• Home
  • »
  • News
  • »
  • state
  • »
  • Kannadiga: ವಿಶ್ವದ ಅತಿದೊಡ್ಡ ವಿಮಾನದ ಪ್ರಯಾಣಿಕರಿಗೆ ಕನ್ನಡದ ಸ್ವಾಗತ; ಪೈಲಟ್​ ಕನ್ನಡಿಗನ ಬಗ್ಗೆ ನಿಮಗೆಷ್ಟು ಗೊತ್ತು?

Kannadiga: ವಿಶ್ವದ ಅತಿದೊಡ್ಡ ವಿಮಾನದ ಪ್ರಯಾಣಿಕರಿಗೆ ಕನ್ನಡದ ಸ್ವಾಗತ; ಪೈಲಟ್​ ಕನ್ನಡಿಗನ ಬಗ್ಗೆ ನಿಮಗೆಷ್ಟು ಗೊತ್ತು?

ಪೈಲಟ್ ಸಂದೀಪ್

ಪೈಲಟ್ ಸಂದೀಪ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಸಂದೀಪ್ ಪ್ರಭು ಫಿಲಿಪೈನ್ಸ್ ಮತ್ತು ನವದೆಹಲಿಯಲ್ಲಿ ಪೈಲಟ್ ತರಬೇತಿ ಪಡೆದುಕೊಂಡಿದ್ದಾರೆ. ನಂತರ ಫ್ರಾನ್ಸ್​​ನಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಸಂದೀಪ್ ದುಬೈ ಎಮಿರೇಟ್ಸ್​​​ನಲ್ಲಿ ಪೈಲಟ್​ ಆಗಿ ವೃತ್ತಿ ಜೀವನ ಆರಂಭಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಅಕ್ಟೋಬರ್ 14ರಂದು ಬೆಂಗಳೂರಿಗೆ (Bengaluru) ಅತಿದೊಡ್ಡ ಪ್ರಯಾಣಿಕರ ವಿಮಾನ ಎಮಿರೇಟ್ಸ್ ಏರ್‌ಬಸ್ A380 (Emirates Airbus A380) ಲ್ಯಾಂಡ್​ ಆಗಿತ್ತು. ವಿಮಾನದ ಪೈಲಟ್​​ಗಳಲ್ಲಿ (Pilot) ಒಬ್ಬರು ಕನ್ನಡಿಗರಾಗಿದ್ದರು. ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ಪೈಲಟ್​ ಸಂದೀಪ್ ಪ್ರಭು (Pilot Sandeep Prabhu) ಪ್ರಯಾಣಿಕರನ್ನು ಕನ್ನಡದಲ್ಲಿಯೇ (Kannada) ಸ್ವಾಗತಿಸಿದ್ದರು. ನಿಖಿಲ್ ತ್ಯಾಗರಾಜನ್ ಜೊತೆ ಸಂದೀಪ್ ಪ್ರಭು ಎಮಿರೇಟ್ಸ್ ಏರ್‌ಬಸ್ A380 ಪೈಲಟ್​​ಗಳಾಗಿದ್ದರು. ಸಂದೀಪ್ ಪ್ರಭು ಉಡುಪಿಯ ಅಲೆವೂರು ಮೂಲದವರಾಗಿದ್ದು, ಮಂಗಳೂರಿನ (Mangaluru) ಸೇಂಟ್​ ಅಲೋಶಿಯಸ್​ ಪ್ರೌಢಶಾಲೆಯಲ್ಲಿ ಓದಿದ್ದಾರೆ. ಉನ್ನತ ಶಿಕ್ಷಣವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಪಡೆದುಕೊಂಡಿರುವ ಸಂದೀಪ್ ಪ್ರಭು ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿಯೂ ಮನೆಯನ್ನು ಸಂದೀಪ್ ಹೊಂದಿದ್ದಾರೆ.


ದುಬೈನಿಂದ ಬೆಂಗಳೂರಿಗೆ ಬಂದಿದ್ದ A380 ವಿಮಾನ ಅಕ್ಟೋಬರ್ ಮೊದಲ ವಾರವೇ ಕೆಂಪೇಗೌಡ ಏರ್​ಪೋರ್ಟ್​ಗೆ (Kempegowda International Airport) ಲ್ಯಾಂಡ್ ಆಗಬೇಕಿತ್ತು. ಮೊದಲ ವಿಮಾನದಲ್ಲಿ 224 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿಗೆ ವಿಮಾನ ಲ್ಯಾಂಡ್​ ಆಗುತ್ತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ಸಂದೀಪ್ ಪ್ರಭು ಕನ್ನಡದಲ್ಲಿಯೇ ಸ್ವಾಗತಿಸಿದ್ದಾರೆ. ಸಂದೀಪ್ ಸುಮಾರು 15 ವರ್ಷಗಳಿಂದ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ.


ಪೈಲಟ್ ಸಂದೀಪ್ ಉಡುಪಿಯ ಅಲೆವೂರು ಮೂಲದ ಸಂದೀಪ್ ಪ್ರಭು ಶಿವರಾಯ್ ಪ್ರಭು ಮತ್ತು  ಆರತಿ ಪ್ರಭು ದಂಪತಿಯ ಪುತ್ರ. ಬೆಂಗಳೂರು ಮತ್ತು ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಸಂದೀಪ್ ಪ್ರಭು ಫಿಲಿಪೈನ್ಸ್ ಮತ್ತು ನವದೆಹಲಿಯಲ್ಲಿ ಪೈಲಟ್ ತರಬೇತಿ ಪಡೆದುಕೊಂಡಿದ್ದಾರೆ. ನಂತರ ಫ್ರಾನ್ಸ್​​ನಲ್ಲಿ ಹೆಚ್ಚಿನ ಶಿಕ್ಷಣ ಪಡೆದ ಸಂದೀಪ್ ದುಬೈ ಎನಿರೇಟ್ಸ್​​​ನಲ್ಲಿ ಪೈಲಟ್​ ಆಗಿ ವೃತ್ತಿ ಜೀವನ ಆರಂಭಿಸಿದ್ದಾರೆ.


ಪ್ರಯಾಣಿಕರಿಂದ ಮೆಚ್ಚುಗೆಯ ಚಪ್ಪಾಳೆ


ಪುತ್ರ ಕನ್ನಡದಲ್ಲಿಯೇ ಪ್ರಯಾಣಿಕರನ್ನು ಸ್ವಾಗತಿಸಿರುವ ಕುರಿತು ತಂದೆ ಶಿವರಾಯ್ ಸಂತಸ ವ್ಯಕ್ತಪಡಿಸಿದ್ದಾರೆ. ಪುತ್ರ ಕನ್ನಡದಲ್ಲಿಯೇ ಸ್ವಾಗತ ಮಾಡಿದಾಗ ಪ್ರಯಾಣಿಕರು ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿರುವ ವಿಷಯ ಕೇಳಿ ಸಂತಸವಾಯ್ತು ಎಂದು ಹೇಳಿದ್ದಾರೆ.



ಸಂದೀಪ್ ಸೋದರ ಮತ್ತು ಪೋಷಕರ ಸಂತಸ


ಸಂದೀಪ್ ಹಿರಿಯ ಸೋದರ ಸತ್ಯೇಂದ್ರ ಮಾತನಾಡಿ, ತಮ್ಮ ಸಂದೀಪ್ ಪ್ರಯಾಣಿಕರನ್ನ ಕನ್ನಡದಲ್ಲಿಯೇ ಸ್ವಾಗತ ಮಾಡಿದ್ದಾರೆ. ನನ್ನ ತಂದೆ ಶಿವರಾಯ್ ಪ್ರಭು ಮತ್ತು ತಾಯಿ ಆರತಿ ಪ್ರಭು ಅವರೇ ಸೋದರನಿಗೆ ಸ್ವಾಗತ ಹೇಗೆ ಕ್ರಮಬದ್ಧವಾಗಿ ಕನ್ನಡದಲ್ಲಿ ಮಾಡಬೇಕೆಂದು ಬರೆದುಕೊಟ್ಟಿದ್ದರು.


ಇದನ್ನೂ ಓದಿ:  Puneeth Rajkumar: ಅಪ್ಪು ನೆನಪಲ್ಲಿ 300 ಕೆಜಿ ಚಿಕನ್, ಮಟನ್ ಸವಿದ ಅಭಿಮಾನಿಗಳು!

 ವಿಮಾನ ಲ್ಯಾಂಡ್​ ಆಗುತ್ತಿದ್ದಂತೆ ನನಗೆ ಕರೆ ಮಾಡಿದ ಸೋದರ ಪ್ರಯಾಣದ ಅನುಭವವನ್ನು ಹಂಚಿಕೊಂಡನು. ಆತ ಪ್ರಯಾಣದ ಪ್ರತಿಕ್ಷಣವನ್ನು ಎಂಜಾಯ್ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.


ಪಟಾಕಿ ಸಿಡಿಸಲು 2 ಗಂಟೆ ಮಾತ್ರ ಅವಕಾಶ


ದೀಪಾವಳಿ (Deepavali) ಹಬ್ಬ ಹತ್ತಿರ ಬರ್ತಿದೆ. ದೇಶದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರು ಹೆಚ್ಚಾಗಿದ್ದಾರೆ. ದಿನವಿಡೀ ಪಟಾಕಿ ಸಿಡಿಸಬೇಕು ಎಂದು ಪ್ಲ್ಯಾನ್ ಹಾಕಿಕೊಂಡಿದ್ರೆ ಅದು ಸಾಧ್ಯವಿಲ್ಲ. ಯಾಕಂದ್ರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಈ ದೀಪಾವಳಿ ಹಬ್ಬದಲ್ಲಿ ಪಟಾಕಿ (Crackers) ಸಿಡಿಸಲು ಟೈಮ್ ಫಿಕ್ಸ್​ ಮಾಡಿದೆ. ನಿಮ್ಮ ನಿಮ್ಮ ಮನೆಗಳ ಎದುರು ರಾತ್ರಿ 2 ಗಂಟೆಗಳು ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿ ಸುತ್ತೋಲೆ (Circular) ಹೊರಡಿಸಿದೆ.


ಇದನ್ನೂ ಓದಿ:  HD Devegowda: ಅವರ ಬಗ್ಗೆ ಕೊಂಕು ಮಾತಾಡಿದ್ರೆ ಸಹಿಸಲ್ಲ; ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ರಾತ್ರಿ 8 ರಿಂದ 10 ಗಂಟೆ ಪಟಾಕಿ ಸಿಡಿಸಲು ಅವಕಾಶ


ಈ ನಿರ್ದೇಶನ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಸರಿಸಿದೆ. ನಗರದ ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ತಡೆಯಲು ನಿರ್ಧರಿಸಲಾಗಿದ್ದು, ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Published by:Mahmadrafik K
First published: