ಸ್ವಂತ ಜಮೀನಿಲ್ಲ - 130 ಎಕರೆಯಲ್ಲಿ ಸಾವಯವ ಕೃಷಿ ಮಾಡ್ತಾನೆ ಇಂಜಿನಿಯರಿಂಗ್‌ ಪದವೀಧರ

ತಮ್ಮ ಭೂಮಿಗೆ ಬೇಕಾಗುವ ಗೊಬ್ಬರ ಹಾಗು ರಸಾಯನಿಕಕ್ಕಾಗಿ 45 ದೇಶೀಯ ತಳಿಯ ಗೋವುಗಳನ್ನು ಸಾಕಿಕೊಂಡಿರುವ ಇವರು ಗೋಮೂತ್ರ, ಸೆಗಣಿ, ಹಾಲು, ಮೊಸರು, ತುಪ್ಪ, ಜೇನು ತುಪ್ಪ ಬಳಸಿ ಪಂಚಗವ್ಯವನ್ನು ತಯಾರಿಸುತ್ತಿದ್ದಾರೆ.

ಇಂಜಿನಿಯರ್​

ಇಂಜಿನಿಯರ್​

  • Share this:
ರಾಯಚೂರು(ಮಾ.10) : ಇವರು ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್, ಇವರಿಗೆ ಸ್ವಂತ ಭೂಮಿ ಇಲ್ಲ. ಆದರೆ, 130 ಎಕರೆ ಭೂಮಿಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿ, ಜನರಿಗೆ ಆರೋಗ್ಯ ಪೂರ್ಣ ಅಕ್ಕಿಯನ್ನು ನೀಡುತ್ತಿದ್ದಾರೆ. ಅವರೇ ರಾಯಚೂರು ತಾಲೂಕಿನ ಕಾಡ್ಲೂರಿನ ಯುವಕ ರಮೇಶ ಬೋಸ್.

ಇಂದು ಭತ್ತವನ್ನು ರಸಾಯನಿಕ ಗೊಬ್ಬರ, ಔಷಧಿ ಬಳಕೆ ಮಾಡಿ ಬೆಳೆಯುತ್ತಿರುವುದರಿಂದ ಭತ್ತವು ವಿಷಕಾರಿಯಾಗಿದೆ. ಬಹುತೇಕರು ಅಕ್ಕಿ ಅನ್ನದಿಂದ ದೂರವಾಗುತ್ತಿದ್ದಾರೆ. ಇದನ್ನು ಮನಗಂಡ ಯುವಕ ರಮೇಶ ಬೋಸ್ ಎಂಬುವವರು ಕೃಷಿಯಲ್ಲಿ ಸಾವಯವ (ಗೋ ಆಧಾರಿತ ) ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮುಗಿಸಿದ ತಕ್ಷಣ ಅವರು ಇಂಜಿನಿಯರ್ ಉದ್ಯೋಗಕ್ಕಿಂತ ಆಸಕ್ತಿ ವಹಿಸಿ ತೊಡಗಿಕೊಂಡಿದ್ದು ಕೃಷಿಯಲ್ಲಿ, ಆರಂಭದಿಂದ ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದ, ಅವರಿಗೆ ಈಗಿನ ಕೃಷಿ ಪದ್ದತಿಯಿಂದ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ ಎಂಬ ಭಾವನೆ ಬಂದ ನಂತರ ಸಾವಯವ ಕೃಷಿಯತ್ತ ವಾಲಿದ್ದಾರೆ.

2017 ರಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ರಮೇಶ ಬೋಸ್ 130 ಎಕರೆ ಪ್ರದೇಶವನ್ನು ಪ್ರಯೋಗಾಲಯ ಮಾಡಿದ್ದಾರೆ. ಈ ಮೊದಲು ಭತ್ತ ಬೆಳೆಯಲು ಅನುಸರಿಸುತ್ತಿದ್ದ ಪದ್ದತಿಯಿಂದ ಕೃಷಿ ಭೂಮಿ ಫಲವತ್ತತೆ ಹಾಳಾಗಿದ್ದು, ಮುಂದಿನ‌ ದಿನಗಳಲ್ಲಿ ಭೂಮಿ ಬರಡಾಗುವ ಲಕ್ಷಣವಿದೆ. ಭೂಮಿಯನ್ನು ಫಲವತ್ತಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಅವರು ಪೂರ್ವಜರು ಅನುಸರಿಸುತ್ತಿದ್ದ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ.

ತಮ್ಮ ಭೂಮಿಗೆ ಬೇಕಾಗುವ ಗೊಬ್ಬರ ಹಾಗು ರಸಾಯನಿಕಕ್ಕಾಗಿ 45 ದೇಶೀಯ ತಳಿಯ ಗೋವುಗಳನ್ನು ಸಾಕಿಕೊಂಡಿರುವ ಇವರು ಗೋಮೂತ್ರ, ಸೆಗಣಿ, ಹಾಲು, ಮೊಸರು, ತುಪ್ಪ, ಜೇನು ತುಪ್ಪ ಬಳಸಿ ಪಂಚಗವ್ಯವನ್ನು ತಯಾರಿಸುತ್ತಿದ್ದಾರೆ. ಈ ಪಂಚಗವ್ಯವನ್ನು ಜಮೀನಿಗೆ ಸಿಂಪಡಣೆ ಮಾಡಿ ಭೂಮಿಯ ಸತ್ವವನ್ನು ಹೆಚ್ಚಿಸುತ್ತಿದ್ದಾರೆ.

ಇದನ್ನೂ ಓದಿ : ನಗರ ಸ್ವಚ್ಛತೆಯ ಚಲುವ ಚಾಮರಾಜನಗರ ಅಭಿಯಾನಕ್ಕೆ ಚಾಲನೆ

ಅಡುಗೆ ಎಣ್ಣೆ, ಇಂಗು, ಕೊಬ್ಬರಿ ಎಣ್ಣೆ, ಬೆಲ್ಲ, ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಪೇಸ್ಟ್, ಹೀಗೆ ಇತರ ದ್ರಾವಣಗಳಿಂದ ಕೀಟನಾಶಕ ಮಾಡುತ್ತಿದ್ದು, ಇವುಗಳ ತಯಾರಿಕೆಗಾಗಿ ಪ್ರತ್ಯೇಕ ಪ್ರಯೋಗಾಲಯಗಳನ್ನು ಆರಂಭಿಸಿದ್ದಾರೆ.
First published: