Lake Encroachment: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ಸರ್ಕಾರಿ ಸಂಸ್ಥೆಗಳಿಂದಲೇ ಬೆಂಗಳೂರಿನ ಕೆರೆ ಒತ್ತುವರಿ!

ನಗರದ ಬಹುತೇಕ ಕೆರೆ ಒತ್ತುವರಿ ಮಾಡಿ ನುಂಗಿ ನೀರು ಕುಡಿದಿರುವುದು ಸರ್ಕಾರಿ ಸಂಸ್ಥೆಗಳೇ ಹೊರತು ಬೇರೆಯಾರೂ ಅಲ್ಲ. ಅಸಲಿಗೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ನಗರದಲ್ಲಿ ಬಿಡಿಎ ಅತಿ ಹೆಚ್ಚು ಒತ್ತುವರಿ ಮಾಡಿ ಬಹುತೇಕ ಕೆರೆಗಳನ್ನು ಸ್ವಾಹ ಮಾಡಿದೆ.

ಬಿಬಿಎಂಪಿ

ಬಿಬಿಎಂಪಿ

  • Share this:
ಬೆಂಗಳೂರಿನ ಕೆರೆ ಒತ್ತುವರಿಯಲ್ಲಿ (Lake Encroachment) ಅಸಲಿ ಆರೋಪಿಗಳು ಯಾರು ಅಂತ ಕೇಳಿದರೆ ಇವರೇ ಅಂತ ಎನ್ನಬಹುದು. ಯಾಕಂದ್ರೆ ಜನಸಾಮಾನ್ಯರ ಒತ್ತುವರಿ ಮಾಡಿದ್ದಕ್ಕಿಂತ ಹತ್ತಾರು ಒಟ್ಟು ಜಮೀನನ್ನು ಬೆಂಗಳೂರಲ್ಲಿ ಸರ್ಕಾರದ ಅಂಗ ಸಂಸ್ಥೆಗಳೇ (Government Agency) ನುಂಗಿ ನೀರು ಕುಡಿದಿದೆ. ಅಸಲಿಗೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ನಗರದಲ್ಲಿ ಬಿಡಿಎ (BDA) ಅತಿ ಹೆಚ್ಚು ಒತ್ತುವರಿ ಮಾಡಿ ಬಹುತೇಕ ಕೆರೆಗಳನ್ನು ಸ್ವಾಹ ಮಾಡಿದೆ. 

ಬಿಬಿಎಂಪಿ, ಬಿಡಿಎ, ಬೆಂಗಳೂರು ಒತ್ತುವರಿ ಮಾಡಿರುವ ಪಟ್ಟಿಯಲ್ಲೇ ಇವರೇ ಫಸ್ಟ್ !!

ಇಷ್ಟೂ ದಿನ ಬೆಂಗಳೂರಿನ ಭೂಗಳ್ಳರು ಕಂಪನಿಗಳು, ಜನಸಾಮಾನ್ಯರು ಅಂತಿದ್ದ ಬಿಬಿಎಂಪಿ ನಿಜ ಬಣ್ಣ ಈಗ ಬಯಲಾಗಿದೆ. ನಗರದ ಬಹುತೇಕ ಕೆರೆ ಒತ್ತುವರಿ ಮಾಡಿ ನುಂಗಿ ನೀರು ಕುಡಿದಿರುವುದು ಸರ್ಕಾರಿ ಸಂಸ್ಥೆಗಳೇ ಹೊರತು ಬೇರೆಯಾರೂ ಅಲ್ಲ. ಅಸಲಿಗೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ. ನಗರದಲ್ಲಿ ಬಿಡಿಎ ಅತಿ ಹೆಚ್ಚು ಒತ್ತುವರಿ ಮಾಡಿ ಬಹುತೇಕ ಕೆರೆಗಳನ್ನು ಸ್ವಾಹ ಮಾಡಿದೆ. ತದನಂತರ ಬಿಬಿಎಂಪಿ, ಸ್ಲಂ ಬೋರ್ಡ್, ಗೃಹ ಮಂಡಳಿ, ಅಗ್ನಿಶಾಮಕ ಇಲಾಖೆ ಹೀಗೆ ಸಾಲು ಸಾಲು ಸರ್ಕಾರಿ ಸಂಸ್ಥೆಗಳು ಬೇಕಾಬಿಟ್ಟಿ ಒತ್ತುವರಿ ಮಾಡಿಕೊಂಡು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದೆ.

ಕೆರೆ ಒತ್ತುವರಿ ವಲಯವಾರು ಲೆಕ್ಕ :

ಬೊಮ್ಮನಹಳ್ಳಿ ವಲಯ :

ಒಟ್ಟು ಕೆರೆಗಳ ಸಂಖ್ಯೆ - 47

ಒಟ್ಟು ಜಾಗ - 1,167 ಎಕರೆ

ಒತ್ತುವರಿ - 196.33 ಎಕರೆ

ಒತ್ತುವರಿ ತೆರವು ಬಾಕಿ - 196 ಎಕರೆ

ಬೊಮ್ಮನಹಳ್ಳಿ ವಲಯ ಒತ್ತುವರಿದಾರರು :

ಬಿಡಿಎ - 59ಎಕ್ಕರೆ ಒತ್ತುವರಿ

ಸ್ಲಂ ಬೋರ್ಡ್ - 25.76 ಎಕರೆ

ಬಿಬಿಎಂಪಿ - 2.43 ಎಕರೆ

ಬೆಂಗಳೂರು ದಕ್ಷಿಣ ವಲಯ , ಒಟ್ಟು ಕೆರೆಗಳ ಸಂಖ್ಯೆ -12

ಒಟ್ಟು ಜಾಗ -162.7   ಎಕರೆ

ಒತ್ತುವರಿ -  77.19 ಎಕರೆ

ಒತ್ತುವರಿ ತೆರವು ಬಾಕಿ - 77.19  ಎಕರೆ

ಬೆಂಗಳೂರು ದಕ್ಷಿಣ ವಲಯ ಒತ್ತುವರಿದಾರರು :

ಬಿಬಿಎಂಪಿ  -  2.45 ಎಕ್ರೆ ಒತ್ತುವರಿ

ಬಿಡಿಎ  -  1 ಎಕರೆ

ಸ್ಲಂ ಬೋರ್ಡ್ - 0.22

KHB - 0.8

ಮಹಾದೇವ ಪುರ ವಲಯ : ಕೆರೆಗಳ ಸಂಖ್ಯೆ - 52

ಒಟ್ಟು ಜಾಗ -1845.6  ಎಕರೆ

ಒತ್ತುವರಿ -  225.15 ಎಕರೆ

ಒತ್ತುವರಿ ತೆರವು ಬಾಕಿ -  2142 ಎಕರೆ

ಮಹಾದೇವ ಪುರ ವಲಯ ಒತ್ತುವರಿದಾರರು :

ಮಿಲಿಟರಿ - 131 ಎಕರೆ

ಕೆಐಎಡಿ ಬಿ- 0.6

BWSSB - ೦.13

ಯಲಹಂಕ ವಲಯ : ಕೆರೆಗಳ ಸಂಖ್ಯೆ - 28

ಒಟ್ಟು ಜಾಗ -1371.20 ಎಕರೆ

ಒತ್ತುವರಿ -  133.5 ಎಕರೆ

ಒತ್ತುವರಿ ತೆರವು ಬಾಕಿ -  50.21 ಎಕರೆ

ಯಲಹಂಕ ವಲಯ ಒತ್ತುವರಿದಾರರು :

ರೈಲ್ವೆ ಇಲಾಖೆ - 5.19

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ - 4.5 ಎಕರೆ

ಬಿಬಿಎಂಪಿ - 3.2 ಎಕರೆ

BWSSB - 0.44 ಎಕರೆ

ಕೆಹೆಚ್ ಬಿ- 0.33 ಎಕರೆ

ಪೂರ್ವ ವಲಯ : ಕೆರೆಗಳ ಸಂಖ್ಯೆ - 10

ಒಟ್ಟು ಜಾಗ - 303.24 ಎಕರೆ

ಒತ್ತುವರಿ -  116.35 ಎಕರೆ

ಒತ್ತುವರಿ ತೆರವು ಬಾಕಿ -  113.32 ಎಕರೆ
ಪೂರ್ವ ವಲಯ ಒತ್ತುವರಿದಾರರು :
ಬಿಡಿಎ - 47.7 ಎಕರೆ

ಅರಣ್ಯ ಇಲಾಖೆ - 13.23

ರೈಲ್ವೆ ಇಲಾಖೆ - 1.19 ಎಕರೆ

ಅಗ್ನಿಶಾಮಕ ಇಲಾಖೆ - . 30 ಎಕರೆ

ಆರ್ ಆರ್ ನಗರ ವಲಯ : ಕೆರೆಗಳ ಸಂಖ್ಯೆ - 37

ಒಟ್ಟು ಜಾಗ - 852 ಎಕರೆ

ಒತ್ತುವರಿ -  160.6 ಎಕರೆ

ಒತ್ತುವರಿ ತೆರವು ಬಾಕಿ -  160.6 ಎಕರೆ
ಆರ್ ಆರ್ ನಗರ ಒತ್ತುವರಿದಾರರು :
ಬಿಬಿಎಂಪಿ - 71.84 ಎಕರೆ

ಬಿಡಿಎ - 2.24 ಎಕರೆ

ಪಶ್ಚಿಮ ವಲಯ : ಕೆರೆಗಳ ಸಂಖ್ಯೆ - 6

ಒಟ್ಟು ಜಾಗ - 86 ಎಕರೆ

ಒತ್ತುವರಿ -  30 ಎಕರೆ

ಒತ್ತುವರಿ ತೆರವು ಬಾಕಿ -  29.34 ಎಕರೆ
ಪಶ್ಚಿಮ ವಲಯ ಒತ್ತುವರಿದಾರರು :
ಕರ್ನಾಟಕ ಮಾಲಿನ್ಯ ಮಂಡಳಿ - 15.24 ಎಕರೆ

ಬಿಬಿಎಂಪಿ - 8.35 ಎಕರೆ

ಸ್ಲಂ ಬೋರ್ಡ್ - 2.02ಎಕರೆ

There are many doubts about the illegal encroachment clearance operation of BBMP
ಒತ್ತುವರಿ ತೆರವು ಮುಕ್ತಾಯ!?


ಒಂದಲ್ಲಾ ಎರಡಲ್ಲಾ.. ನೂರಾರು ಎಕರೆ ಜಮೀನು ನುಂಗಿ ನೀರು ಕುಡಿದ BDA !!



ಈ ಲೆಕ್ಕ ನೋಡಿದರೆ ಬೆಂಗಳೂರು ಮುಳುಗಲು ಇವರೇ ಮೊದಲ ಕಾರಣ ಎಂಬುವುದು ಸಾಬೀತಾಗಿದೆ. ಬಿಬಿಎಂಪಿ ವ್ಯಾಪ್ತಿಯ ನಗರದ ಎಂಟು ವಲಯದಲ್ಲಿಯೂ ಸರ್ಕಾರಿ ಸಂಸ್ಥೆಗಳಿಂದ ರಾಜಾರೋಷವಾಗಿ ಅಕ್ರಮ ಭೂ ಕಬಳಿಕೆ ನಡೆದಿದೆ.‌ ಹೀಗೆ ನೂರಾರು ಎಕ್ಕರೆ ಕೆರೆ ಜಾಗ ಗುಳುಂ ಮಾಡಿದ ಬಿಡಿಎ, ಬಿಬಿಎಂಪಿ ಸೇರಿದ ಸರ್ಕಾರಿ ಅಂಗಸಂಸ್ಥೆಗಳ ವಿರುದ್ಧ ಸರ್ಕಾರ ಇನ್ನೂ ಗಪ್ ಚುಪ್ ಆಗಿ ಕೂತಿರೋದು ವಿಪರ್ಯಾಸ.‌

ಒತ್ತುವರಿ ಮಾಹಿತಿ ಕೊಡುವಂತೆ BDAಗೆ ನೋಟಿಸ್ ಕೊಟ್ಟ ಬಿಬಿಎಂಪಿ !!

ಸರ್ಕಾರಿ ಸಂಸ್ಥೆಗಳಿಂದಲೇ ಅಕ್ರಮ ಒತ್ತುವರಿಯಾಗಿರೋದು ಬಿಬಿಎಂಪಿ ಒಪ್ಪಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್, 208 ಕೆರೆಗಳು ನಗರದಲ್ಲಿವೆ.  ಇದರಲ್ಲಿ 201 ಕೆರೆಗಳು ಪಾಲಿಕೆಗೆ ಸೇರಿದ್ದು. ಬೇರೆ ಬೇರೆ ಸಮಿತಿಯ ವರದಿಯಂತೆ ನಾವು ಕ್ರಮ ತೆಗೆದುಕೊಂಡಿದ್ದೇವೆ.‌ ಅತಿ ಹೆಚ್ಚು ಒತ್ತುವರಿ ಮಾಡಿರೋದು‌ ಬಿಡಿಎ ಅಂತ ಗೊತ್ತಾಗಿದೆ. ಅವರು ಅಧಿಕೃತ ಹಾಗೂ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಈ ಬಗ್ಗೆ ಸ್ಪಷ್ಟನೆ ಕೇಳಿ ನಾವು ನೋಟೀಸ್ ಕೊಟ್ಟಿದ್ದೆವು. ಈಗ ಅವರು ಈ ಬಗ್ಗೆ ನಮಗೆ ಮಾಹಿತಿ ಕೊಟ್ಟಿದ್ದಾರೆ. ಸರ್ಕಾರಿ ಸಂಸ್ಥೆಗಳಿಂದಲೂ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಒಟ್ಟಾರೆ ಬೆಂಗಳೂರು ಭೂಗಳ್ಳರ ಕೈಯಲ್ಲಿದೆ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಅಕ್ರಮ ಒತ್ತುವರಿ ತೆರವು ಅಂತ ಜನಸಾಮಾನ್ಯರ ಮೇಲೆ ಪಾಲಿಕೆ ಎಗರಾಡುತ್ತಿದೆ.‌ ಆದರೆ ತಾವು ಹಾಗೂ ತಮ್ಮದೇ ರೀತಿಯಲ್ಲಿನ ಸರ್ಕಾರಿ ಅಧೀನದ ಸಂಸ್ಥೆಗಳೇ ಮಾಡಿರುವ ಅಕ್ರಮದ ಬಗ್ಗೆ ಗಪ್ ಚುಪ್ ಎಂದಿದೆ.
Published by:ಪಾವನ ಎಚ್ ಎಸ್
First published: