Evening Digest: ತಗ್ಗಲಿದೆ ಅಡುಗೆ ಎಣ್ಣೆ ಬೆಲೆ; ಟಿ20ಯಲ್ಲೂ ಭಾರತಕ್ಕೆ ಸೋಲು: ಇಂದಿನ ಪ್ರಮುಖ ಸುದ್ದಿಗಳು

Today Kannada news: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಜನಸಾಮಾನ್ಯರಿಗೆ ಗುಡ್​ನ್ಯೂಸ್​: ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ(central government) ಗುಡ್​ನ್ಯೂಸ್​ ನೀಡಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳು ಮತ್ತು ಎಣ್ಣೆಬೀಜದ ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಿದೆ. ಆಮದುದಾರರು ಮತ್ತು ರಫ್ತುದಾರರನ್ನು ಹೊರತುಪಡಿಸಿ  ಮಾರ್ಚ್ 31 ರವರೆಗೆ ಮಿತಿಯನ್ನು ಹೇರಲಾಗಿದೆ. ಈಗಾಗಲೇ, ಎನ್‌ಸಿಡಿಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಸಿವೆ ಎಣ್ಣೆ  ವ್ಯಾಪಾರವನ್ನು ಅಕ್ಟೋಬರ್ 8 ರಿಂದ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಜಾಗತಿಕ ಮತ್ತು ಸ್ಥಳೀಯ ಪೂರೈಕೆ ಪರಿಸ್ಥಿತಿಯಿಂದಾಗಿ ಕಳೆದ ಒಂದು ವರ್ಷದಲ್ಲಿ ದೇಶೀಯ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲ ಬೆಲೆಗಳು ಶೇಕಡಾ 46.15 ರಷ್ಟು ಏರಿಕೆಯಾಗಿದೆ. ಈಗ ಕೇಂದ್ರದ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಕಡಿಮೆಯಾಗಲಿದೆ.

ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ

ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ (Talk Fight Between HD Kumaraswamy And Siddaramaiah)  ನಡುವಿನ ವಾಗ್ಸಮರ ಮುಂದುವರೆದಿದೆ. ಇಂದು ಮಂಡ್ಯದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಜೆಡಿಎಸ್ ಮಂಡ್ಯ ಭಾಗದಲ್ಲಿ ದುರ್ಬಲವಾಗಿದೆ ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನನ್ನ ಬಗ್ಗೆ, ಜೆಡಿಎಸ್ ಬಗ್ಗೆ, ದೇವೇಗೌಡ ಬಗ್ಗೆ ಟೀಕೆ ಮಾಡುವುದೇ ನಿಮಗೆ ಅನಿವಾರ್ಯವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಸೋಲಲು ಮಂಡ್ಯದಲ್ಲಿ ಪಕ್ಷ ದುರ್ಬಲ ಆಗಿದ್ದಕ್ಕೆ ಅಲ್ಲ, ಬದಲಿಗೆ ನಿಮ್ಮ ಕುತಂತ್ರ ರಾಜಕೀಯದಿಂದ ನಾವು ಸೋಲಬೇಕಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ರಷ್ಯಾದಲ್ಲಿ ವಿಮಾನ ಪತನಗೊಂಡು 16 ಸಾವು

ರಷ್ಯಾದ ಟಟರಸ್ತಾನದಲ್ಲಿ (Republic of Tatarstan in central Russia) ವಿಮಾನ ಪತನಗೊಂಡಿದ್ದು, 16 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಎಮೆರ್ಜೆನ್ಸಿ ಸರ್ವಿಸ್ ಸ್ಪುಟ್ನಿಕ್ ಪ್ರಕಾರ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಳು ಜನರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ವಿಮಾನದಲ್ಲಿ ಪ್ಯಾರಾಚೂಟ್ ಜಂಪರ್ ಗಳು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಎಲ್-410 ( L-410 plan) ಟ್ಯಾಬ್ಲೆಟ್ ವಿಮಾನ ಪತನಗೊಂಡಿದ್ದು, ಇದು ಎರಡು ಇಂಜಿನ್ ಹೊಂದಿರುವ  ಶಾರ್ಟ್ ರೇಂಜ್ ಟ್ರಾನ್ಸಫೋರ್ಟ್ ವಿಮಾನ ಇದಾಗಿದೆ. ಕಳೆದ ಕೆಲ ವರ್ಷಗಳಲ್ಲಿ ರಷ್ಯಾ (Russia) ವಿಮಾನಯಾನ ಸುಧಾರಿಸಿದ್ರೂ, ಆಗಾಗ ಹಳೆಯ ಮಾಡೆಲ್ ವಿಮಾನಗಳು ಪತನವಾಗುತ್ತಿರುತ್ತಿವೆ.

ಟಿ20ಯಲ್ಲೂ ಭಾರತಕ್ಕೆ ಸೋಲು

ಇವತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಮಹಿಳಾ ತಂಡ 14 ರನ್​ಗಳಿಂದ ಸೋತಿತು. ಗೆಲ್ಲಲು 150 ರನ್ ಗುರಿ ಪಡೆದಿದ್ದ ಭಾರತದ ಮಹಿಳೆಯರು ನಿಗದಿತ 20 ಓವರ್​ನಲ್ಲಿ 135 ರನ್ ಮಾತ್ರ ಗಳಿಸಲು ಶಕ್ಯರಾದರು. ಸ್ಮೃತಿ ಮಂಧನಾ ಅರ್ಧಶತಕವು ಭಾರತೀಯರ ಚೇಸಿಂಗ್​ಗೆ ಬಲ ತುಂಬಲಾಗಲಿಲ್ಲ. ಕೊನೆಯ ಘಟ್ಟದಲ್ಲಿ ರಿಚಾ ಘೋಷ್ ಅವರಿಂದ ಸ್ಫೋಟಕ ಬ್ಯಾಟಿಂಗ್ ಬರದೇ ಹೋಗಿದ್ದರೆ ಭಾರತೀಯರ ಸೋಲಿನ ಅಂತರ ಇನ್ನೂ ಹೆಚ್ಚಿರುತ್ತಿತ್ತು. ಬಿಗ್ ಬ್ಯಾಷ್ ಲೀಗ್​ನಲ್ಲಿ ಬಹುನಿರೀಕ್ಷೆಯ ಸ್ಟಾರ್ ಆಟಗಾರ್ತಿಯಾಗಿರುವ ರಿಚಾ ಘೋಷ್ ಅವರು 11 ಬಾಲ್​ನಲ್ಲಿ 2 ಸಿಕ್ಸರ್, 2 ಬೌಂಡರಿಗಳೊಂದಿಗೆ 23 ರನ್ ಭಾರಿಸಿದರು. ಆದರೆ, ಗೆಲುವಿನ ದಾರಿ ಬಹಳ ದೂರ ಇತ್ತಾದ್ದರಿಂದ ಅವರೂ ಅಸಹಾಯಕರಾದರು.

ನಟಿ ರಾಕುಲ್​ ಇನ್​ ಲವ್​

ಕನ್ನಡದ ಗಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ರಾಹುಲ್​ ಪ್ರೀತ್​ ಸಿಂಗ್​ ನಂತರ ಟಾಲಿವುಡ್​​ ನಲ್ಲಿ ಬಹುಬೇಡಿಯ ನಟಿಯಾದರು. ತೆಲುಗಿನ ಟಾಪ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಗ್ಲ್ಯಾಮರಸ್​ ನಟಿ ಇಂದು 31ನೇ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಬರ್ತ್​ ಡೇಯಂದೇ ತಮ್ಮ ಲವ್​ ಲೈಫ್​​ ಬಗ್ಗೆ ಇನ್​ ಸ್ಟಾಗ್ರಾಂನಲ್ಲಿ ಕನ್ಫರ್ಮ್​​ ಮಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಮಿಂಚಿನ ನಟಿ ರಾಕುಲ್​​ , ಬಾಲಿವುಡ್ ಖ್ಯಾತ ನಿರ್ಮಾಪಕನ ಪುತ್ರ-ನಟನೂ ಆಗಿರುವ ಜಾಕಿ ಭಗನಾನಿಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾರೆ. ಜಾಕಿ ಭಗನಾನಿ-ರಾಕುಲ್​ ಇಬ್ಬರು ಒಂದೇ ಫೋಟೋವನ್ನು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ರಿಲೇಷನ್​​ ಶಿಪನ್ನು ಕನ್ಫರ್ಮ್​ ಮಾಡಿದ್ದಾರೆ. ಜಾಕಿ ಭಗನಾನಿ ಪ್ರೇಯಸಿ ರಾಕುಲ್​ ಗೆ ಬರ್ತ್​ ವಿಷ್​ ಜೊತೆಗೆ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಕುಲ್​ ಕೂಡ ನನ್ನ ಬರ್ತ್​ ಡೇ ಯಂದು ನಂಗೆ ಸಿಕ್ಕಿರುವ ದೊಡ್ಡ ಗಿಫ್ಟ್​​​ ನೀನು ಎಂದು ಜಾಕಿಯ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.
Published by:Kavya V
First published: