HOME » NEWS » State » ELEPHANT ATTACK CONTINUE AT KODAGU DISTRICT AND PEOPLE KILLED BY ELEPHANTS LG

ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಆನೆ-ಮಾನವ ಸಂಘರ್ಷ; ಓರ್ವ ಸಾವು, ಮೂವರಿಗೆ ಗಾಯ

ಸೋಮವಾರಪೇಟೆ ತಾಲ್ಲೂಕಿನ ಕೂಗೂರಿನಲ್ಲೂ ಭಾನುವಾರ ಸಂಜೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಗೂರಿನ ಮೋಹನ್ ಎಂಬುವವರ ಕಾಫಿ ತೋಟದಲ್ಲಿ ಈ ಕಾರ್ಮಿಕರು ಕಾಫಿ ಹಣ್ಣು ಬಿಡಿಸುತ್ತಿದ್ದರು. ಈ ವೇಳೆ ಕಾಡಾನೆ ಹಠತ್ತಾನೆ ದಾಳಿ ನಡೆಸಿದೆ. ತಕ್ಷಣವೇ ಹೆಚ್ಚುಕೊಂಡ ಕಾರ್ಮಿಕರು ಸ್ಥಳಿಂದ ಓಡಿದ್ದಾರೆ. ಅಷ್ಟರಲ್ಲೇ ಸುಕೂರ್ ಮತ್ತು ಓಮೇಜ್ ಎಂಬಿಬ್ಬರು ದಾಳಿಯಿಂದ ಗಾಯಗೊಂಡಿದ್ದಾರೆ

news18-kannada
Updated:December 29, 2020, 3:33 PM IST
ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಆನೆ-ಮಾನವ ಸಂಘರ್ಷ; ಓರ್ವ ಸಾವು, ಮೂವರಿಗೆ ಗಾಯ
ಆನೆ
  • Share this:
ಕೊಡಗು(ಡಿ.29): ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ಹಿಂದಿನಿಂದಲೂ ಇದ್ದು ಈಗಲೂ ಮುಂದುವರೆದಿದ್ದು, ಜಾಸ್ತಿಯಾಗುತ್ತಲೇ ಇದೆ. ನಿನ್ನೆ ಸಂಜೆ ಹಾಗೂ ನಿನ್ನೆ ರಾತ್ರಿ ಕೊಡಗು ಜಿಲ್ಲೆಯ ಎರಡು ಕಡೆ ನಡೆದ ಪ್ರತ್ಯೇಕ ಆನೆ ದಾಳಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮತ್ತೊಂದು ಆನೆ ದಾಳಿಯಲ್ಲಿ ಮೂವರು ಗಾಯಗೊಂಡು, ಸಣ್ಣ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ವಿರಾಜಪೇಟೆ ತಾಲ್ಲೂಕು ಬಲ್ಲಮಾವುಟಿ ಸಮೀಪದ ಪೆರೂರು ಗ್ರಾಮದಲ್ಲಿ ಭಾನುವಾರ ರಾತ್ರಿ ಸಮಾರಂಭವೊಂದನ್ನು ಮುಗಿಸಿ ಮನೆಗೆ ತೆರಳುವ ಸಂದರ್ಭ ಕಾಡಾನೆ ದಾಳಿ ನಡೆಸಿದೆ. ಪರಿಣಾಮವಾಗಿ ಪೇರೂರು ಗ್ರಾಮದ 48 ವರ್ಷದ ಅಪ್ಪಣ್ಣ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ. ಭಾನುವಾರ ಸಂಜೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಅಪ್ಪಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾತ್ರಿಯೇ ಅಪ್ಪಣ್ಣ ಮೃತಪಟ್ಟಿದ್ದರೂ, ರಾತ್ರಿಯಾಗಿದ್ದ ಕಾರಣ ಯಾರಿಗೂ ಗೊತ್ತಾಗಿಲ್ಲ. ಬೆಳಿಗ್ಗೆ ಗ್ರಾಮದ ಜನರು ಓಡಾಡುವ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

Bharachukki Falls: ಬೇಸಿಗೆಗೂ ಮುನ್ನವೇ ಬಣಗುಡುತ್ತಿದೆ ಭರಚುಕ್ಕಿ ಜಲಪಾತ; ಪ್ರವಾಸಿಗರಿಗೆ ನಿರಾಸೆ

ಇನ್ನು ಸೋಮವಾರಪೇಟೆ ತಾಲ್ಲೂಕಿನ ಕೂಗೂರಿನಲ್ಲೂ ಭಾನುವಾರ ಸಂಜೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಕೂಗೂರಿನ ಮೋಹನ್ ಎಂಬುವವರ ಕಾಫಿ ತೋಟದಲ್ಲಿ ಈ ಕಾರ್ಮಿಕರು ಕಾಫಿ ಹಣ್ಣು ಬಿಡಿಸುತ್ತಿದ್ದರು. ಈ ವೇಳೆ ಕಾಡಾನೆ ಹಠತ್ತಾನೆ ದಾಳಿ ನಡೆಸಿದೆ. ತಕ್ಷಣವೇ ಹೆಚ್ಚುಕೊಂಡ ಕಾರ್ಮಿಕರು ಸ್ಥಳಿಂದ ಓಡಿದ್ದಾರೆ. ಅಷ್ಟರಲ್ಲೇ ಸುಕೂರ್ ಮತ್ತು ಓಮೇಜ್ ಎಂಬಿಬ್ಬರು ದಾಳಿಯಿಂದ ಗಾಯಗೊಂಡಿದ್ದಾರೆ. ಪಕ್ಕದಲ್ಲೇ ಇದ್ದ ಕಾರ್ಮಿಕ ಮಹಿಳೆ ತನ್ನ ಎರಡು ವರ್ಷದ ರುಕ್ಮಿಯಾ ಎಂಬ ತನ್ನ ಮಗುವನ್ನು ಎತ್ತಿಕೊಂಡು ಓಡುವ ವೇಳೆ ಬಿದ್ದಿದ್ದಾರೆ. ಪರಿಣಾಮ ಮಗುವಿನ ಕೈ ಮುರಿದಿದೆ. ಎರಡು ಪ್ರಕರಣಗಳಲ್ಲೂ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೇರೂರಿನಲ್ಲಿ ಮೃತಪಟ್ಟ ಅಪ್ಪಣ್ಣ ಅವರ ಶವವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಆಗಮಿಸಿ ಮೃತ ವ್ಯಕ್ತಿಯನ್ನು ವೀಕ್ಷಿಸಿದರು. ಇದೇ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಶಾಸಕ ಕೆ.ಜಿ. ಬೋಪಯ್ಯ ತರಾಟೆಗೆ ತೆಗೆದುಕೊಂಡರು.

ಅರಣ್ಯದಂಚಿನಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ಸರಿಯಾದ ಸೌಲಭ್ಯ ಒದಗಿಸಲು ಬಿಡುತ್ತಿಲ್ಲ. ಇಲ್ಲ ಸಲ್ಲದ ಕಾನೂನುಗಳನ್ನು ಹೇಳುತ್ತಾ ಇಂದಿಗೂ ಅರಣ್ಯದಂಚಿನ ಜನರಿಗೆ ರಸ್ತೆ, ಬೀದಿ ದೀಪ ಸೇರಿದಂತೆ ಯಾವುದೇ ಸೌಲಭ್ಯ ಒದಗಿಸಲು ಅಡ್ಡಗಾಲು ಆಕುತ್ತಿದ್ದಾರೆ. ಹೀಗಾಗಿ ಅಪ್ಪಣ್ಣ ಅವರ ಸಾವಿಗೆ ಅರಣ್ಯ ಇಲಾಖೆಯೇ ನೇರ ಕಾರಣ ಅಂತ ತರಾಟೆಗೆ ತೆಗೆಕೊಂಡ್ರು. ಇನ್ನು ಮರಕಡಿದು ರಸ್ತೆಗಳನ್ನು ಮಾಡಿಕೊಳ್ಳುವುದಕ್ಕೆ ಹಾಡಿಯ ಜನರು ಎನ್‍ಓಸಿ ಪಡೆದಿರಲಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ಸಮಜಾಯಿಸಿ ಹೇಳಿದರು. ಇದಕ್ಕೆ ಮತ್ತಷ್ಟು ಸಿಟ್ಟಾದ ಶಾಸಕ ಬೋಪಯ್ಯ ಮೂಲಸೌಕರ್ಯ ಒದಗಿಸಲು ಎನ್‍ಓಸಿ ಪಡೆಯಬೇಕೆಂದು ಯಾವ ಕಾನೂನಿನಲ್ಲಿ ಇದೆ ತೋರಿಸ್ರಿ ಎಂದು ತರಾಟೆಗೆ ತೆಗೆದುಕೊಂಡ್ರು.
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹಿಂದೆಂದಿಗಿಂತಲೂ ಈ ಕಾಡಾನೆ ಮತ್ತು ಮಾನವ ಸಂಘರ್ಷ ಮಿತಿಮೀರಿದ್ದು ಸರ್ಕಾರಗಳು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
Published by: Latha CG
First published: December 29, 2020, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories