ಆಫ್ರಿಕಾ ಖಂಡದಿಂದ ಬಂದ ವಿದೇಶಿಗನಿಗೆ (Ethiopian citizen) ಮಂಕಿಪಾಕ್ಸ್ (Monkeypox) ಇಲ್ಲ ಎಂದು ಟ್ವೀಟ್ ಮಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Health Minister Dr K Sudhakar) ಖಚಿತಪಡಿಸಿದ್ದಾರೆ. ಆಫ್ರಿಕಾ (Africa) ಖಂಡದ ಎಥೋಪಿಯದಿಂದ 55 ವರ್ಷದ ವ್ಯಕ್ತಿ ಬೆಂಗಳೂರಿಗೆ (Bengluru airport) ಆಗಮಿಸಿದ್ದರು. ಈ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣ (Monkeypox symptoms) ಕಂಡುಬಂದಿದ್ದವು. ಈ ಹಿನ್ನೆಲೆ ಐಸೋಲೇಟ್ (Isolate) ಮಾಡಿ ಟೆಸ್ಟ್ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಚಿಕನ್ ಪಾಕ್ಸ್ (Chickenpox) ಎಂದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಮಂಕಿಪಾಕ್ಸ್ ಭೀತಿ ಹಿನ್ನೆಲೆ ವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.
ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದವರಿಗೆ ಐಸೋಲೇಟ್ ಗೆ ಸೂಚನೆ ನೀಡಲಾಗಿದೆ. ಚರ್ಮದ ತೊಂದರೆ, ಕೆಮ್ಮು, ನೆಗಡಿ, ತುರಿಕೆ, ಕಫ, ಜ್ವರ ಬಂದವರಿಗೆ ಪರಿಕ್ಷೆಗೊಳಿಪಡಿಸಲು ಸೂಚಿಸಲಾಗಿದೆ.
ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ರೋಗಿ ಗುಣಮುಖ
ದೇಶದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಕಾಯಿಲೆ ಕಾಣಿಸಿಕೊಂಡು, ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ವ್ಯಕ್ತಿಯೋರ್ವರು ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶನಿವಾರ ತಿಳಿಸಿದ್ದಾರೆ.
A middle aged Ethiopian citizen who had come to Bengaluru earlier this month was subjected to Monkeypox test after he was suspected to have Monkeypox symptoms. His report has now confirmed that it is a case of chickenpox.
1/2
— Dr Sudhakar K (@mla_sudhakar) July 31, 2022
ಕೊಲ್ಲಂನಿಂದ ಬಂದಿದ್ದ 35 ವರ್ಷದ ವ್ಯಕ್ತಿಯನ್ನು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಇದಾಗಿದ್ದರಿಂದ ರಾಷ್ಟ್ರೀಯ ವೈರಾಣು ಸಂಸ್ಥೆ ಸೂಚನೆಯಂತೆ 72 ಗಂಟೆಯಲ್ಲಿ ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ.
ಎರಡು ಬಾರಿಯೂ ಎಲ್ಲಾ ಸ್ಯಾಂಪಲ್ ಗಳಲ್ಲಿ ನೆಗೆಟಿವ್ ವರದಿಯಾಗಿದೆ. ರೋಗಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ಚರ್ಮದ ಮೇಲಿನ ದುದ್ದುಗಳು ಸಂಪೂರ್ಣವಾಗಿ ಗುಣಮುಖವಾಗಿದ್ದು, ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಫಲಿತಾಂಶದಲ್ಲೂ ನೆಗೆಟಿವ್ ವರದಿ
ಆತನ ಕುಟುಂಬ ಸದಸ್ಯರ ಸ್ಯಾಂಪಲ್ ಪರೀಕ್ಷೆ ಫಲಿತಾಂಶದಲ್ಲೂ ನೆಗೆಟಿವ್ ವರದಿಯಾಗಿದೆ. ಪ್ರಸ್ತುತ ಪಾಸಿಟಿವ್ ಕಾಣಿಸಿಕೊಂಡಿದ್ದ ಇತರ ಇಬ್ಬರ ಆರೋಗ್ಯವೂ ಸುಧಾರಿಸಿದೆ. ಇದೇ ರೀತಿಯಲ್ಲಿ ರೋಗ ತಡೆ ಕ್ರಮಗಳು ಮುಂದುವರೆಯಲಿವೆ ಎಂದು ಸಚಿವರು ಹೇಳಿದ್ದಾರೆ. ವಿದೇಶದಿಂದ ಕೇರಳಕ್ಕೆ ಮರಳಿದ್ದ ಕೊಲ್ಲಂ ನಿವಾಸಿಗೆ ಜುಲೈ 14 ರಂದು ಮಂಕಿಪಾಕ್ಸ್ ಲಕ್ಷಣಗಳು ಹಾಗೂ ಪಾಸಿಟಿವ್ ಕಂಡುಬಂದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಜನರ ಆತಂಕ ಪಡುವ ಅಗತ್ಯವಿಲ್ಲ- ಸುಧಾಕರ್
ಮಂಕಿಫಾಕ್ಸ ಕೊರೋನಾದಂತೆ ವೇಗವಾಗಿ ಹರಡುವುದಿಲ್ಲ. ಹುಣ್ಣುಗಳಿಂದ ಹಾಗೂ ರೋಗಿಗಳ ಬಳಸಿದ ವಸ್ತುಗಳ ಬಳಕೆಯಿಂದ ಮಂಕಿಪಾಕ್ಸ್ ಹರಡುತ್ತದೆ. ಪ್ರಕರಣ ಕಂಡು ಬಂದ ಕೂಡಲೇ ರೋಗಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಿದರೆ ತೊಂದರೆ ಇಲ್ಲ. ಈ ಕಾಯಿಲೆಯಿಂದ ಸಾವು ನೋವು ತೀರಾ ಕಡಿಮೆ ಇದ್ದು, ಜನರ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
75 ದೇಶಗಳಲ್ಲಿ ಮಂಕಿಫಾಕ್ಸ್
ಮಂಕಿಪಾಕ್ಸ್ ಸೋಂಕು 75ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಕಾರಣ, ಇದನ್ನು ‘ಜಾಗತಿಕ ಆರೋಗ್ಯ ತುರ್ತುಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜಾಗತಿಕವಾಗಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಈವರೆಗೆ ಐವರು ಮೃತಪಟ್ಟಿದ್ದಾರೆ. ಹಲವು ರಾಷ್ಟ್ರಗಳಿಗೆ ಸೋಂಕು ಅತಿ ವೇಗವಾಗಿ ಹರಡುತ್ತಿದೆ.
ಇದನ್ನೂ ಓದಿ: Black Fever: ಜೀವಕ್ಕೆ ಮಾರಕವೇ ಬ್ಲಾಕ್ ಫೀವರ್? ಇದರ ಗುಣಲಕ್ಷಣಗಳೇನು, ಇದಕ್ಕೆ ಚಿಕಿತ್ಸೆ ಏನು?
ಇದು ಹರಡುತ್ತಿರುವ ವಿವಿಧ ವಿಧಾನಗಳ ಬಗ್ಗೆ ನಮಗೆ ಗೊತ್ತಿರುವುದು ತೀರಾ ಕಡಿಮೆ. ತುರ್ತು ಸ್ಥಿತಿ ಎಂಬುದಾಗಿ ಘೋಷಿಸಲು ರೂಪಿಸಿರುವ ಅಂತರರಾಷ್ಟ್ರೀಯ ಆರೋಗ್ಯ ಮಾನದಂಡಗಳ ಅನ್ವಯವೇ ಈ ಘೋಷಣೆ ಮಾಡಲಾಗಿದೆ’ ಎಂದು ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರಿಯೇಸಸ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ