ಹ್ಯಾಂಬರ್ಗ್​ ಸಮ್ಮೇಳನಕ್ಕೆ ತೇಜಸ್ವಿ ಸೂರ್ಯ; ಯುರೋಪಿಯನ್​ ಭಾರತೀಯರಿಂದ ತೀವ್ರ ವಿರೋಧ

ಆರ್​ಎಸ್​ಎಸ್​ನಿಂದ ಚಿರಪರಿಚಿತರಾಗಿರುವ ಅವರು ಅತ್ಯಂತ ಪ್ರಚೋದನಕಾರಿ ಮತ್ತು ಕೋಮುವಾದಿ ರಾಜಕಾರಣಿ.

 ತೇಜಸ್ವಿ ಸೂರ್ಯ

ತೇಜಸ್ವಿ ಸೂರ್ಯ

 • Share this:
  ಬೆಂಗಳೂರು (ಅ.5): ಹ್ಯಾಂಬರ್ಗ್​ನಲ್ಲಿ ಆಯೋಜಿಸಿರುವ ಭಾರತೀಯ ಕಾನ್ಸಲೇಟ್​​ ಸಮ್ಮೇಳನಕ್ಕೆ ಸಂಸದ ತೇಜಸ್ವಿ ಸೂರ್ಯ ಆಹ್ವಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಸಂಸದ, ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ. ಗ್ಲೋಮನ್​ ಕನ್ಸಲ್ಟಿಂಗ್​ ಜಿಎಂಬಿಎಸ್​ ಸಹಭಾಗಿತ್ವದಲ್ಲಿ ಅಕ್ಟೋಬರ್​ 7ರಂದು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಆದರೆ, ಜರ್ಮನಿಯ ಅನಿವಾಸಿ ಭಾರತೀಯರು ತೇಜಸ್ವಿ ಸೂರ್ಯ ಆಹ್ವಾನಕ್ಕೆ ವಿರೋಧಿಸಿದ್ದಾರೆ. ಈ ಕುರಿತು ಜರ್ಮನಿಯ ರಾಯಭಾರಿ ಕಚೇರಿಗೆ ಪತ್ರ ಬರೆದಿರುವ ಅವರು, ತೇಜಸ್ವಿ ಸೂರ್ಯ ಅವರನ್ನು ಕರೆಸಿಸುತ್ತಿರುವ ಸಂಗತಿ ಬೇಸರ ತರಿಸಿದೆ. ಆರ್​ಎಸ್​ಎಸ್​ನಿಂದ ಚಿರಪರಿಚಿತರಾಗಿರುವ ಅವರು ಅತ್ಯಂತ ಪ್ರಚೋದನಕಾರಿ ಮತ್ತು ಕೋಮುವಾದಿ ರಾಜಕಾರಣಿ. ಅವರ ಆಗಮನಕ್ಕೆ ವಿರೋಧವಿದೆ ಎಂದು ಪತ್ರದ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಅಷ್ಟೇ ಅಲ್ಲದೇ, ತಮ್ಮ ಪತ್ರದಲ್ಲಿ ಸಂಸದರು ಕೋಮು ದ್ವೇಷ ಹಾಗೂ ವಿವಾದ ಹುಟ್ಟು ಹಾಕಿದ್ದ ನಾಲ್ಕು ವಿವಾದಾತ್ಮಕ ಟ್ವೀಟ್​ ಉಲ್ಲೇಖಿಸಿದ್ದಾರೆ.

  ಈ ಪತ್ರಕ್ಕೆ ಜರ್ಮನಿಯ ವಿವಿಧ ಭಾರತೀಯ ಸಂಘಟನೆಗಳು ಈ ಪತ್ರಕ್ಕೆ ಸಹಿಹಾಕುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸಾಲಿಡರಿಟಿ, ದಿ ಹ್ಯೂಮನಿಸಂ ಗ್ರೂಪ್​, ಬೆಲ್ಜಿಯಂ ಸಾಲಿಡರಿಟಿ. ಇಂಡಿಯನ್ಸ್​ ಅಗೇನೆಸ್ಟ್​ ಸಿಎಎ, ಎನ್​ ಆರ್​ಸಿ ಎಂಡ್​ ಎನ್​ಪಿಆರ್​-ಫಿನ್​ಲ್ಯಾಂಡ್​ ಭಾರತ್​ ಡೆಮಾಕ್ರಸಿ ವಾಚ್​, ಇಂಡಿಯನ್​ ಅಲೆಯನ್ಸ್​ ಪ್ಯಾರಿಸ್​, ಫೌಂಡೆಷನ್​ ದಿ ಲಂಡನ್​ ಸ್ಟೋರಿ ಸಮುದಾಯಗಳು ಪತ್ರಕ್ಕೆ ಸಹಿಮಾಡಿವೆ.

  ಅಲ್ಲದೇ ಬೆಂಗಳೂರಿನಲ್ಲಿ ಸಿಎಎ ಪರ ನಡೆದ ಸಮಾವೇಶದಲ್ಲಿ  ಮಾತನಾಡಿದ ಅವರು, ಸಿಎಎ ವಿರೋಧಿಸುವವರು ಎದೆ ಸೀಳಿದರೆ ಎರಡಕ್ಷರ ಇಲ್ಲದ ಪಂಕ್ಚರ್​ಗಳು ಎಂದಿದ್ದ ಅವರ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

  ಇದನ್ನು ಓದಿ: ಸಿಎಂ ಬಿಎಸ್​ ಯಡಿಯೂರಪ್ಪ ಆಶೀರ್ವಾದ ಪಡೆದ ಸಂಸದ ತೇಜಸ್ವಿ ಸೂರ್ಯ

  ಸಾರ್ವಜನಿಕವಾಗಿ ಮಾತನಾಡುವ ವೇಳೆ ತೇಜಸ್ವಿ ಸೂರ್ಯ, ಹೆಚ್ಚು ವಿವಾದಾತ್ಮಕ ಮತ್ತು ಕೋಮುವಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಬಹಿರಂಗವಾಗಿ ಕೋಮುವಾದ ರಾಜಕಾರಣದ ದೃಷ್ಟಿಕೋನ ಹೊಂದಿದ್ದಾರೆ ಎಂದಿದ್ದಾರೆ.

  ಯುರೋಪಿಯನ್​ ಪ್ರಗತಿಪರ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳ ಕಾಳಜಿಗಾಗಿ ಈ ವಿಷಯವನ್ನು ಮುನ್ನಲೆಗೆ ತರುತ್ತಿದ್ದೇವೆ. ಧರ್ಮಾಂಧತೆ, ಧ್ವೇಷಪೂರಿತ, ನಿರ್ದಿಷ್ಟ ಸಮುದಾಯಗಳ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ವಾಕ್​ ಸ್ವಾತಂತ್ರವನ್ನು ಬಳಸಿಕೊಳ್ಳುವವರಿಗೆ ವೇದಿಕೆ ನೀಡಬಾರದು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.
  Published by:Seema R
  First published: