Kodagu: ಪ್ರೀತಿಯಿಂದ ಬೆಳೆದಿದ್ದ ಶಿಬಿರವನ್ನು 400 ಕಿಲೋ ಮೀಟರ್ ದೂರದಿಂದ ಹುಡುಕಿ ಬಂದ ಕುಶ ಆನೆ 

ಹೀಗೆ ಒಟ್ಟಿನಲ್ಲಿ ನಿತ್ಯ ಹುಡುಕಾಡುತ್ತಾ ಒಂದು ವರ್ಷದಲ್ಲಿ ಬರೋಬ್ಬರಿ ಮೂರುವರೆ ಸಾವಿರ ಕಿಲೋ ಮೀಟರ್ ತನ್ನ ಸಾಕಿದ ಮಾವು ಕವಾಡಿಗಳನ್ನು ಅರಸುತ್ತಲೇ ಅಲೆದಾಡಿದೆ ಎನ್ನುತ್ತಾರೆ ದುಬಾರೆ ಸಾಕಾನೆ ಶಿಬಿರದ ಡಿಆರ್ ಎಫ್ಓ ರಂಜನ್.

ಕುಶ ಆನೆ

ಕುಶ ಆನೆ

  • Share this:
ಕೊಡಗು: ‘ಪೂಜಿಸಿದವರ ಕಡೆಗೆ ದೇವರು, ಪ್ರೀತಿ ತೋರಿಸಿದವರ ಕಡೆಗೆ ಮಕ್ಕಳು’ ಎನ್ನುವ ಗಾದೆ ಮಾತನ್ನು ನೀವು ಕೇಳಿರುತ್ತೀರಾ. ಐದಾರು ವರ್ಷಗಳ ಕಾಲ ಸಾಕಿದ್ದ ಆನೆ (Elephant) ವಿಷಯದಲ್ಲೂ ಅದು ಅಕ್ಷರಶಃ ನಿಜ ಎನ್ನುವುದು ಸಾಬೀತಾಗಿದೆ. ಹಾಗಾದರೆ ಆ ಆನೆ ಮಾಡಿದ್ದೇನು, ಯಾರನ್ನು ಹುಡುಕಿಕೊಂಡು ಬಂತು, ಈ ಘಟನೆ ನಡೆದಿದ್ದು ಎಲ್ಲಿ ಎನ್ನೋದೆ ಇಂಟ್ರಿಸ್ಟಿಂಗ್ ನೋಡಿ. ತನ್ನ ಸಾಕಿ ಸಲಹಿದವರಿಗಾಗಿ ಕುಶ ಆನೆ (Kusha Elephant) ಬರೋಬ್ಬರಿ ನಾಲ್ಕು ನೂರು ಕಿಲೋ ಮೀಟರ್ ದೂರದಿಂದ ಒಂದು ವರ್ಷ ನಿತ್ಯ ನಡೆದಿದೆ. ತನ್ನವರಿಗಾಗಿ ಹುಡುಕಾಡಿದೆ. ಕೊನೆಗೆ ತನ್ನವರನ್ನು ಸೇರಿಕೊಂಡಿದೆ.

ಕೊಡಗು ಜಿಲ್ಲೆ ವಿರಾಜಪೇಟೆ (Virajaperte, Kodagu) ತಾಲ್ಲೂಕಿನಲ್ಲಿ ಇರುವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) 2016 ರಿಂದ ಇದನ್ನು ಸಾಕಲಾಗಿತ್ತು. ಆದರೆ ಸಂಗಾತಿಯನ್ನು ಹರಸಿ 2018 ರಲ್ಲಿ ಶಿಬಿರದಿಂದ ಕಾಡಿಗೆ ಹೋಗಿತ್ತು. ಕೊನೆಗೆ ಸಾಕಷ್ಟು ಹುಡುಕಾಡಿದ್ದ ಸಾಕಾನೆ ಶಿಬಿರದ ಸಿಬ್ಬಂದಿ ವರ್ಷದ ಬಳಿಕ ಅದನ್ನು ವಾಪಸ್ ಶಿಬಿರಕ್ಕೆ ಕರೆ ತಂದಿದ್ದರು.

ಬಂಡೀಪುರ ವ್ಯಾಪ್ತಿಯ ಅರಣ್ಯದಲ್ಲಿ ಬಿಡಲಾಗಿತ್ತು

ಆದರೆ ಪೀಪಲ್ಸ್ ಫಾರ್ ಅನಿಮಲ್ಸ್ ಎಂಬ ಸಂಸ್ಥೆ ಆನೆಯನ್ನು ಅರಣ್ಯಕ್ಕೆ ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿತ್ತು. ಹೀಗಾಗಿ ಸರ್ಕಾರದ ನಿರ್ದೇಶನದಂತೆ 2021 ರ ಜೂನ್ ಮೊದಲ ವಾರದಲ್ಲಿ ಕುಶ ಆನೆಯನ್ನು ರಾತ್ರೋ ರಾತ್ರಿ ಲಾರಿಯ ಮೂಲಕ ಕರೆದೊಯ್ದು ಬಂಡೀಪುರ ಅರಣ್ಯ ವ್ಯಾಪ್ತಿಯ ಮೂಲೆ ಹೊಳೆ ಎಂಬಲ್ಲಿ ಬಿಡಲಾಗಿತ್ತು.

ಇದನ್ನೂ ಓದಿ:  Puttur: ಪುತ್ತೂರಿನಲ್ಲೊಂದು ಅವೈಜ್ಞಾನಿಕ ರೈಲ್ವೇ ಮೇಲ್ಸೇತುವೆ; ಎಚ್ಚರ ತಪ್ಪಿದ್ರೆ 50 ಅಡಿ ಆಳಕ್ಕೆ ಬೀಳ್ತೀರಿ

ಆಗ ಆನೆಯನ್ನು ಮಕ್ಕಳಂತೆ ಸಾಕಿದ್ಧ ಮಾವುತರು ಕವಾಡಿಗಳು ಅನುಭವಿಸಿದ್ದ ನೋವು ಅಷ್ಟಿಷ್ಟಲ್ಲ ಎನ್ನುತ್ತಾರೆ ಮಾವುತ ದೊರೆಯಪ್ಪ. ವಿಧಿ ಇಲ್ಲದೆ ಸರ್ಕಾರದ ಆದೇಶ ಪಾಲಿಸಿದ್ದ ಮಾವುತರು ಆನೆಯನ್ನು 400 ಕಿಲೋ ಮೀಟರ್ ದೂರದ ಕಾಡಿಗೆ ಬಿಟ್ಟು ಬಂದಿದ್ದರು.

ತನ್ನವರಿಗಾಗಿ ಹುಡುಕಾಟ ಆರಂಭಿಸಿದ್ದ ಕುಶ

ತನನ್ನು ಕಾಡಿಗೆ ಬಿಟ್ಟು ಹೋದ ಆನೆ ತಮ್ಮವರಿಗಾಗಿ ಹುಡುಕಾಡಿದ್ದು ಅಷ್ಟಿಷ್ಟಲ್ಲ.  ಬಂಡೀಪುರದ ಮೂಲೆಹೊಳೆ ವ್ಯಾಪ್ತಿಯಲ್ಲಿ ಕುಶ ಆನೆಯನ್ನು ಬಿಟ್ಟಾಗ ಅದು ಒಂದು ವಾರವಷ್ಟೇ ಅದೇ ವ್ಯಾಪ್ತಿಯಲ್ಲಿ ಇತ್ತು. ಬಳಿಕ ತನ್ನವರಿಗಾಗಿ ಹುಡುಕಾಟ ಆರಂಭಿಸಿದ್ದ ಕುಶ ಕೇರಳದತ್ತ ಪ್ರಯಾಣ ಬೆಳೆಸಿತ್ತು. ನಂತರ ಮತ್ತೆ ಅಲ್ಲಿಂದ ನಾಗರಹೊಳೆ ವ್ಯಾಪ್ತಿಗೆ ಬಂದಿತ್ತು.

ಹೀಗೆ ಒಟ್ಟಿನಲ್ಲಿ ನಿತ್ಯ ಹುಡುಕಾಡುತ್ತಾ ಒಂದು ವರ್ಷದಲ್ಲಿ ಬರೋಬ್ಬರಿ ಮೂರುವರೆ ಸಾವಿರ ಕಿಲೋ ಮೀಟರ್ ತನ್ನ ಸಾಕಿದ ಮಾವು ಕವಾಡಿಗಳನ್ನು ಅರಸುತ್ತಲೇ ಅಲೆದಾಡಿದೆ ಎನ್ನುತ್ತಾರೆ ದುಬಾರೆ ಸಾಕಾನೆ ಶಿಬಿರದ ಡಿಆರ್ ಎಫ್ಓ ರಂಜನ್.

ದುಬಾರೆ ಸಾಕಾನೆ ಶಿಬಿರ ತಲುಪಿದ ಕುಶ

ಈಗ ಕೊನೆಗೂ ತಾನು ಹುಟ್ಟಿ ಬೆಳೆದ ಜಾಗಕ್ಕೆ ಹಿಂದಿರುಗಿರುವ ಕುಶ ಆನೆ, ದುಬಾರೆ ಸಾಕಾನೆ ಶಿಬಿರ ತಲುಪಿದೆ. ಅದೊಂದೇ ಅಲ್ಲ, ತನ್ನ ಜೊತೆಗೆ ಮೂರು ಹೆಣ್ಣಾನೆ, ಒಂದು ಗಂಡಾನೆಯನ್ನು ಕರೆದುಕೊಂಡು ಬಂದಿದೆ. ಅದೆಲ್ಲವೂ ಆ ಆನೆಯ ಕೊರಳಿಗೆ ಕಟ್ಟಿದ್ದ ರೇಡಿಯೋ ಕಾಲರ್ ‍ನಲ್ಲಿ ದಾಖಲಾಗುತಿದೆ.

ಒಟ್ಟಿನಲ್ಲಿ ಮಗುವಿಗೆ ಹೆತ್ತವರು ತೋರಿಸುವ ಪ್ರೀತಿಯಂತೆ ಮಾವುತ ಕವಾಡಿಗರು ತೋರಿಸಿರುವ ಪ್ರೀತಿಯನ್ನು ಹುಡುಕಿಕೊಂಡು ಬಂದಿರುವ ಕುಶ ಆನೆ ದುಬಾರೆ ಶಿಬಿರದ ಹೊರಗಡೆಯೇ ಅಲೆಯುತ್ತಿದೆ. ಆದರೆ ಸರ್ಕಾರದ ನಿಯಮದ ಪ್ರಕಾರ ಅರಣ್ಯ ಇಲಾಖೆ ಮಾತ್ರ ಅದನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ.

ಇದನ್ನು ಓದಿ:  Kalaripayattu: ಕಾಶ್ಮೀರದಲ್ಲಿ ರಾರಾಜಿಸಲು ಸಿದ್ದವಾದ ಕೇರಳದ ಜನಪ್ರಿಯ ಮಾರ್ಷಲ್ ಆರ್ಟ್ ಕಲರಿಪಯಟ್ಟು; ಎಲ್ಲಿ ಯಾವಾಗ ಇಲ್ಲಿದೆ ನೋಡಿ

ಕವಾಡಿಗರ ಪ್ರೀತಿ ಕುಶ ಆನೆಗೆ ಸಿಗುತ್ತಾ?

ಈ ಕುರಿತು ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡುವುದಾಗಿ ಆರ ಎಫ್ಓ ಶಿವರಾಂ ಹೇಳಿದ್ದು, ಮತ್ತೆ ಮಾವುತ, ಕವಾಡಿಗರ ಪ್ರೀತಿ ಕುಶ ಆನೆಗೆ ಸಿಗುತ್ತಾ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.
Published by:Mahmadrafik K
First published: