Evening Digest: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರು, ಆನ್​ಲೈನ್ ಗೇಮ್ ಗೆದ್ದ ವಿದ್ಯಾರ್ಥಿಯ ಕಿಡ್ನ್ಯಾಪ್, ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
8ನೇ ಬಾರಿಗೆ ಸಿಎಂ ಆಗಿ ನಿತೀಶ್​ ಕುಮಾರ್ ಪ್ರಮಾಣವಚನ

ಬಿಹಾರದಲ್ಲಿ ಮತ್ತೆ ಹೊಸ ಸರ್ಕಾರ (Bihar Politics Updates) ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರೇ (Bihar CM Nitish Kumar) ಮುಂದುವರೆಯುತ್ತಿದ್ದಾರೆ. ಮಂಗಳವಾರ ಬಿಜೆಪಿಯನ್ನು ತೊರೆದು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷಗಳನ್ನು ಒಳಗೊಂಡ ಹೊಸ ಮಹಾಮೈತ್ರಿಯನ್ನು ಘೋಷಿಸಿದ ನಂತರ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಕುಮಾರ್ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ತೇಜಸ್ವಿ ಯಾದವ್ (Tejaswi Yadav) ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾ. ಉದಯ್ ಉಮೇಶ್ ಲಲಿತ್

ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ (CJI) ನೇಮಕ ಮಾಡಲಾಗಿದೆ . ಪ್ರಸ್ತುತ ಎನ್‌ವಿ ರಮಣ ಅವರು (CJI NV Ramana) ನಿವೃತ್ತರಾದ ನಂತರ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (Justice Uday Umesh Lalit) ಅವರು ಆಗಸ್ಟ್ 27 ರಂದು ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ (Next CJI Of India) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಮಾತ್ರ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ನಿರ್ವಹಿಸಲಿದ್ದಾರೆ. ನವೆಂಬರ್ 8 ರಂದು ಅಧಿಕಾರದಿಂದ ನಿರ್ಗಮಿಸಲಿರುವ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು 65 ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಕೇಂದ್ರದ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ನಿರಾಸೆ!

ಕೇಂದ್ರ ಸರಕಾರವು 2022 ರಲ್ಲಿ 8 ನೇ ವೇತನ ಆಯೋಗದ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದೆ. 2022 ರಲ್ಲಿ 8 ನೇ ವೇತನ ಆಯೋಗದ ಸಮಿತಿಗೆ ಯಾವುದೇ ಮಹತ್ವವಿಲ್ಲ ಅಂತೆಯೇ ಶಿಫಾರಸ್ಸುಗಳನ್ನು 2026 ರಿಂದ ಮಾತ್ರವೇ ಜಾರಿಗೊಳಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿಮೂಲಗಳು ಮಾಹಿತಿ ನೀಡಿವೆ. ಶಿಫಾರಸ್ಸುಗಳನ್ನು ಬಿಡುಗಡೆ ಮಾಡುವುದಕ್ಕೆ ಮುನ್ನವೇ ಪಾವತಿ ಪ್ಯಾನಲ್‌ಗಳನ್ನು 2 ವರ್ಷಗಳವರೆಗೆ ಹೊಂದಿಸಲಾಗಿದ್ದು 2022 ರಲ್ಲಿ ಈ ಕುರಿತು ಪ್ರಶ್ನಿಸುವುದು ಸಕಾಲವಲ್ಲ, ಅದೇ ರೀತಿ ಸರಕಾರವು 8 ನೇ ವೇತನ ಸಮಿತಿಯನ್ನು ಯೋಗ್ಯ ಸಮಯದಲ್ಲಿ ನಿರ್ಧರಿಸುತ್ತದೆ ಎಂಬುದಾಗಿ ಮೂಲಗಳು ಮಾಹಿತಿಯನ್ನೊದಗಿಸಿವೆ.

ಇದನ್ನೂ ಓದಿ: ಕೇಂದ್ರದಿಂದ ಮಹತ್ವದ ನಿರ್ಧಾರ, ಸರ್ಕಾರಿ ನೌಕರರಿಗೆ ಭಾರೀ ನಿರಾಸೆ!

ಕರ್ನಾಟಕದಲ್ಲಿ ಸಿಎಂ ಬದಲು ಚರ್ಚೆ!

ಕರ್ನಾಟಕದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಬಳಿಕ ಮತ್ತೊಬ್ಬ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರಾ? ಹೀಗೊಂದು ಅನುಮಾನ ಮೂಡೋಕೆ ಕಾರಣವಾಗಿರೋದು ಕಾಂಗ್ರೆಸ್​​ನ  ಟ್ವೀಟ್. ಕಾಂಗ್ರೆಸ್​​ ಮಾಡಿದ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್‌ ಪೇಜ್‌ನಲ್ಲಿ ಮಾಡಿರುವ ಆ ಒಂದು ಟ್ವೀಟ್ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ. ಒಂದು ಟ್ವೀಟ್​ನ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರಾದಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಾತ್ರವಲ್ಲ ಇದು ಕಾಂಗ್ರೆಸ್​- ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಬಿಜೆಪಿ ಹೈಕಮಾಂಡ್​ಗೆ ಬೊಂಬೆ ಇದ್ದ ಹಾಗೇ ಅಂತಾ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಆನ್​ಲೈನ್ ಗೇಮ್​​ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿ, ಸ್ನೇಹಿತರಿಂದಲೇ ಕಿಡ್ನ್ಯಾಪ್!

ಆನ್​ಲೈನ್ ಗೇಮ್​​ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿಯ ಕಿಡ್ನ್ಯಾಪ್! 

ಹಣಕ್ಕಾಗಿ ಜನ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣವೇ ಸಾಕ್ಷಿ. ಒಂದು ಕೋಟಿ ಹಣಕ್ಕಾಗಿ ವಿದ್ಯಾರ್ಥಿಯೋರ್ವನನ್ನು  ಗೆಳೆಯನೇ ಅಪಹರಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆನ್​ಲೈನ್ ಗೇಮ್​​ನಲ್ಲಿ  ವಿದ್ಯಾರ್ಥಿಯೋರ್ವ 11 ಕೋಟಿ ಹಣ ಗೆದ್ದಿದ್ದ. ಇದು ಸ್ನೇಹಿತರ ಕಣ್ಣು ಕುಕ್ಕುವಂತೆ ಮಾಡಿತ್ತು. ಅದಕ್ಕಾಗಿ ಏಳು ಮಂದಿ ಸೇರಿ ವಿದ್ಯಾರ್ಥಿಯನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಹೆತ್ತವರಿಗೆ ಕರೆಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಸದ್ಯ ವಿದ್ಯಾರ್ಥಿಯ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದ್ದು ಮಗ ಹೆತ್ತವರ ಮಡಿಲು ಸೇರಿದ್ದಾನೆ.
Published by:Thara Kemmara
First published: