Evening Digest: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ, ಕೆ.ಎನ್ ರಾಜಣ್ಣಗೆ ಕಾಂಗ್ರೆಸ್​ ನೋಟಿಸ್​; ಈ ಸಂಜೆಯ ಟಾಪ್ ನ್ಯೂಸ್ ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿದ್ದು, ಇಳಿಕೆಯಾದ ದರ ಇಂದಿನಿಂದಲೇ ಜಾರಿಗೆ ಬರಲಿದೆ.ತೈಲ ಕಂಪನಿಗಳು ಪ್ರತಿ ತಿಂಗಳ 1 ರಂದು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಅದೇ ರೀತಿ ಇವತ್ತು ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸಹ ಪರಿಷ್ಕರಿಸಿವೆ. ಬೆಲೆ ಇಳಿಕೆಯಾಗಿದ್ದು, ಜನರ ಜೇಬಿನಲ್ಲಿರುವ ಹಣಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ಬೆಲೆ ಇಳಿಕೆ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 198 ರೂಪಾಯಿ ಇಳಿದಿದೆ. ಪ್ರದೇಶದ ಆಧಾರದ ಮೇಲೆ ಬೆಲೆಯಲ್ಲಿ ಸಣ್ಣ ವ್ಯತ್ಯಾಸಗಳು ಇರಬಹುದು.

ದೇವೇಗೌಡರ ಪರ ಡಿಕೆ ಬ್ರದರ್ಸ್​; ಕೆ.ಎನ್​ ರಾಜಣ್ಣಗೆ ನೋಟಿಸ್

ಬೆಂಗಳೂರು (ಜು 1): ಕಾಂಗ್ರೆಸ್​ ಮುಖಂಡ ಕೆ.ಎನ್​ ರಾಜಣ್ಣ (K.N Rajanna) ಮಾಜಿ ಪ್ರಧಾನಿಗಳ ಬಗ್ಗೆ ಮಾತಾಡಿ ಪೇಚಿಗೆ ಸಿಲಿಕಿದ್ದಾರೆ. JDS ನಾಯಕರು ಕೆ.ಎನ್. ರಾಜಣ್ಣ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ಇತ್ತ ಕಾಂಗ್ರೆಸ್​ ನಾಯಕರು (Congress Leaders) ಸಹ ದೇವೇಗೌಡರ ಪರ ನಿಂತಿದ್ದಾರೆ. ಕೆ.ಎನ್ ರಾಜಣ್ಣ ವಿರುದ್ಧ ಡಿ.ಕೆ ಶಿವಕುಮಾರ್ (D.K Shivakumar)​, ಸಂಸದ ಡಿ.ಕೆ. ಸುರೇಶ್ ಕೂಡ ಕಿಡಿಕಾರಿದ್ದಾರೆ. ಕೆ.ಎನ್. ರಾಜಣ್ಣ ಹೇಳಿಕೆ ಖಂಡನೀಯ ಎಂದ ಡಿ.ಕೆ ಸುರೇಶ್​, ಮಾಜಿ ಪ್ರಧಾನಿ ದೇವೇಗೌಡರಿವೆ (Devegowda) ಗೌರವ ಕೊಡಬೇಕು. ದೇವೇಗೌಡರ ಹಿರಿತನಕ್ಕೆ ಎಲ್ಲರೂ ತಲೆಬಾಗಬೇಕು ಎಂದ್ರು.

ಇದನ್ನೂ ಓದಿ: Karnataka Politics: ದೇವೇಗೌಡರ ಪರ ನಿಂತ್ರು ಡಿಕೆ ಬ್ರದರ್ಸ್​; ಕೆ.ಎನ್​ ರಾಜಣ್ಣಗೆ ನೋಟಿಸ್

ಉದಯಪುರ ಟೈಲರ್ ಹತ್ಯೆಗೂ ಮುಂಬೈ 26/11 ದಾಳಿಗೂ ಲಿಂಕ್?

ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯಪುರ ಟೈಲರ್ ಕೊಲೆ ಆರೋಪಿಗಳ ಸಂಪರ್ಕವನ್ನು ರಾಜಸ್ಥಾನ ಪೊಲೀಸರು (Rajasthan Police) ಬಹಿರಂಗಪಡಿಸಿದ ಕೆಲವೇ ದಿನಗಳಲ್ಲಿ, ಪೊಲೀಸರು ಇಂದು ಪ್ರಕರಣದ ಮತ್ತೊಂದು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಉದಯಪುರದ ಟೈಲರ್ ಕೊಲೆ ಆರೋಪಿಗಳಲ್ಲಿ (Udaipur Murder) ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಹೊಂದಿದ್ದ. ಇದೇ ಸಂಖ್ಯೆಯ ನಂಬರ್​ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ. ಮುಂಬೈ ತಾಜ್ ಹೋಟೆಲ್ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಯ (Mumbai Terror Attack) ದಿನಾಂಕದ ನಂಬರ್ ಪ್ಲೇಟ್​ಅನ್ನು ಹೆಚ್ಚುವರಿ ಹಣ ನೀಡಿ ಪಡೆದಿದ್ದ ಎಂಬ ಸುಳಿವು ವ್ಯಕ್ತವಾಗಿದ್ದಾಗಿ ವರದಿಯಾಗಿದೆ.

ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ

ಮುಂಬೈ: ಅಮಿತ್ ಶಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ನಿರ್ಗಮಿಸಿದ ನಂತರ ಮೊದಲ ಬಾರಿಗೆ ಮಾತನಾಡಿರುವ ಉದ್ಧವ್ ಠಾಕ್ರೆ (Uddhav Thackeray) ಶಿವಸೇನೆಯಿಂದ ಬಂಡಾಯ ಎದ್ದು ಹೊರಬಂದ ಏಕನಾಥ್ ಶಿಂಧೆ ಅವರೊಂದಿಗೆ ಹೊಸ ಸರ್ಕಾರವನ್ನು(Maharashtra CM Eknath Shinde)  ರಚಿಸಿರುವ ಬಿಜೆಪಿಯನ್ನು ಇಂದು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಅಧಿಕಾರಕ್ಕಾಗಿ ನನ್ನ ಬೆನ್ನಿಗೆ ಚೂರಿ ಹಾಕಿದೆ. ಶಿವಸೇನೆ-ಬಿಜೆಪಿ ಮೈತ್ರಿಯ 2.5 ವರ್ಷಗಳ ಅವಧಿಯಲ್ಲಿ ಶಿವಸೇನೆ ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ (Amit Shah) ಮೊದಲೇ ಹೇಳಿದ್ದೆ. ಅವರು ಆ ಮಾತನ್ನು ಮೊದಲೇ  ನಡೆಸಿಕೊಟ್ಟಿದ್ದರೆ ಮಹಾ ವಿಕಾಸ್ ಅಘಾಡಿ (Maha Vikas Aghadi)  ನಿರ್ಮಾಣ  ಆಗುತ್ತಿರಲಿಲ್ಲ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Maharashtra Politics: ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ

ಜುಲೈ 30ಕ್ಕೆ ವಿಚಾರಣೆ ಮುಂದೂಡಿಕೆ

ಅಕ್ರಮ ಹಣ ಸಂಪಾದನೆ ಮತ್ತು ವರ್ಗಾವಣೆ ಪ್ರಕರಣ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಸೇರಿದಂತೆ ಐವರು ಜಾರಿ ನಿರ್ದೇಶನಾಲಯದ (Enforcement Directorate) ವಿಶೇಷ ನ್ಯಾಯಾಲಯದ (Court) ಮುಂದೆ ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗಲು ಐವರಿಗೂ ಸಮನ್ಸ್ (Summons) ನೀಡಲಾಗಿತ್ತು. ಡಿ.ಕೆ. ಶಿವಕುಮಾರ್, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ನ್ಯಾಯಾಧೀಶ ವಿಕಾಸ್ ದುಲ್ ಅವರ ಮುಂದೆ ಹಾಜರಾಗಿದ್ದರು. ಪ್ರಕರಣದ ಮೊದಲ ಆರೋಪಿ ಡಿಕೆ ಶಿವಕುಮಾರ್ ಗೆ ಜಾಮೀನು (Bail) ಸಿಕ್ಕಿದೆ. ಉಳಿದವರಿಗೆ ಜಾಮೀನು ಮಂಜೂರು ಮಾಡಿ ಎಂದು ಡಿಕೆ ಶಿವಕುಮಾರ್ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ನೀಡಿದ ಜಾಮೀನು ಆದೇಶವನ್ನು ವಕೀಲರು ಓದಿದರು.
Published by:Pavana HS
First published: