HOME » NEWS » State » ETTINA HOLE PLAN IS DELAYED DUE TO SOME REASONS LG

ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವುದು ಕನಸು: ಸಾವಿರಾರು ಕೋಟಿ ನೀರುಪಾಲು

ಈ ಎತ್ತಿನಹೊಳೆ ಯೋಜನೆಯನ್ನು ಒಟ್ಟು 12 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈಗ ಎಸ್ ಆರ್ ವ್ಯಾಲ್ಯೂ ಪ್ರಕಾರ ಇದರ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೇ ಈಗ ಕೊರೋನಾ ಹಿನ್ನೆಲೆ ಕಾರ್ಮಿಕರಿಲ್ಲದೇ ಕೆಲಸ ಕುಂಠಿತವಾಗಿದೆ.

news18-kannada
Updated:June 22, 2020, 8:33 AM IST
ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳುವುದು ಕನಸು: ಸಾವಿರಾರು ಕೋಟಿ ನೀರುಪಾಲು
ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ
  • Share this:
ಹಾಸನ(ಜೂ.22): ಸರ್ಕಾರದ ಬಹು ಮಹತ್ವಾಕಾಂಕ್ಷಿ ಯೋಜನೆ ಎತ್ತಿನಹೊಳೆ ಯೋಜನೆಯಾಗಿದೆ‌. ಬಯಲು ಸೀಮೆಗಳಾದ ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಹಿಂದಿನ ಸಿದ್ಧರಾಮಯ್ಯ ಸರ್ಕಾರದಲ್ಲಿ ಯೋಜನೆ ಕೈಗೊಂಡಿದ್ದು, ನೀರಿಗಾಗಿ ಬಯಲು ಸೀಮೆಯ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ 24 ಟಿಎಂಸಿ ನೀರು ಸಿಗುತ್ತದೆ ಎಂದು ಹೇಳುತ್ತಿದೆ. ಆದರೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳು  ಕೇವಲ 8 ಟಿಎಂಸಿ ನೀರು ಸಿಗುತ್ತದೆ ಎಂದು ವರದಿ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಇಂತಹ ಏತ ನೀರಾವರಿ ಯೋಜನೆಗಳು ಯಾವುದೂ ಯಶಸ್ವಿಯಾಗಿಲ್ಲ. ಈ ಯೋಜನೆ ಕೂಡ ಹಳ್ಳ ಹಿಡಿಯಲಿದ್ದು, ಇಡೀ ಯೋಜನೆಯ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಶೇ,40 ರಷ್ಟು ಕಾಮಗಾರಿ ಮುಗಿದಿಲ್ಲ. ಆದರೆ ಈ ಯೋಜನೆಯು ಶೇ. 85ರಷ್ಟು ಮುಗಿದಿದೆ ಎಂದು ಸರ್ಕಾರ ಹೇಳುತ್ತಿದೆ. ನಿನ್ನೆ ಎತ್ತಿನಹೊಳೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯರವರು ಯೋಜನಾ ಸ್ಥಳ ಪರಿಶೀಲನೆ ಮಾಡಿದ್ದಾರೆ. ನೀರು ಮೇಲೆತ್ತುವ ಯಂತ್ರ ಮತ್ತು ಕಾಮಗಾರಿ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ಎತ್ತಿನ ಹೊಳೆ ಯೋಜನೆಯಲ್ಲಿ‌ ಶೇ.85 ರಷ್ಟು ಕೆಲಸ ಮುಗಿದಿದೆ ಎಂದು ಹೇಳುತ್ತಿದ್ದಾರೆ. 2021ರ ಮಾರ್ಚ್ ಅಂತ್ಯದೊಳಗೆ ಮೊದಲ ಹಂತದಲ್ಲಿ ನೀರು ಹರಿಸಲಾಗುತ್ತದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ. ಈ ಯೋಜನೆಯಲ್ಲಿ ಒಟ್ಟು 152 ಕಿಮೀ ದೂರದವರೆಗೆ ಪೈಪ್ ಲೈನ್ ಅಳವಡಿಸಲಾಗಿದೆ. ಮಳೆ ಬಂದರೆ 24 ಟಿಎಂಸಿ ನೀರು ಸಿಗಲಿದೆ ಎಂದು ಈಗಾಗಲೇ ಸರ್ಕಾರಕ್ಕೆ ವೈಜ್ಞಾನಿಕವಾಗಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಸರಿಯಾಗಿ ಮಳೆ ಬಂದರೆ 24 ಟಿಎಂಸಿ ನೀರು ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಯೋಜನೆ ಇನ್ನೂ ಹತ್ತು ವರ್ಷಗಳು ಕಳೆದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ 3 ಸಾವಿರ ಕೋಟಿ ಹಣ ಖರ್ಚಾಗಿದೆ. ಯಾವುದೇ ಸರ್ಕಾರಗಳು ಬಂದರೂ ಹಣ ಹೊಡೆಯುವ ಯೋಜನೆಯಾಗಿದೆ.

1. ಇಡೀ ರಾಜ್ಯದಲ್ಲಿ ಯಾವುದೇ ಏತ ನೀರಾವರಿ ಯೋಜನೆ ಯಶಸ್ವಿಯಾಗಿಲ್ಲ.
2. ಕೇವಲ 8 ಟಿಎಂಸಿ ನೀರು ಸಿಗುತ್ತದೆ.
3. ಎಲ್ಲಾ ನದಿ ತೊರೆಗಳೆಲ್ಲಾ ನಾಶವಾಗಿದ್ದು, ನದಿ ಮೂಲ ನಾಶವಾಗಿದೆ.
4. ಮೂರು ಸರ್ಕಾರಗಳು ಬದಲಾದರೂ ಯೋಜನೆ ಪೂರ್ಣಗೊಂಡಿಲ್ಲ.5. ನಾಲ್ಕು ವರ್ಷಗಳ ಹಿಂದೆಯೇ ನೀರು ಹರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ ಈಡೇರಿಲ್ಲ.
5. 200 ಅಡಿಗೂ ಹೆಚ್ಚು ನೀರನ್ನು ಮೇಲಕ್ಕೆ ಲಿಫ್ಟ್ ಮಾಡಬೇಕು ಇದು ಸಾಧ್ಯವಿಲ್ಲ.
6. 220 ವ್ಯಾಟ್ ವಿದ್ಯುತ್ ಸಾಮರ್ಥ್ಯ ಬೇಕು.
7. ಇಷ್ಟು ಹಣ ಖರ್ಚು ಮಾಡುವ ಬದಲು ನೂರಾರು ಟಿಎಂಸಿ ನೀರನ್ನು ಕೊಂಡುಕೊಳ್ಳಬಹುದು.

ಈ ಎತ್ತಿನಹೊಳೆ ಯೋಜನೆಯನ್ನು ಒಟ್ಟು 12 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಈಗ ಎಸ್ ಆರ್ ವ್ಯಾಲ್ಯೂ ಪ್ರಕಾರ ಇದರ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೇ ಈಗ ಕೊರೋನಾ ಹಿನ್ನೆಲೆ ಕಾರ್ಮಿಕರಿಲ್ಲದೇ ಕೆಲಸ ಕುಂಠಿತವಾಗಿದೆ. ಯಂತ್ರ ಅಳವಡಿಕೆ ಕಾರ್ಯ ಶೇ,95 ,ರಷ್ಟು ಕೆಲಸ ಮುಗಿದಿದೆ. ಇನ್ನೂ 3.5 ಎಕರೆ ಭೂಮಿ ವಶಪಡಿಸಿಕೊಳ್ಳಬೇಕಿದೆ. ಈ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದ್ದು ಕೆಲವೇ ದಿನಗಳಲ್ಲಿ ಪ್ರಕ್ರಿಯೆ ಮುಗಿಯಲಿದೆ‌. ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೂಡ ಆದಷ್ಟು ಬೇಗ ಮುಗಿಯಲಿದೆ‌.

ಈ ಎತ್ತಿನಹೊಳೆ ಯೋಜನೆಯಲ್ಲಿ ಹಿಂದಿನ ನಾಲ್ಕೈದು ಮಂದಿ ಜಿಲ್ಲಾ ಉಸ್ತುವಾರಿ ಸಚಿವರು ಬದಲಾವಣೆಯಾಗಿದ್ದಾರೆ. ಆದರೂ ಕೂಡ ನೀರು ಹರಿಸಿಲ್ಲ, ಆದರೆ ಈ ಯೋಜನೆ ಕನಸಿನ ಯೋಜನೆಯಾಗಿದ್ದು, ಇದು ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ನೀರು ಹರಿಸುವುದಾಗಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಈವರೆಗೆ ಮೂರು ಸರ್ಕಾರಗಳು ಬದಲಾವಣೆಯಾಗಿವೆ. ಆದರೆ ಕಾಮಗಾರಿ ಪೂರ್ಣಗೊಂಡು ನೀರು ಹರಿಯುತ್ತಾ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಒಟ್ಟಾರೆ ಈಗಲಾದರೂ ಬಯಲು ಸೀಮೆಗೆ ನೀರು ಹರಿಯುತ್ತಾ ಎಂಬುದನ್ನ ಕಾದು ನೋಡಬೇಕಿದೆ.

 
First published: June 22, 2020, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories