ಹೆಚ್​ಡಿಕೆಯನ್ನು ಸಿಡಿಕೆ ಎಂದು ವ್ಯಂಗ್ಯ ಮಾಡಿದ ಈಶ್ವರಪ್ಪ; ನಿಮ್ಮ ನಕಲಿ ಸಿಡಿ ಮ್ಯಾಜಿಸ್ಟ್ರೇಟ್​ಗೆ ಕೊಡಿ ಎಂದು ಸವಾಲು

ಈ ರೀತಿಯಾಗಿ ನಕಲಿ ಸಿಡಿ ಬಿಡುಗಡೆ ಮಾಡಿದರೆ ಮತ್ತೇ ಹೀರೋ ಆಗುವುದಿಲ್ಲ. ಬದಲಿಗೆ  ಜೀರೋ ಆಗುತ್ತೀರಾ. ಮಂಗಳೂರಲ್ಲಿ ಏನಾಯ್ತು ಅನ್ನೋದರ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಿರಿ. ಸೋತ ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನ ಮಾಡಿ- ಈಶ್ವರಪ್ಪ

news18-kannada
Updated:January 11, 2020, 5:12 PM IST
ಹೆಚ್​ಡಿಕೆಯನ್ನು ಸಿಡಿಕೆ ಎಂದು ವ್ಯಂಗ್ಯ ಮಾಡಿದ ಈಶ್ವರಪ್ಪ; ನಿಮ್ಮ ನಕಲಿ ಸಿಡಿ ಮ್ಯಾಜಿಸ್ಟ್ರೇಟ್​ಗೆ ಕೊಡಿ ಎಂದು ಸವಾಲು
ಈಶ್ವರಪ್ಪ
  • Share this:
ಬೆಂಗಳೂರು (ಜ.11): ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಇವತ್ತು ಸಿಡಿ ಬಿಡುಗಡೆ ಮಾಡಿರುವುದಕ್ಕೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಹೆಚ್​ಡಿಕೆ ಅವರನ್ನು ಸಿಡಿಕೆ ಎಂದು ಸಂಬೋಧಿಸಿ ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. ಕುಮಾರಸ್ವಾಮಿ ಮತ್ತೊಂದು ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ. ಅವರು ಹೀಗೆ ಮಾಡುತ್ತಿದ್ದರೆ ಜನರೇ ಛೀಮಾರಿ ಹಾಕುತ್ತಾರೆ ಎಂದು ಟೀಕಿಸಿದ ಈಶ್ವರಪ್ಪ, ನೀವು ಮತ್ತೆ ಸಿಎಂ ಆಗೋ ಕನಸು ಕಾಣುತ್ತಿದ್ದರೆ ಬಿಟ್ಟುಬಿಡಿ. ಇನ್ನೂ ಯಾವತ್ತೂ ನೀವು ಸಿಎಂ ಆಗಲ್ಲ ಎಂದು  ಮಾಜಿ ಸಿಎಂ ಕುಮಾರಸ್ವಾಮಿಗೆ ಚಿವುಟಿದ್ದಾರೆ.


ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜೆಡಿಎಸ್​ ಕಾರ್ಯಕರ್ತನ ಕೊಲೆಯಾಗಿತ್ತು. ಆಗ ಹಂತಕನ ಎನ್​ಕೌಂಟರ್​ ಮಾಡಿ ಅಂದಿದ್ದರು. ನನ್ನ ಆಳ್ವಿಕೆಯಲ್ಲಿ ಇಂಥ ಘಟನೆ ನಡೆದಿಲ್ಲ ಅಂತಾರೆ. ಇವರು ಸಿಎಂ ಆದಾಗ ರಾಜಕುಮಾರ್​ ನಿಧನರಾಗಿದ್ದರು. ಆಗ ನಡೆದ ಗಲಭೆಯಲ್ಲಿ ಕೆಲ ಜನರು ಸತ್ತರು. ಇದೆಲ್ಲಾ ಇವರಿಗೆ ನೆನಪಿಲ್ಲವೇ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಗೆ ಯಾವಾಗಲೂ ಮುಖ್ಯಮಂತ್ರಿ ಕುರ್ಚಿಯದ್ದೇ ನೆನಪು. ಅದಕ್ಕೆ ಈ ರೀತಿ ನಕಲಿ ಸಿಡಿ ಬಿಡುಗಡೆ ಮಾಡಿದ್ದಾರೆ. ಮಂಗಳೂರು ಹಿಂಸಾಚಾರದ ಕುರಿತು ನಿಮ್ಮ ಸಿಡಿಗಳನ್ನ ಮ್ಯಾಜಿಸ್ಟ್ರೇಟ್​​ಗೆ ಕೊಡಿ. ಹೇಗಿದ್ದರೂ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸವಾಲು ಹಾಕಿದರು.

ಈ ರೀತಿಯಾಗಿ ನಕಲಿ ಸಿಡಿ ಬಿಡುಗಡೆ ಮಾಡಿದರೆ ಮತ್ತೆ ಹೀರೋ ಆಗುವುದಿಲ್ಲ. ಬದಲಿಗೆ  ಜೀರೋ ಆಗುತ್ತೀರಾ. ಮಂಗಳೂರಲ್ಲಿ ಏನಾಯ್ತು ಅನ್ನೋದರ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಿರಿ. ಸೋತ ನಿಮ್ಮ ಪಕ್ಷವನ್ನು ಮೊದಲು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಕುಟುಕಿದರು.

ಇದನ್ನು ಓದಿ: ಮಂಡ್ಯ ವಿವಿಯನ್ನು ರದ್ದುಗೊಳಿಸಿ, ಸ್ವಾಯತ್ತ ಮಾಡಿದ ಸರ್ಕಾರ; ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು

ರಾಜ್ಯ ಚುನಾವಣಾ ಆಯೋಗದ ನಕಲಿ ಅಧಿಸೂಚನೆ ತಯಾರಿಕೆಯಲ್ಲಿ ಕುಮಾರಸ್ವಾಮಿ ಕೈವಾಡ ಇರಬೇಕು. ಕುಮಾರಸ್ವಾಮಿಗೆ ಏನೂ ಉದ್ಯೋಗವಿಲ್ಲ. ಆದ್ರಿಂದ ಏನಾದ್ರೂ ಮಾಡುತ್ತಿರುತ್ತಾರೆ. ಸಿಎಂ ಆಗಿದ್ದಾಗ ಸಂಜೆ 4 ಗಂಟೆಯಿಂದ ಬೆಳಿಗ್ಗೆವರೆಗೂ ಬ್ಯೂಸಿಯಾಗಿರುತ್ತಿದ್ದರು. ಆ ಸಮಯದಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಕೇಳಬೇಡಿ ಎಂದೂ ಈಶ್ವರಪ್ಪ ಕಿಚಾಯಿಸಿದರು.
First published: January 11, 2020, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading