Evening Digest Sep 10: ಎಲ್ಲೆಲ್ಲೂ ಗಣೇಶ ಚತುರ್ಥಿ ಸಂಭ್ರಮ; ಹಿಂದಿ ಹೇರಿಕೆಗೆ ಹೈಕೋರ್ಟ್ ಕಿಡಿ-ಇಂದಿನ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಹಿಂದಿ ಹೇರಿಕೆ ವಿರುದ್ಧ ಮದ್ರಾಸ್ ಹೈಕೋರ್ಟ್ ಕಿಡಿ:  ದಕ್ಷಿಣ ರಾಜ್ಯಗಳಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ (Hindi Imposition) ವಿರುದ್ಧ ಭಾರೀ ಪ್ರತಿರೋಧ ವ್ಯಕ್ತವಾಗುತ್ತದೆ. ತಮಿಳುನಾಡಿನಲ್ಲಿ ಬಹುತೇಕ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಒಮ್ಮತದ ಧ್ವನಿ ಹೊರಡಿಸುತ್ತವೆ. ಈಗ ಮದ್ರಾಸ್ ಹೈಕೋರ್ಟ್ (Madras High Court) ಕೂಡ ಇದಕ್ಕೆ ಧ್ವನಿಗೂಡಿಸಿದೆ. ಮದುರೈ ಕ್ಷೇತ್ರದ ಸಂಸದ ಸು ವೆಂಕಟೇಸನ್ (Madurai MP Su Venkatesan) ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭಾಷಾಂಧತೆ (Linguistic Fanaticism) ಬಹಳ ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟ ಉಚ್ಚ ನ್ಯಾಯಪೀಠ, ಹಿಂದಿ ಅಧಿಕೃತ ರಾಜ್ಯಭಾಷೆ ಅಲ್ಲದ ರಾಜ್ಯಗಳಿಗೆ (Non-Hindi States) ಹಿಂದಿಯಲ್ಲಿ ಸಂವಹನ (Communication) ನಡೆಸಬಾರದು ಎಂದು ಕೇಂದ್ರಕ್ಕೆ ತಿಳಿಹೇಳಿತು.

ರದ್ದಾದ 5ನೇ ಪಂದ್ಯ ಬೇರೆ ದಿನ ಆಡಿಸುವ ಸಾಧ್ಯತೆ ​​​

ರವಿಶಾಸ್ತ್ರಿ ಸೇರಿದಂತೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಭಾರತ ಐದನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸಿಲ್ಲ. ಹೀಗಾಗಿ, ಇವತ್ತು ಆರಂಭವಾಗಬೇಕಿದ್ದ ಸರಣಿಯ ಕೊನೆಯ ಟೆಸ್ಟ್ ರದ್ದಾಗಿದೆ. ಭಾರತದಿಂದ ತಂಡ ಕಣಕ್ಕಿಳಿಯದ ಕಾರಣ ಪಂದ್ಯ ರದ್ದು ಮಾಡಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಘೋಷಿಸಿದ್ಧಾರೆ. ರೋಚಕವಾಗಿ ನಡೆಯುತ್ತಿದ್ದ ಇಡೀ ಸರಣಿಗೆ ಕೋವಿಡ್ ಒಂದು ರೀತಿಯಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್ ರೀತಿ ವಕ್ಕರಿಸಿ ಕ್ರಿಕೆಟ್ ರಸಿಕರ ಉತ್ಸಾಹವನ್ನು ಇಳಿಸಿದೆ. ಇದರ ಮಧ್ಯೆ ಐದನೇ ಟೆಸ್ಟ್ ಪಂದ್ಯವನ್ನ ಸಂಪೂರ್ಣವಾಗಿ ಕೈಬಿಡದೇ ಮುಂದಿನ ಯಾವುದಾದರೂ ದಿನಗಳಲ್ಲಿ ಆಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ಯೋಜಿಸಿದೆ. ಇಸಿಬಿ ಜೊತೆ ಈ ವಿಚಾರವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಸಹಚರರನ್ನು ಜೈಲಿನಿಂದ ಬಿಡಿಸಲು ರಾಬರಿ

ರಾಜಧಾನಿ ಬೆಂಗಳೂರಿನಲ್ಲಿ (Bengaluru) ಒಂಟಿಯಾಗಿ ವಾಸವಾಗಿರುವ ವೃದ್ಧರ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆ (Robbery) ಮಾಡುವ ಗ್ಯಾಂಗ್ ಒಂದು ಕ್ರಿಯಾಶೀಲವಾಗಿದೆ‌. ಒಬ್ಬಂಟಿಯಾಗಿ ವೃದ್ಧರು ಇರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಆರು ಮಂದಿ ದರೋಡೆಕೋರರನ್ನು ಬೆಳ್ಳಂದೂರು ಪೊಲೀಸರು ಹಡೆಮುರಿ ಕಟ್ಟಿದ್ದಾರೆ. ಬೆಳ್ಳಂದೂರು ನಿವಾಸಿ ಲಕ್ಷ್ಮಣ್ ಎಂಬುವರು ನೀಡಿದ ದೂರಿನ ಮೇರೆಗೆ ತೇಜಸ್, ನಿತಿನ್, ಹೃತಿಕ್, ರಾಜವರ್ಧನ, ಅರುಣ್, ಮಹದೇವ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ  40 ಲಕ್ಷ ರೂಪಾಯಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ದೇಶದಲ್ಲೇ ಪವರ್​ಫುಲ್ ಈ ಸಿಂಧೂರ ಗಣೇಶ

ಸಿಂಧೂರ ಗಣೇಶ ಬಹಳ ಪವರ್ ಫುಲ್. ಉತ್ತರ ಕರ್ನಾಟಕದಲ್ಲಿಯೇ  ಈತನ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಎಲ್ಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಅನ್ನು ಪ್ರತೀತಿ. ಅಷ್ಟೊಂದು  ಫೇಮಸ್ ಈ ಗಣೇಶ. ಅಷ್ಟಕ್ಕೂ ಯಾವ ಗಣೇಶ, ಆತನ ಮಹಿಮೆ ಏನು ಅಂತಾ ತಿಳಿದುಕೊಳ್ಳುವ ಕುತೂಹಲವೇ. ಹಾಗಾದರೆ ಈ ಸ್ಟೋರಿ ನೋಡಿ. ಧಾರವಾಡ ಜಲ್ಲೆ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲೊಂದು ವಿಶಿಷ್ಟ ಗಣಪನಿದ್ದಾನೆ. ಪ್ರತಿ ಗಣೇಶೋತ್ಸವದ ಸಂದರ್ಭದಲ್ಲಿ ಆಗಮಿಸೋ ಈ ಗಣಪ ಮೂರು ದಿನಗಳ ಕಾಲ ಇರ್ತಾನೆ. ಇದು ದೇಶದ ಮೋಸ್ಟ್ ಪವರ್ ಫುಲ್ ಗಣಪಗಳಲ್ಲೊಂದು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನೆಯಲ್ಲಿ ಹಬ್ಬದ ಸಂಭ್ರಮ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ ಗಣೇಶನ ಹಬ್ಬವನ್ನು ಕುಟುಂಬ ಸಮೇತರಾಗಿ ಆಚರಿಸಿದರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್- ಸೊಸೆ ರೇವತಿ ಜೊತೆಯಾಗಿ ವಿಘ್ನ ವಿನಾಯಕನಿಗೆ ಎಚ್ಡಿಕೆ ಪೂಜೆ ನೇರವೇರಿಸಿದರು. ನಿಖಿಲ್​​ -ರೇವತಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ತುಂಬು ಗರ್ಭಿಣಿ ರೇವತಿ ಹಬ್ಬ ಆಚರಿಸಿದರು.
Published by:Kavya V
First published: