Evening Digest: ಹೊಸ ಬಾಂಬ್ ಸಿಡಿಸಿದ ರಮ್ಯಾ; ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಸೂಸೈಡ್;​ ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ


ಬೆಂಗಳೂರು (ಜು.3): ಪ್ರೀತಿಸಿದ ಹುಡುಗಿ ತನ್ನ ಪ್ರೀತಿ ನಿರಾಕರಿಸಿದಳು ಎನ್ನುವ ಕಾರಣಕ್ಕೆ ಯುವಕ ನೇಣಿಗೆ ಶರಣಾಗಿದ್ದಾನೆ. 21 ವರ್ಷದ ಸಂಜಯ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜಯ್ 1 ವರ್ಷದ ಹಿಂದೆ ಹುಡುಗಿ ಓರ್ವಳನ್ನು ಪ್ರೀತಿಸುತ್ತಿದ್ದ, ಸಂಜಯ್ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಹುಡುಗಿ ಈತನ ಪ್ರೀತಿ ನಿರಾಕರಣೆ ಮಾಡಿದ ಬಳಿಕ ಸಂಜಯ್ ಬೇಸರಗೊಂಡು, ಪ್ರೀತಿ ಸಿಗಲಿಲ್ಲ ಎಂದು ಕೊರಗಿದ್ದ ಮನನೊಂದು ಮನೆಯ ರೂಂನಲ್ಲಿ ನೇಣಿಗೆ ಶರಣಾಗಿದ್ದಾನೆ. ಕೊಪ್ಪಳ ಮೂಲದ ಮೃತ ಸಂಜಯ್ ಜಾಲಹಳ್ಳಿ ಬಳಿಯ ಟ್ರಾವೆಲ್ ನಲ್ಲಿ ಚಾಲಕನಾಗಿದ್ದ , ಡ್ರೈವರ್ ಕಂ ಓನರ್ ಆಗಿ ಟ್ರಾವೆಲ್ ನಲ್ಲಿ ಕೆಲಸ ಮಾಡುತ್ತಿದ್ದ.


ಬಿಎಂಟಿಸಿ ಬಸ್​ನಲ್ಲಿ ಕಂಡಕ್ಟರ್​ ಇರೋದಿಲ್ಲ

ಸದ್ಯ ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಿಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಕಂಡೆಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಆದ್ರೂ ಹೇಗೆ ಅಂತ. ಆದರೆ ಬಿಎಂಟಿಸಿ ಇಂಥಹದೊಂದು ಪ್ಲಾನ್ ಮಾಡಿಕೊಂಡಿದೆ. ಸದ್ಯ ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸ್ತಿಲ್ಲ. ಹೀಗಾಗಿ ಕಂಡೆಕ್ಟರ್ ಪೋಸ್ಟ್ ಗಳನ್ನೇ ಎತ್ತಂಗಡಿ ಮಾಡೋಕೆ ನಿಗಮ ಪ್ಲಾನ್ ಮಾಡಿದೆ. ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸೋಕೆ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿನ ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ.

ಇದನ್ನೂ ಓದಿ: BMTC ಬಸ್​ನಲ್ಲಿ ಇನ್ಮುಂದೆ ಕಂಡಕ್ಟರ್ ಇರೋದಿಲ್ಲ! ಟಿಕೆಟ್ ಪಡೆಯೋದು ಹೇಗೆ ಗೊತ್ತಾ?

ಉಗ್ರರನ್ನು ಸದೆಬಡೆದ ಗ್ರಾಮಸ್ಥರು

ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಲಷ್ಕರ್-ಎ-ತೊಯ್ಬಾ (LET) ಭಯೋತ್ಪಾದಕರು (Terrorists) ಸೆರೆಸಿಕ್ಕಿದ್ದಾರೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಸದೆಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರಿಗೆ ಸೆರೆಸಿಗದ ಭಯೋತ್ಪಾದಕರನ್ನು ಗ್ರಾಮದ ಜನರೇ ಸ್ವತಃ ಭಂದಿಸಿ ಪೊಲೀಸರಿಗೆ ಒಪ್ಪಿಸಿದ್ದು, ಬಹಳ ವಿಶೇಷವಾಗಿದೆ. ಅಲ್ಲದೇ ಈ ವಿಚಾರವನ್ನು ಸ್ವತಃ ಅಧಿಕಾರಿಗಳೇ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 16,103 ಜನರಿಗೆ ಕೊರೋನಾ

ಕಳೆದ 24 ಗಂಟೆಗಳಲ್ಲಿ 16,103 ಜನರಿಗೆ ಕೊರೋನಾ ಪಾಸಿಟಿವ್ (Covid 19 Positive) ದೃಢಪಟ್ಟಿದೆ. ಕೊರೋನಾ ಟೆಸ್ಟ್​ನಲ್ಲಿ (Corona Test) 16,103 ಜನರು ಪಾಸಿಟಿವ್ ಬಂದಿದ್ದು ಒಟ್ಟು ಆ್ಯಕ್ಟಿವ್ ಕೇಸ್ (Active Case) 43,502,429 ಕ್ಕೆ ತಲುಪಿದೆ. ಭಾರತವು ಭಾನುವಾರ ತನ್ನ ದೈನಂದಿನ ಕೋವಿಡ್ -19 ನಲ್ಲಿ ಕೇಸ್​ನಲ್ಲಿ ಕನಿಷ್ಠ ಇಳಿಕೆಯನ್ನು ಕಂಡಿದೆ. ಶನಿವಾರ ದೇಶದಲ್ಲಿ ಒಂದು ದಿನದಲ್ಲಿ ಒಟ್ಟು 17,092 ಪ್ರಕರಣಗಳು ವರದಿಯಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯದ (Health Ministry) ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 31 ಸಾವುಗಳು ದಾಖಲಾಗಿದ್ದು, ಒಟ್ಟು ಸಾವುಗಳು 5,25,199 ಕ್ಕೆ ತಲುಪಿದೆ.

ಇದನ್ನೂ ಓದಿ: Covid-19: ಲಕ್ಷ ದಾಟಿದ ಕೊರೋನಾ ಕೇಸ್, ಒಂದೇ ದಿನ 31 ಸೋಂಕಿತರು ಸಾವು

ಹೊಸ ಬಾಂಬ್ ಸಿಡಿಸಿದ ರಮ್ಯಾ

ಪವಿತ್ರಿ ಲೋಕೇಶ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿವೆ. ಒಬ್ಬರ ಹಿಂದೊಬ್ಬರಂತೆ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡುತ್ತಿರುವ ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನರೇಶ್ ಮತ್ತು ಪವಿತ್ರಿ ಲೋಕೇಶ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರಿಬ್ಬರ ಬಗ್ಗೆ ನೀಡಿರುವ ಹೇಳಿಕೆ ಇದೀಗ ಸಂಚಲನ ಮೂಡಿಸುತ್ತಿದೆ. ಇಬ್ಬರು ಸ್ನೇಹಿತರಾಗಿರುವಾಗ ಹೋಟೆಲ್‌ಗೆ ಹೋಗಿ ರಾತ್ರಿ ಕಳೆಯುವ ಅಗತ್ಯವೇನಿತ್ತು ಎಂದು ನರೇಶ್ ಪತ್ನಿ ರಮ್ಯಾ ಪ್ರಶ್ನಿಸಿದ್ದಾರೆ. ಇನ್ನು ವಿಚ್ಛೇದನವು ಮಾನ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
Published by:Pavana HS
First published: