• Home
  • »
  • News
  • »
  • state
  • »
  • Mangaluru: ಇದು ನಿಜಕ್ಕೂ ಕಾಮಧೇನು ಕೆಫೆ; ಕಾಸಿಲ್ಲದಿದ್ರೂ ತುಂಬಿಸಿಕೊಳ್ಳಬಹುದು ಹೊಟ್ಟೆ

Mangaluru: ಇದು ನಿಜಕ್ಕೂ ಕಾಮಧೇನು ಕೆಫೆ; ಕಾಸಿಲ್ಲದಿದ್ರೂ ತುಂಬಿಸಿಕೊಳ್ಳಬಹುದು ಹೊಟ್ಟೆ

ಕಾಮಧೇನು ಕ್ಯಾಂಟೀನ್​

ಕಾಮಧೇನು ಕ್ಯಾಂಟೀನ್​

ಟೀ, ಕಾಫಿ ಮತ್ತು ಉಪಹಾರ ಸೇವಿಸಲು ಹಣವಿಲ್ಲದವರು ಬಂದು ವಾಲ್ ಬೋರ್ಡ್ ನಲ್ಲಿರುವ ಕೂಪನ್ ಮೂಲಕ ಉಚಿತವಾಗಿ ಉಪಹಾರ ಸೇವಿಸುವ ವ್ಯವಸ್ಥೆ ಮಾಡಲಾಗಿದೆ.

  • Share this:

ತನ್ನ ಬಳಿ ಲೆಕ್ಕವಿಲ್ಲದಷ್ಟು ಸಂಪತ್ತು ಇದ್ದರೂ, ಬಡವರಿಗೆ, ದೀನರಿಗೆ ಅದರಲ್ಲಿ ಒಂದು ಪಾಲು ನೀಡುವ ಜನರಿರುವುದು ವಿರಳವೇ. ಕಿಲೋಗಟ್ಟಲೆ ಆಹಾರವನ್ನು (Food) ತಿಪ್ಪೆಗೆಸೆದರೂ, ಹಸಿದವನಿಗೆ ನೀಡದ ಈ ಕಾಲದಲ್ಲಿ ಇಲ್ಲೊಬ್ಬರು ತಮ್ಮಲ್ಲಿಗೆ ಬರುವ ಬಡವರಿಗೆ ಉಚಿತ ಉಪಹಾರವನ್ನು ನೀಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಪುಟ್ಟ ಕ್ಯಾಂಟೀನ್ (Canteen) ನಡೆಸುತ್ತಿರುವ ಈ ವ್ಯಕ್ತಿ ದಿನಕ್ಕೆ 25 ಕ್ಕೂ ಮಿಕ್ಕಿದ ಹಸಿದವರ ಹೊಟ್ಟೆ ತುಂಬಿಸುತ್ತಾರೆ. 'ಆನ್ ದಿ ವಾಲ್ 'ಎನ್ನುವ ಕಾನ್ಸೆಪ್ಟ್ ಮೂಲಕ ಈ ಸೇವೆಯನ್ನು ನೀಡುತ್ತಿರುವ ಈ‌ ವ್ಯಕ್ತಿಯ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.


ಕಾಮಧೇನು ಕ್ಯಾಂಟೀನ್​


ಮಂಗಳೂರು ನಗರದ ಜೈಲ್‌ ರೋಡ್ ಬಳಿ‌ ಕಾರ್ಯಾಚರಿಸುತ್ತಿರುವ ಕಾಮಧೇನು ಎನ್ನುವ ಹೆಸರಿನ ಈ ಕ್ಯಾಂಟೀನ್ ಕಾಮಧೇನುವಿನ ಹಾಗೆಯೇ  ಹಸಿದವನಿಗೆ ನೀಡುವ ಅನ್ನಪೂರ್ಣೆಯಂತೆ ಗುರುತಿಸಿಕೊಂಡಿದೆ. ಮಂಗಳೂರು ನಿವಾಸಿ ಸಚಿನ್ ಕರ್ಕೇರ ಹಸಿದವರಿಗೆ ಉಪಹಾರ ನೀಡುವ ವ್ಯವಸ್ಥೆಯನ್ನು ಮಾಡುತ್ತಿರುವರಾಗಿದ್ದು, ಕ್ಯಾಂಟೀನ್ ಆರಂಭಗೊಂಡು ಆರು ತಿಂಗಳಿನಿಂದ ದಿನಕ್ಕೆ 20 ರಿಂದ 25 ಜನರ ಹಸಿವು ನೀಗಿಸುತ್ತಿದ್ದಾರೆ.


ವಿದೇಶದಲ್ಲಿದ್ದ ಸಚಿನ್


ವಿದೇಶದಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಸಚಿನ್ ತವರಿಗೆ ಬಂದ ಬಳಿಕ ಸುರತ್ಕಲ್ ನಲ್ಲಿ ಜಿಮ್ ಒಂದನ್ನು ಪ್ರಾರಂಭಿಸಿದ್ದರು. ಆದರೆ ಕೊರೊನಾದಿಂದಾಗಿ ಜಿಮ್ ವ್ಯವಹಾರಕ್ಕೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಜಿಮ್ ಬಂದ್ ಮಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿತ್ತು. ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕೆಂದು ಪುಟ್ಟ ಕ್ಯಾಂಟೀನ್ ಒಂದನ್ನು ಆರಂಭಿಸಿದ ಸಚಿನ್ , ಕ್ಯಾಂಟೀನ್ ನ ಎಲ್ಲಾ ಕೆಲಸಗಳನ್ನೂ ತಾವೇ ಮಾಡುವ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ.


ಇದನ್ನೂ ಓದಿ: Special Train: ನೈರುತ್ಯ ರೈಲ್ವೆಯಿಂದ ಸ್ಪೆಷಲ್ ಟ್ರೈನ್; ಹಬ್ಬಕ್ಕೆ ಹೋಗುವವರು ಫುಲ್ ಖುಷ್


ಎಲ್ಲಾ ಕ್ಯಾಂಟೀನ್ ಗಳಂತೆ ಕಾಮಧೇನು ಕ್ಯಾಂಟೀನ್ ಇದ್ದರೂ, ಇದರಲ್ಲಿರುವ ನೋಟೀಸ್ ಬೋರ್ಡ್ ಮಾತ್ರ ಇತರ ಕ್ಯಾಂಟೀನ್ ಗಳಿಗಿಂತ ಭಿನ್ನವಾಗಿ ಕಾಣುತ್ತಿದೆ. ಬಡವರಿಗೆ, ಶ್ರಮಿಕರಿಗೆ ಟೀ, ಕಾಫಿ ಹಾಗು ಉಪಹಾರವನ್ನು ನೀಡುತ್ತಿದ್ದ ಸಚಿನ್ ಸೇವೆಯನ್ನು ಗುರುತಿಸಿಕೊಂಡ ಅವರ ಸ್ನೇಹಿತರು ? ಈ ಸೇವೆಯಲ್ಲಿ ತಮ್ಮನ್ನೂ ತೊಡಗಿಸಿಕೊಳ್ಳಲು ನಿರ್ಧರಿಸಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿ ಬೋರ್ಡ್ ಒಂದನ್ನು ಅಳವಡಿಸಲಾಗಿತ್ತು, ಈ ಬೋರ್ಡ್ ನಲ್ಲಿ ಹಲವು ಕೂಪನ್ ಗಳನ್ನೂ ಅಂಟಿಸಲಾಗಿದೆ. ಕ್ಯಾಂಟೀನ್ ನಲ್ಲಿ ಉಪಹಾರ ಸೇವಿಸಿದ ಜನ ತಮ್ಮ ಹೆಸರಿನಲ್ಲಿ ಈ ದಿನ ಬಡವರಿಗೆ ಒಂದು ಹೊತ್ತಿನ ಉಪಹಾರ ನೀಡಿ ಎಂದು ಹಣ ನೀಡಿ ಹೋಗುತ್ತಾರೆ.


ಹಣಕ್ಕೆ ಬದಲಾಗಿ ಕೂಪನ್


ಹೀಗೆ ಪಡೆದ ಹೆಚ್ಚುವರಿ ಹಣಕ್ಕೆ ಬದಲಾಗಿ ಕೂಪನ್ ಗಳನ್ನು ಮಾಡಿ ಆ ಕೂಪನ್ ಗಳನ್ನು ಸಚಿನ್ ವಾಲ್ ಬೋರ್ಡ್ ನಲ್ಲಿ ಅಂಟಿಸುತ್ತಾರೆ‌. ಟೀ, ಕಾಫಿ ಮತ್ತು ಉಪಹಾರ ಸೇವಿಸಲು ಹಣವಿಲ್ಲದವರು ಬಂದು ವಾಲ್ ಬೋರ್ಡ್ ನಲ್ಲಿರುವ ಕೂಪನ್ ಮೂಲಕ ಉಚಿತವಾಗಿ ಉಪಹಾರ ಸೇವಿಸುವ ವ್ಯವಸ್ಥೆ ಈ ಕ್ಯಾಂಟೀನ್ ನಲ್ಲಿದೆ. ಸೆಕ್ಯುರಿಟಿ ಗಾರ್ಡ್ ಗಳು, ತ್ಯಾಜ್ಯ ವಿಲೇವಾರಿ ಮಾಡುವ ಪೌರ ಕಾರ್ಮಿಕರು, ಅಲೆಮಾರಿಗಳು ಸೇರಿದಂತೆ ಅವಶ್ಯಕತೆಯಿರುವವರ ಇಲ್ಲಿ ಹಸಿವು ನೀಗಿಸಲಾಗುತ್ತಿದೆ. ಸಣ್ಣ ಮಟ್ಟದ ಕ್ಯಾಂಟೀನ್ ನಡೆಸುತ್ತಿರುವ ಸಚಿನ್ ವ್ಯವಹಾರದಲ್ಲಿ ಲಾಭ- ನಷ್ಟ‌ ನೋಡದೆ ಈ ಸೇವೆಯನ್ನು ಮಾಡುತ್ತಿದ್ದು, ದೊಡ್ಡ‌ ಮಟ್ಟದ‌ ಹೋಟೆಲ್‌ ಮಾಲೀಕರೂ ಆಹಾರವನ್ನು‌ ತಿಪ್ಪೆಗೆಸೆಯುವ ಬದಲು‌ ಬಡವರ ಹಸಿವು ನೀಗಿಸಿದರೆ ಉತ್ತಮ ಎನ್ನುತ್ತಾರೆ.


ಇದನ್ನೂ ಓದಿ: Rahul-Ramya: ಭಾರತ್​ ಜೋಡೋ ಯಾತ್ರೆಗೆ ಪದ್ಮಾವತಿ ಎಂಟ್ರಿ; ರಾಹುಲ್ ಗಾಂಧಿ​ಗೆ ರಮ್ಯಾ ಸಾಥ್​


ಸಚಿನ್​ಗೆ ಸ್ನೇಹಿತರು ಸಾಥ್​


ಸಚಿನ್ ಅವರ ಈ ಸೇವೆಯನ್ನು ಗುರುಸಿಕೊಂಡ ಅವರ ಸ್ನೇಹಿತರೂ‌ ಕೂಡಾ ಸಚಿನ್ ಜೊತೆ ಕೈ ಜೋಡಿಸಿದ್ದಾರೆ. ತಮ್ಮ ತಮ್ಮ ಮನೆಗಳಲ್ಲಿ ಶುಭ ಕಾರ್ಯ ನಡೆದಲ್ಲಿ,  ಆ ಹೆಸರಿನಲ್ಲಿ ಬಡವರಿಗೆ ಅನ್ನ ಹಾಕುವಂತೆ ಸಚಿನ್‌ ಅವರಿಂದ ಕೂಪನ್‌ ಪಡೆದು‌ ವಾಲ್ ಬೋರ್ಡ್ ಗೆ ಹಾಕಿ ಹೋಗುತ್ತಾರೆ. ಇದರಿಂದ ಸಚಿನ್ ಮೇಲೆ‌ ಬೀಳುತ್ತಿದ್ದ ಹೊರೆಯೂ ಕೊಂಚ ತಗ್ಗುವಂತಾಗಿದೆ. ತಮ್ಮ ಹೆಸರಿನಲ್ಲಿ ಹಸಿದವನ ಹೊಟ್ಟೆ ತುಂಬುತ್ತದೆ ಎನ್ನುವ ಸಂತೃಪ್ತಿಯನ್ನೂ ಈ ಕ್ಯಾಂಟೀನ್ ಗ್ರಾಹಕರು ಪಡೆಯುತ್ತಿದ್ದಾರೆ ಎನ್ನುತ್ತಾರೆ ಸಚಿನ್ ಸ್ನೇಹಿತರಾದ ರಾಜಾರಾಮ್ ಭಂಡಾರಿ. ಯಾವುದೇ ಪ್ರಚಾರದ ಹಂಗಿಲ್ಲದೆ, ತನ್ನಷ್ಟಕ್ಕ ಬಡವರ ಹಸಿವು ನೀಗಿಸುತ್ತಿರುವ ಸಚಿನ್ ಸೇವೆ ಎಲ್ಲರ ಹೃದಯ ಗೆದ್ದಿದೆ.
.

Published by:ಪಾವನ ಎಚ್ ಎಸ್
First published: