Evening Digest: ಖ್ಯಾತ ನಟ ಎನ್​ಟಿಆರ್​ ಮಗಳು ಆತ್ಮಹತ್ಯೆ, ಅಪ್ಪು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಸೂಲಿಬೆಲೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಖ್ಯಾತ ನಟ ಎನ್​ಟಿಆರ್​ ಮಗಳು ಆತ್ಮಹತ್ಯೆ

ದಿವಂಗತ ಖ್ಯಾತ ನಟ ಎನ್‌ಟಿಆರ್‌ (Famous Actor NTR) ಅವರ ಕಿರಿಯ ಪುತ್ರಿ ಕಾಂತಮನೇನಿ ಉಮಾಮಹೇಶ್ವರಿ (Uma Maheswari)  ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೆಲ ಸಮಯದ ಹಿಂದೆ ಅವರು ಹಠಾತ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಆಕೆ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತೆ ಕಾಣುತ್ತಿದೆ. ಜುಬಿಲಿ ಹಿಲ್ಸ್‌ (Jubilee Hills) ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಆದರೆ ಇದನ್ನು ಕುಟುಂಬ ಸದಸ್ಯರು ಇನ್ನೂ ಖಚಿತಪಡಿಸಿಲ್ಲ. ಘಟನೆಗೆ ಯಾರೂ ಸ್ಪಂದಿಸಿಲ್ಲ. ಪೊಲೀಸರು  (Police) ಈಗಾಗಲೇ ಜುಬಿಲಿ ಹಿಲ್ಸ್‌ನಲ್ಲಿರುವ ಉಮಾಮಹೇಶ್ವರಿ ಮನೆಗೆ ತಲುಪಿದ್ದಾರೆ. ಸದಾ ಚಟುವಟಿಕೆಯಿಂದ ಇರುತ್ತಿದ್ದ ಉಮಾಮಹೇಶ್ವರಿ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ.

ಬಾರ್​, ಹೋಟೆಲ್​ಗಳಲ್ಲಿ ಸಿಗ್ತಿಲ್ಲ ಮದ್ಯ 

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ಕೊರತೆ (Liquor Shortage) ಉಂಟಾಗಿದೆ. ಹೊಸ ಅಬಕಾರಿ ನೀತಿ 20221-22 (New Excise Policy 20221-22) ಅನ್ನು ಹಿಂತೆಗೆದುಕೊಳ್ಳುವ ಅರವಿಂದ್ ಕೇಜ್ರಿವಾಲ್ ಸರ್ಕಾರದ (Arvind Kejriwal government) ನಿರ್ಧಾರದ ನಂತರ ಆಗಸ್ಟ್ 1 ರಿಂದ ಖಾಸಗಿ ವೈನ್ ಮತ್ತು ಬಿಯರ್ ಅಂಗಡಿಗಳು ಮದ್ಯದ ಕೊರತೆಯನ್ನು ಎದುರಿಸುತ್ತಿದೆ. ನಗರದಲ್ಲಿರುವ 468 ಖಾಸಗಿ ಮದ್ಯದಂಗಡಿಗಳು ಆಗಸ್ಟ್ 1 ರಿಂದ ಅವುಗಳ ಪರವಾನಗಿ ಮತ್ತು ಹೊಸ ಅಬಕಾರಿ ನೀತಿಯ ಅವಧಿಯು ಜುಲೈ 31 ರಂದು ಮುಕ್ತಾಯಗೊಳ್ಳುವುದರಿಂದ ಮುಚ್ಚಲಾಗಿದೆ. ಶನಿವಾರ ನಗರದಾದ್ಯಂತ ಖಾಸಗಿ ಮದ್ಯದಂಗಡಿಗಳು ತಮ್ಮ ಉಳಿದ ಸ್ಟಾಕ್ ಅನ್ನು ಮಾರಾಟ ಮಾಡಲು ಒಂದು ಪ್ಲಸ್ ಒನ್ ಉಚಿತ ಮತ್ತು ಒಂದು ಪ್ಲಸ್ ಎರಡು ಉಚಿತ ನಂತಹ ಭಾರೀ ರಿಯಾಯಿತಿಗಳನ್ನು ನೀಡಿ ಮದ್ಯವನ್ನು ಸಂಪೂರ್ಣವಾಗಿ ಸೇಲ್​ ಮಾಡಿವೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Liquor Shortage: ‘ಎಣ್ಣೆ’ ಖಾಲಿ; ಹೋಟೆಲ್, ಕ್ಲಬ್, ರೆಸ್ಟೋರೆಂಟ್​​ಗಳಲ್ಲಿ ಇಂದಿನಿಂದ ಸಿಗಲ್ಲ ಮದ್ಯ!

ಮಳೆಯ ಅಬ್ಬರಕ್ಕೆ ಕೇರಳ ತತ್ತರ, 4 ಮಂದಿ ಸಾವು

ದೇಶದ ಹಲವು ಜಿಲ್ಲೆಗಳಲ್ಲಿ ವರುಣ ಆರ್ಭಟ ಹೆಚ್ಚಾಗಿ. ಭಾರೀ ಮಳೆ (Heavy Rain)ಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಕರ್ನಾಟಕ (Karnataka)ದಲ್ಲೂ ಮಳೆ ಬರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದಲ್ಲೂ ಮಳೆ ಅವಾಂತರವನ್ನು ಸೃಷ್ಟಿಸುತ್ತಿದ್ದು, ನಿನ್ನ ಇಬ್ಬರು ಬಾಲಕರು ಸಾವನ್ನಪ್ಪಿದ್ದರು. ಮೂವರು ನಾಪತ್ತೆಯಾಗಿದ್ರು. ಇನ್ನು ಕೇರಳ (Kerala)ದ ಕೊಟ್ಟಾಯಂ, ಪತ್ತನಂತಿಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ನಾಲ್ವರು ಬಲಿ (4 Dead)ಯಾಗಿದ್ದಾರೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್  (Red alert) ಘೋಷಿಸಿದೆ.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಫ್ಯಾನ್ಸ್​ ಗರಂ

ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ವಿರುದ್ಧ ಅಪ್ಪು ಅಭಿಮಾನಿಗಳು (Appu Fans) ರೊಚ್ಚಿಗೆದಿದ್ದಾರೆ. ಯಾವುದೋ ಮತ್ತೊಂದು ವಿಚಾರಕ್ಕೆ ಟ್ವೀಟ್ (Tweet) ಮಾಡಿರುವ ಚಕ್ರವರ್ತಿ ಸೂಲಿಬೆಲೆ ಪುನೀತ್​ ರಾಜ್​ಕುಮಾರ್​ ಅವರ ಸಾವನ್ನು ಉದಾಹರಣೆಯಾಗಿ ನೀಡಿದ್ದು, ಅಪ್ಪು ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಅಭಿಮಾನಿಗಳು ಹರಿಹಾಯ್ದಿದ್ದಾರೆ. ಇನ್ನೂ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಂತೆ ಎಚ್ಚೆತ್ತ ಚಕ್ರವರ್ತಿ ಸೂಲಿಬೆಲೆ ಅಪ್ಪು ಅಭಿಮಾನಿಗಳಿಗೆ ಕ್ಷಮೆಯಾಚಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Puneeth Rajkumar: ಚಕ್ರವರ್ತಿ ಸೂಲಿಬೆಲೆ ವಿರುದ್ಧ ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್​! ಬೆಂಕಿ ಹೊತ್ತಿಸಿದೆ ಆ ಒಂದು ಟ್ವೀಟ್​

ಸಾವಿರ ಸಲ ಹೇಳ್ತೀನಿ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ

ಕೊಪ್ಪಳ (ಆ.1): ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಭೇಟಿ ನೀಡಿದ್ರು. ಇದೇ ವೇಳೆ ಮಾತಾಡಿದ ಅವರು, ಸಾವಿರ ಸಲ ಹೇಳುವೆ. ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ (Anjanadri) ಆಂಜನೇಯನ‌ ಜನ್ಮಸ್ಥಳ ಎಂದು ಹೇಳಿದ್ರು. ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಯಾರ ವಾದ ಏನೇ ಇರಲಿ. ಇಲ್ಲಿನ ಕಿಷ್ಕೆಂಧೆ ಕ್ಷೇತ್ರದಲ್ಲಿ ಆಂಜನೇಯ ಹುಟ್ಟಿದ್ದು. ಈ ಕ್ಷೇತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ (Development) ‌ಮಾಡಲಾಗುವುದು ಎಂದರು.
Published by:Pavana HS
First published: