ರಾಣೆಬೆನ್ನೂರಿನಲ್ಲಿ ಕೆ.ಎಸ್. ಈಶ್ವರಪ್ಪ ಮಗ ಕಾಂತೇಶ್​ಗೆ ಟಿಕೆಟ್? ಆರ್. ಶಂಕರ್​ಗೆ ಎಂಎಲ್​ಸಿ ಸ್ಥಾನಕ್ಕೆ ಆಫರ್

ಕೆಲ ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿರುವ ಈಶ್ವರಪ್ಪ ಮತ್ತು ಕಾಂತೇಶ್ ಫ್ಯಾನ್ಸ್ ಪೇಜ್​ಗಳಲ್ಲಿ ಕಾಂತೇಶ್ ಅವರೇ ರಾಣೆಬೆನ್ನೂರಿನ ಅಧಿಕೃತ ಬಿಜೆಪಿ ಅಭ್ಯರ್ಥಿ ಎಂಬ ಪೋಸ್ಟರ್​ಗಳು ರಾರಾಜಿಸುತ್ತಿವೆ. ಕಾಂತೇಶ್​ಗೆ ಟಿಕೆಟ್ ಸಿಕ್ಕಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ಈ ಪೇಜ್​ಗಳಲ್ಲಿ ಬರೆದುಕೊಳ್ಳಲಾಗಿದೆ.

news18
Updated:November 14, 2019, 4:04 PM IST
ರಾಣೆಬೆನ್ನೂರಿನಲ್ಲಿ ಕೆ.ಎಸ್. ಈಶ್ವರಪ್ಪ ಮಗ ಕಾಂತೇಶ್​ಗೆ ಟಿಕೆಟ್? ಆರ್. ಶಂಕರ್​ಗೆ ಎಂಎಲ್​ಸಿ ಸ್ಥಾನಕ್ಕೆ ಆಫರ್
ಕಾಂತೇಶ್(ಎಡ) ಮತ್ತು ಈಶ್ವರಪ್ಪ
  • News18
  • Last Updated: November 14, 2019, 4:04 PM IST
  • Share this:
ಬೆಂಗಳೂರು(ನ. 14): ಉಪಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಿಗೆ ಬಿಜೆಪಿ ಇವತ್ತು ಟಿಕೆಟ್ ಘೋಷಣೆ ಮಾಡಿದೆ. ಇವತ್ತು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ರಾಣೆಬೆನ್ನೂರು ಮತ್ತು ಶಿವಾಜಿನಗರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರಿದೆ. ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ಆರೆಸ್ಸೆಸ್ ವಿರೋಧವಿರುವ ಹಿನ್ನೆಲೆಯಲ್ಲಿ ಶಿವಾಜಿನಗರ ಕ್ಷೇತ್ರದ ಟಿಕೆಟ್ ಘೋಷಣೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಆದರೆ, ರಾಣೆಬೆನ್ನೂರಿಗೆ ಟಿಕೆಟ್ ಘೋಷಣೆ ಮಾಡದಿರುವುದು ಅಚ್ಚರಿ ಮೂಡಿಸಿದೆ. ಮೂಲಗಳ ಪ್ರಕಾರ, ಸಚಿವ ಕೆ.ಎಸ್. ಈಶ್ವರಪ್ಪ ಅವರ ಮಗ ಕೆ.ಇ. ಕಾಂತೇಶ್ ಅವರನ್ನು ರಾಣೆಬೆನ್ನೂರು ಕ್ಷೇತ್ರದಿಂದ ಕಣಕ್ಕಿಳಿಸಲು ಹೈಕಮಾಂಡ್ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಪಿಜೆಪಿ ಪಕ್ಷದಿಂದ ಕಣಕ್ಕಿಳಿದು ಜಯಿಸಿದ್ದ ಆರ್. ಶಂಕರ್ ಅವರನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮಾಡಿ, ಸಂಪುಟಕ್ಕೂ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆರ್. ಶಂಕರ್​ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಲೇ ಈ ಭರವಸೆ ಸಿಕ್ಕಿದೆ. ಇದಕ್ಕೆ ಶಂಕರ್ ಒಪ್ಪಿಕೊಂಡಿದ್ದಾರಾ ಇಲ್ಲವಾ ತಿಳಿದುಬಂದಿಲ್ಲ.

ಇದನ್ನೂ ಓದಿ: 13 ಅನರ್ಹ ಶಾಸಕರಿಗೆ ಟಿಕೆಟ್ ಘೋಷಿಸಿದ ಬಿಜೆಪಿ; ರೋಷನ್ ಬೇಗ್, ಶಂಕರ್​ಗೆ ಕೈ ಕೊಟ್ಟ ಕಮಲ

ಈಶ್ವರಪ್ಪ ತಮ್ಮ ಮಗ ಕಾಂತೇಶ್ ಅವರನ್ನು ರಾಜಕಾರಣದ ಮುನ್ನೆಲೆಗೆ ತರಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು. ಬಿ.ಎಲ್. ಸಂತೋಷ್ ಮೂಲಕ ಹೈಕಮಾಂಡ್ ಅನ್ನೂ ಅವರು ಒಪ್ಪಿಸಿದ್ದಾರೆ. ಕೆಲ ದಿನಗಳಿಂದಲೂ ಸೋಷಿಯಲ್ ಮೀಡಿಯಾದಲ್ಲಿರುವ ಈಶ್ವರಪ್ಪ ಮತ್ತು ಕಾಂತೇಶ್ ಫ್ಯಾನ್ಸ್ ಪೇಜ್​ಗಳಲ್ಲಿ ಕಾಂತೇಶ್ ಅವರೇ ರಾಣೆಬೆನ್ನೂರಿನ ಅಧಿಕೃತ ಬಿಜೆಪಿ ಅಭ್ಯರ್ಥಿ ಎಂಬ ಪೋಸ್ಟರ್​ಗಳು ರಾರಾಜಿಸುತ್ತಿವೆ. ಕಾಂತೇಶ್​ಗೆ ಟಿಕೆಟ್ ಸಿಕ್ಕಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ ಎಂದು ಈ ಪೇಜ್​ಗಳಲ್ಲಿ ಬರೆದುಕೊಳ್ಳಲಾಗಿದೆ. ಈಗ ಬಿಜೆಪಿ ಮೂಲಗಳೇ ಕಾಂತೇಶ್ ಪದಾರ್ಪಣೆ ಸುದ್ದಿಯನ್ನು ದೃಢಪಡಿಸಿವೆ.

ರಾಣೆಬೆನ್ನೂರಿನಲ್ಲಿ ಕುರುಬ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಈಶ್ವರಪ್ಪ ಕೂಡ ಆ ಸಮುದಾಯದ ಪ್ರಬಲ ನಾಯಕರಲ್ಲೊಬ್ಬರೆನಿಸಿದ್ದಾರೆ. ಹೀಗಾಗಿ, ಕಾಂತೇಶ್ ಗೆಲುವಿನ ದಾರಿ ಸುಗಮವಾಗಬಹುದು ಎಂಬುದು ಈಶ್ವರಪ್ಪ ಬೆಂಬಲಿಗರ ಲೆಕ್ಕಾಚಾರವಾಗಿದೆ.

ಈಗ ವಿಧಾನಪರಿಷತ್​ನಲ್ಲಿ ಎರಡು ನಾಮನಿರ್ದೇಶನ ಸ್ಥಾನಗಳು ಖಾಲಿ ಇವೆ. ಆರ್. ಶಂಕರ್ ಮತ್ತು ಲಕ್ಷ್ಮಣ ಸವದಿಯನ್ನು ಪರಿಷತ್ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡುವ ಸಾಧ್ಯತೆ ಇಲ್ಲದಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 14, 2019, 3:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading