ಹಾವೇರಿ: ಏಲಕ್ಕಿ ಕಂಪಿನಿ ನಾಡು ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Kannada Sahitya Sammenalana) ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯ ಜೊತೆ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಸಮ್ಮೇಳನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ (CM Bsavaraj Bommai) ಜೊತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಚಾಲನೆ ನೀಡಿದರು. ಸಮ್ಮೇಳನಕ್ಕೆ ಜನಸಾಗರವೇ ಹರಿದು ಬಂದು ಕನ್ನಡ ಹಬ್ಬಕ್ಕೆ ಶುಭ ಹಾರೈಸಿದರು. ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕೈಗಾರಿಕೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡುವ ಸಲುವಾಗಿ ನೂತನ ಉದ್ಯೋಗ ನೀತಿಯನ್ನು (New Employment Policy) ಜಾರಿಗೆ ತಂದಿದ್ದೇವೆ. ಶೇ.80 ರಷ್ಟು ಕನ್ನಡಿಗರಿಗೆ ಉದ್ಯೋಗ (Kannadigas) ದೊರೆಯಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದು ಹೇಳಿದರು.
ಕನ್ನಡ ನಾಡಿನ ಸಮಗ್ರ ಅಭಿವೃದ್ಧಿ ಜೊತೆಗೆ ಗಡಿನಾಡಿನ ಅಭಿವೃದ್ಧಿ ಹಾಗೂ ಸಂರಕ್ಷಣೆಗೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಿಎಂ ತಿಳಿಸಿದರು.
ಸಮ್ಮೇಳನದ ನಿರ್ಣಯ ಪಾಲನೆ
ಸಾಹಿತ್ಯ ಸಮ್ಮೇಳನ ಎಂದರೇ ಕೇವಲ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವಲ್ಲ. ಸಾಹಿತ್ಯ ಸಮ್ಮೇಳನದ ನಿಜವಾದ ಸ್ವಾದ ಅಡಗಿರುವುದು ಗೋಷ್ಠಿಗಳಲ್ಲಿ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಈ ಸಮ್ಮೇಳನವನ್ನು ಯಶಸ್ವಿಗೊಳಿಸೋಣ. ಈ ಸಮ್ಮೇಳನದ ನಿರ್ಣಯವನ್ನು ನಮ್ಮ ಸರ್ಕಾರ ಚಾಚೂ ತಪ್ಪದೆ ಜಾರಿಗೆ ತರಲಿದೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ಭರವಸೆಯನ್ನು ನೀಡಿದರು.
ತವರು ಜಿಲ್ಲೆಯಲ್ಲಿ ನಡೆಯುತ್ತಿರೋದಕ್ಕೆ ಸಂತಸ
ಇಂದು ನನ್ನ ತವರು ಜಿಲ್ಲೆ ಹಾವೇರಿಯಲ್ಲಿ ಆರಂಭವಾದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದೆನು.ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿಯೇ ನನ್ನ ತವರು ಜಿಲ್ಲೆಯಲ್ಲಿಯೇ ಸಮ್ಮೇಳನ ಆಯೋಜನೆಯಾಗಿರುವುದು ನನಗೆ ಬಹಳ ಸಂತಸ ತಂದಿದೆ ಎಂದರು.
ಇದು ಶ್ರೇಷ್ಠ ದಾರ್ಶನಿಕರ ನಾಡು
ಹಾವೇರಿ ಜಿಲ್ಲೆ ಶ್ರೇಷ್ಠ ದಾರ್ಶನಿಕರ ನಾಡು. ಸರ್ವಕಾಲಕ್ಕೂ ಸತ್ಯವನ್ನೇ ನುಡಿದ ಸರ್ವಜ್ಞ, ದಾಸ ಶ್ರೇಷ್ಠ ಭಕ್ತ ಕನಕದಾಸ, ಸಂತ ಶಿಶುನಾಳ ಶರೀಫ, ಪೂಜ್ಯ ಪಂಚಾಕ್ಷರಿ ಗವಾಯಿಗಳು, ಪೂಜ್ಯ ಗುರು ಕುಮಾರೇಶ್ವರರು, ಗಳಗನಾಥರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೆ.ಗೋಕಾಕ್ ರವರು, ಮುಕ್ತ ಹಾಗೂ ನಿರ್ಭೀತ ಪತ್ರಕರ್ತರಾದ ಪಾಟೀಲ ಪುಟ್ಟಪ್ಪ ಹಾಗೂ ಚಂದ್ರಶೇಖರ ಪಾಟೀಲರವರು ಹಾವೇರಿ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಕೈಗಾರಿಕೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡುವ ಸಲುವಾಗಿ ನೂತನ ಉದ್ಯೋಗ ನೀತಿಯನ್ನು ಜಾರಿಗೆ ತಂದಿದ್ದೇವೆ. ಶೇ.80 ರಷ್ಟು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ.ಕನ್ನಡ ನಾಡಿನ ಸಮಗ್ರ ಅಭಿವೃದ್ಧಿ ಜೊತೆಗೆ ಗಡಿನಾಡಿನ ಅಭಿವೃದ್ಧಿ ಹಾಗೂ ಸಂರಕ್ಷಣೆಗೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. pic.twitter.com/cijw4iRrkj
— Basavaraj S Bommai (@BSBommai) January 6, 2023
ಸಮ್ಮೇಳನ ಉದ್ಘಾಟನೆಗೂ ಮುನ್ನ ಸಂಪ್ರದಾಯದಂತೆ ಸಮ್ಮೇಳನಾಧ್ಯಕ್ಷ ಪ್ರೋ. ದೊಡ್ಡರಂಗೇಗೌಡರನ್ನ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯ್ತು. ಭವ್ಯ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಕುಣಿತ, ವೀರಗಾಸೆ ವಿವಿಧ ಕಲಾತಂಡಗಳ ಮೆರುಗಿತ್ತು.
ಇದನ್ನೂ ಓದಿ: Gadag: ಅಕ್ರಮ ಸಂಬಂಧಕ್ಕೆ ಛಿದ್ರ ಛಿದ್ರವಾದ ಕುಟುಂಬ; ಎರಡು ಜೀವ ಬಲಿ, ಅಪ್ಪನಿದ್ರೂ ಅನಾಥಳಂತೆ ಬದುಕುತ್ತಿರೋ ಬಾಲಕಿ
ಗುಡುಗಿದ ದೊಡ್ಡರಂಗೇಗೌಡರು
ಕನ್ನಡದ ಹಬ್ಬಕ್ಕೆ ಚಾಲನೆ ಬಳಿಕ ದೊಡ್ಡರಂಗೇಗೌಡರು ಗುಡುಗಿದ್ರು. ಕನ್ನಡಪರ ಹೋರಾಟಗಾರರು ಉಗ್ರವಾದಿಗಳಲ್ಲ. ಕನ್ನಡ ಹೋರಾಟಗಾರನ್ನ ಏಕೆ ಜೈಲಿಗೆ ಹಾಕ್ತೀರಾ. ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್ ತಗೊಳಿ ಅಂತ ಸಿಎಂಗೆ ಮನವಿ ಮಾಡಿದರು.
ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ವಿವಿಧ ಕಡೆಯಿಂದ ಸಾವಿರಾರು ಸಾಹಿತ್ಯಾಭಿಮಾನಿಗಳು ಆಗಮಿಸಿದ್ದರು. ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಶೇಂಗಾ ಹೋಳಿಗೆ, ಬದನೆಕಾಯಿ ಪಲ್ಯ, ಖಡಕ್ ರೊಟ್ಟಿ, ಚಪಾತಿ, ಹಾಗೂ ಹೆಸರುಕಾಳು ಪಲ್ಯೆ, ಚಟ್ನಿ ಹಾಗೂ ಅನ್ನ ಸಾಂಬರ್ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ