'ಎರಡು ದಿನದಲ್ಲಿ ಡಿಕೆಶಿ ಅರೆಸ್ಟ್​ ಆಗ್ತಾರೋ, ಸರ್ಕಾರವೇ ಬೀಳುತ್ತೋ ಕಾದುನೋಡಿ'; ಹೊಸ ಬಾಂಬ್​ ಸಿಡಿಸಿದ ಈಶ್ವರಪ್ಪ

news18
Updated:September 8, 2018, 2:53 PM IST
'ಎರಡು ದಿನದಲ್ಲಿ ಡಿಕೆಶಿ ಅರೆಸ್ಟ್​ ಆಗ್ತಾರೋ, ಸರ್ಕಾರವೇ ಬೀಳುತ್ತೋ ಕಾದುನೋಡಿ'; ಹೊಸ ಬಾಂಬ್​ ಸಿಡಿಸಿದ ಈಶ್ವರಪ್ಪ
news18
Updated: September 8, 2018, 2:53 PM IST
ಧರಣೇಶ್​ ಬೂಕನಕೆರೆ, ನ್ಯೂಸ್​ ​18 ಕನ್ನಡ

ನವದೆಹಲಿ (ಸೆ.8): 'ಇನ್ನು ಎರಡು ದಿನ ಕಾದು ನೋಡಿ.. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರವೇ ಬಿದ್ದರೂ ಬೀಳಬಹುದು' ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ ಹೊಸ ಬಾಂಬ್​ ಸಿಡಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಕಚೆಯಾಗುತ್ತಿರುವ ಮುಖ್ಯ ವಿಚಾರಗಳ ಪೈಕಿ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಅಜೆಂಡಾ ಕೂಡ ಒಂದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪನವರ ಅನುಪಸ್ಥಿತಿಯಲ್ಲೇ ಸಾಕಷ್ಟು ಮಹತ್ವದ ಚರ್ಚೆಗಳು ದೆಹಲಿಯಲ್ಲಿ ನಡೆಯುತ್ತಿವೆ. ಈ ನಡುವೆ ದೆಹಲಿಯಲ್ಲಿ ಈಶ್ವರಪ್ಪ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಮಾತನ್ನಾಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಈಗಲೇ ಏನೂ ನಿರ್ಧರಿಸಬೇಡಿ. ಇನ್ನೆರಡು ದಿನಗಳಲ್ಲಿ ಡಿ.ಕೆ. ಶಿವಕುಮಾರ್​ ಅರೆಸ್ಟ್​ ಆಗಬಹುದು ಅಥವಾ ಸರ್ಕಾರವೇ ಉರುಳಿಹೋಗಬಹುದು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂಬ ಸುಳಿವು ನೀಡಿದ್ದಾರೆ. ಇತ್ತ ದೆಹಲಿಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸದೆ ಬೆಂಗಳೂರಿಗೆ ವಾಪಸಾಗಿದ್ದಾರೆ.  ಅವರೇ ಐಟಿಗೆ ಪತ್ರ ಬರೆದು ಡಿಕೆಶಿ ಮೇಲೆ ದಾಳಿ ನಡೆಸುವಂತೆ ಮಾಡಿದ್ದು ಎಂಬ ಆರೋಪವೂ ಕೇಳಿಬರುತ್ತಿವೆ.

ಇತ್ತ, ಡಿಕೆ ಶಿವಕುಮಾರ್​ ಮೇಲೆ ಹವಾಲಾ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸಲು ಇಡಿ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ಸೋಮವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್​ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್​ ಪ್ರವಾಸದಲ್ಲಿದ್ದಾರೆ. ಒಟ್ಟಾರೆ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಹೊಸ ಬದಲಾವಣೆಗಳಾಗುತ್ತಿರುವುದರಿಂದ ಕಾಂಗ್ರೆಸ್​- ಜೆಡಿಎಸ್​ ನಾಯಕರು ತಲೆಬಿಸಿ ಮಾಡಿಕೊಂಡಿರುವುದು ಸುಳ್ಳಲ್ಲ.

 
First published:September 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ