• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • IT Companies: ಐಟಿ ಉದ್ಯೋಗಿಗಳು ಕೇವಲ ಟ್ರಾಫಿಕ್‌ನಲ್ಲಿ ಸಿಲುಕಿದ್ದಕ್ಕೆ ಕಂಪನಿಗಾದ ನಷ್ಟ ಅಷ್ಟಿಷ್ಟಲ್ಲ; ಬರೋಬ್ಬರಿ 225 ಕೋಟಿ ರೂ

IT Companies: ಐಟಿ ಉದ್ಯೋಗಿಗಳು ಕೇವಲ ಟ್ರಾಫಿಕ್‌ನಲ್ಲಿ ಸಿಲುಕಿದ್ದಕ್ಕೆ ಕಂಪನಿಗಾದ ನಷ್ಟ ಅಷ್ಟಿಷ್ಟಲ್ಲ; ಬರೋಬ್ಬರಿ 225 ಕೋಟಿ ರೂ

ಐಟಿ ಕಂಪೆನಿಗಳು

ಐಟಿ ಕಂಪೆನಿಗಳು

ಐಟಿ ಕಂಪೆನಿಗಳ ಉದ್ಯೋಗಿಗಳು ಸರಿಸುಮಾರು ಐದು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಕಾರಣ ಸಿಲಿಕಾನ್ ಸಿಟಿಯ ಐಟಿ ಕಂಪನಿಗಳು ರೂ 225 ಕೋಟಿ ನಷ್ಟವನ್ನು ಅನುಭವಿಸಿವೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಔಟರ್ ರಿಂಗ್ ರೋಡ್ ಕಂಪನಿಗಳ ಸಂಘವು ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಭವಿಸಿದ ನಷ್ಟದ ಕುರಿತು ಮತ್ತು ನಗರದ ಮೂಲಸೌಕರ್ಯಗಳನ್ನು ಪುನರಾಭಿವೃದ್ಧಿ ಮಾಡುವ ತುರ್ತು ಅಗತ್ಯದ ಬಗ್ಗೆ ಪತ್ರ ಬರೆದಿದೆ.

ಮುಂದೆ ಓದಿ ...
  • Share this:

ಆಗಸ್ಟ್ 30 ರಂದು ನಗರದಲ್ಲಿ ಮಳೆಯಿಂದಾಗಿ (Rain) ಪ್ರವಾಹ (Flood) ಪರಿಸ್ಥಿತಿ ಏರ್ಪಟ್ಟಿದ್ದರಿಂದ ಐಟಿ ಕಂಪೆನಿಗಳ (IT Companies) ಉದ್ಯೋಗಿಗಳು (Employees) ಸರಿಸುಮಾರು ಐದು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಕಾರಣ ಸಿಲಿಕಾನ್ ಸಿಟಿಯ ಐಟಿ ಕಂಪನಿಗಳು ರೂ 225 ಕೋಟಿ ನಷ್ಟವನ್ನು ಅನುಭವಿಸಿವೆ ಎಂಬುದು ವರದಿಗಳಿಂದ ತಿಳಿದು ಬಂದಿದೆ. IT ಕಂಪನಿಗಳ ಸಂಘವು ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರಿಗೆ ಸಂಭವಿಸಿದ ನಷ್ಟದ ಕುರಿತು ಮತ್ತು ನಗರದ ಮೂಲಸೌಕರ್ಯಗಳನ್ನು ಪುನರಾಭಿವೃದ್ಧಿ ಮಾಡುವ ತುರ್ತು ಅಗತ್ಯದ ಬಗ್ಗೆ ಪತ್ರ ಬರೆದಿದೆ.


ಪತ್ರದಲ್ಲಿರುವ ಮಾಹಿತಿ ಏನು?


ಔಟರ್ ರಿಂಗ್ ರೋಡ್‌ನ ಕಳಪೆ ಮೂಲ ಸೌಕರ್ಯದಿಂದಾಗಿ ಬಿಕ್ಕಟ್ಟಿನ ಪರಿಸ್ಥಿತಿ ಬಂದೊದಗಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಒಂದು ಅಂದಾಜಿನ ಪ್ರಕಾರ ಕೃಷ್ಣರಾಜಪುರಂನಿಂದ ಆರಂಭಿಸಿ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರದೇಶದವರೆಗಿನ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಅರ್ಧಮಿಲಿಯನ್‌ಗೂ ಹೆಚ್ಚು ಜನರು ಉದ್ಯೋಗದಲ್ಲಿದ್ದಾರೆ. 17 ಕಿ.ಮೀ ವ್ಯಾಪ್ತಿಯು ಒಂದು ಮಿಲಿಯನ್ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತಿದೆ ಮತ್ತು ರಾಜ್ಯದ ಆರ್ಥಿಕತೆಗೆ ಉತ್ತಮ ಕೊಡುಗೆಯನ್ನು ಹೊಂದಿದೆ.


ಇಂತಹ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮಹತ್ವ ನೀಡಿದಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಬೆಂಗಳೂರಿನ ಮೂಲಸೌಕರ್ಯಗಳಲ್ಲಿನ ಗುಣಮಟ್ಟ ಕುಸಿತ ಇದೀಗ ಜಾಗತಿಕ ಕಳವಳವಾಗಿದೆ ಹಾಗೂ ನಗರದ ಅಭಿವೃದ್ಧಿಯತ್ತ ಕೂಡ ಪ್ರಶ್ನೆಮಾಡುತ್ತಿದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Business Idea: ಓದಿರಬೇಕಿಲ್ಲ, ದೊಡ್ಡ ಬಂಡವಾಳ ಬೇಕು ಅಂತಿಲ್ಲ! ತಿಂಗಳಿಗೆ 50 ಸಾವಿರ ಮಿಸ್ಸೇ ಇಲ್ಲ


ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಂಪನಿಗಳು ಪರ್ಯಾಯ ತಾಣವನ್ನು ಹುಡುಕಬಹುದು ಎಂದು ಸಂಘವು ಆತಂಕ ವ್ಯಕ್ತಪಡಿಸಿದೆ.


ಕಳಪೆ ಮೂಲ ಸೌಕರ್ಯವು ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ


ORRCA ಅಧ್ಯಕ್ಷ ಮಾನಸ್ ದಾಸ್ ಮತ್ತು ಉಪಾಧ್ಯಕ್ಷೆ ಅರ್ಚನಾ ತಯಾಡೆ ಹೇಳುವಂತೆ ORR IT ವಾರ್ಷಿಕವಾಗಿ USD 22 ಶತಕೋಟಿ ಆದಾಯವನ್ನು ಗಳಿಸುತ್ತದೆ, ಇದು ಬೆಂಗಳೂರಿನ ಆದಾಯದ 32% ಆಗಿದೆ ಮತ್ತು ಇದು ಅತಿ ಹೆಚ್ಚಿನ ತೆರಿಗೆ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.


ಔಟರ್ ರಿಂಗ್ ರೋಡ್‌ನಲ್ಲಿ ಮೂಲಸೌಕರ್ಯದ ಕೊರತೆಯು ಬಿಕ್ಕಟ್ಟಿನ ಮಟ್ಟವನ್ನು ತಲುಪಿದೆ. ಇಲ್ಲಿನ ಜನಸಂಖ್ಯೆಯ ಕೇವಲ 30% ದಷ್ಟು ಜನ ಕಚೇರಿಗೆ ಮರಳಿದ್ದರೂ ಮೂಲಸೌಕರ್ಯಗಳ ಕುಸಿತವು ಬೆಂಗಳೂರು ನಗರದ ಮತ್ತಷ್ಟು ಬೆಳವಣಿಗೆಯನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಜಾಗತಿಕ ಕಳವಳವನ್ನು ಉಂಟುಮಾಡಿದೆ ಎಂದು ಅಸೋಸಿಯೇಷನ್ ತಿಳಿಸಿದೆ.


ಮೂಲಸೌಕರ್ಯ ಅಭಿವೃದ್ಧಿಗಾಗಿ ವಿವರವಾದ ಯೋಜನೆ


ನಗರದಲ್ಲಿ ಅಭಿವೃದ್ಧಿ ಪ್ರಕ್ರಿಯೆಯು ನಿಧಾನವಾಗಿದೆ ಮತ್ತು ORRCA ಮತ್ತು ಸರ್ಕಾರದ ಸಾಮೂಹಿಕ ಹಿತದೃಷ್ಟಿಯಿಂದ ಬೆಂಗಳೂರು ಮೂಲಸೌಕರ್ಯ ಸಮಸ್ಯೆಗಳನ್ನು ಅಲ್ಪ/ಮಧ್ಯಾವಧಿ ಮತ್ತು ದೀರ್ಘಾವಧಿಯ ದೃಷ್ಟಿಯಿಂದ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಮೇಲ್ನೋಟಕ್ಕೆ ಪರಿಹರಿಸಲಾಗಿದೆ ಎಂದು ಸಂಘವು ಆರೋಪಿಸಿದೆ.


ಪರಿಸ್ಥಿತಿ ಸುಧಾರಿಸದಿದ್ದರೆ ಕಂಪನಿಗಳು ಪರ್ಯಾಯ ಸ್ಥಳಗಳನ್ನು ಹುಡುಕುತ್ತವೆ. 2019 ರಲ್ಲಿ ಕೆಲವೊಂದು ಯೋಜನೆಗಳನ್ನು ಅಂದಿನ ಮುಖ್ಯಮಂತ್ರಿಗಳು ಅನುಮೋದಿಸಿದ್ದರು ಎಂಬುದನ್ನು ORRCA ತಿಳಿಸಿದೆ.


ಇದನ್ನೂ ಓದಿ: Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ


  • ಈ ಕಾರಿಡಾರ್‌ನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಮೂಲಸೌಕರ್ಯ ಮತ್ತು ಉಪಯುಕ್ತತೆಗಳಲ್ಲಿನ ಪ್ರಸ್ತುತ ಅಂತರದ ಕುರಿತು ವರದಿಯನ್ನು ಪ್ರಕಟಿಸಬೇಕು ಎಂದು ORRCA ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್ ಆಗ್ರಹಿಸಿದೆ.




  • ಸವಾಲುಗಳನ್ನು ಎದುರಿಸಲು ಅಲ್ಪಾವಧಿಯ, ಮಧ್ಯಮ ಮತ್ತು ದೀರ್ಘಾವಧಿಯ ಯೋಜನೆಯನ್ನು ಒದಗಿಸಲು ಮತ್ತು ಮಾಸಿಕ ಸಮನ್ವಯ ಸಭೆಗಳಲ್ಲಿನ ಪ್ರಗತಿಯ ವಿರುದ್ಧ ಮೂಲಸೌಕರ್ಯ ಸುಧಾರಣೆ ಯೋಜನೆಯನ್ನು ಪರಿಶೀಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎಲ್ಲಾ ನಾಗರಿಕ ಪ್ರಾಧಿಕಾರಗಳನ್ನೊಳಗೊಂಡ ಜಂಟಿ ಸಮನ್ವಯ ಸಮಿತಿಯನ್ನು ಕರೆಯುವಂತೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದರು.




  • ಓಲ್ಡ್ ಏರ್‌ಪೋರ್ಟ್ ರಸ್ತೆ, ಐಟಿಪಿಎಲ್ ರಸ್ತೆ ಮತ್ತು ವರ್ತೂರು ರಸ್ತೆಯಂತಹ ಪ್ರಮುಖ ರಸ್ತೆಗಳ ಮೂಲಕ ಸಂಸ್ಥೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ನಿಯಮಿತವಾಗಿ ಪ್ರಯಾಣಿಸುವುದರಿಂದ ಸುಧಾರಣೆ ಯೋಜನೆಗಳನ್ನು ತ್ವರಿತಗೊಳಿಸುವಂತೆ ಒಆರ್‌ಆರ್‌ಸಿಎ ಸರಕಾರಕ್ಕೆ ಮನವಿ ಮಾಡಿತ್ತು.

Published by:Ashwini Prabhu
First published: