• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Polls 2023: ಚುನಾವಣಾ ಡ್ಯೂಟಿಗೆ ಮದ್ಯ ಸೇವಿಸಿ ಬಂದವರು ಅಮಾನತು; ಉದ್ಧಟತನ ತೋರಿದ್ದಕ್ಕೆ ಮಹಿಳಾ ಇನ್​ಸ್ಪೆಕ್ಟರ್ ಸಸ್ಪೆಂಡ್

Karnataka Polls 2023: ಚುನಾವಣಾ ಡ್ಯೂಟಿಗೆ ಮದ್ಯ ಸೇವಿಸಿ ಬಂದವರು ಅಮಾನತು; ಉದ್ಧಟತನ ತೋರಿದ್ದಕ್ಕೆ ಮಹಿಳಾ ಇನ್​ಸ್ಪೆಕ್ಟರ್ ಸಸ್ಪೆಂಡ್

ಅಮಾನತುಗೊಂಡ ಸಿಬ್ಬಂದಿ

ಅಮಾನತುಗೊಂಡ ಸಿಬ್ಬಂದಿ

Shivamogga: ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮದ್ಯ ಸೇವನೆ ಮಾಡಿರೋದು ದೃಢಪಟ್ಟ ಹಿನ್ನೆಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

  • Share this:

ಶಿವಮೊಗ್ಗ: ಚುನಾವಣಾ ಕರ್ತವ್ಯಕ್ಕೆ (Election Duty) ಮದ್ಯ ಸೇವಿಸಿ (Alcohol) ಬಂದಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ರಮೇಶ್ ಮತ್ತು ಮಾಲತೇಶ್ ಅಮಾತುಗೊಂಡ ಅಧಿಕಾರಿಗಳು. ರಮೇಶ್ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ರೆ, ಮಾಲತೇಶ್ ಶಿಕ್ಷಕರಾಗಿದ್ದಾರೆ. ರಮೇಶ್ ಮತ್ತು ಮಾಲತೇಶ್ ಶಿವಮೊಗ್ಗದ (Shivamogga) ಮಸ್ಟರಿಂಗ್ ಕೇಂದ್ರಕ್ಕೆ ಇಬ್ಬರು ಪಾನಮತ್ತರಾಗಿ ಬಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಅನುಮಾನ ಬಂದ ಹಿನ್ನೆಲೆ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮದ್ಯ ಸೇವನೆ ಮಾಡಿರೋದು ದೃಢಪಟ್ಟ ಹಿನ್ನೆಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.


ಮಹಿಳಾ ಇನ್​ಸ್ಪೆಕ್ಟರ್ ಅಮಾನತು


ಉದ್ದಟತನ ತೋರಿದ್ದ ಮಹಿಳಾ ಇನ್​ಸ್ಪೆಕ್ಟರ್ ಭವ್ಯಾ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ಅಂಬೇಡ್ಕರ್ ವಿಶ್ವವಿದ್ಯಾಲಯದ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ತರಬೇತಿಗೆ ಭವ್ಯಾ ಅವರನ್ನು ನಿಯೋಜಿಸಲಾಗಿತ್ತು.


ತರಬೇತಿಗೆ ಹಾಜರಾಗದ ಭವ್ಯ ಅಲ್ಲಿಯೇ ಪೇಪರ್ ಓದುತ್ತಾ ಕುಳಿತಿದ್ದರು. ನೋಡಲ್ ಮತ್ತು ಸೆಕ್ಟರ್ ಅಧಿಕಾರಿಗಳು ಪ್ರಶ್ನಿಸಿದ್ದಕ್ಕೆ ಉದ್ದಟತನ ತೋರಿದ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ಕನ್ನಡಪ್ರಭ ವರದಿ ಮಾಡಿದೆ.


ಇಂದು ಮತದಾನ 


ಇಂದು ಕರ್ನಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿ:  Karnataka Election 2023 Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ


ಮದುವಣಗಿತ್ತಿಯಂತೆ ಸಿಂಗಾರಗೊಂಡ ಮತಗಟ್ಟೆ


ಈಗಾಗಲೇ ವಿಧಾನಸಭಾ ಚುನಾವಣೆಗೆ ಮತಗಟ್ಟೆಗಳು ಸಿದ್ಧತೆಗೊಂಡಿದ್ದು, ಸಾಂಸ್ಕೃತಿಕ ಥೀಮ್ ಅಡಿಯಲ್ಲಿ ಮಾದರಿ‌ ಮತಗಟ್ಟೆ ಸಿದ್ದತೆ ಮಾಡಲಾಗಿದೆ.


top videos



    ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 117 ರ ಮತಗಟ್ಟೆ ಸಿಂಗಾರ ಮಾಡಲಾಗಿದ್ದು, ಮತಗಟ್ಟೆಗೆ ತಳಿರು ತೋರಣಗಳನ್ನು ಕಟ್ಟಲಾಗಿದೆ. ಅಲ್ಲದೇ, ಚಪ್ಪಾರ ಹಾಕಿ ಹೂವಿನಿಂದ ಅಲಂಕಾರ ಮಾಡಲಾಗಿದ್ದು, ಮತಗಟ್ಟೆಗೆ ಬರುವ ಮತದಾರರನ್ನು ಸ್ವಾಗತಿಸಲು ಕಲರ್ ಫುಲ್ ಆಗಿ ಮತಗಟ್ಟೆ ಸಿದ್ಧತೆ ಮಾಡಲಾಗಿದೆ.

    First published: