Evening Digest: ಕಾಂಗ್ರೆಸ್ಸಿಗರಿಗೆ 150 ಸ್ಥಾನ ಗೆಲ್ಲುವ ಟಾರ್ಗೆಟ್​; ರಾಜ್ಯ ಪ್ರವಾಸದಲ್ಲಿ ಅಮಿತ್​ ಶಾ ; ಈ ದಿನದ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  150 ಸ್ಥಾನ ಗೆಲ್ಲುವ ಗುರಿ
  ಈ ಬಾರಿ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ 150 ಸ್ಥಾನ ಗೆಲ್ಲಲೇಬೇಕು. ಇದು ನಾನು ನಿಮಗೆ ಕೊಡ್ತಿರುವ ಟಾಸ್ಕ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತಿಳಿಸಿದ್ದಾರೆ. ಕಾಂಗ್ರೆಸ್​ ಮುಖಂಡರ ಜತೆ ಸಂವಾದದಲ್ಲಿ ಮಾತನಾಡಿದ ಅವರು, 150ರಲ್ಲಿ ಒಂದು ಸೀಟು ಕೂಡ ಕಡಿಮೆಯಾಗಬಾರದು. ಜನರಿಗೆ ಪ್ರಸಕ್ತ ವಿಷಯಗಳನ್ನ ಜನರಿಗ ಮುಟ್ಟಿಸಿ. ಸರ್ಕಾರದ ವಿರುದ್ಧ ಹೋರಾಟಗಳನ್ನ ರೂಪಿಸಿ. ನೋಟ್​ ಬ್ಯಾನ್​, ನಿರುದ್ಯೋಗ, ವಿವಾದಾತ್ಮಕ ರೈತ ಕಾಯ್ದೆಗಳಿಂದ ಆದ ಪರಿಣಾಮ ಕುರಿತು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.

  ಗುರುವಂದನಾ ಕಾರ್ಯಕ್ರಮದಲ್ಲಿ ಅಮಿತ್ ಶಾ
  ಶಿವಕುಮಾರ ಶ್ರೀಗಳು ಆಧುನಿಕ ಬಸವಣ್ಣ . ಬದುಕಿನ ಕೊನೆಯ ಉಸಿರಿರುವವರೆಗೂ ಸೇವೆ ಮಾಡಿದರು. ಶ್ರೀಗಳು ಜೀವನ ಕರ್ಮದಿಂದಲೇ ಸಂದೇಶ ನೀಡಿದರು. 3ನೇ ಬಾರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತಿದ್ದೇನೆ. ಪ್ರತಿ ಬಾರಿ ಇಲ್ಲಿಗೆ ಬಂದಾಗ ಹೊಸ ಚೈತನ್ಯ ಪಡೆಯುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿಳಿಸಿದರು.

  ಎಚ್​ಡಿ ದೇವೇಗೌಡ ಮ್ಯೂಸಿಯಂ
  ಮಣ್ಣಿನ ಮಗ ದೇವೇಗೌಡ ಅವರು ಪ್ರಧಾನಿ ಪಟ್ಟಕ್ಕೆ ಏರಿದ ಕರ್ನಾಟಕದ ಏಕೈಕ ರಾಜಕಾರಣ. 88ರ ವಯಸ್ಸಿನಲ್ಲೂ ಪಕ್ಷಕ್ಕಾಗಿ ಅವರು ನಡೆಸುತ್ತಿರುವ ಹೋರಾಟ ಅನೇಕರಿಗೆ ಸ್ಪೂರ್ತಿ. ಪ್ರಾದೇಶಿಕ ಪಕ್ಷ ಕಟ್ಟಿದ್ದ ಅವರು ನಾಡಿನ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಮಾಡಿದ ಕಾರ್ಯ ಶ್ಲಾಘನೀಯ. ಇಂತಹ ಅವರ ಕಾರ್ಯವನ್ನು ಅಜರಾಮರಾವಾಗಿಸುವ ಕೆಲಸ ಇದೀಗ ಅವರ ಹುಟ್ಟೂರಿನಲ್ಲಿ ನಡೆದಿದೆ.

  ಪ್ರಧಾನಿ ಹತ್ಯೆಗೆ ಸಂಚು
  ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಇನ್ನು, ಪ್ರಧಾನಿ ಮೋದಿ ಹತ್ಯೆಗೆ ಬರೋಬ್ಬರಿ 20 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ಸ್ಲೀಪರ್ ಸೆಲ್ ಮೂಲಕ ಕೊಲ್ಲಲು ಸಂಚು ರೂಪಿಸಲಾಗಿದೆ ಎಂಬ ಎಚ್ಚರಿಕೆಯ ಇ-ಮೇಲ್ ಒಂದು ಬಂದಿದೆ ಎಂದು ಸೆಕ್ಯೂರಿಟಿ ಏಜೆನ್ಸಿ ಮಾಹಿತಿ ನೀಡಿದೆ. ಸದ್ಯ ಈ ಇ-ಮೇಲ್ ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿದ್ದು, ಇ ಮೇಲ್ ಸಂದೇಶ ಬಂದ ಕೂಡಲೇ ಪ್ರಧಾನಿ ಮೋದಿ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್ ಇನ್ವೇಷ್ಟಿಗೇಶನ್ ಸಂಸ್ಥೆಗೂ ಮೇಲ್ ರವಾನಿಸಲಾಗಿದೆ.

  US ಎಚ್ಚರಿಕೆಯ ನಡುವೆ Russia ಘೋಷಣೆ
  ಭಾರತವು ನಮ್ಮಿಂದ ಖರೀದಿಸಲು ಬಯಸುವ ಯಾವುದೇ ಸರಕು ಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ರಷ್ಯಾ ಮತ್ತು ಭಾರತ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ಲಾವ್ರೊವ್ ಹೇಳಿದ್ದಾರೆ. ಭಾರತದ ಮೇಲೆ ಅಮೆರಿಕದ ಒತ್ತಡವು, ಭಾರತ-ರಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಕೇಳಿದಾಗ? ಯಾವುದೇ ಒತ್ತಡವು ನಮ್ಮ ಪಾಲುದಾರಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದರಲ್ಲಿ ನಮಗೆ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಲಾವ್ರೊವ್ ಹೇಳಿದರು.

  ಗೋ ಪೂಜೆ ಮಾಡಿದ ಅಮಿತ್​ ಶಾ
  ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನಕ್ಕೆ ಆಗಮಿಸಿದ ಕೇಂದ್ರ ಸಚಿವ ಅಮಿತ್ ಶಾ ಅವರು ವೇದಿಕೆಗೆ ಆಗಮಿಸುವ ಮುನ್ನ ಗೋ ಪೂಜೆ ಮಾಡಿ ಗಮನ ಸೆಳೆದರು. ಬಳಿಕ ಕೆಎಂಎಫ್ ಮಳಿಗೆ ಉದ್ಘಾಟಿಸಿ, ನಂದಿನಿ ಪೇಡವನ್ನು ಸವಿದರು. ಬಳಿಕ ಸಹಕಾರ ಇಲಾಖೆ ಆಯೋಜಿಸಿದ್ದ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕಿನ ಲಾಂಛನ ಬಿಡುಗಡೆ ಹಾಗೂ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ನ್ನು ಅವರು ಉದ್ಘಾಟಿಸಿದರು.
  Published by:Seema R
  First published: