ಮಾಜಿ ಸಚಿವ ಕೆ.ಜೆ.ಜಾರ್ಜ್​ಗೆ ಇಡಿ ಶಾಕ್; ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸಮನ್ಸ್ ಜಾರಿ

ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಕೆ.ಜೆ.ಜಾರ್ಜ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. 

HR Ramesh | news18-kannada
Updated:January 14, 2020, 4:12 PM IST
ಮಾಜಿ ಸಚಿವ ಕೆ.ಜೆ.ಜಾರ್ಜ್​ಗೆ ಇಡಿ ಶಾಕ್; ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸಮನ್ಸ್ ಜಾರಿ
ಕೆ.ಜೆ.ಜಾರ್ಜ್ ಅವರಿಗೆ ಇ.ಡಿ.ನೀಡಿರುವ ಸಮನ್ಸ್.
  • Share this:
ಬೆಂಗಳೂರು: ಮಾಜಿ ಸಚಿವ ಕೆಜೆ ಜಾರ್ಜ್​ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿ ಮಾಡುವ ಮೂಲಕ ಶಾಕ್ ನೀಡಿದೆ.

ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ ಆರೋಪ ಸಂಬಂಧ ಕಾಂಗ್ರೆಸ್ ಹಿರಿಯ ನಾಯಕ ಕೆ.ಜೆ.ಜಾರ್ಜ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ವಿದೇಶದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಮಾಹಿತಿ ಇಡಿ ಲಭ್ಯವಾಗಿದೆ. ಹೀಗಾಗಿ ಕೆ.ಜೆ. ಜಾರ್ಜ್, ಅವರ ಹೆಂಡತಿ ಸುಜಾ ಜಾರ್ಜ್, ಮಕ್ಕಳಾದ ರಾಣಾ ಹಾಗೂ ರೆನಿಟಾ ಇವರ ಖಾತೆ ಮಾಹಿತಿ ಹಾಗೂ ದೇಶ- ವಿದೇಶದಲ್ಲಿರುವ ಸ್ಥಿರ ಹಾಗೂ ಚರಾಸ್ತಿ ಮಾಹಿತಿ ಕೋರಿ ಫೆಮಾ ಆಕ್ಟ್ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮಾಹಿತಿ ಕೇಳಿ, ಇದೇ ತಿಂಗಳ 16 ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಇದನ್ನು ಓದಿ: ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಬಿಕ್ಕಟ್ಟು​: ಆತಂಕದಲ್ಲಿ ಠೇವಣಿದಾರ, ತೇಜಸ್ವಿ ಸೂರ್ಯ ಹಿತ ಕಾಪಾಡುವ ಅಭಯ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading