• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ಫಲಿತಾಂಶಕ್ಕೂ ಮೊದಲೇ 'ಆ' ಕ್ಷೇತ್ರದ ಸೋಲೊಪ್ಪಿಕೊಂಡ್ರಾ ಮಾಜಿ ಸಿಎಂ?

Siddaramaiah: ಫಲಿತಾಂಶಕ್ಕೂ ಮೊದಲೇ 'ಆ' ಕ್ಷೇತ್ರದ ಸೋಲೊಪ್ಪಿಕೊಂಡ್ರಾ ಮಾಜಿ ಸಿಎಂ?

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

Karnataka Assembly Election 2023: 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೇ ಜಿಟಿ ದೇವೇಗೌಡರ ವಿರುದ್ಧ ಸೋತಿದ್ದರು.

  • Share this:

ಬೆಂಗಳೂರು: ಮೈಸೂರು ಭಾಗದ ಕಾಂಗ್ರೆಸ್ ಅಭ್ಯರ್ಥಿಗಳಿಗೆ (Congress Candidate) ಬೆಂಗಳೂರಿಗೆ ಬರುವಂತೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಬುಲಾವ್ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ (Chamundeshwari Constituency) ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಹೊರತುಪಡಿಸಿ ನಂಜನಗೂಡಿನ ದರ್ಶನ್ ಧ್ರುವ ನಾರಾಯಣ್ (Darshan Dhruvnarayan), ಕೃಷ್ಣರಾಜ ಕ್ಷೇತ್ರದ MK ಸೋಮಶೇಖರ್ (MK Somashekhar), ಟಿ ನರಸೀಪುರದ ಹೆಚ್​ಸಿ ಮಹಾದೇವಪ್ಪ (HC Mahadevappa) ಅವರಿಗೆ ಬೆಂಗಳೂರಿಗೆ ಬರುವಂತೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಚಾಮುಂಡೇರಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರು (Former Miniser GT Devegowda) ಗೆಲ್ಲಲಿದ್ದಾರಂತೆ. ಹೀಗಾಗಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಆಹ್ವಾನಿಸಿಲ್ಲ ಎನ್ನಲಾಗಿದೆ.  


2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇದೇ ಜಿಟಿ ದೇವೇಗೌಡರ ವಿರುದ್ಧ ಸೋತಿದ್ದರು. ಈ ಬಾರಿ ಚಾಮುಂಡೇಶ್ವರಿಯಲ್ಲಿ ಗೆಲ್ಲಲು ಸಿದ್ದರಾಮಯ್ಯನವರು ಪ್ರಯತ್ನಿಸಿದ್ದರು.




ಖರ್ಗೆ ನಿವಾಸದಲ್ಲಿ ‘ತಂತ್ರಗಾರಿಕೆ’ ಸಭೆ


ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಮೂರು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ.


ಇದನ್ನೂ ಓದಿ:  Lokayukta: ₹1.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಜೂನಿಯರ್ ಇಂಜಿನಿಯರ್




ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್‌, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್​​ದೀಪ್​ ಸುರ್ಜೇವಾಲಾ ಭಾಗಿಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಬೆಳಗ್ಗೆಯಷ್ಟೇ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಖರ್ಗೆ ಅವರನ್ನು ಭೇಟಿ ಮಾಡಿದ್ರು. ಮುಂದಿನ ತಂತ್ರಗಾರಿಕೆ ಭಾಗವಾಗಿ ಈ ಸಭೆ ಮಹತ್ವ ಪಡೆದಿದೆ.

top videos
    First published: