Engineers Day 2021 : ದೇಶದ ಅತ್ಯುತ್ತಮ ಇಂಜಿನಿಯರ್ ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನ - ಅವರ ಕೊಡುಗೆಗಳ ಬಗ್ಗೆ ನಿಮಗೆಷ್ಟು ಗೊತ್ತು?

Sir. M. Visvesvaraya : ಸೆಪ್ಟೆಂಬರ್ 15, 1861 ರಂದು ಕರ್ನಾಟಕದ ಮುದ್ದೇನಹಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದರು. ಪುಣೆ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಅಲ್ಲದೆ, ಅವರು ನೀರಾವರಿ ಮತ್ತು ಪ್ರವಾಹ ವಿಪತ್ತು ನಿರ್ವಹಣೆಯಲ್ಲಿ ಹೆಸರುವಾಸಿಯಾಗಿದ್ದಾರೆ.  

ಸರ್. ಎಂ. ವಿಶ್ವೇಶ್ವರಯ್ಯ.

ಸರ್. ಎಂ. ವಿಶ್ವೇಶ್ವರಯ್ಯ.

  • Share this:
ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ಅಂಗವಾಗಿ ಇಂಜಿನಿಯರ್ಸ್ ಡೇ 2021 (Engineers Day 202ಅನ್ನು ಇಂದು ಅಂದರೆ  ಸೆಪ್ಟೆಂಬರ್ 15 ರಂದು ದೇಶಾದ್ಯಂತ ಆಚರಿಸಲಾಗುತ್ತದೆ. ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಗಳು  ಬಹಳಷ್ಟು. 1968 ರಿಂದ, ಭಾರತವು ಪ್ರತಿ ವರ್ಷ ಈ ದಿನದಂದು ಎಂಜಿನಿಯರ್ಸ್ ದಿನವನ್ನು ಆಚರಣೆ ಮಾಡುತ್ತಿದೆ.  ಸರ್. ಎಂ.ವಿಶ್ವೇಶ್ವರಯ್ಯ, ಉನ್ನತ ತತ್ವಗಳನ್ನು ಹೊಂದಿದ ವ್ಯಕ್ತಿ, ಭಾರತದಲ್ಲಿ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುವಲ್ಲಿ ಇವರ  ಪಾತ್ರ ಬಹುಮುಖ್ಯವಾಗಿದೆ.

ಅವರ ಯೋಜನೆಗಳು ಒಂದೆರೆಡಲ್ಲ.  ಕರ್ನಾಟಕದ ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಹೈದರಾಬಾದ್‌ನ ಪ್ರವಾಹ ರಕ್ಷಣಾ ವ್ಯವಸ್ಥೆ ಹೀಗೆ ಹಲವಾರು.  ಸರ್. ಎಂ.ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ 15, 1861 ರಂದು ಕರ್ನಾಟಕದ ಮುದ್ದೇನಹಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದರು. ಪುಣೆ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ ಅಲ್ಲದೆ, ಅವರು ನೀರಾವರಿ ಮತ್ತು ಪ್ರವಾಹ ವಿಪತ್ತು ನಿರ್ವಹಣೆಯಲ್ಲಿ ಹೆಸರುವಾಸಿಯಾಗಿದ್ದಾರೆ.

ಸರ್ ವಿಶ್ವೇಶ್ವರಯ್ಯನವರ ಕೊಡುಗೆಗಳು ಇಲ್ಲಿದೆ.

1903 ರಲ್ಲಿ ಖಡಕ್ವಾಸ್ಲಾ ಜಲಾಶಯದಲ್ಲಿ ಪುಣೆಯಲ್ಲಿ ಸ್ಥಾಪಿಸಲಾದ 'ಸ್ವಯಂಚಾಲಿತ ತಡೆ ವಾಟರ್ ಫ್ಲಡ್‌ಗೇಟ್'ಗಳನ್ನು ಸರ್ ವಿಎಂ ವಿನ್ಯಾಸ ಮಾಡಿದ್ದರು.\

ಇದನ್ನೂ ಓದಿ: ದಿನಕ್ಕೆ ರೂ 50 ಹೂಡಿಕೆ ಮಾಡಿ, ಕಡೆಗೆ ಬರೋಬ್ಬರಿ 34 ಲಕ್ಷ ಲಾಭ ಗಳಿಸಿ: ಇಲ್ಲಿದೆ Savings Tips

1917 ರಲ್ಲಿ ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂದು ಕರೆಯಲ್ಪಡುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು  ಸ್ಥಾಪನೆ.

ಇಷ್ಟೇ ಅಲ್ಲದೇ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಜೋಗದ ಶರಾವತಿ ವಿದ್ಯುತ್‌ ಯೋಜನೆ, ಮೈಸೂರು ಸ್ಯಾಂಡಲ್‌ ಸಾಬೂನಿನ ಕಾರ್ಖಾನೆ , ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವ ವಿದ್ಯಾನಿಲಯ ಸ್ಥಾಪನೆ, ಕನ್ನಡ ಸಾಹಿತ್ಯ ಸ್ಥಾಪನೆ ಹೀಗೆ ಮಹತ್ವದ ಕೊಡುಗೆಗಳನ್ನು ನಮ್ಮ ಕನ್ನಡ ನಾಡಿಗೆ ನೀಡಿದ್ದಾರೆ.

ಕರ್ನಾಟಕದ ಕೃಷ್ಣ ರಾಜ ಸಾಗರ ಅಣೆಕಟ್ಟು ಯೋಜನೆಗೆ ಮುಖ್ಯ ಎಂಜಿನಿಯರ್ ಆಗಿ, ಅಣೆಕಟ್ಟು ನಿರ್ಮಿಸಿದ್ದಾರೆ.

1934 ರಲ್ಲಿ ಭಾರತೀಯ ಆರ್ಥಿಕತೆಯನ್ನು ಯೋಜಿಸಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದರು.

ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ. ಪುಣೆ, ಕೊಲ್ಹಾಪುರ, ಸೋಲಾಪುರ, ವಿಜಾಪುರ, ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸಾರ್ವಜನಿಕ ಒಳಿತಿಗಾಗಿ ಕೊಡುಗೆ ನೀಡಿರುವ ಕಾರಣ  ಅವರಿಗೆ ಬ್ರಿಟಿಷ್ ಭಾರತೀಯ ಸಾಮ್ರಾಜ್ಯದ ನೈಟ್ ಕಮಾಂಡರ್ ಎಂಬ ಬಿರುದನ್ನು ನೀಡಲಾಗಿತ್ತು.

ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ಮಿಲಾನ್ ಮತ್ತು ಈಡನ್ ನಗರಗಳಿಗೆ ಭೇಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು.

1955 ರಲ್ಲಿ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಿಗೆ  ಭಾರತದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಲಾಯಿತು.

ವಿಶ್ವೇಶ್ವರಯ್ಯನವರು  ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ತಮ್ಮ ವ್ಯಾಪ್ತಿಯನ್ನು ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ 1911 ರಲ್ಲಿ ಸಂಪದಭಿವೃದ್ಧಿ ಸಮ್ಮೇಳನ (Economic Conference) ವನ್ನು ಪ್ರಾರಂಭಿಸಿದ್ದರು.

ಇದನ್ನೂ ಓದಿ: ವಿಶ್ವದ ಅತ್ಯಂತ ಎತ್ತರವಾದ 5 ಜಲಪಾತಗಳು ಹಾಗೂ ಅವುಗಳ ವಿಶೇಷತೆಗಳು ಇಲ್ಲಿದೆ...

ಅವರು ಅಣೆಕಟ್ಟುಗಳಲ್ಲಿ ನೀರಿನ ವ್ಯರ್ಥ ಹರಿವನ್ನು ತಡೆಗಟ್ಟಲು ಬ್ಲಾಕ್ ವ್ಯವಸ್ಥೆಯ ಸ್ಥಾಪಸಿದರು. ಇದನ್ನು ಮೊದಲು ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ ಸ್ಥಾಪನೆ ಮಾಡಲಾಯಿತು.

ಭಾರತದ ಕೂಡ ಇಂಜಿನಿಯರ್ಸ್​ಗಳ ಕೊಡುಗೆಯನ್ನು ಶ್ಳಾಘನೆ ಮಾಡುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಎಂಜಿನಿಯರ್‌ಗಳಿಗೂ 2021 ರ ಇಂಜಿನಿಯರ್ಸ್ ದಿನದ ಶುಭಾಶಯಗಳು!
Published by:Sandhya M
First published: