Evening Digest: ಡಿಕೆಶಿ ಭೇಟಿ ಮಾಡಿದ ಅಧಿಕಾರಿಗೆ ಕೊರೊನಾ; ಅಕ್ರಮ ಸಂಬಂಧಕ್ಕೆ ಒಪ್ಪದ ಗೃಹಿಣಿ ಮೇಲೆ ಹಲ್ಲೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಡಿಕೆಶಿ ಭೇಟಿ ಮಾಡಿದ ಅಧಿಕಾರಿಗೆ ಕೊರೊನಾ: ಕಾಂಗ್ರೆಸ್​​(Congress) ಕೈಗೊಂಡಿರುವ ಮೇಕೆದಾಟು ಪಾದಯಾತ್ರೆ (Mekedatu Padayatra) ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕನಕಪುರದ ಮಾದಪ್ಪನದೊಡ್ಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ಸರ್ಕಾರ, ನನ್ನ ಮೇಲೆ ಹಾಗೂ ಪಕ್ಷದ ಮೇಲೆ ದೊಡ್ಡ ಸಂಚು ರೂಪಿಸಿದೆ. ಹೇಗಾದರೂ ಮಾಡಿ ಈ ಪಾದಯಾತ್ರೆ ನಿಲ್ಲಿಸುವ ಸಂಚು ರೀಪಿಸಿದ್ದಾರೆ ಎಂದು ಆರೋಪಿಸಿದರು. ನಿನ್ನೆ ರಾತ್ರಿ ನನ್ನನ್ನು ಬಂದು ಭೇಟಿ ಮಾಡಿ, ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಹೇಳಿದ ಆರೋಗ್ಯ ಅಧಿಕಾರಿಗೆ ಪಾಸಿಟಿವ್ ಎಂದು ಹೇಳುತ್ತಿದ್ದಾರೆ. ಇವುಗಳ ಹಿಂದೆ ಬಿಜೆಪಿ ಸರ್ಕಾರದ ಷಢ್ಯಂತ್ರ ಇದೆ. ಕೋವಿಡ್​ ಹೆಚ್ಚಾಗಿರುವುದು ರಾಜ್ಯ ಸರ್ಕಾರದಿಂದ, ಈ ಇರುವುದು ಬಿಜೆಪಿ ಓಮಿಕ್ರಾನ್. ರಾಜ್ಯದಲ್ಲಿ ಕೊರೊನಾ ಪಾಸಿಟಿವ್​​ ಕೇಸ್​ಗಳ ಸಂಖ್ಯೆ ನಂಬರ್ ಏರಿಕೆ ಮಾಡ್ತಿರುವ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಪೂರ್ತಿ ಓದಿಗಾಗಿ:ಬೇಕಂತಲೇ ಸೋಂಕಿತನನ್ನು ನನ್ನ ಬಳಿ ಕಳುಹಿಸಿದ್ದಾರೆ, ನನ್ನನ್ನು ಪಾಸಿಟಿವ್ ಮಾಡಲು ಸಂಚು: DK Shivakumar

ನಾಳೆ ರಾಮನಗರಕ್ಕೆ ಸಚಿವ ಅಶ್ವತ್ಥ ನಾರಾಯಣ ಎಂಟ್ರಿ

ಇತ್ತೀಚೆಗಷ್ಟೇ ರಾಮನಗರದಲ್ಲಿ (Ramanagara) ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್​ (DK Suresh) ಹಾಗೂ ಸಚಿವ ಡಾ.ಸಿಎನ್​ ಅಶ್ವತ್ಥ ನಾರಾಯಣ (Dr CN Ashwath Narayan) ಜಟಾಪಟಿ ನಡೆಸಿದ್ದರು. ಈ ಘಟನೆ ಮಾಸುವ ಮುನ್ನವೇ ರಾಮನಗರಕ್ಕೆ ಮತ್ತೆ ಭೇಟಿ ನೀಡುವುದಾಗಿ ಸಚಿವರು ಘೋಷಿಸಿದ್ದಾರೆ. ನಾಳೆ ರಾಮನಗರಕ್ಕೆ ತೆರಳುತ್ತಿದ್ದೇನೆ,  ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ವಿರುದ್ಧ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಆ ಮೂಲಕ ಡಿಕೆ ಬ್ರದರ್ಸ್​​ ಹಾಗೂ ಸಚಿವ ಅಶ್ವತ್ಥ ನಾರಾಯಣ ಅವರ ನಡುವಿನ ಜಟಾಪಟಿ ಮುಂದುವರೆಯುವ ಮುನ್ಸೂಚನೆ ಸಿಕ್ಕಿದೆ. ಇನ್ನು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್​​​ ನಾಯಕರ ಪಾದಯಾತ್ರೆಯನ್ನು ತೀವ್ರವಾಗಿ ಟೀಕಿಸಿದರು. ಪಾದಯಾತ್ರೆ ಮಾಡಬೇಡಿ ಎಂದು ಮನವಿ ಮಾಡಿದ್ವಿ, ಆದರೂ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆಗೆ ನಾವು ಬದ್ದವಾಗಿದ್ದೇವೆ. ಸರ್ಕಾರದ ಏನೆಲ್ಲ ಕೆಲಸ ಮಾಡ್ತಿದ್ದೆ ಎಂದು ಹೇಳಿದ್ವಿ, ಆದರೂ ಕಾಂಗ್ರೆಸ್​ ನಾಯಕರು ಕೇಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಅಕ್ರಮ ಸಂಬಂಧಕ್ಕೆ ಒಪ್ಪದ ಗೃಹಿಣಿ ಮೇಲೆ ಹಲ್ಲೆ

ಅತಿಯಾದ ಕಾಮ ಅನ್ನೋದು ಮನುಷ್ಯನ ನೈತಿಕತೆಯನ್ನು ಕುರುಡಾಗಿಸುತ್ತದೆ ಎಂಬ ಮಾತಿದೆ. ಈ ಪ್ರಕರಣದಲ್ಲಿ ಈ ಮಾತು ನಿಜಕ್ಕೂ ಸತ್ಯವಾಗಿದೆ. ಕಾಮುಕನ ಕಪಿಮುಷ್ಠಿಯಲ್ಲಿ ಗೃಹಿಣಿಯೊಬ್ಬರು ನರಳಿದ್ದಾರೆ. ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ನಡೆದಿದೆ. ಕಾಮುಕ ನಟರಾಜು ಎಂಬಾತ ಗೃಹಿಣಿಯ ಹಿಂದೆ ಬಿದ್ದಿದ್ದ. ತನ್ನೊಂದಿಗೆ ಅನೈತಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ. ಮಹಿಳೆ ಒಪ್ಪದಿದ್ದಾಗ ಕರುಣೆ ಇಲ್ಲದೆ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಹಾಗೂ ಮಹಿಳೆ ಇಬ್ಬರೂ ಶಿವನಸಮುದ್ರ ಗ್ರಾಮದ ನಿವಾಸಿಗಳು. ಹಲವು ದಿನಗಳಿಂದ ಮಹಿಳೆಯನ್ನು ಲೈಂಗಿಕ ಸಂಪರ್ಕಕ್ಕಾಗಿ ನಟರಾಜು ಒತ್ತಾಯಿಸುತ್ತಿದ್ದ ಎಂಬ ಮಾಹಿತಿ ಇದೆ.

ಪೂರ್ತಿ ಓದಿಗಾಗಿ:Crime News: ಅಕ್ರಮ ಸಂಬಂಧಕ್ಕೆ ಒಪ್ಪದ ಗೃಹಿಣಿಗೆ ನರಕ ತೋರಿಸಿದ ಕೊಳ್ಳೇಗಾಲದ ಕಾಮುಕ..!

ಸಾಮಾಜಿಕ ಜಾಲತಾಣದ ಮೂಲಕ ಪತ್ನಿ ವಿನಿಮಯ ದಂಧೆ

ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲನಲ್ಲಿ ಲೈಂಗಿಕ ಚಟುವಟಿಗಳಿಗಾಗಿ ಹೆಂಡತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ (ಪತ್ನಿ ವಿನಿಮಯ -Wife Swapping)ದ ದಂಧೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 5000 ಸದಸ್ಯರ ಗುಂಪು ಫೇಸ್‌ಬುಕ್ (Facebook) ಮತ್ತು ಟೆಲಿಗ್ರಾಮ್‌ನಂತಹ (Telegram) ಸಾಮಾಜಿಕ ಮಾಧ್ಯಮದಲ್ಲಿ ಗ್ರೂಪ್​ ಸೃಷ್ಟಿಸಿ, ಇಲ್ಲಿ ಪತ್ನಿ ವಿನಿಮಯ ನಡೆಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ.

ಪೂರ್ತಿ ಓದಿಗಾಗಿ:Wife Swapping: ಕೇರಳದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪತ್ನಿ ವಿನಿಮಯ ದಂಧೆ; 7 ಜನರ ಬಂಧನ

 ಒನಕೆಯಿಂದ ಹೊಡೆದು ಪತ್ನಿಯನ್ನ ಕೊಲೆಗೈದಿದ್ದ ಪಾಪಿ ಪತಿಯ ಬಂಧನ

ಏನೂ ಅರಿಯದೇ ಮಲಗಿದ್ದ ಪತ್ನಿಯನ್ನ (Wife)  ರಾತ್ರೋ ರಾತ್ರಿ ಹತ್ಯೆ ಮಾಡಿ ಮನೆಯಲ್ಲಿ ಹೂತಿಟ್ಟು ಪರಾರಿಯಾಗಿದ್ದ ಪಾಪಿ ಪತಿಯನ್ನ 48 ಗಂಟೆಯಲ್ಲಿ ಬಂಧಿಸಿದ ಚಿತ್ರದುರ್ಗ ಪೊಲೀಸರು (Chitradurga Police) ಜೈಲಿಗೆ ಕಳುಹಿಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೋಣನೂರು ಗ್ರಾಮದಲ್ಲಿ ಸುಮಾ ಎಂಬ ಮಹಿಳೆಯನ್ನ ಪತಿ ಹತ್ಯೆ ಮಾಡಿ  ಹೂತಿಟ್ಟ ಘಟನೆ ಜ.7 ರಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡ ಭರಮಸಾಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಮನೆಯಲ್ಲಿ ಹೂತಿಟ್ಟ ಮಹಿಳೆಯ ಶವವನ್ನ (Dead body) ಹೊರ ತೆಗೆದು ಮರೋಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದ್ದರು.
Published by:Kavya V
First published: