HOME » NEWS » State » ESSAY WRITING AND DEBATE COMPETITION WINNERS ARE ENJOYING HELICOPTER RIDING AT BELAGAVI CSB LG

ಪ್ರಬಂಧ, ಭಾಷಣ ಸ್ಪರ್ಧೆಯ ವಿಜೇತರಿಗೆ ಹೆಲಿಕಾಪ್ಟರ್ ರೌಂಡ್ಸ್; ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ

ಪ್ರಬಂಧ ಸ್ಪರ್ಧೆ ವಿಜೇತರಾದ ಬೆಳಗಾವಿಯ ವೈಷ್ಣವಿ ಕಡೋಲ್ಕರ್,   ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಬಾಗವಾನ್, ಚಾಮರಾಜನಗರದ ಮಾನಸ ವಿ ಪ್ರಶಸ್ತಿ ಪಡೆದು ಹೆಲಿಕಾಪ್ಟರ್ ‌ನಲ್ಲಿ‌ ಸುತ್ತಾಡಿದರು.

news18-kannada
Updated:January 11, 2021, 2:31 PM IST
ಪ್ರಬಂಧ, ಭಾಷಣ ಸ್ಪರ್ಧೆಯ ವಿಜೇತರಿಗೆ ಹೆಲಿಕಾಪ್ಟರ್ ರೌಂಡ್ಸ್; ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ
ಹೆಲಿಕಾಪ್ಟರ್
  • Share this:
ಬೆಳಗಾವಿ(ಜ.11): ರಾಜ್ಯದಲ್ಲಿ  ಸದಾ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ಗಮನ ಸೆಳೆದಿದೆ.  ಈ ಬಾರಿ ಯುವ ಜನತೆಯನ್ನು ಸೆಳೆಯುವ ದೃಷ್ಟಿಯಿಂದ ಹೆಲಿಕಾಪ್ಟರ್ ರೈಡಿಂಗ್ ಅವಕಾಶ ಕಲ್ಪಿಸಿತು. ಪ್ರಬಂಧ, ಭಾಷಣ ಸ್ಪರ್ಧೆಯ ವಿಜೇತರಿಗೆ ಹೆಲಿಕಾಪ್ಟರ್​​ನಲ್ಲಿ ಸುತ್ತಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ವಾಲ್ಮೀಕಿ ಮೈದಾನದಲ್ಲಿ ಇಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿನ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ಹೆಲಿಕಾಪ್ಟರ್ ನಲ್ಲಿ ಗೋಕಾಕ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಸುತ್ತ ರೌಂಡ್ ಹೊಡೆಯುವ ಮೂಲಕ ವಿಜೇತ ಯುವಕ-ಯುವತಿಯರಿಗೆ ಹೊಸ ಅನುಭವ ನೀಡಿದರು.

ಸ್ಪರ್ಧಾ ವಿಜೇತ ಯುವಕ -ಯುವತಿಯರು ಹೆಲಿಕಾಪ್ಟರ್​​ನ ಜಾಲಿಯಾಗಿ ಸುತ್ತಾಡಿದರು. ಇನ್ನು ಹೆಲಿಕಾಪ್ಟರ್ ನೋಡಲು ಜನ ಜಂಗುಳಿ ಕೂಡಿತ್ತು‌. ವಾಲ್ಮೀಕಿ ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ವಿಶೇಷವಾಗಿ ಯುವ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆರೆದಿದ್ದರು. ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಮೊದಲ ಬಾರಿ ಹೆಲಿಕಾಪ್ಟರ್ ಕಂಡ ಮಕ್ಕಳು ಕುಣಿದು ಕುಪ್ಪಳಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರಾದ ಬೆಳಗಾವಿಯ ವೈಷ್ಣವಿ ಕಡೋಲ್ಕರ್,   ಶಿರಗುಪ್ಪಿಯ ಜ್ಯೋತಿ ಗುದ್ದೀನ, ರಾಯಚೂರಿನ ಸುಧಾ ಕರ್ಲಿ, ಯಾದವಾಡದ ಸಿಮ್ರಾನ್ ಬಾಗವಾನ್, ಚಾಮರಾಜನಗರದ ಮಾನಸ ವಿ ಪ್ರಶಸ್ತಿ ಪಡೆದು ಹೆಲಿಕಾಪ್ಟರ್ ‌ನಲ್ಲಿ‌ ಸುತ್ತಾಡಿದರು.
ಭಾಷಣ ಸ್ಪರ್ಧೆ ವಿಜೇತರಾದ ತೀರ್ಥಹಳ್ಳಿಯ ಪೂಜಾ ತೀರ್ಥಹಳ್ಳಿ, ಘಟಪ್ರಭಾದ ಮುಷ್ರಫ್ ಸಯ್ಯದ, ಕಲಬುರ್ಗಿಯ ಪ್ರಿಯಂಕಾ ಭರಣಿ, ಮೆಳವಂಕಿಯ ಪವಿತ್ರಾ ಹತ್ತರವಾಟ, ಧಾರವಾಡದ ಶ್ವೇತಾ ಜುಗಳೆ, ಕಲಖಾಂಬದ ಶಾಮಲಾ ಭರಮಾ ಹಿರೋಜಿ ಭಾಷಣ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.Bangalore Crime: ಬೆಂಗಳೂರಿನಲ್ಲಿ ಪ್ರೀತಿಯ ನಾಟಕವಾಡಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರು

ಸಮಾರಂಭದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ‌,  ನಮಗಾಗಿ ಹೋರಾಡಿದ ಮಹನಿಯರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಮುಂದೆಯೂ ಸಹ ಮಹಾನ್ ನಾಯಕರ ಜಯಂತಿಯಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು.ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜ್ , ಶಿವಾಜಿ ಮಹಾರಾಜ್ , ಡಾ. ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮಾ ಗಾಂಧಿಜೀ, ಟಿಪ್ಪು ಸುಲ್ತಾನ್  ಸೇರಿ ಅನೇಕ‌ ಮಹನಿಯರು ನಮಗಾಗಿ ಹೋರಾಡಿದ್ದಾರೆ. ಅವರೇನು ಬಡವರಲ್ಲ ಮಹಾರಾಜರು ಆದರೆ ನಮಗಾಗಿ ಆಸ್ತಿ, ಅಂತಸ್ತು ಎಲ್ಲವನ್ನು ತ್ಯಾಗ ಮಾಡಿ,  ಮಾದರಿಯಾಗಿದ್ದಾರೆ ಎಂದರು.

ಮಹಾನ್ ನಾಯಕ ಜಯಂತಿಯಂದು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸುವ‌ ಮೂಲಕ ಮಹಾನ್ ನಾಯಕರ ಬಗ್ಗೆ ಅಪಪ್ರಚಾರ ಮಾಡುವವರಿಗೆ ಈ ವೇದಿಕೆ ಮೂಲಕ ತಕ್ಕ ಉತ್ತರ ನೀಡಿದ್ದೇವೆಂದರು.
Published by: Latha CG
First published: January 11, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories