿ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ಪ್ರತಿಕೃತಿಗೆ ಗಲ್ಲು! ಹಿಂದೂ ಸಂಘಟನೆ ಆಕ್ರೋಶ
Tirupati: ತಿರುಪತಿ ಗಿರಿವಾಸ 'ಸಿರಿ' ವೆಂಕಟೇಶ, ಒಂದೇ ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಬಿತ್ತು 139 ಕೋಟಿ ರೂಪಾಯಿ!
ತಿರುಪತಿ: ಭಾರತದ ಅತ್ಯಂತ ಶ್ರೀಮಂತ ದೇಗುಲ (Richest Temple in India) ತಿರುಪತಿ ತಿಮ್ಮಪ್ಪನ (Tirupati Timmappa) ಖಜಾನೆ ಮತ್ತಷ್ಟು ತುಂಬುತ್ತಾ ಇದೆ. ಇಲ್ಲಿ ಭಕ್ತರು (Devotees) ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ (Visit) ನೀಡುತ್ತಲೇ ಇರುತ್ತಾರೆ. “ನಮ್ಮ ಕಷ್ಟ ಕಳಿಯಪ್ಪಾ ದೇವರೇ” ಅಂತ ಪ್ರಾರ್ಥಿಸಿ (Prayer) ಹರಕೆ ಕಟ್ಟಿಕೊಳ್ಳುತ್ತಾರೆ. ಆ ಪ್ರಾರ್ಥನೆ ಈಡೇರಿದ ಬಳಿಕ ಹರಕೆ ರೂಪದಲ್ಲಿ ಹಣ (Money), ಚಿನ್ನ (Gold), ಬೆಳ್ಳಿ (Silver) ಇತ್ಯಾದಿ ಆಭರಣ (Jewelry) ದೇವರ ಹುಂಡಿಗೆ ಹಾಕಿ, ಪೂಜೆ ಸಲ್ಲಿಸ್ತಾರೆ. ಜೊತೆಗೆ ಕೆಲವರು ಕೂದಲು (Hair) ದಾನ (Donate) ಮಾಡುತ್ತಾರೆ. ಹೀಗೆ ವಿವಿಧ ಮೂಲಗಳಿಂದ ಮೇ ತಿಂಗಳಲ್ಲಿ ತಿಮ್ಮಪ್ಪನ ಖಜಾನೆ ತುಂಬಿ ಹೋಗಿದ್ಯಂತೆ. ಒಂದೇ ತಿಂಗಳಲ್ಲಿ ಬರೋಬ್ಬರಿ 139 ಕೋಟಿ ಆದಾಯ ಬಂದಿದೆ ಅಂತ ಟಿಟಿಡಿ (TTD) ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ