ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾವ ಕುರುಬರನ್ನೂ ಬೆಳೆಯಲು ಬಿಡಲಿಲ್ಲ: K.S.Eshwarappa ಆರೋಪ

Eshwarappa v/s Siddaramaiah: ಹಾನಗಲ್ ಮತ್ತು ಸಿಂದಗಿಯಲ್ಲಿ ಬಿಜೆಪಿ ಗೆದ್ದ ನಂತರ ರಾಜ್ಯದ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿ ಒಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ಈಶ್ವರಪ್ಪ ಭವಿಷ್ಯ ನುಡಿದರು.  

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

  • Share this:
ಹಾವೇರಿ: ಹಾನಗಲ್​​ ವಿಧಾನಸಭೆ ಉಪ ಚುನಾವಣೆ(by election) ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರು ಕ್ಷೇತ್ರದಲ್ಲಿ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸಿಎಂ ಆದಾಗ ಯಾವ ಕುರುಬರನ್ನೂ (kurubas) ಬೆಳೆಯಲು ಬಿಡ್ಲಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಎಚ್.ಎಂ.ರೇವಣ್ಣರನ್ನ ಸ್ವಲ್ಪ ದಿನಗಳು ಇಟ್ಕೊಂಡು ಕಿತ್ತಾಕಿದರು. ಯಾರನ್ನೂ ಸಿದ್ದರಾಮಯ್ಯ ಬೆಳೆಯಲು ಬಿಡ್ಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬಹಿರಂಗವಾಗಿ ಖಂಡಿಸಲೇ ಇಲ್ಲ

ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಮತ್ತು ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು. ಸಲೀಂ ಮತ್ತು ಉಗ್ರಪ್ಪರ ಪಿಸುಮಾತಿನ ಘಟನೆ ಬಗ್ಗೆ ಡಿಕೆಶಿ ತಮಗಾದ ನೋವು ಒಪ್ಕೊಂಡಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷರ ಮೇಲೆ ನೇರವಾಗಿ ಬಹಿರಂಗವಾಗಿ ಆಪಾದನೆಗಳನ್ನ ಮಾಡ್ತಿದ್ರೂ ಸಿದ್ದರಾಮಯ್ಯ ಯಾಕೆ ಖಂಡನೆ ಮಾಡ್ಲಿಲ್ಲ. ಸಿದ್ದರಾಮಯ್ಯ ಅವರೇ ಹೇಳಿ ಮಾಡಿಸಿದರೋ? ಇವರ ಆಂತರಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಹೊರಗೆ ಬಂದಾಗ ಪ್ರತಿಕ್ರಿಯೆ ಕೊಡಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ಮೇಲೆ ಸಿದ್ದರಾಮಯ್ಯ ಅವರಿಗೆ ಆ ಮಾತಿನ ಬಗ್ಗೆ ಒಪ್ಪಿಗೆ ಇತ್ತಾ ಎಂಬ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದರು.

ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಯಾರು?

ನಾವು ಅಲ್ಪಸಂಖ್ಯಾತರ ಉದ್ಧಾರಕರು ಅಂತಾ ಹೇಳ್ತಿದ್ದಾರೆ. ಬರಿ ಸಲೀಂ‌ ಮೇಲೆ ಯಾಕೆ ಕ್ರಮ ತೆಗೆದುಕೊಂಡಿರಿ, ಸ್ಪಷ್ಟನೆ ಕೊಡಿ. ಈಡಿ ರಾಜ್ಯದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ನಡಿತಿದೆ. ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ ಮುಂದಿನ ಸಿಎಂ ನಾವೇ ಅಂತಿದ್ದಾರೆ. ತನ್ವೀರ್ ಶೇಠ್, ಪರಮೇಶ್ವರ ಸಹ ಹೇಳಿದರು. ಕಾಂಗ್ರೆಸ್​​ ಸ್ಪಷ್ಟನೆ ನೀಡಲಿ ಎಂದು ಸವಾಲೆಸೆದರು.

ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ

ಈಗಲೂ ಅವರು ಗೆಲ್ಲೋದಿಲ್ಲ, ಮುಂದಿನ ಚುನಾವಣೇಲೂ ಅವರು ಗೆಲ್ಲೋದಿಲ್ಲ. ಹೀಗಿದ್ದಾಗ ಸಿಎಂ ಸ್ಥಾನದ ಬಗ್ಗೆ ಚರ್ಚೆ ಬೇಕಾ? ಸಿಂದಗಿ ಮತ್ತು ಹಾನಗಲ್ ನಲ್ಲಿ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ವಿಶೇಷವಾಗಿ ಹಿಂದುಳಿದವರು ಈ ಬಾರಿ ಬಿಜೆಪಿ ಕೈ ಬಿಡೋದಿಲ್ಲ ಅನ್ನೋ ತೀರ್ಮಾನ ತಗೊಂಡಿದ್ದಾರೆ. ಕಾಂಗ್ರೆಸ್ ನವರದ್ದು ಕೇವಲ ಘೋಷಣೆ. ನಮ್ಮದು ಕೇವಲ ಘೋಷಣೆ ಅಲ್ಲ, ಇಪ್ಪತ್ತೇಳು ಜನ ಹಿಂದುಳಿದವರಿಗೆ ಕೇಂದ್ರ ಸಂಪುಟದಲ್ಲಿ ತಗೊಂಡಿದ್ದಾರೆ‌. ಇಪ್ಪತ್ತು ಜನ ದಲಿತರನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಈ ರೀತಿ ಹಿಂದುಳಿದವರು ಮತ್ತು ದಲಿತರಿಗೆ ಆದ್ಯತೆ ನೀಡಿದ ನರೇಂದ್ರ ಮೋದಿಯವರಿಗೆ ಅಭಿನಂದನೆ ಎಂದರು. ಹಾನಗಲ್ ಮತ್ತು ಸಿಂದಗಿಯಲ್ಲಿ ಬಿಜೆಪಿ ಗೆದ್ದ ನಂತರ ರಾಜ್ಯದ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ. ಕಾಂಗ್ರೆಸ್ ಪಕ್ಷ ಎರಡು ಭಾಗವಾಗಿ ಒಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ಈಶ್ವರಪ್ಪ ಭವಿಷ್ಯ ನುಡಿದರು.

ಕಂಬಳಿ ವಿಚಾರವಾಗಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು

ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಯಾವುದೇ ಬೇರೆ ಪಕ್ಷದ ಜೊತೆ ತೆಗೆದುಕೊಳ್ಳೋ ಅವಶ್ಯಕತೆ ಇಲ್ಲ. ಬರುವ ಚುನಾವಣೆಯಲ್ಲೂ ಸ್ವತಂತ್ರವಾಗಿಯೂ ಇರ್ತೇವೆ ಎಂದು ಸ್ಪಷ್ಟನೆ ನೀಡಿದರು. ಕಂಬಳಿ ವಿಚಾರವಾಗಿ ಮಾತನಾಡಿ, ಕಂಬಳಿಗೆ ಪಾವಿತ್ರ್ಯತೆ ಬಹಳ ಇದೆ. ಕಂಬಳಿ ಗದ್ದುಗೆ, ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಕಂಬಳಿಯನ್ನ ಧಾರ್ಮಿಕ ಕೆಲಸಗಳಿಗೆ ಬಳಸುತ್ತೇವೆ. ಸಿದ್ದರಾಮಯ್ಯ ಕಂಬಳಿಯನ್ನ ರಾಜಕಾರಣಕ್ಕೆ ಬಳಸ್ತಿರೋದು ನೋವು ತಂದಿದೆ. ರಾಜ್ಯದ ಜನರ ಕ್ಷಮೆ ಕೇಳಬೇಕು. ಕಂಬಳಿ ಯಾವುದೇ ವ್ಯಕ್ತಿ, ಪಕ್ಷದ ಸ್ವತ್ತಲ್ಲ. ಕಂಬಳಿ ಬಳಸಿಕೊಂಡರೆ ಕುರುಬರ ವೋಟು ಬರುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.
Published by:Kavya V
First published: