• Home
 • »
 • News
 • »
 • state
 • »
 • Evening News: ದೇವೇಗೌಡರ ಬೆಳ್ಳಿ ಹಬ್ಬದ ಸಂಭ್ರಮದಿಂದ ರಶ್ಮಿಕಾಗೆ ಮುಡಿಗೇರಿದ ಮತ್ತೊಂದು ಗರಿಮೆವರೆಗೆ ಓದಲೇಬೇಕಾದ ಇಂದಿನ ಸುದ್ದಿಗಳಿವು

Evening News: ದೇವೇಗೌಡರ ಬೆಳ್ಳಿ ಹಬ್ಬದ ಸಂಭ್ರಮದಿಂದ ರಶ್ಮಿಕಾಗೆ ಮುಡಿಗೇರಿದ ಮತ್ತೊಂದು ಗರಿಮೆವರೆಗೆ ಓದಲೇಬೇಕಾದ ಇಂದಿನ ಸುದ್ದಿಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಬೆಳ್ಳಿ ಹಬ್ಬದ ಸಂಭ್ರದಲ್ಲಿ ದೇವೇಗೌಡರು
  ಜೆಡಿಎಸ್​ ವರಿಷ್ಠ ದೇವೇಗೌಡರು ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಏರಿ ಇಂದು 25 ವರ್ಷವಾಗಿದೆ. 1996ರಲ್ಲಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ದೆಹಲಿ ರಾಜಕಾರಣದ ಬಗ್ಗೆ ಕಿಂಚಿತ್ತೂ ಅನುಭವವಿಲ್ಲದ ದೇವೇಗೌಡರು ಈ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು ಆಕಸ್ಮಿಕವೂ ಹೌದು, ಅಚ್ಚರಿಯೂ ಹೌದು. ತೃತೀಯ ರಂಗದ ನಾಯಕರು ಸೇರಿ ದೇವೇಗೌಡರನ್ನು ಭಾರತದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಕೇಂದ್ರದಲ್ಲಿ 11 ತಿಂಗಳ ಕಾಲ ತೃತೀಯ ರಂಗದ ಸರ್ಕಾರವನ್ನು ದೇವೇಗೌಡರು ಮುನ್ನಡೆಸಿ ಎರಡೂವರೆ ದಶಕಗಳೇ ಕಳೆದುಹೋಗಿವೆ


  ಲಾಕ್​ಡೌನ್​ ವಿಸ್ತರಣೆ ಬಗ್ಗೆ ಇನ್ನೂ ಇದೆ ಗೊಂದಲ
  ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದ ಕರ್ನಾಟಕದಲ್ಲಿ ನಿನ್ನೆ 16,604 ಪ್ರಕರಣಗಳು ಕಂಡುಬಂದಿದ್ದು ತುಸು ಆಶಾವಾದ ಮೂಡಿದೆ. ಈ ನಡುವೆ ಸಾವಿನ ಸಂಖ್ಯೆ ಕಡಿಮೆ ಆಗಿಲ್ಲ. ನಿನ್ನೆ ಒಂದೇ ದಿನ ಬರೋಬ್ಬರಿ 411 ಜನ ಕೊರೋನಾಗೆ ಬಲಿ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಇನ್ನೂ ಶೇಕಡಾ 13.57ರಷ್ಟಿದೆ. ಆದರೂ ಕರ್ನಾಟಕ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ.


  ದೆಹಲಿಯಲ್ಲಿ ವಿಜಯೇಂದ್ರ
  ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕೂಗು ಇನ್ನೂ ಕಡಿಮೆಯಾಗಿಲ್ಲ. ಸಿಎಂ ಯಡಿಯೂರಪ್ಪನವರನ್ನು ಕೆಳಗಿಳಿಸಿ ಬೇರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಬಿಜೆಪಿಯ ಕೆಲವು ಶಾಸಕರು ಸಹಿಯನ್ನು ಕೂಡ ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೂ ಪ್ರಯಾಣ ಬೆಳೆಸಿದ್ದ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದ ತಂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಾಸ್ ಬಂದಿತ್ತು. ಇದೀಗ ತಮ್ಮ ವಿರೋಧ ಬಣಕ್ಕೆ ಬಿಸಿ ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ದಿಢೀರನೆ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕಳುಹಿಸಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಮಾತನಾಡಲು ಮಗ ವಿಜಯೇಂದ್ರರನ್ನು ಕಳುಹಿಸಿರುವ ಸಿಎಂ ಯಡಿಯೂರಪ್ಪ ತಮ್ಮ ವಿರೋಧಿ ಪಾಳಯಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.


  ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು
  ಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್​ ಪರೀಕ್ಷೆ ನಡೆಸಲಾಯಿತು. ಕೋವಿಡ್​ ರಿಪೋರ್ಟ್​ ನೆಗೆಟಿವ್​ ಬಂದಿದ್ದು ಸೋಂಕಿನಿಂದ ಜ್ವರ ಬಂದಿಲ್ಲ ಎಂಬುದು ದೃಢಪಟ್ಟಿದೆ. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಇಂದು ಮಣಿಪಾಲ್​​ ಆಸ್ಪತ್ರೆಗೆ ಸಿದ್ದರಾಮಯ್ಯರನ್ನು ಕರೆ ತರಲಾಗಿದೆ. ಫ್ಯಾಮಿಲಿ‌ ಡಾಕ್ಟರ್ ಸಲಹೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ತೆರಳಿರುವ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ.


  ಜಾರ್ಖಂಡ್​ನಲ್ಲಿ ಕಂಡವು ಏಲಿಯನ್​
  ಜಾರ್ಖಂಡ್​ನ ಹಜಾರಿಬಾಘ್​ನಲ್ಲಿ ಶನಿವಾರ ಸೆರೆ ಹಿಡಿಯಲಾದ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ವಿಡಿಯೋ ನೋಡಿದವರಲ್ಲಿ ಕುತೂಹಲ, ಭಯ, ಆಶ್ಚರ್ಯದ ಜೊತೆಗೆ ಹಲವು ಪ್ರಶ್ನೆಗಳು ಎದ್ದಿವೆ. ಜಗತ್ತಿನಾದ್ಯಂತ ಈವರೆಗೂ ಕೇಳಿಬಂದಿರುವ ಆದರೆ, ಯಾರೂ ಇದುವರೆಗೂ ನೋಡದ ಅನ್ಯಗ್ರಹ ಜೀವಿ ಏಲಿಯನ್ ಜಾರ್ಖಂಡ್​ನ ಹಜಾರಿಬಾಘ್​ನ ಚದ್ವಾ ಡ್ಯಾಂ ಬ್ರಿಡ್ಜ್​ ಬಳಿ ರಾತ್ರಿ ವೇಳೆ ಪತ್ತೆಯಾಗಿದೆ.


  2-ಡಿಜಿ ಔಷಧಿ ಬಳಕೆಗಎ ಡಿಆರ್​ಡಿಒ ನಿರ್ದೇಶನ
  ಕೊರೋನಾ ವೈರಸ್ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಆರ್​ಡಿಒ ತನ್ನ 2-ಡಿಜಿ (2-ಡಿಯೋಕ್ಸಿ-ಡಿ-ಗ್ಲೂಕೋಸ್) ಔಷಧಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದೀಗ ಅದನ್ನು ಬಳಸುವ ನಿರ್ದೇಶನಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಂಗಳವಾರ ಹಂಚಿಕೊಂಡಿದ್ದು, ವೈದ್ಯರ ಆರೈಕೆ ಮತ್ತು ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ಔಷಧಿಯನ್ನು ನೀಡಬಹುದು ಎಂದು ಹೇಳಿದೆ. ಡಿಆರ್‌ಡಿಒದ ಪ್ರಯೋಗಾಲಯವಾದ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ಅಭಿವೃದ್ಧಿಪಡಿಸಿದ 2-ಡಿಜಿ ಔಷಧದ ಅನುಮೋದನೆ ಸಿಕ್ಕಿದೆ. ದೇಶದಲ್ಲಿ ಕೊರೋನಾ ವೈರಸ್​ ದಾಖಲೆಯ ಮಟ್ಟದಲ್ಲಿ ಏರಿಕೆಯಾಗುತ್ತಿರುವ ದಿನಗಳಲ್ಲಿ ಇದು ಸಾಕಷ್ಟು ಅನುಕೂಲವಾಗಲಿದೆ ಎನ್ನಲಾಗುತ್ತಿದೆ.


  ಎರಡು ಲಸಿಕೆಗಳ ಬೆರಕೆ ಇಲ್ಲ
  ದೇಶದ ನಿವಾಸಿಗಳಿಗೆ ಮೊದಲ ಡೋಸ್​ಗೆ ಒಂದು ಎರಡನೇ ಡೋಸ್​ಗೆ ಮತ್ತೊಂದು ಲಸಿಕೆ ಬೆರಸಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮೊದಲ ಡೋಸ್​ನಲ್ಲಿ ಒಂದು ವೇಳೆ ಕೋವಿಶೀಲ್ಡ್​ ಪಡೆದರೆ, ಎರಡನೇ ಡೋಸ್​ನಲ್ಲಿಯೂ ಕೋವಿಶೀಲ್ಡ್​ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ. ಎರಡು ಲಸಿಕೆಗಳನ್ನು ಬಳಕೆ ಮಾಡುವುದರ ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕ ಪುರಾವೆಗಳು ಸಿಗುವವರೆಗೂ ಭಾರತದಲ್ಲಿ ಯಾವುದೇ ಕಾರಣಕ್ಕೂ ಲಸಿಕೆಯನ್ನು ಬೆರಸಿ ನೀಡುವುದಿಲ್ಲ ಎಂದು ನೀತಿ ಆಯೋಗ ಸದಸ್ಯ ವಿಕೆ ಪಾಲ್​ ತಿಳಿಸಿದ್ದಾರೆ.


  ಮಕ್ಕಳ ಲಸಿಕೆಗೆ ಮಾರ್ಗಸೂಚಿ
  ಕೊರೋನಾ ವೈರಸ್ SARS-CoV-2 ವೈರಸ್ ಅದರ ಸ್ವರೂಪವನ್ನು ಬದಲಾಯಿಸಿದರೆ, ಮಕ್ಕಳ ಮೇಲೆ ಕೋವಿಡ್ -19 ಸೋಂಕಿನ ಪ್ರಭಾವ ಹೆಚ್ಚಾಗಬಹುದು ಎಂದು ಎನ್ಐಟಿಐ ಆಯೋಗದ ಸದಸ್ಯ ವಿ.ಕೆ. ಪೌಲ್ ಮಂಗಳವಾರ ಹೇಳಿದ್ದಾರೆ. ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡರೆ ಶೇ. 2 ರಿಂದ 3 ರಷ್ಟು ಮಕ್ಕಳಿಗೆ ಆಸ್ಪತ್ರೆಯ ಅಗತ್ಯವಿರಬಹುದು ಎಂದು ಭಾರತದ ಕೋವಿಡ್ -19 ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ವಿ.ಕೆ. ಪೌಲ್ ಅಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಕೋವಿಡ್ ವೈರಸ್​ನ ಮೂರನೇ ಅಲೆಗಿಂತ ಮುಂಚೆಯೇ ಮಕ್ಕಳಲ್ಲಿ ಸೋಂಕುಗಳ ಬಗ್ಗೆ ಕೇಂದ್ರವು ಗಮನ ಹರಿಸುತ್ತಿದೆ ಎಂದು ತಿಳಿದುಬಂದಿದೆ.


  ಯಶ್​- ರಶ್ಮಿಕಾ ಮೂಡಿಗೆ ಹೊಸ ಗರಿಮೆ
  ತಮ್ಮ ಅಭಿನಯ ಹಾಗೂ ಪರಿಶ್ರಮದಿಂದ ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಿರುವ ನಟಿ ರಶ್ಮಿಕಾ. ನ್ಯಾಷನ್ ಕ್ರಶ್​ ಆಗಿರುವ ರಶ್ಮಿಕಾ ಈಗ ಮೋಸ್ಟ್​ ಡಿಸೈರಬಲ್​ ಮಹಿಳೆಯಾಗಿದ್ದಾರೆ. ಬೆಂಗಳೂರು ಟೈಮ್ಸ್​ ಪತ್ರಿಕೆ ಪ್ರತಿ ವರ್ಷದಂತೆ ಈ ಸಲವೂ ಮೋಸ್ಟ್​ ಡಿಸೈರಬಲ್​ ಮಹಿಳೆಯರ ಪಟ್ಟಿ ಪ್ರಕಟಿಸಿದೆ ಇದರಲ್ಲಿ ರಶ್ಮಿಕಾ ಸ್ಥಾನ ಪಡೆದಿದ್ದಾರೆ. ಇನ್ನು ಮೋಸ್ಟ್​ ಡಿಸೈರಬಲ್​ ಮ್ಯಾನ್​ ಆಗಿ ರಾಕಿಂಗ್​ ಸ್ಟಾರ್​ ಯಶ್​ ಸ್ಥಾನ ಪಡೆದಿದ್ದಾರೆ. ಈ ಬಾರಿ ಎರಡು ಸ್ಥಾನಗಳು ಕನ್ನಡದ ನಟ-ನಟಿಯರ ಪಾಲಾಗಿದೆ.

  Published by:Seema R
  First published: