ಕನಕಪುರದ ಸ್ವಗೃಹದಲ್ಲಿ ಇಂದು ಡಿಕೆ ಶಿವಕುಮಾರ್​ ತಾಯಿ ವಿಚಾರಣೆ

85 ವರ್ಷ ವಯಸ್ಸಿನ ಗೌರಮ್ಮ ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಈ ಹಿನ್ನಲೆ ಅವರಿಗೆ ಮನೆಯಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಗೌರಮ್ಮ ಪರ ವಕೀಲರು ವಾದ ಮಂಡಿಸಿದ್ದರು. 

news18-kannada
Updated:February 11, 2020, 11:17 AM IST
ಕನಕಪುರದ ಸ್ವಗೃಹದಲ್ಲಿ ಇಂದು ಡಿಕೆ ಶಿವಕುಮಾರ್​ ತಾಯಿ ವಿಚಾರಣೆ
85 ವರ್ಷ ವಯಸ್ಸಿನ ಗೌರಮ್ಮ ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಈ ಹಿನ್ನಲೆ ಅವರಿಗೆ ಮನೆಯಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಗೌರಮ್ಮ ಪರ ವಕೀಲರು ವಾದ ಮಂಡಿಸಿದ್ದರು. 
  • Share this:
ರಾಮನಗರ (ಫೆ.11): ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆ ಶಿವಕುಮಾರ್​ ಅವರ ತಾಯಿ ಗೌರಮ್ಮ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. 

ವಿಚಾರಣೆಗೆ ದೆಹಲಿಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್​ ಪ್ರಶ್ನಿಸಿ ಗೌರಮ್ಮ ಅವರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು. ದೆಹಲಿಗೆ ಹೋಗಿ ವಿಚಾರಣೆ ಎದುರಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರಿನಲ್ಲೇ ಇಡಿ ವಿಚಾರಣೆಗೆ ಅವಕಾಶ ಮಾಡಿಕೊಡಿ ಎಂದು  ನ್ಯಾಯಾಲಯದ ಅನುಮತಿ ಕೋರಿದ್ದರು. ಅದರಂತೆ ಅವರನ್ನು ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ವಿಚಾರಣೆ ನಡೆಸಲು ಹೈ ಕೋರ್ಟ್​ ಅವಕಾಶ ನೀಡಿತು.

85 ವರ್ಷ ವಯಸ್ಸಿನ ಗೌರಮ್ಮ ವಿಚಾರಣೆಗಾಗಿ ದೆಹಲಿಗೆ ಬರಲು ಸಾಧ್ಯವಿಲ್ಲ. ಈ ಹಿನ್ನಲೆ ಅವರಿಗೆ ಮನೆಯಲ್ಲಿ ವಿಚಾರಣೆ ನಡೆಸಲು ಅವಕಾಶ ನೀಡಬೇಕು ಎಂದು ಈ ಹಿಂದೆ ಗೌರಮ್ಮ ಪರ ವಕೀಲರು ವಾದ ಮಂಡಿಸಿದ್ದರು.

ಗೌರಮ್ಮ ಅವರ ವಾದ ಆಲಿಸಿದ ಹೈ ಕೋರ್ಟ್​ ಕಳೆದ ಡಿಸೆಂಬರ್​ 19ರಂದು ಅವರನ್ನು ಮನೆಯಲ್ಲಿಯೇ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಬೇಕು. ಅಲ್ಲದೇ  ಭಾಷೆಯ ತೊಡಕು ಇರುವ ಹಿನ್ನೆಲೆ ಅವರಿಗೆ ಕನ್ನಡದಲ್ಲಿಯೇ ಪ್ರಶ್ನೆಗಳನ್ನೇ ಕೇಳಬೇಕು. ಅಲ್ಲದೆ ವಿಚಾರಣೆಯ ಕುರಿತು ಸಂಪೂರ್ಣ ಆಡಿಯೋ ದಾಖಲಿಸಬೇಕು ಎಂದು ರಾಮನಗರ ಎಸ್ಪಿಗೆ ಹೈ ಕೋರ್ಟ್​ಗೆ ಸೂಚನೆ ನೀಡಿತು. ಅದರಂತೆ ಅಧಿಕಾರಿಗಳು ಇಂದು ವಿಚಾರಣೆ ನಡೆಸಲಿದ್ದಾರೆ.

ಇದನ್ನು ಓದಿ: ಶುರುವಾಗಲಿದೆಯಾ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು; ಯಾರಿಗೆ ಒಲಿಯಲಿದೆ ಪಟ್ಟ?

ಡಿಕೆ ಶಿವಕುಮಾರ್​ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಇಡಿ ಅಧಿಕಾರಿಗಳು ಅವರ ತಾಯಿ, ಪತ್ನಿ, ಹಾಗೂ ಮಗಳು ಐಶ್ವರ್ಯಾ ಸೇರಿದಂತೆ 50 ಜನರಿಗೆ ಈ ಹಿಂದೆ ಸಮನ್ಸ್​ ಜಾರಿ ಮಾಡಿತ್ತು. ಅದರಂತೆ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿವಾಸದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ
First published:February 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading