HOME » NEWS » State » EVENING DIGEST 10 JUNE 2021 MUST READ STORY IN KANNADA SESR

Evening Digest: ಕೋವಿಡ್​ ಅನ್​ಲಾಕ್​ನಿಂದ ದರ್ಶನ್​ ಕರೆಗೆ ಮೃಗಾಲಯಕ್ಕೆ ಹರಿದು ಬಂದ ನೆರವಿನವರೆಗೆ ಈ ದಿನ ಓದಲೇಬೇಕಾದ ಸುದ್ದಿಗಳಿವು

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

news18-kannada
Updated:June 10, 2021, 7:28 PM IST
Evening Digest: ಕೋವಿಡ್​ ಅನ್​ಲಾಕ್​ನಿಂದ ದರ್ಶನ್​ ಕರೆಗೆ ಮೃಗಾಲಯಕ್ಕೆ ಹರಿದು ಬಂದ ನೆರವಿನವರೆಗೆ ಈ ದಿನ ಓದಲೇಬೇಕಾದ ಸುದ್ದಿಗಳಿವು
ಸಾಂದರ್ಭಿಕ ಚಿತ್ರ
  • Share this:
ಬಿಎಸ್​ವೈಗೆ ಸಿಎಂ ಖುರ್ಚಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ತಾರಕಕ್ಕೇರಿರುವ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಯಡಿಯೂರಪ್ಪನವರ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಸಹಿ ಸಂಗ್ರಹವನ್ನೂ ಮಾಡಿದ್ದರು. ಇದರ ಮಧ್ಯೆ ಹೈಕಮಾಂಡ್ ಹೇಳಿದರೆ ನಾನು ರಾಜೀನಾಮೆ ನೀಡಲೂ ಸಿದ್ಧನಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವುದು ಪಕ್ಕಾ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಆ ಎಲ್ಲ ವದಂತಿಗಳಿಗೆ ತೆರೆ ಎಳೆದಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಇಲ್ಲ ಎಂದು ಖಚಿತ ಪಡಿಸಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಅನ್​ಲಾಕ್​
ಇಂದು ಸಿಎಂ ಬಿ.ಎಸ್.​ಯಡಿಯೂರಪ್ಪ 8 ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಇಂದು ವಿಡಿಯೋ ಕಾನ್ಫೆರೆನ್ಸ್​ ನಡೆಸಿ ಲಾಕ್​ಡೌನ್​​ ಮುಂದುವರಿಕೆ ಹಾಗೂ ಅನ್​ಲಾಕ್ ಮಾಡುವ​ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಲಾಕ್​ಡೌನ್​ ಮುಂದುವರಿಕೆಗೆ 8 ಜಿಲ್ಲೆಗಳ ಅಧಿಕಾರಿಗಳು, ಸಚಿವರು ಸಿಎಂಗೆ ಮನವಿ ಮಾಡಿದ್ದಾರೆ. ಇವಾಗ ಬೆಂಗಳೂರಿನಲ್ಲಿ ಕೊರೋನಾ ಕಡಿಮೆಯಾಗಿದೆ. ಆದರೆ ಈಗ ನಮ್ಮ ನಮ್ಮ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಜಾಸ್ತಿ ಇದೆ. ಯಾಕೆಂದರೆ ಏಪ್ರಿಲ್, ಮೇ ತಿಂಗಳಿನಲ್ಲಿ ಜಿಲ್ಲೆಗಳಿಗೆ ಬಂದವರಿಂದ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ಅದು ಕಡಿಮೆ ಯಾಗಬೇಕು ಈ ನಿಟ್ಟಿನಲ್ಲಿ ಲಾಕ್ ಡೌನ್ ಬೇಕು. ಇನ್ನೂ ಒಂದು ವಾರಗಳ ಕಾಲ ಲಾಕ್ ಡೌನ್ ಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತಾಪ್​ಸಿಂಹ ಅಪ್ರಬುದ್ಧ
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರ ವರ್ಗಾವಣೆ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರೋಹಿಣಿ ಸಿಂಧೂರಿ ಪರ ವಹಿಸಿದ್ದಾರೆ ಎಂಬ ಸಂಸದ ಪ್ರತಾಪ್​ ಸಿಂಹ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದರು. ಪ್ರತಾಪ್​​ ಸಿಂಹ ಇನ್ನು ಅಪ್ರಬುದ್ಧರಾಗಿದ್ದಾರೆ, ಅದರಿಂದ ಅವರು ಇನ್ನೂ ಹೊರಬಂದಿಲ್ಲ. ಅಪ್ರಬುದ್ಧ ರಾಜಕಾರಣದಿಂದ ಹೊರಬರಬೇಕು ಎಂದು ಟಾಂಗ್​​​​ ಕೊಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯಗಾರು ಎಂದಿದ್ದಾನೆ ಪ್ರತಾಪ್, ತನಗೆ ತೆಲುಗು ಬರುತ್ತೆ ಎಂದು ತೋರಿಸುತ್ತಿದ್ದಾನೆ. ಬಹುವಚನದಲ್ಲಿ ಮಾತಾಡಿದ್ದಾನೆ ಪರ್ವಾಗಿಲ್ಲ ಎಂದರು.

ಕಾಂಗ್ರೆಸ್​ ತೊರೆಯಲಾರೆಅನೇಕ ಕಾಂಗ್ರೆಸ್​​ ಹಿರಿಯ ನಾಯಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಜಿತಿನ್ ಪ್ರಸಾದ್​ ಸಹ ಕಾಂಗ್ರೆಸ್ ತ್ಯಜಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಕಾಂಗ್ರೆಸ್ ಒಳಗಿನ ಬಿಕ್ಕಟ್ಟನ್ನು ಮತ್ತೊಮ್ಮೆ ಜಹಜ್ಜಾಹೀರು ಮಾಡಿತ್ತು. ಇದರ ಬೆನ್ನಿಗೆ ಇಂದು ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, "ನಾನು ಸಾಯುವವರೆಗೆ ಪಕ್ಷಾಂತರ ಮಾಡಿ ಬಿಜೆಪಿ ಸೇರ್ಪಡೆಯಾಗಲಾರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್​ನಲ್ಲಿ ಸುಳ್ಳು ಹೇಳಿದ್ರಾ ಟಿಎಂಸಿ ಸಂಸದೆ
ಸ್ಟಾರ್​ ಸಂಸದೆಯಾಗಿರುವ ನುಸ್ರತ್​ ಜಹಾನ್​​ 2019ರಲ್ಲಿ ಉದ್ಯಮಿ ನಿಖಿಲ್​ ಜೈನ್​ ಅವರನ್ನು ಟರ್ಕಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಮದುವೆ ಬಳಿಕ ಸಂಸತ್​ನಲ್ಲಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಅವರು, ನಾನು ನುಸ್ರತ್​ ಜಹಾನ್​ ರುಹಿ ಜೈನ್​ ಎಂದೇ ಪರಿಚಯಿಸಿಕೊಂಡಿದ್ದರು. ಆ ಮೂಲಕ ನಿಖಿಲ್​ ಜೈನ್​ ಜೊತೆ ಮದುವೆಯಾಗಿರುವುದನ್ನು ತಿಳಿಸಿದ್ದರು. ಆದರೆ, ಈಗ ಸ್ಟಾರ್​ ಸಂಸದೆ, ಟರ್ಕಿ ಕಾನೂನು ಪ್ರಕಾರದ ತಮ್ಮ ಈ ಮದುವೆ ಭಾರತದ ಕಾನೂನಿನ ಪ್ರಕಾರ ಮಾನ್ಯವಲ್ಲ. ನಾವು ಲಿವಿಂಗ್​ ಇನ್​ ರಿಲೇಷನ್​ ಶಿಪ್​ನಲ್ಲಿದ್ದೇವು ಎಂದು ತಿಳಿಸಿದ್ದಾರೆ. ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಅಮಿತ್​ ಮಾಳ್ವಿಯಾ, ಹಾಗಾದ್ರೆ ಸಂಸದರು ಸಂಸತ್​ನಲ್ಲಿ ಸುಳ್ಳು ಹೇಳಿದ್ರಾ ಎಂದು ಅವರ ಪ್ರಮಾಣವಚನದ ವಿಡಿಯೋ ಹಾಕಿ ಪ್ರಶ್ನಿಸಿದ್ದಾರೆ.

ದರ್ಶನ್​ನಿಂದ ಮೃಗಾಲಯಗಳಿಗೆ ಮರುಜೀವ
ಕಳೆದ ಒಂದೂವರೆ ವರ್ಷದಿಂದ ಕೊರೊನಾ ಹಾವಳಿ ಹಾಗೂ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಕ್ಷೇತ್ರಗಳಿಗೂ ಪೆಟ್ಟು ಬಿದ್ದಿದೆ. ಅವುಗಳಲ್ಲಿ ಪ್ರವಾಸೋದ್ಯಮವೂ ಪ್ರಮುಖವಾದುದು. ZOOಗಳು ಸಂಕಷ್ಟದಲ್ಲಿ ಸಿಲುಕಿದ್ದವು. ಪ್ರವಾಸಿಗರು ಟಿಕೆಟ್ ಪಡೆದು ಝೂಗಳಿಗೆ ಬಂದರಷ್ಟೇ ಹಣ, ಇಲ್ಲದಿದ್ದರೆ ಸಂಪೂರ್ಣವಾಗಿ ಸರ್ಕಾರದ ಮೇಲೆ ಅವಲಂಭಿಸಬೇಕಾದ ಪರಿಸ್ಥಿತಿ. ರಾಜ್ಯದ ಎಲ್ಲ 9 ಮೃಗಾಲಯಗಳೂ ಸಹ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವು. ಆದರೆ ಸ್ಯಾಂಡಲ್‌ವುಡ್​​ನ ಚಾಲೆಂಜಿಂಗ್ ಸ್ಟಾರ್, ಡಿಬಾಸ್ ದರ್ಶನ್ ಅವರು ರಾಜ್ಯದ ಮೃಗಾಲಯಗಳಿಗೆ ಮರುಜೀವ ನೀಡಿದ್ದಾರೆ.
Published by: Seema R
First published: June 10, 2021, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories