Haveri: ಪೊಲೀಸರ ಜೊತೆ ಬಾಗಿಲು ಒಡೆದು ಒಳಗೆ ಬನ್ನಿ ಅಂತಾ ಹಾಕಲಾಗಿದ್ದ ಬೋರ್ಡ್ ನೋಡಿ ಬೆಚ್ಚಿಬಿದ್ದ ಜನ..! 

ಮನೆಯ ಬಾಗಿಲಿಗೆ ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನ ಕರೆದುಕೊಂಡು ಬಾಗಿಲು (Main Door) ಒಡೆದು ಒಳಗೆ ಬನ್ನಿರಿ ಅಂತಾ ಹಾಳೆಯಲ್ಲಿ ಬರೆದು ತೂಗು (Board) ಹಾಕಲಾಗಿತ್ತು. ಹೀಗಾಗಿ ಮನೆಯ ಬಾಗಿಲು ಒಡೆದು ನೋಡಿದಾಗ ಅತ್ತಿಗೆ ಜಯಶ್ರೀ ಕೊಲೆಯಾಗಿ ಹೋಗಿದ್ದರು.

ಮನೆ ಮುಂದೆ ಹಾಕಿರುವ ಬೋರ್ಡ್

ಮನೆ ಮುಂದೆ ಹಾಕಿರುವ ಬೋರ್ಡ್

  • Share this:
ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿ (Shiggaon, Haveri) ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಹನುಮಂತಗೌಡ ಪಾಟೀಲರ ಮನೆ ಅಂದ್ರೆ ಅದೊಂದು ಸುಸಂಸ್ಕೃತ ಮತ್ತು ಅಕ್ಷರವಂತರ ಕುಟುಂಬ ಅಂತಲೆ ಹೆಸರುವಾಸಿ ಆಗಿತ್ತಂತೆ. ಕಳೆದ ಕೆಲವು ತಿಂಗಳುಗಳ‌ ಹಿಂದೆಷ್ಟೆ ಹನುಮಂತಗೌಡ ನಿಧನರಾಗಿದ್ರು. ಹನುಮಂತಗೌಡರ ನಿಧನ ನಂತರ ಅವರ ಪತ್ನಿ ಅರವತ್ತಾರು ವರ್ಷ ವಯಸ್ಸಿನ ಜಯಶ್ರೀ ಪಾಟೀಲ್, ಸಹೋದರಿ ಐವತ್ತು ವರ್ಷ ವಯಸ್ಸಿನ ಮಂಜುಳಾ ಪಾಟೀಲ್ ಮತ್ತು ಸಹೋದರ ಮಲ್ಲನಗೌಡ ಪಾಟೀಲ ಒಟ್ಟಿಗೆ ವಾಸವಾಗಿದ್ರು. ಸಹೋದರಿ ಮಂಜುಳಾಳಿಗೆ ಐವತ್ತು ವರ್ಷ ಕಳೆದ್ರೂ ಮದುವೆ (Marriage) ಆಗಿರ್ಲಿಲ್ಲ. ಆದ್ರೆ ನಿನ್ನೆ ಮಲ್ಲನಗೌಡ ಮತ್ತೊಬ್ಬ ಅಕ್ಕನ ಮಗಳ ಮದುವೆಯ ಆಮಂತ್ರಣ ಪತ್ರಿಕೆ (Marriage Invitation Card) ಸಿದ್ದಪಡಿಸೋ ಸಲುವಾಗಿ ಹಾವೇರಿಗೆ (Haveri) ಹೋಗಿದ್ರು. ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಆತನಿಗೆ ಶಾಕ್ ಆಗಿತ್ತು.

ಮನೆಗೆ ಬಂದ ಮಲ್ಲನಗೌಡಗೆ ಶಾಕ್

ಮನೆಯ ಬಾಗಿಲಿಗೆ ಪೊಲೀಸರೊಂದಿಗೆ ನಾಲ್ಕು ಜನ ಊರವರನ್ನ ಕರೆದುಕೊಂಡು ಬಾಗಿಲು (Main Door) ಒಡೆದು ಒಳಗೆ ಬನ್ನಿರಿ ಅಂತಾ ಹಾಳೆಯಲ್ಲಿ ಬರೆದು ತೂಗು (Board) ಹಾಕಲಾಗಿತ್ತು. ಹೀಗಾಗಿ ಮನೆಯ ಬಾಗಿಲು ಒಡೆದು ನೋಡಿದಾಗ ಅತ್ತಿಗೆ ಜಯಶ್ರೀ ಕೊಲೆಯಾಗಿ ಹೋಗಿದ್ದರು. ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತಿಗೆ ಜಯಶ್ರೀಯನ್ನ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ:  ಸುಟ್ರೆ ಬೂದಿ ಆಗ್ತೀನಿ, ಹೂತ್ರೆ ಕೊಳೆತು ಹೋಗ್ತೀನಿ, ಅಂಗಾಂಗ ದಾನ ನೀಡಿ: ವಿಡಿಯೋ ಮಾಡಿ Engineering Student ಆತ್ಮಹತ್ಯೆ

ಪತ್ರ ಬರೆದು ಕೊರಳಲ್ಲಿ ಹಾಕೊಂಡ್ಳು:

ಮಂಜುಳಾ ತನ್ನ ಅತ್ತಿಗೆ ಜಯಶ್ರೀಯನ್ನ ಹತ್ಯೆ ಮಾಡಿ ನಂತರ ತಾನೂ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಹಾಳೆಯಲ್ಲಿ ತನಗೆ ಮದುವೆ ಆಗಿಲ್ಲ, ಅತ್ತಿಗೆ ಮಾನಸಿಕ ಕಿರಕುಳ ನೀಡುತ್ತಿದ್ದಳು. ಇದರಿಂದ ಅತ್ತಿಗೆಯನ್ನ ಕೊಂದು ನಾನೂ ನೇಣಿಗೆ ಶರಣಾಗಿದ್ದೇನೆ ಅಂತಾ ಮಂಜುಳಾ ಬರೆದು, ಅದನ್ನ ಕೊರಳಲ್ಲಿ ಹಾಕಿಕೊಂಡು ನೇಣು‌ ಬಿಗಿದುಕೊಂಡಿದ್ದಾಳೆ.

ಬೆಳಗ್ಗೆ ಮಲ್ಲನಗೌಡ ಮತ್ತು ಸ್ಥಳೀಯರು ಪೊಲೀಸರ (Police) ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಬಸವರಾಜ ಹಳಬಣ್ಣವರ, ಡಿವೈಎಸ್ಪಿ ಕಲ್ಲೇಶಪ್ಪ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬೆರಳಚ್ಚು ತಜ್ಞರು ಮತ್ತು ಶ್ವಾನದಳದ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇದನ್ನೂ ಓದಿ:  ನಾನು ಸತ್ತ ಮೇಲೆ ಬ್ಯಾನರ್ ಹಾಕಿ, Sorry.. I AM GOING TO RIP:  ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಜಯಶ್ರೀ ಕೊಲೆ, ಮಂಜುಳಾ ಆತ್ಮಹತ್ಯೆ

ಅತ್ತಿಗೆ ಜಯಶ್ರೀ ತಲೆಗೆ ಗಾಯವಾಗಿ ರಕ್ತ ಸುರಿದು ಹತ್ಯೆ ಆಗಿದ್ರೆ ನಾದಿನಿ ಮಂಜುಳಾ ನೇಣಿಗೆ ಶರಣಾಗಿದ್ಲು. ಇದು ಸ್ಥಳೀಯರಲ್ಲೂ ಸಹ ಆತಂಕದ ವಾತಾವರಣ ಸೃಷ್ಟಿಸಿತ್ತು. ಕೊಲೆ ಮತ್ತು ಆತ್ಮಹತ್ಯೆ ವಿಷಯ ಈಡಿ ಪಟ್ಟಣದ ತುಂಬೆಲ್ಲ ಹರಡುತ್ತಿದ್ದಂತೆ ಪಟ್ಟಣದ ಜನರು ಬೆಚ್ಚಿ ಬಿದ್ದಿದ್ರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಂತರ ಸ್ಥಳೀಯರ ನೆರವಿನೊಂದಿಗೆ ಇಬ್ಬರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಯ್ತು.

ಕೊಲೆ, ಆತ್ಮಹತ್ಯೆಗೆ ಕಾರಣ ಏನು?

ಸುಮಾರು ವರ್ಷಗಳಿಂದಲೂ ಅತ್ತಿಗೆ ಮತ್ತು ನಾದಿನಿ ತುಂಬ ಅನ್ಯೋನ್ಯತೆಯಿಂದ ಜೀವನ ನಡೆಸ್ತಿದ್ರು. ಇಬ್ಬರೂ ಕೂಡ ವಿದ್ಯಾವಂತ ಮತ್ತು ಸುಸಂಸ್ಕೃತ ಕುಟುಂಬದವರಾಗಿದ್ರು. ಆದ್ರೆ ನಿನ್ನೆ ಅತ್ತಿಗೆ ಮತ್ತು ನಾದಿನಿಯ ನಡುವೆ ಅದೇನಾಗಿತ್ತೋ ಗೊತ್ತಿಲ್ಲ. ನಾದಿನಿಯೆ ಅತ್ತಿಗೆಯನ್ನ ಹತ್ಯೆ ಮಾಡಿ ನಂತರ ತಾನೂ ನೇಣಿಗೆ ಶರಣಾಗಿದ್ಲು. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.

ಈ ವಿಷಯ ಪಟ್ಟಣದಲ್ಲಿ ವೇಗವಾಗಿ ಹರಡಿದ್ದರಿಂದ ಜನರು ಮನೆಯತ್ತ ಆಗಮಿಸಿದ್ದರು. ಮನೆ ಮುಂಭಾಗ ಹಾಕಲಾಗಿದ್ದ ಬೋರ್ಡ್ ಕುತೂಹಲದಿಂದ ನೋಡಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
Published by:Mahmadrafik K
First published: