HOME » NEWS » State » ELEPHANT DEATH IN A SUSPICIOUS MANNER RH CANK

ಅನುಮಾನಾಸ್ಪದ ರೀತಿಯಲ್ಲಿ ಕಾಡಾನೆ ಸಾವು; ಅರಣ್ಯ ಅಧಿಕಾರಿಗಳಿಂದ ತನಿಖೆ

ಕೆಲವು ದಿನಗಳ ಹಿಂದೆ ಜವಳಗಿರಿ ಕಾಡಿನಲ್ಲಿ 8 ವರ್ಷದ ಕಾಡು ಆನೆಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಬೇಟೆಯಾಡುವ ಉದ್ದೇಶದಿಂದ ಕಾಡಾನೆಯನ್ನು‌ ಕೊಂದಿದ್ದ ಆರೋಪಿಯನ್ನು ಸಹ ತಮಿಳುನಾಡು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಕಾಡಾನೆಗಳ ಭೇಟೆ ವಿಚಾರ ಕೇಳಿ ಪ್ರಾಣಿ ಪ್ರಿಯರಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಸುಮಾರು 35 ರಿಂದ 40 ವರ್ಷ ವಯಸ್ಸಿ ಕಾಡಾನೆ ಸಾವನ್ನಪ್ಪಿದೆ.

news18-kannada
Updated:November 15, 2020, 6:31 PM IST
ಅನುಮಾನಾಸ್ಪದ ರೀತಿಯಲ್ಲಿ ಕಾಡಾನೆ ಸಾವು; ಅರಣ್ಯ ಅಧಿಕಾರಿಗಳಿಂದ ತನಿಖೆ
ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕಾಡಾನೆ.
  • Share this:
ತಮಿಳುನಾಡು: ಸುಮಾರು 35 ವರ್ಷದ ಕಾಡಾನೆಯೊಂದು ಜಮೀನೊಂದರಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ರಾಯಕೋಟೆ ಸಮೀಪದ ಯುಪುರಂ ಬಳಿ ಘಟಿಸಿದೆ. ಗುಂಡೇಟು, ವಿಷಪೂರಿತ ಆಹಾರ ಸೇವನೆ ಅಥವಾ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿರುವ ಶಂಕೆ ಅರಣ್ಯ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ಹೌದು, ಇಂದು ಬೆಳಗ್ಗೆ ತಮಿಳುನಾಡಿನ ಯುಪುರಂ ಗ್ರಾಮದ ರೈತರು ಹೊಲದ ಕಡೆ ಹೋದಾಗ ಕಾಡಾನೆ ಹೊಲದಲ್ಲಿಯೇ ಕುಸಿದು ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ರಾಯಕೋಟೆ ವಲಯ ಅರಣ್ಯ ಅಧಿಕಾರಿಗಳು ಮೃತ ಆನೆ ಶವವನ್ನು ಪರಿಶೀಲನೆ ನಡೆಸಿದ್ದಾರೆ. ವಿಷ ಆಹಾರ ಸೇವನೆ, ಗುಂಡೇಟು ಅಥವಾ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: ದೀಪಾವಳಿ ಸಂಭ್ರಮಕ್ಕೆ ವರುಣನ ಅಡ್ಡಿ; ಇಂದಿನಿಂದ 4 ದಿನ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ

ಅಂದಹಾಗೆ ಕರ್ನಾಟಕದ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ವಲಸೆ ಬಂದ 100 ಕ್ಕೂ ಹೆಚ್ಚು ಕಾಡು ಆನೆಗಳು ತಮಿಳುನಾಡಿನ ಗಡಿಯಲ್ಲಿರುವ ತಳಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಕಾಡು ಆನೆಗಳನ್ನು ತಮಿಳುನಾಡಿನ ಡೆಂಕಣಿಕೋಟೆ ಉದೇದುರ್ಗಂ ಮತ್ತು ಶ್ಯಾನಮಾವು ಅರಣ್ಯ ಪ್ರದೇಶಗಳಿಗೆ ಪ್ರವೇಶಿಸದಂತೆ ತಡೆದು ವಾಪಸ್ಸು ಓಡಿಸುತ್ತಿದ್ದಾರೆ. ಆದರೆ  ಕಳೆದ ಹಲವು ದಿನಗಳಿಂದ ಎರಡು ಕಾಡು ಆನೆಗಳು ಮಾತ್ರ ತಪ್ಪಿಸಿಕೊಂಡು ಆಹಾರ ಹುಡುಕಿಕೊಂಡು ರಾಯಕೋಟೆ ಅರಣ್ಯ ಪ್ರದೇಶದ ಸುತ್ತಮುತ್ತ ಹಳ್ಳಿಗಳ ಬಳಿ ಹಾವಳಿ ಎಬ್ಬಿಸುತ್ತಿದ್ದವು. ಈ ಎರಡು ಕಾಡು ಆನೆಗಳಿಂದ ಬೇರ್ಪಟ್ಟ ಒಂಟಿ ಆನೆ ಉದುದುರ್ಗಂ ಕಾಡಿನಿಂದ ಹೊರಟು ಹತ್ತಿರದ ಯುಪುರಂ ಗ್ರಾಮದ ಬಳಿಯ ಹೊಲಗಳಲ್ಲಿ ಆಹಾರ ಹುಡುಕಿಕೊಂಡು ಹೋಗಿದೆ. ನಂತರ ಕಾಡಿಗೆ ಹಿಂದಿರುಗುವಾಗ ಹೊಲದಲ್ಲಿಯೇ ಕುಸಿದು ಶೋಚನೀಯವಾಗಿ ಸಾವನ್ನಪ್ಪಿದೆ.

ಇನ್ನೂ ಕೆಲವು ದಿನಗಳ ಹಿಂದೆ ಜವಳಗಿರಿ ಕಾಡಿನಲ್ಲಿ 8 ವರ್ಷದ ಕಾಡು ಆನೆಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಬೇಟೆಯಾಡುವ ಉದ್ದೇಶದಿಂದ ಕಾಡಾನೆಯನ್ನು‌ ಕೊಂದಿದ್ದ ಆರೋಪಿಯನ್ನು ಸಹ ತಮಿಳುನಾಡು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಕಾಡಾನೆಗಳ ಭೇಟೆ ವಿಚಾರ ಕೇಳಿ ಪ್ರಾಣಿ ಪ್ರಿಯರಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಸುಮಾರು 35 ರಿಂದ 40 ವರ್ಷ ವಯಸ್ಸಿ ಕಾಡಾನೆ ಸಾವನ್ನಪ್ಪಿದ್ದು, ಶವ ಪರೀಕ್ಷೆಯಿಂದ ಆನೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

ವರದಿ: ಆದೂರು ಚಂದ್ರು
Published by: HR Ramesh
First published: November 15, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading