Evening Digest: ಸಿಲಿಂಡರ್ ದರ ಮತ್ತೆ 100 ರೂ. ಏರಿಕೆ; ಹಾಸನಕ್ಕಾಗಿ ಪ್ರಧಾನಿಯನ್ನೇ ಭೇಟಿ ಮಾಡಿದ್ರಾ ದೇವೇಗೌಡ್ರು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಸಿಲಿಂಡರ್​ ಬೆಲೆ ಮತ್ತೆ 100 ರೂ. ಏರಿಕೆ: ಎಲ್​ಪಿಜಿ ವಾಣಿಜ್ಯ ಸಿಲಿಂಡರ್ (LPG Commercial cylinder)​ ಬೆಲೆ ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತಷ್ಟು ಬಿಸಿ ಮುಟ್ಟಿದೆ. ಈಗಾಗಲೇ ನಿರಂತರ ಸಿಲಿಂಡರ್​ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈ ದರ ಏರಿಕೆ ಮತ್ತಷ್ಟು ಶಾಕ್​​ ನೀಡಿದೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವ ಸಿಲಿಂಡರ್​ ದರವನ್ನು ಡಿ. 1ರಿಂದ ಅಂದರೆ ಇಂದನಿಂದ 100.50 ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ 19-ಕೆಜಿ ವಾಣಿಜ್ಯ ಸಿಲಿಂಡರ್‌ಗಳು ದರ 2,101 ರೂ ಆಗಿದೆ. ಕಳೆದ ನವೆಂಬರ್ 1 ರಂದು ಕೊನೆಯ ಬಾರಿಗೆ 266.50ರಷ್ಟು ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಮುಂಬೈನಲ್ಲಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ 1,950 ರಿಂದ 2,051 ರೂ ಆಗಿದೆ. ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‌ಪಿಜಿ ದರ 2,177 ರೂ ಇದ್ದು ರಷ್ಟಿದ್ದರೆ, ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್  2,234.50 ಕ್ಕೆ ಲಭ್ಯವಿರುತ್ತದೆ. ಇನ್ನು ಗೃಹಬಳಕೆಯ LPG ಸಿಲಿಂಡರ್ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ದರ 899.50 ರೂ ಇದೆ.

ಹಾಸನಕ್ಕಾಗಿ ಪ್ರಧಾನಿಯನ್ನೇ ಭೇಟಿ ಮಾಡಿದ್ರಾ ದೇವೇಗೌಡ್ರು?

ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು (Former PM HD Devegowda) ಭೇಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸಿ ದೇವೇಗೌಡರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಈ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ (Social Media) ಮಿಂಚಿನಂತೆ ವೈರಲ್ (Viral) ಆಗಿದ್ದವು. ಭೇಟಿ ವೇಳೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಒಂದು ಬೇಡಿಕೆಯನ್ನು ಮೋದಿ ಅವರ ಮುಂದೆ ಇರಿಸಿದ್ದಾರೆ ಎಂದು ವರದಿಯಾಗಿದೆ. ತವರು ಜಿಲ್ಲೆ ಹಾಸನ(Hassan)ದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ IIT) ಸ್ಥಾಪಿಸುವ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಐಐಟಿ ಬೇಡಿಕೆ ಇರಿಸಿರುವ ಕೇಳಿ ಹಾಸನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

S.R.Vishwanath ಹತ್ಯೆಗೆ ಸ್ಕೆಚ್: ವಿಡಿಯೋ ಬಹಿರಂಗ ಬೆನ್ನಲ್ಲೇ ಠಾಣೆಗೆ ದೂರು

ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (Yelahanka MLA S.R.Vishwanath) ಕೊಲೆಗೆ (Murder) ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್​​ನ ಗೋಪಾಲಕೃಷ್ಣ (Congress leader Gopalkrishna) ಸಂಚು ರೂಪಿಸಿದ್ದ ವಿಡಿಯೋ ಬಹಿರಂಗವಾಗಿದ್ದು ಭಾರೀ ಸದ್ದು ಮಾಡುತ್ತಿದೆ. ಹತ್ಯೆಗೆ ಸಂಚು ಹಿನ್ನೆಲೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಇಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ (Rajanukunte Police Station) ಗೋಪಾಲಕೃಷ್ಣ ಹಾಗೂ ಇತರರ ವಿರುದ್ಧ ದೂರು ನೀಡಿದರು. ಕೊಲೆ‌ಸಂಚು, ಮಾನಹಾನಿ ಅಡಿಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಸಹ ಉಲ್ಲೇಖಿಸಲಾಗಿದೆ. ಜನಸೇವೆ ಮಾಡೋದು ಸಹಿಸಲಾಗದೆ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಶಾಸಕರು ಆರೋಪಿಸಿದ್ದಾರೆ. ಕಡಬಗೆರೆ ಸೀನ ಕೊಲೆ ಸಂಚು ಕೇಸ್ ನಲ್ಲಿಯೂ ನನ್ನನ್ನು ಸಿಲುಕಿಸೋ ಕೆಲಸ ಮಾಡಿದ್ರು. ಪ್ರತಿನಿತ್ಯ ತೋಟಕ್ಕೆ ಒಂಟಿಯಾಗಿ ವಾಕಿಂಗ್ ಹೋಗ್ತೀನಿ. ಈ ವೇಳೆ ನನ್ನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದಾರೆ ಅಂತ ದೂರಿನಲ್ಲಿ ಬರೆದಿದ್ದಾರೆ.

ಬಿಜೆಪಿ MLA & MLC ಮಧ್ಯೆ ಗಲಾಟೆ; ಮೂಕ ಪ್ರೇಕ್ಷಕರಾಗಿ ನಿಂತ ಶೆಟ್ಟರ್

ಬಿಜೆಪಿಯಲ್ಲಿ(BJP) ಎಲ್ಲವೂ  ಸರಿ ಇಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ವಿಧಾನ ಪರಿಷತ್ ಚುನಾವಣೆ  (MLC Election) ಹಿನ್ನೆಲೆಯಲ್ಲಿ ಗೆಲುವಿನ ರಣತಂತ್ರದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿಯೇ ಬಿಜೆಪಿ ಮುಖಂಡರು ಕೈ ಕೈ ಮಿಲಾಯಿಸಲು ಮುಂದಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಎಲ್ಲ ಮುಖಂಡರ ಜೊತೆ ಸಮಾಲೋಚನೆ ಮಾಡಿದ ಸಿಎಂ ಖಾಸಗಿ ಹೋಟೆಲ್ ನಿಂದ ತೆರಳುತ್ತಿದ್ದಂತೆಯೇ ನಾಯಕರ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಭೆಯಲ್ಲಿ ಟೇಬಲ್ ಗುದ್ದಿ ಮಾತನಾಡಿದ್ದ ನಾಯಕರು, ಹೊರಗೆ ಬಂದು ಕೈ ಕೈ ಮಿಲಾಯಿಸಿ ಪರಸ್ಪರ ಹಲ್ಲೆಗೆ ಮುಂದಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ?

ರಾಜ್ಯದಲ್ಲಿ (Karnataka) ಕೊರೊನಾ (Corona Virus) ತಗ್ಗಿದ ಪ್ರಮಾಣ ಎಲ್ಲ ಚಟುವಟಿಕೆಗಳು ಪ್ರಾರಂಭಗೊಂಡಿವೆ. 18 ವರ್ಷಕ್ಕೆ ಮೇಲ್ಪಟ್ಟವರು ಕೊರೊನಾ ಲಸಿಕೆ (Corona Vaccine) ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಓಮಿಕ್ರಾನ್ (Omicorn) ಆತಂಕ ಎದುರಾಗಿದೆ, ಮತ್ತೊಂದು ಕಡೆ ಮಕ್ಕಳು ಶಾಲೆಗೆ (School) ತೆರಳುತ್ತಿವೆ. ಹಾಗಾಗಿ ಮಕ್ಕಳಿಗೆ ಲಸಿಕೆ ಯಾವಾಗ ನೀಡಲಾಗುತ್ತೆ ಎಂಬುದರ ಬಗ್ಗೆ ಪೋಷಕರು (Parents) ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister K.Sudhakar), ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ಕೇಂದ್ರ ಸರ್ಕಾರ ನಿರ್ಧಾರ ಮಾಡಿ ಘೋಷಣೆ ಮಾಡಿದ್ರೆ ರಾಜ್ಯದಲ್ಲಿ ಲಸಿಕೆ (Vaccine) ‌ಕೊಡುತ್ತೇವೆ. ಈಗಾಗಲೇ ದೊಡ್ಡವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಿದೆ‌. ಚಿಕ್ಕ ಮಕ್ಕಳಿಗೂ ಕೂಡಾ ಕೇಂದ್ರ ಉಚಿತ ಲಸಿಕೆ ಕೊಡುವ ವಿಶ್ವಾಸ ನನಗೆ ಇದೆ‌ ಎಂದು ಹೇಳಿದರು.
Published by:Kavya V
First published: