Top-5 News: ಕುಡುಕ ಶಿಕ್ಷಕಿ ಕಿರಿಕ್, ಹಾಲಿ-ಮಾಜಿ ಸಿಎಂ ಕಿತ್ತಾಟ! ಇಂದಿನ ಟಾಪ್-5 ನ್ಯೂಸ್ ಇಲ್ಲಿದೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಎಣ್ಣೆ ಕಿಕ್​ನಲ್ಲಿ ಶಾಲೆಗೆ ಬರ್ತಿದ್ದ ಶಿಕ್ಷಕಿ! 

ಗುರು ಸಾಕ್ಷಾತ್ ಪರಬ್ರಹ್ಮ ಎಂದು ಪೂಜಿಸೋ ನಮ್ಮ ನಾಡಲ್ಲಿ ಎಂಥಾ ಶಿಕ್ಷಕರಿದ್ದಾರೆ ನೋಡಿ, ಕುಡಿದು ಶಾಲೆ ಮಕ್ಕಳಿಗೆ (School Children) ಶಿಕ್ಷಕಿ ಪಾಠ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ತುಮಕೂರು ತಾಲೂಕಿನ  ಚಿಕ್ಕಸಾರಂಗಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (Govt Primary School) ಶಿಕ್ಷಕಿಯೊಬ್ಬರು ಕುಡಿದು (Drinking Alcohol) ಶಾಲೆಗೆ ಬಂದು ಪಾಠ ಮಾಡ್ತಿದ್ದ ವಿಚಿತ್ರ ಘಟನೆ ನಡೆದಿದೆ. ಪ್ರತಿದಿನ (Daily) ಮದ್ಯಪಾನ (Alcohol) ಮಾಡಿಕೊಂಡು ಶಾಲೆಗೆ ಬರುವ ಶಿಕ್ಷಕಿ ಗಂಗಲಕ್ಷ್ಮಮ್ಮ ಮಕ್ಕಳಿಗೆ ಅದೇನು ಪಾಠ ಮಾಡ್ತಿದ್ರೋ ಗೊತ್ತಿಲ್ಲ. ಆದ್ರೆ  ಮಕ್ಕಳ ಜೊತೆಯೂ ಗಲಾಟೆ ತೆಗೆಯುತ್ತಿದ್ರಂತೆ. ಈ ಬಗ್ಗೆ ಇತರ ಶಿಕ್ಷಕರು ಅನೇಕ ಬಾರಿ ದೂರು ನೀಡಿದ್ರು ಪ್ರಯೋಜವಾಗಿಲ್ಲ.

 ತಾಕತ್ತಿದ್ರೆ ಬಂದು ನಿಲ್ಲಿಸಿ ನೋಡೋಣ; ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್​

ದೊಡ್ಡಬಳ್ಳಾಪುರ: ಇಲ್ಲಿ ಬಿಜೆಪಿ ಜನಸ್ಪಂದನ (BJP Janaspandana) ಸಮಾವೇಶ ನಡೀತಿದೆ. ಸರ್ಕಾರದ 3 ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷ ಬಿಜೆಪಿ ಶಕ್ತಿ ಪ್ರದಶರ್ನ ಮಾಡಿದೆ. ಇದೇ ವೇಳೆ ಮಾತಾಡಿದ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ಗೆ ಅಧಿಕಾರ ಲಾಲಸೆ ಇದೆ. ಹೀಗಾಗಿ ಈ ಹಿಂದೆ ಕುತಂತ್ರದಿಂದ, ವಾಮಾ ಮಾರ್ಗದ ಮೂಲಕ ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆ ಮಾಡಿದ್ರು. ಜೆಡಿಎಸ್‌ ಪಕ್ಷವನ್ನು ಬೈಕೊಂಡು ಓಡಿದಾದ ಸಿದ್ದರಾಮಯ್ಯ ನವರೇ ಎಲ್ಲಿ ಹೋಯ್ತ್ರೀ, ನಿಮ್ಮ ನೀತಿ ಹಾಗೂ, ನೈತಿಕತೆ ಎಂದು ಕಿಡಿಕಾರಿದ್ರು. ಯಾರಿಗೆ ಉಪದೇಶ ಹೇಳ್ತೀರಿ ನೀವು, ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸಿಎಂ ಬೊಮ್ಮಾಯಿಯಿಂದ ವೀರಾವೇಷದ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: Basavaraj Bommai: ತಾಕತ್ತಿದ್ರೆ ಬಂದು ನಿಲ್ಲಿಸಿ ನೋಡೋಣ; ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್​

ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ

ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ದ.ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಕೆಲಸ ನೀಡುವುದಾಗಿ  ಜನ ಸ್ಪಂದನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಕೊಟ್ಟ ಮಾತಿನಂತೆ ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ

ಮೈಸೂರು(ಸೆ.10): ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್​ (Tamil Actor Vishal) ಇಂದು ಮೈಸೂರಿನ ಚಾಮುಂಡಿ ಬೆಟ್ಟದ (Chamundi Hills) ಬಳಿ ಇರುವ ಶಕ್ತಿಧಾಮಕ್ಕೆ ಭೇಟಿ ನೀಡಿ, ಆಡಳಿತ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಇನ್ನು ಈ ಹಿಂದೆ ಪವರ್​​ ಸ್ಟಾರ್​ ಪುನೀತ್ ರಾಜ್​ಕುಮಾರ್​​ (Puneeth Rajkumar) ನಿಧನವಾಗಿದ್ದ ವೇಳೆ ಶಕ್ತಿಧಾಮದ ಬಗ್ಗೆ ಮಾತನಾಡಿದ್ದ ವಿಶಾಲ್​, ನಟ ಪುನೀತ್ ರಾಜ್​ಕುಮಾರ್ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಪುನೀತ್​​ ರಾಜ್​ಕುಮಾರ್​​ ಓದಿಸುತ್ತಿದ್ದ 1,800 ಮಂದಿ ವಿದ್ಯಾರ್ಥಿಗಳ ಮುಂದಿನ ಜವಾಬ್ದಾರಿ ನನ್ನದು. ಅವರ ಈ ಕಾರ್ಯವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದ್ದರು. ಇದೀಗ ತಾನು ಕೊಟ್ಟ ಮಾತಿನಂತೆ ನಟ ವಿಶಾಲ್​​ ಶಕ್ತಿಧಾಮಕ್ಕೆ (Shaktidhama) ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಕೊಟ್ಟ ಮಾತಿನಂತೆ ಮೈಸೂರಿನ ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ, ಪುನೀತ್ ಓದಿಸುತ್ತಿದ್ದ ಮಕ್ಕಳ ಜೊತೆ ಮಾತು, ಆಟ!

ಕೊಹ್ಲಿಗೆ ಸಿಕ್ಕಷ್ಟು ಅವಕಾಶಗಳು ಬೇರೆ ಯಾರಿಗೂ ಸಿಕ್ಕಿಲ್ಲ

ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಸಮಯದ ನಂತರ ಅಂತೂ ಒಂದು ಶತಕ (Virat Kohli Century) ಬಾರಿಸಿದ್ದಾರೆ. ಬರೋಬ್ಬರಿ 1021 ದಿನಗಳ ನಂತರ ಅವರು ಏಷ್ಯಾ ಕಪ್​ನ (Asia Cup 2022) ಅಪ್ಘಾನಿಸ್ತಾನದ ತಂಡದ (India vs Afghanistan) ವಿರುದ್ಧ ಸೆಂಚುರಿ ಬಾರಿಸಿದ್ದಾರೆ. ಏಷ್ಯಾ ಕಪ್​ನಲ್ಲಿ ಭಾರತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 122 ರನ್ ಗಳಿಸಿ ಅಬ್ಬರಿಸಿದರು. ಅವರ ಈ ಶತಕಕ್ಕೆ ಕ್ರಿಕೆಟ್​ ದಿಗ್ಗಜರುಗಳು ಹಾಡಿಹೋಗಳುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಹೆಸರನ್ನು ಈವರೆಗೂ ಟ್ರೆಂಡ್​ ಮಾಡುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್  ಗಂಭೀರ್​ (Gautam Gambhir) ಮಾತ್ರ ಇದಕ್ಕೆ ಕೊಂಚ ವಿರುದ್ಧ ಎಂಬಂತೆ ಹೇಳಿಕೆ ಒಂದನ್ನು ನೀಡಿದ್ದು, ಕೊಹ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
Published by:Annappa Achari
First published: