Evening Digest: ದೇಶದಲ್ಲಿ ಗಣರಾಜ್ಯೋತ್ಸವ ಸಂಭ್ರಮ; ಪದ್ಮ ಪ್ರಶಸ್ತಿ ನಿರಾಕರಿಸಿದ ಗಾಯಕಿ; ಈ ದಿನದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ರಾಜ್ಯದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ದಿನ
  ರಾಜ್ಯದಲ್ಲಿ 73ನೇ ಗಣರಾಜ್ಯೋತ್ಸವ ದಿನವನ್ನು ಎಲ್ಲಡೆ ಸರಳವಾಗಿ ಆಚರಿಸಲಾಗಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ನಲ್ಲಿಯೂ ಕೋವಿಡ್ ಮುನ್ನೆಚ್ಚರಿಕೆ ತೆಗೆದುಕೊಂಡು ಗಣರಾಜ್ಯೋತ್ಸವ ಆಚರಣೆ ಮಾಡಲಾಯ್ತು. ಮಾಣಿಕ್ ಷಾ ಪರೇಡ್ ಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಸಿಎಂ ಬಸವರಾಜ್ ಬೊಮ್ಮಾಯಿ ಸ್ವಾಗತಿಸಿದರು. ನಂತರ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು ರಾಜ್ಯದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ನಂತರ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು

  ಧ್ವಜಾರೋಹಣ ಮಾಡಿದ ರಾಷ್ಟ್ರಪತಿಗಳು
  ಇಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವದ ಸಂಭ್ರಮ. ಈ ವರ್ಷ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ ಗಣರಾಜ್ಯೋತ್ಸವ. ಈ ಬಾರಿ ಭಾರತ 75ನೇ ಸ್ವಾತಂತ್ರ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವ ಹಿನ್ನೆಲೆ, ‘ಆಜಾದಿ ಕಾ ಅಮೃತ ಮಹೋತ್ಸವ) ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಅಲ್ಲದೆ ಹತ್ತು ಹಲವಾರು ಹೊಸತನಗಳನ್ನು ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಸೇರಿಸಿದೆ. ಮಂಜು ಕವಿದ ವಾತಾವರಣದ ನಡುವೆ ಇಂದು ಬೆಳಗ್ಗೆ 10:30ಕ್ಕೆ ದೆಹಲಿ ರಾಜಪಥದಲ್ಲಿ ಭವ್ಯವಾದ ಗಣರಾಜ್ಯೋತ್ಸವ ಪರೇಡ್ ಆರಂಭವಾಯಿತು. ಸಂಪ್ರದಾಯದಂತೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ಮಾಡಿದರು. 871 ಫೀಲ್ಡ್ ರೆಜಿಮೆಂಟ್‌ನ ಸೆರಿಮೋನಿಯಲ್ 21-ಗನ್ ಸೆಲ್ಯೂಟ್‌ನೊಂದಿಗೆ ರಾಷ್ಟ್ರಗೀತೆಯನ್ನು ಹಾಡಲಾಯಿತು

  ಸಿಎಂ ಯೋಗಿಗೆ ಹತ್ಯೆ ಬೆದರಿಕೆ
  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಗ್ರರ ಹಿಟ್ ಲಿಸ್ಟ್‌ನಲ್ಲಿ ಇರೋದು ಗೊತ್ತಿರೋ ವಿಚಾರ. ಉಗ್ರರ ವಿರುದ್ಧದ ಹಲವು ಕಾರ್ಯಾಚರಣೆ, ಹಲವು ನಗರಗಳಿಗೆ ಇಟ್ಟಿದ್ದ ಮೊಘಲ್ ಹೆಸರುಗಳ ಬದಲಾವಣೆ ಸೇರಿದಂತೆ ತಮ್ಮ ಹಲವು ಯೋಜನೆಗಳಿಂದ ಯೋಗಿ ಈಗಾಗಲೇ ಉಗ್ರರ ಟಾರ್ಗೆಟ್ ಆಗಿದ್ದಾರೆ. ಪಾಕಿಸ್ತಾನ (Pakistan) ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಅನೇಕ ಉಗ್ರರು ಯೋಗಿ ಆದಿತ್ಯನಾಥ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಇದೀಗ ಇದೇ ವಿಚಾರದ ಕುರಿತಂತೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಹೌದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆಗೈಯಲು ಉಗ್ರರು ಇದೀಗ ಮತ್ತೊಮ್ಮೆ ವಿಫಲ ಯತ್ನ ನಡೆಸಿದ್ದಾರೆ. ಗಣರಾಜ್ಯೋತ್ಸವದ ದಿನವೇ ಸ್ಕೆಚ್ ಹಾಕಿದ್ದು, ಪೊಲೀಸರ ಮುಂಜಾಗೃತೆಯಿಂದ ಉಗ್ರರ ಯತ್ನ ವಿಫಲವಾಗಿದೆ.

  ನಿವೃತ್ತಿಯಾದ ವಿರಾಟ್​
  ದೇಶದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗಿದೆ ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ, ರಾಜಪಥ್‌ನಲ್ಲಿ ಬೆಳಿಗ್ಗೆ ಮೆರವಣಿಗೆಯನ್ನು ಆಯೋಜಿಸಲಾಗಿತು. ಈ ಸಮಯದಲ್ಲಿ, ಭಾರತದ ಮಿಲಿಟರಿ ಶಕ್ತಿಯಿಂದ ಸಾಂಸ್ಕೃತಿಕ, ಸಾಂಪ್ರದಾಯಿಕ ಪರಂಪರೆ ಅನಾವರಣಗೊಂಡಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೇನೆ ಮತ್ತು ಸಶಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸಿದರು. ಇನ್ನು ಇದೇ ದಿನ ರಾಷ್ಟ್ರಪತಿಗಳ ಅಂಗರಕ್ಷಕರ ಭಾಗವಾಗಿದ್ದ ವಿರಾಟ್ ಎಂಬ ಕುದುರೆ ಕೂಡ ನಿವೃತ್ತಿಯಾಗಿದೆ

  ಪದ್ಮ ಪ್ರಶಸ್ತಿ ನಿರಾಕರಿಸಿದ ಗಾಯಕಿ
  ಕೇಂದ್ರ ಸರ್ಕಾರ 128 ಮಂದಿಗೆ 2022ನೇ ಪದ್ಮ ಪ್ರಶಸ್ತಿ ನೀಡಿ ಘೋಷಣೆ ಮಾಡಿದೆ. ಈ ಘೋಷಣೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಇಬ್ಬರು ಪುರಸ್ಕೃತರು ಪ್ರಶಸ್ತಿಯನ್ನು ನಿರಾಕರಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್​ ಭಟ್ಟಚಾರ್ಯ ಬೆನ್ನಲ್ಲೇ ಇದೀಗ ಹಿರಿಯ ಗಾಯಕಿ ಸಂಧ್ಯಾ ಮುಖ್ಯೋಪಾದ್ಯಾಯ ಎಂದೇ ಖ್ಯಾತಿಗೊಂಡಿರುವ ಸಂಧ್ಯಾ ಮುಖರ್ಜಿ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ

  ನಾವು ಕುಡಿದು ಬಿಟ್ಟ ನೀರು ಅವರಿಗೆ
  ನಾವು ಕುಡಿದ ಮೇಲೆ ತಮಿಳುನಾಡಿನವರು ನೀರು  ಕುಡಿಯುತ್ತಾರೆ ವಿನಃ ಅವರು ಕುಡಿದ ನೀರನ್ನು ನಾವು ಕುಡಿಯೋದಿಲ್ಲ, ಅವರ ಹಕ್ಕನ್ನು ಕಾಯ್ದುಕೊಳ್ಳೋದು ಅವರ ಕರ್ತವ್ಯ. ನಮ್ಮ ಹಕ್ಕನ್ನು ಕಾಯ್ದುಕೊಳ್ಳೋದು ನಮ್ಮ ಕರ್ತವ್ಯ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಹೊಗೆನಕಲ್ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡಿರುವ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಾವು ಕುಡಿದು ಬಿಟ್ಟ ನೀರನ್ನು ಅವರು ಕುಡಿಯುತ್ತಾರೆ, ನಾವು ಮೇಲ್ಪಂಕ್ತಿಯಲ್ಲಿದ್ದೇವೆ, ಹಾಗೆಯೇ ಇರೋಣ. ಆದರೆ ನಮ್ಮ ಜನರಿಗೆ ಅನ್ಯಾಯ ಮಾಡಿಕೊಂಡು ಅವರಿಗೆ ನೀರು ಕೊಡಲು ಸಾಧ್ಯವಿಲ್ಲ

  ಆರ್ಥಿಕ ಸುಳಿಯಲ್ಲಿ ಸಾರಿಗೆ ನಿಗಮ
  ಕೊರೊನಾ ದೇಶದ ಜನರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಹ ಜರ್ಜರಿತಗೊಳಿಸಿದೆ. ಮೊದಲನೇ ಅಲೆಯಿಂದ ಹಿಡಿದು ಈಗ ಮೂರನೇ ಅಲೆಯೂ ಒಂದೆಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಹಾಗೆಯೇ ಇದು ಸರ್ಕಾರಿ ಸಂಸ್ಥೆಗಳಿಗೂ ಹೊಡೆತ ನೀಡಿದ್ದು, ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೆಎಸ್ಆರ್​ಟಿಸಿ, ಬಿಎಂಟಿಸಿ , ಕಲ್ಯಾಣ ಕರ್ನಾಟಕ ಸಾರಿಗೆ, ವಾಯುವ್ಯ ಸಾರಿಗೆ ಸಂಕಷ್ಟದಲ್ಲಿ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ ಈ ಹಿನ್ನೆಲೆಯಲ್ಲಿ ಈ ಎಲ್ಲಾ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಮಾಡುವಂತೆ ಟ್ರಾನ್ಪೋರ್ಟ್ ಫೆಡರೇಶನ್ ಗಳ ಸಲಹೆ ನೀಡಿದೆ.

  ಕಾಂಗ್ರೆಸ್​ ಸೇರುವವರು ಯಾರಿಲ್ಲ
  ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗೆಗಳು ಸಂಭವಿಸುತ್ತಿದೆ. ಒಂದೆಡೆ ಜಿಲ್ಲಾ ಉಸ್ತುವಾರಿ ನೇಮಕ ವಿಚಾರವಾಗಿ ಪಕ್ಷದ ಸಚಿವರು ಕೋಪಗೊಂಡಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿ ಶಾಸಕರು ಕಾಂಗ್ರೆಸ್​ ಸಂಪರ್ಕದಲ್ಲಿದ್ದರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಮಾತಾಡಿರೋದು ದೊಡ್ಡ ಸುಳ್ಳು, ಯಾರು ಬರ್ತಾರೆ ಅನ್ನೋ ನಿಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ.
  Published by:Seema R
  First published: