Evening Digest: 22ರ ಯುವತಿಯ ಜೊತೆ 15ರ ಬಾಲಕನ ಲವ್; ₹500 ಕೋಟಿಯ ಶಿವಲಿಂಗ ಪತ್ತೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
₹500 ಕೋಟಿಯ ಶಿವಲಿಂಗ ಪತ್ತೆ: ತಂಜಾವೂರಿನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್‌ನಿಂದ 500 ಕೋಟಿ ರೂಪಾಯಿ ಮೌಲ್ಯದ ಪಚ್ಚೆ ಲಿಂಗವನ್ನು ವಿಗ್ರಹ ವಿಭಾಗದ ಸಿಐಡಿ ಪೊಲೀಸರು ಗುವಶಪಡಿಸಿಕೊಂಡಿದ್ದಾರೆ. ತಂಜಾವೂರಿನ ಮನೆಯೊಂದರಲ್ಲಿ ಪುರಾತನ ವಿಗ್ರಹಗಳನ್ನು ಇರಿಸಲಾಗಿದೆ ಎಂಬ ಸುಳಿವು ಮೇರೆಗೆ ಕಾರ್ಯಾಚರಣೆ ನಡೆದಿದೆ. ಸುಮಾರು 80 ವರ್ಷ ವಯಸ್ಸಿನ ಸಮಿಯಪ್ಪನ್ ಎಂಬುವರ ಪುತ್ರ ಎನ್.ಎಸ್.ಅರುಣ್ ಅವರನ್ನು ಲಿಂಗದ ಬಗ್ಗೆ ಪ್ರಶ್ನಿಸಿದರು. ತನ್ನ ತಂದೆ ಪುರಾತನವಾದ ಪಚ್ಚೆ ಲಿಂಗವನ್ನು ತಂಜಾವೂರಿನ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದರು ಎಂದು ಅರುಣ್​ ತಿಳಿಸಿದ್ದಾರೆ. ನಂತರ ಅದನ್ನು ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 530 ಗ್ರಾಂ ತೂಕದ ಲಿಂಗ 8 ಸೆಂ.ಮೀ. ಎತ್ತರ ಇದೆ. ಈ ಪುರಾತನ ಲಿಂಗವನ್ನು ಸಮಿಯಪ್ಪನ್ ಹೇಗೆ ಮತ್ತು ಎಲ್ಲಿಂದ ಪಡೆದರು ಎಂದು ಅರುಣ್ ಹೇಳಿಕೊಂಡಿದ್ದಾರೆ. ಈ ವಿಗ್ರಹದ ಬೆಲೆ 500 ಕೋಟಿ ರೂಪಾಯಿ ಎಂದು ರತ್ನಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಪಾದಯಾತ್ರೆಗಾಗಿ ಜಾಗಿಂಗ್​ ಮಾಡಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ನೇತೃತ್ವದಲ್ಲಿ ಕಾಂಗ್ರೆಸ್​ (Congress) ಕೈಗೊಳ್ಳಲಿರುವ ಮೇಕೆದಾಟು ಪಾದಯಾತ್ರೆ (Mekedatu Padayatra) ರಾಜ್ಯ ರಾಜಕಾರಣದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಡಿಕೆಶಿ ಪಾದಯಾತ್ರೆಗೆ ದೈಹಿಕವಾಗಿಯೂ ರೆಡಿಯಾಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ನಮ್ಮ ಪಾದಯಾತ್ರೆಗೆ ಎಲ್ಲರೂ ಭಾಗವಹಿಸಬಹುದು. ಇಂತವರೇ ಬರಬೇಕೆಂದು ನಿಯಮವಿಲ್ಲ. ನೆಲ-ಜಲದ ವಿಷಯದಲ್ಲಿ ರಾಜಕೀಯ ಮಾಡಲ್ಲ. ಪಾದಯಾತ್ರೆಗೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ನಾಲ್ಕೈದು ಅಂಬ್ಯುಲೆನ್ಸ್ ಜೊತೆಯಲ್ಲಿರಲಿವೆ, ಬಂದವರಿಗೆ ಎಳನೀರು ಕೊಡಲು ಸ್ಥಳೀಯರಿದ್ದಾರೆ. ನೂರು ಜನ ಬರ್ತಾರೋ, 5 ಸಾವಿರವೋ ಬರಲಿ. ಎಲ್ಲರಿಗೂ ಕೂಡ ನಾವು ಆಹ್ವಾನ ಕೊಡ್ತಿದ್ದೇವೆ. ಬರಬೇಕೆಂದು ಯಾರಿಗೂ ನಾವು ಬಲವಂತ ಮಾಡಲ್ಲ ಎಂದು ಸ್ಪಷ್ಟನೆ ನೀಡಿದರು.

ಅಮ್ಮನೇ ನನ್ನ ಬಾಯ್​​ಫ್ರೆಂಡ್​​ನ ಮೋಹಿಸಿದ್ದಳು

ಹೊಸೂರು ಮುಖ್ಯ ರಸ್ತೆ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ  ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ (Archana Reddy Murder case) ಸ್ಪೋಟಕ ಟ್ವಿಸ್ಟ್ (Twist) ದೊರೆತಿದೆ. ಈಗಾಗಲೇ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಅರ್ಚನಾರೆಡ್ಡಿ ಪುತ್ರಿ ಯುವಿಕಾ ರೆಡ್ಡಿ (Daughter Yuvika Reddy) ಸ್ಪೋಟಕ ಟ್ವಿಸ್ಟ್ ನೀಡಿದ್ದಾಳೆ. ಈಗಾಗಲೇ ಅರ್ಚನಾರೆಡ್ಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅರ್ಚನಾರೆಡ್ಡಿ ಎರಡನೇ ಗಂಡ ನವೀನ, ಮಗಳು ಯುವಿಕಾ ರೆಡ್ಡಿ ಸೇರಿದಂತೆ ಏಳು ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇನ್ನೂ ಪ್ರಕರಣದ ಪ್ರಮುಖ ಆರೋಪಿ ಯುವಿಕಾ ರೆಡ್ಡಿ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ. ನನ್ನ ತಾಯಿ ನನಗೆ ಮೋಸ ಮಾಡಿದ್ದಾಳೆ. ನನ್ನ ಪ್ರೀತಿಗೆ ಪದೇ ಪದೇ ಅಡ್ಡಿಪಡಿಸುತ್ತಿದ್ದಳು. ನಮ್ಮ ತಾಯಿಗೂ ಮೊದಲು ನವೀನ ನನಗೆ ಪರಿಚಯವಿದ್ದ. ಜಿಮ್ ನಲ್ಲಿ ನವೀನ ಟ್ರೈನರ್ ಆಗಿದ್ದು, ತುಂಬಾ ಚೆನ್ನಾಗಿ ಜಿಮ್ ಟ್ರೈನ್ ಮಾಡ್ತಿದ್ದ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

22ರ ಯುವತಿಯ ಜೊತೆ 15 ವರ್ಷದ ಬಾಲಕನಿಗೆ ಲವ್

22ರ ಯುವತಿಯ ಜೊತೆ 15 ವರ್ಷದ ಬಾಲಕನಿಗೆ ಲವ್ ಪಶ್ಚಿಮ ಬಂಗಾಳದ ಕೊತ್ವಾಲಿ ಯಲ್ಲಿ ಫೇಸ್ಬುಕ್ ಮೂಲಕ 15 ವರ್ಷದ ಬಾಲಕನಿಗೆ 22 ವರ್ಷದ ಯುವತಿ ಪರಿಚಯ ಆಗಿದ್ದಾಳೆ. ಪರಿಚಯ ಸ್ನೇಹಕ್ಕೆ ತಿರುಗಿ ಬಾಲಕ ಹಾಗೂ ಯುವತಿಗೆ ಪ್ರೇಮಾಂಕುರವಾಗಿದೆ. ಕೊನೆಗೆ ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15 ವರ್ಷದ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದು ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗುವ ಮೂಲಕ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಫೇಸ್ಬುಕ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕ ಹಾಗೂ ಬಾಲಕಿಯರ ಪ್ರೀತಿಯಲ್ಲಿ ಬಿದ್ದ ಬಳಿಕ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ.. ತಮ್ಮ ಪ್ರೀತಿಯ ವಿಷಯ ಮನೆಯವರಿಗೆ ತಿಳಿದರೆ ಎಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂದು ಉತ್ತರಪ್ರದೇಶಕ್ಕೆ ಹೋಗಿ ಮದುವೆಯಾಗಲು ಇವರಿಬ್ಬರು ಯೋಜನೆ ರೂಪಿಸಿದ್ದಾರೆ. ಅದರಂತೆ ಡಿಸೆಂಬರ್ 25ರಂದು ಮನೆಯಿಂದ ಓಡಿಹೋಗಿ ಈ ಜೋಡಿ ಮದುವೆ ಮಾಡಿಕೊಂಡಿದೆ.

ತಿಮ್ಮಪ್ಪನ ದರ್ಶನ ಪಡೆದ ನಟಿ ಕಂಗನಾ 

ನಟಿ ಕಂಗನಾ ರಣಾವತ್​ ಬಾಲಿವುಡ್​ನಲ್ಲಿ ಬೇಡಿಕೆ ಹೊಂದಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ ಅವರು. ಇಂದು (ಜನವರಿ 1) ಹೊಸ ವರ್ಷದ ಹಿನ್ನೆಲೆಯಲ್ಲಿ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಂಗನಾ ತಿರುಪತಿಯಲ್ಲಿರುವ ಫೋಟೋಗಳು ಸಖತ್​ ವೈರಲ್​ ಆಗುತ್ತಿವೆ. ಕಂಗನಾ ಅವರನ್ನು ಸೀರೆಯಲ್ಲಿ ಕಂಡ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ.
Published by:Kavya V
First published: