Evening Digest: ಯಶಸ್ವಿಯಾಗಿ ನಡೆದ ಮತದಾನ; ದೇಶದಲ್ಲಿ 26 ಒಮೈಕ್ರಾನ್​ ಪ್ರಕರಣ ಪತ್ತೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

 • Share this:
  ಮತದಾನ ಅಂತ್ಯ
  ಇಂದು ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ (Karnataka Legislative Council) ಚುನಾವಣೆ ಮುಗಿದಿದೆ. ಮೇಲ್ಮನೆಯ 25 ಸ್ಥಾನಗಳಿಗೆ ಮತದಾನ ಮುಕ್ತಾಯವಾಗಿದೆ. 20 ಕ್ಷೇತ್ರಗಳ 25 ಸ್ಥಾನಗಳಿಗೆ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆದಿದೆ. ಶಾಸಕರು, ಸಂಸದರು, ರಾಜ್ಯಸಭೆ ಸದಸ್ಯರು, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ, ಗ್ರಾಮಪಂಚಾಯ್ತಿ ಸದಸ್ಯರು ಮತದಾನ ಮಾಡಿದ್ದಾರೆ. ಈ ಬಾರಿ ಚುನಾವಣೆಯ ಕಣದಲ್ಲಿ 90 ಅಭ್ಯರ್ಥಿಗಳು ಇದ್ದಾರೆ. ಗಾಯತ್ರಿ ಶಾಂತೇಗೌಡ ಕಣದಲ್ಲಿರುವ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ. ಗಾಯತ್ರಿ, ಚಿಕ್ಕಮಗಳೂರಿನ ಕಾಂಗ್ರೆಸ್ ಅಭ್ಯರ್ಥಿ. ಉಳಿದ 24 ಸ್ಥಾನಗಳಿಗೆ ಪುರುಷರೇ ಕ್ಯಾಂಡಿಡೇಟ್. ಕಾಂಗ್ರೆಸ್, ಬಿಜೆಪಿ 20 ಕ್ಷೇತ್ರಗಳಲ್ಲಿ‌ ಸ್ಪರ್ಧೆ‌ ಮಾಡಿದೆ. ಜೆಡಿಎಸ್ ಆರು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ

  ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಕಡಿಮೆ
  ದೇಶದಲ್ಲಿ ಓಮಿಕ್ರಾನ್‌ (Omicron)ಈಗಾಗಲೇ ಲಗ್ಗೆ ಇಟ್ಟಿದೆ. ಅದರಲ್ಲೂ ಮೊದಲ ಎರಡು ಪ್ರಕರಣಗಳು ಕರ್ನಾಟಕದಲ್ಲೇ ( Karnataka) ಪತ್ತೆಯಾಗಿತ್ತು. ಆದರೂ, ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ(3rd wave) ಲಕ್ಷಣಗಳಿಲ್ಲ ಎಂದು ತಜ್ಞರು ಹೇಳಿದ್ದಾರೆ. ಕಂಟೈನ್‌ಮೆಂಟ್‌ ಕ್ರಮಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಸೂಚನೆಯಲ್ಲಿ, ಕಳೆದ 3 ತಿಂಗಳುಗಳಲ್ಲಿ ಅಂದರೆ 108 ದಿನಗಳಲ್ಲಿ ಕರ್ನಾಟಕದಲ್ಲಿ ಪ್ರತಿದಿನ ನಡೆಸಲಾಗುವ (conducted)ಪರೀಕ್ಷೆಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳದ ಹೊರತಾಗಿಯೂ ದೈನಂದಿನ ಕೋವಿಡ್ -19 ಪರೀಕ್ಷಾ( Covid-19 test) ಧನಾತ್ಮಕತೆಯ ದರ 1%ಕ್ಕಿಂತ(Recovery rate) ಕಡಿಮೆಯಿದೆ. ಪ್ರಸ್ತುತ, ರಾಜ್ಯಾದ್ಯಂತ ಪ್ರತಿದಿನ ಕನಿಷ್ಠ ಒಂದು ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ

  ಕೇರಳದಲ್ಲಿ ಹಕ್ಕಿ ಜ್ವರ ಭೀತಿ
  ಕೋವಿಡ್​ಸೋಂಕು, ಓಮೈಕ್ರಾನ್​ ಆತಂಕದ ನಡುವೆಯೇ ಕೇರಳದಲ್ಲಿ ಹಕ್ಕಿ ಜ್ವರ (Bird Flu) ದ ಆತಂಕ ಮೂಡಿದೆ. ರಾಜ್ಯದ ಅಲಪ್ಪುಳ (Alappuzha) ಜಿಲ್ಲೆಯಲ್ಲಿ ಬಾತುಕೋಳಿಗಳ (Duck) ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹಕ್ಕಿಜ್ವರ ಪತ್ತೆಯಾದ ಪ್ರದೇಶದಲ್ಲಿ ಬಾತುಕೋಳಿ, ಕೋಳಿಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇನ್ನು ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆ ತಕಳಿ ಪಂಚಾಯಿತಿಯ 10ನೇ ವಾರ್ಡ್‌ನ 1 ಕಿ.ಮೀ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ.

  ಸೇನಾ ಗೌರವಗಳೊಂದಿಗೆ ಸಿಡಿಎಸ್ ಅಂತ್ಯಕ್ರಿಯೆ
  ತಮಿಳುನಾಡಿನ ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್​ ಅಪಘಾತದಲ್ಲಿ ಮೃತಪಟ್ಟ ಜನರಲ್ ಬಿಪಿನ್ ರಾವತ್ (CDS Bipin Rawat) ಮತ್ತು ಅವರ ಪತ್ನಿ ಮಧುಲಿಕಾ ರಾವತ್ (Madhulika Rawat) ಅವರ ಅಂತ್ಯಕ್ರಿಯೆ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ( Brar square) ಚಿತಾಗಾರದಲ್ಲಿ ನಡೆಯಿತು. ಇಂದು ಬೆಳಗ್ಗೆಯಿಂದ ಅವರ ದೆಹಲಿ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ಸಂಜೆ ಸಕಲ ಮಿಲಿಟರಿ ಗೌರವದೊಂದಿಗೆ (Military honor) ಅಂತ್ಯಕ್ರಿಯೆ ನಡೆಸಲಾಯಿತು.

  ತಡವಾಗಿ ಲ್ಯಾಂಡ್ ಆದ ಸಿಎಂ ವಿಮಾನ
  ಹುಬ್ಬಳ್ಳಿಯಲ್ಲಿ (hubballi) ದಟ್ಟ ಮಂಜು ಆವರಿಸಿದ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj bommai) ಅವರಿದ್ದ ವಿಮಾನ 30 ನಿಮಿಷ ತಡವಾಗಿ ಲ್ಯಾಂಡ್ ಆಯ್ತು. ಇಂದು ಬೆಳಗ್ಗೆ ಬೆಂಗಳೂರಿನಿಂದ ಸಿಎಂ ಮತ್ತು ಪ್ರಹ್ಲಾದ್ ಜೋಶಿ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ 6E7227 ಇಂಡಿಗೋ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿಯಲ್ಲಿ ದಟ್ಟ ಮಂಜು ಅವರಿಸಿದ ಹಿನ್ನೆಲೆ ವಿಮಾನ ಲ್ಯಾಂಡಿಂಗ್ ಸಮಸ್ಯೆ ಕಾಣಿಸಿಕೊಂಡಿತ್ತು. ದಟ್ಟ ಮಂಜಿನ ಕ್ಲಿಯರೆನ್ಸ್ ಸಿಕ್ಕ ಬಳಿಕ ಅರ್ಧ ಗಂಟೆ ತಡವಾಗಿ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯ್ತು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ಸಿಎಂ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

  ದೇಶದಲ್ಲಿ 26 ಒಮೈಕ್ರಾನ್​ ಪ್ರಕರಣ
  ದೇಶದಲ್ಲಿ ಮತ್ತೆರಡು ಹೊಸ ಒಮೈಕ್ರಾನ್ (Omicron)​ ಪ್ರಕರಣಗಳು ಪತ್ತೆಯಾಗಿದೆ. ಗುಜರಾತ್‌ನ ಜಾಮ್‌ ನಗರದಲ್ಲಿ ಎರಡು ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿದೆ. ದೇಶದಲ್ಲಿ ಒಟ್ಟು 26 ಒಮೈಕ್ರಾನ್​ ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲಾ ತೀವ್ರತರದ ಲಕ್ಷಣ ಹೊಂದಿಲ್ಲ. ಈ ಹಿನ್ನಲೆ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ
  Published by:Seema R
  First published: