ಕಾಂಗ್ರೆಸ್​ ಬಳಿಕ ಬಿಜೆಪಿಯಲ್ಲಿ ಭಿನ್ನಮತ; ಯಡಿಯೂರಪ್ಪಗೆ ಬಿಸಿ ತುಪ್ಪವಾದ ಈಶ್ವರಪ್ಪ

news18
Updated:September 7, 2018, 4:52 PM IST
ಕಾಂಗ್ರೆಸ್​ ಬಳಿಕ ಬಿಜೆಪಿಯಲ್ಲಿ ಭಿನ್ನಮತ; ಯಡಿಯೂರಪ್ಪಗೆ ಬಿಸಿ ತುಪ್ಪವಾದ ಈಶ್ವರಪ್ಪ
news18
Updated: September 7, 2018, 4:52 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.07): ಜಾರಕಿಹೊಳಿ- ಹೆಬ್ಬಾಳ್ಕರ್​ ನಡುವಿನ ಕಿತ್ತಾಟದ ಲಾಭಾ ತೆಗೆದುಕೊಳ್ಳಲು ಮುಂದಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಈಗ ತಮ್ಮ ಪಕ್ಷದ  ನಾಯಕರಾದ ಈಶ್ವರಪ್ಪ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.

ಲೋಕಸಭೆಯಲ್ಲಿ 20ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದು ಬರುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿರುವ ಯರಿಯೂರಪ್ಪ ಶಿವಮೊಗ್ಗ ಕ್ಷೇತ್ರದಿಂದ ತಮ್ಮ ಮಗನನ್ನು ಮತ್ತೊಮ್ಮೆ ಲೋಕಸಭೆಗೆ ಕಣಕ್ಕೆ ಇಳಿಸಲು ಸಜ್ಜಾಗಿದ್ದಾರೆ. ಹೈ ಕಮಾಂಡ್​ ಕೂಡ ರಾಘವೇಂದ್ರಗೆ ಟಿಕೆಟ್​ ನೀಡುವುದು ಪಕ್ಕಾ ಎಂದು ಹೇಳುತ್ತಿದೆ.

ಈ ಬೆಳವಣಿಗೆ ನಡುವೆ ಮೊದಲಿನಿಂದಲೂ ಬಿಎಸ್​ವೈ ವಿರುದ್ಧ ಕೋಲ್ಡ್​ವಾರ್​ ನಡೆಸಿರುವ ಈಶ್ವರಪ್ಪ ಹೊಸ ಬಾಂಬ್​ ಸಿಡಿಸಿದ್ದಾರೆ. ಕ್ಷೇತ್ರದಲ್ಲಿ ನಾಲ್ವರು ಬಿಜೆಪಿ ಟಿಕೆಟ್​ ಆಕಾಂಕ್ಷಿಗಳಿದ್ದಾರೆ. ರಾಘವೇಂದ್ರ, ಭಾನುಪ್ರಕಾಶ್, ದತ್ತಾತ್ರಿ, ಚನ್ನಬಸಪ್ಪ ಆಕಾಂಕ್ಷಿಗಳು
ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅದೇ ಅಂತಿಮ ಎಂದಿದ್ದಾರೆ.

ಈ ಮೂಲಕ ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ತೊಡೆತಟ್ಟಲು ಈಶ್ವರಪ್ಪ ಸಜ್ಜಾಗಿದ್ದಾರೆ. ಈ ಹಿಂದೆ ರಾಯಣ್ಣ ಬ್ರಿಗೇಡ್​ ಮೂಲಕ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದ ಈಶ್ವರಪ್ಪ ಮುನಿಸು ಹೈ ಕಮಾಂಡ್​ಗೂ ತಟ್ಟಿತು. ಕೊನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಸಂಧಾನದಲ್ಲಿ ಈಶ್ವರಪ್ಪ, ಬಿಎಸ್​ವೈ ತಣ್ಣಾಗಾಗಿ ವಿಧಾನ ಸಭೆ ಎದುರಿಸಿದ್ದರು.

ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಈಶ್ವರಪ್ಪ ಮತ್ತೆ ಬಲವಾಗಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಪರ ಜನರಿದ್ದು ಬಿಎಸ್​ವೈ ಮಗನಿಗೆ ಟಿಕೆಟ್​ ನೀಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ.
Loading...

ಈಗಾಗಲೇ  ಆತಂರಿಕ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎಂಬ ವರದಿ ಬಂದಿರುವುದರಿಂದ ಆತಂಕದಲ್ಲಿರುವ ಯಡಿಯೂರಪ್ಪ ತಮ್ಮ ಪಕ್ಷ, ತಮ್ಮ ಕ್ಷೇತ್ರದ ನಾಯಕರೇ ಮಗ್ಗಲ ಮುಳ್ಳಾಗಿದ್ದಾರೆ.

ಈಶ್ವರಪ್ಪ ಮತ್ತೆ ಬಂಡಾಯ ಬಾವುಟ ಬೀಸಿರುವುದು ಬಿಎಸ್​ವೈಗೆ ತಲೆನೋವಾಗಿ ಪರಿಣಮಿಸಿದ್ದು. ಈ ಕುರಿತು ಹೈ ಕಮಾಂಡ್​ನಲ್ಲಿ ಚರ್ಚಿಸಲಾಗುವುದು. ಇಷ್ಟುದಿನ ಹೈ ಕಮಾಂಡ್​ ಸೂಚನೆ ಹಿನ್ನಲೆ ಎಲ್ಲವನ್ನು ಸಹಿಸಿಕೊಳ್ಳಲಾಗಿತ್ತು. ಆದರೆ ಇನ್ನು ಕಷ್ಟ. ಈ ಬಗ್ಗೆ ಹೈ ಕಮಾಂಡ್​ ಗಮನಕ್ಕೆ ತರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ ಎನ್ನಲಾಗಿದೆ.

ನಾಳೆ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹೊರಡಲಿರುವ ಯಡಿಯೂರಪ್ಪ ಈಶ್ವರಪ್ಪ ಹೇಳಿಕೆ ಬಗ್ಗೆ ಹೈ ಕಮಾಂಡ್​ ಗಮನಕ್ಕೆ ತರಲು ಮುಂದಾಗಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ​ ಒಳಜಗಳದ ಲಾಭಾ ಪಡೆಯಲು ಮುಂದಾಗಿದ್ದ ಬಿಜೆಪಿಯಲ್ಲೇ ಈಗ ಕೋಲ್ಡ್​ವಾರ್​ ಶುರುವಾಗಿದ್ದು, ಇದು ಯಾವ ಹಂತ ಮುಟ್ಟುತ್ತದೆ ಕಾದು ನೋಡಬೇಕಾಗಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...