News18 India World Cup 2019

ಮೆಟ್ರೋ ಯೋಜನೆಗೆ ಐರೋಪ್ಯ ಬ್ಯಾಂಕ್​ನಿಂದ ಹೂಡಿಕೆ; ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ

ಮೆಟ್ರೋ ಕಾಮಗಾರಿಗೆ ಯುರೋಪ್​ ಬ್ಯಾಂಕ್​ ಜೊತೆಗೆ ರಾಜ್ಯ ಸರ್ಕಾರ ಎಂಓಯು ಮಾಡಿಕೊಳ್ಳಲಾಗಿದೆ. 26 ಸಾವಿರ ಕೋಟಿ ರೂ. ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

sushma chakre | news18
Updated:January 11, 2019, 11:29 PM IST
ಮೆಟ್ರೋ ಯೋಜನೆಗೆ ಐರೋಪ್ಯ ಬ್ಯಾಂಕ್​ನಿಂದ ಹೂಡಿಕೆ; ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ
ಯುರೋಪ್​ ಬ್ಯಾಂಕ್​ನ ನಿರ್ದೇಶಕಿಯನ್ನು ಅಭಿನಂದಿಸಿದ ಸಿಎಂ ಕುಮಾರಸ್ವಾಮಿ
sushma chakre | news18
Updated: January 11, 2019, 11:29 PM IST
ರಮೇಶ್​ ಹಿರೇಜಂಬೂರು

ಬೆಂಗಳೂರು (ಜ. 11): ಬೆಂಗಳೂರು ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಯುರೋಪಿಯನ್ ಇನ್ವೆಸ್ಟ್​ಮೆಂಟ್​ ಬ್ಯಾಂಕ್ 500 ಮಿಲಿಯನ್ ಯುರೋ ಹೂಡಿಕೆ ಮಾಡಲು ಮುಂದೆ ಬಂದಿದೆ. ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಸಮ್ಮುಖದಲ್ಲಿ 200 ಮಿಲಿಯನ್ ಯುರೋ ಯೋಜನಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಸಂದರ್ಭದಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಿರ್ದೇಶಕಿ ಮರಿಯಾ, ಉಪನಿರ್ದೇಶಕಿ ಸುನೀತಾ , ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಶ್ರೀಗಳ ಚಿಕಿತ್ಸೆಯಲ್ಲಿ ಯಶಸ್ವಿಯಾಗುತ್ತೇವೆ ಎಂಬ ಆಶಾಭಾವ ಇದೆ; ಡಾ. ಮಂಜುನಾಥ್​

ಮೆಟ್ರೋ ಕಾಮಗಾರಿಗೆ ಯುರೋಪ್​ ಬ್ಯಾಂಕ್​ ಜೊತೆಗೆ ರಾಜ್ಯ ಸರ್ಕಾರ ಎಂಓಯು ಮಾಡಿಕೊಳ್ಳಲಾಗಿದೆ. 26 ಸಾವಿರ ಕೋಟಿ ರೂ. ಕಾಮಗಾರಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಯುರೋಪಿಯನ್ ಬ್ಯಾಂಕ್​ ನಿರ್ದೇಶಕರ ಜೊತೆಗೆ ಇದು ಮೊದಲ ಒಪ್ಪಂದವಾಗಿದೆ. ಇದೊಂದು ಉತ್ತಮ ಬೆಳವಣಿಗೆ. ಕಡಿಮೆ ದರದ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ; ಪ್ರಾಣಾಪಾಯದಿಂದ ಪಾರು
Loading...

ರಾಜ್ಯ ಸರ್ಕಾರದ ಹಣಕಾಸು ವ್ಯವಸ್ಥೆ ಹಾಳಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ, ಒಂದುವೇಳೆ ಅದು ನಿಜವೇ ಆಗಿದ್ದರೆ ವಿದೇಶದ ಹಣಕಾಸಿನ ಸಂಸ್ಥೆ ಇಷ್ಟು ದೊಡ್ಡ ಪ್ರಮಾಣದ ಹಣ ನೀಡುತ್ತಿರಲಿಲ್ಲ. ಅವರು ಈ ಮೊತ್ತವನ್ನು ನೀಡಬೇಕಾದರೆ ರಾಜ್ಯದ ಆಡಳಿತ ಚೆನ್ನಾಗಿದೆ ಎಂದೇ ಅರ್ಥ. ರಾಜ್ಯದ ಹಣಕಾಸು ವ್ಯವಸ್ಥೆ ಹಾಳಾಗಿದೆ ಎನ್ನುವವರಿಗೆ ಇದು ಉತ್ತರ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್​ ಹೇಳಿದ್ದಾರೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...