ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುವ ಆನೆ ಅರ್ಜುನನಿಗೆ ಎದುರಾಗಿದೆ ಸಂಕಷ್ಟ

ಸರ್ಕಾರದಿಂದ ದಸರಾ ಆನೆಗಳಿಗೆ ವಿಶೇಷ ಪ್ಯಾಕೇಜ್​ ಇದೆ. ದಸರಾ ಆನೆಗಳಿಗೆ ವರ್ಷಕ್ಕೊಮ್ಮೆ ಲಕ್ಷ-ಲಕ್ಷ ಹಣ ಬರುತ್ತಿದೆ. ಟೆಂಡರ್​ ಮೂಲಕ ವರ್ಷಕ್ಕೊಮ್ಮೆ ಆನೆಗಳಿಗಾಗಿ ಹಣ ವ್ಯಯ ಮಾಡುತ್ತಾರೆ. ಆದರೂ ಸಹ ಆನೆಗಳಿ ಸರಿಯಾದ ಆಹಾರ, ನೀರಿನ ವ್ಯವಸ್ಥೆ ಇಲ್ಲ.

Latha CG | news18
Updated:April 30, 2019, 2:37 PM IST
ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರುವ ಆನೆ ಅರ್ಜುನನಿಗೆ ಎದುರಾಗಿದೆ ಸಂಕಷ್ಟ
ಅರ್ಜುನ ಆನೆ
  • News18
  • Last Updated: April 30, 2019, 2:37 PM IST
  • Share this:
ಮೈಸೂರು,(ಏ.30): ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲಿ ಅರಮನೆ ನಗರಿ ಮೈಸೂರಿಗೆ ಗಜಪಡೆಯ ಆಗಮನವಾಗುತ್ತದೆ. ದಸರೆ ಮುಗಿಯುವವರೆಗೂ ಆನೆಗಳಿಗೆ ರಾಜಯೋಗ. ತಿನ್ನಲು ಹೊಟ್ಟೆ ತುಂಬಾ ಮೇವು, ಪ್ರತಿದಿನ ಸ್ನಾನ, ತಾಲೀಮು ಹೀಗೆ ಗಜಪಡೆಗೆ ನೆಮ್ಮದಿಯ ಜೀವನ ಇರುತ್ತದೆ. ಆದರೆ ದಸರಾ ಮುಗಿಯುತ್ತಿದ್ದಂತೆ ಮತ್ತೆ ಮರಳಿ ಕಾಡಿಗೆ ತೆರಳುವಾಗ ಗಜಪಡೆ ಒಲ್ಲದ ಮನಸ್ಸಿನಿಂದ ಹೊರಡುತ್ತವೆ. ಯಾಕೆಂದರೆ ಈ ವೇಳೆಗಾಗಲೇ ನಗರಕ್ಕೂ ಗಜಪಡೆಗೂ ಅವಿನಾಭಾವ ಸಂಬಂಧ ಬೆಸೆದುಕೊಂಡಿರುತ್ತದೆ. ಇದು ಪ್ರತಿವರ್ಷದ ಅನುಕರಣೆ.

ಆದರೆ ಕಾಡಿನಲ್ಲಿ ಆನೆಗಳ ಪಾಡು ಮಾತ್ರ ಶೋಚನೀಯವಾಗಿದೆ. ಸಿಟಿಗೆ ಬಂದರೆ ಸಿರಿತನ, ಕಾಡಿಗೆ ಮರಳಿದರೆ ಮತ್ತೆ ಬಡತನ.. ಇದು ಮೈಸೂರಿನ ದಸರಾ  ಗಜಪಡೆಯ ದುರಂತ ಸ್ಥಿತಿ.  ಹೌದು, ದಸರೆಯಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಬೆಣ್ಣೆ, ಕಾಳುಗಳ ಮೃಷ್ಟಾನ್ನ ಭೋಜನ. ವಾಪಸ್​ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದ ದಿನ ಇದು ದಸರಾ ಗಜಪಡೆಯ ಅಸಲಿ ಕಥೆ ವ್ಯಥೆ.

ಮೊನ್ನೆಯಷ್ಟೇ ನೀರು ಮೇವಿಲ್ಲದೆ ನಿತ್ರಾಣಗೊಂಡಿದ್ದ ದಸರಾ ಆನೆ ದ್ರೋಣ ಅಕಾಲ ಮರಣಕ್ಕೆ ತುತ್ತಾಗಿತ್ತು.  ಇದೀಗ ಅಂಬಾರಿ ಹೊರುವ ಅರ್ಜುನನಿಗೂ ಸಂಕಷ್ಟ ಕಾದಿದೆಯಾ..? ಎಂಬ ಆತಂಕ ಮನೆ ಮಾಡಿದೆ. ಹುಲಿ, ಚಿರತೆ, ಪುಂಡಾನೆ ಹಿಡಿಯಲು ಅರ್ಜುನ ಬೇಕು. ಆದರೆ ಮೇವು ನೀರು ಮಾತ್ರ ಇಲ್ಲ ಎಂಬಂತಹ ಸ್ಥಿತಿ ಇದೆ.

ಮೇವಿಗಾಗಿ ಪ್ರತಿನಿತ್ಯ ಕಿಲೋಮೀಟರ್​ಗಟ್ಟಲೇ ಸುತ್ತಾಟ ನಡೆಸುತ್ತಿದೆ ಅರ್ಜುನ ಆನೆ. ಕಾಡಿನಲ್ಲಿ ಒಂಟಿಯಾಗಿ ಮೇವು ಅರಸುತ್ತಾ ಸುತ್ತಾಡುವಾಗ ಕಾಡಾನೆಗಳ ದಾಳಿಗೆ ಒಳಗಾಗುವ ಸಂಭವವಿದೆ. ಈ ಹಿಂದೆ ಎರಡು-ಮೂರು ಬಾರಿ ಆಹಾರ ಅರಸಿಕೊಂಡು ಹೋದಾಗ ಕಾಡಿನೊಳಗೆ ತಪ್ಪಿಸಿಕೊಂಡಿತ್ತು.

ಇದನ್ನೂ ಓದಿ: Karnataka SSLC Result 2019: 46 ಶಾಲೆಗಳಲ್ಲಿ ಶೂನ್ಯ ಫಲಿತಾಂಶ; ಇದರಲ್ಲಿ ಒಂದೂ ಸರ್ಕಾರಿ ಶಾಲೆಯಿಲ್ಲ!

ಮೈಸೂರಿನ ಬಳ್ಳೆ ಅರಣ್ಯದಲ್ಲಿ ಅರ್ಜುನನ ರೋಧನೆಯನ್ನು ಕೇಳುವವರು ಯಾರೂ ಇಲ್ಲ. ಹುಣಸೂರಿನ ನಾಗರಹೊಳೆಯಲ್ಲಿ ಅರ್ಜುನನ ಪಾಡು ದೇವರಿಗೆ ಪ್ರೀತಿ. ಮೇಲ್ಚಾವಣಿ ಇಲ್ಲದ ಶೆಡ್​ ಅರ್ಜುನನ ಅರಮನೆ. ಮಾವುತ ವಿನಿಗೂ ಗುಡಿಸಲೇ ಅರಮನೆಯಾಗಿದೆ.

ಸರ್ಕಾರದಿಂದ ದಸರಾ ಆನೆಗಳಿಗೆ ವಿಶೇಷ ಪ್ಯಾಕೇಜ್​ ಇದೆ. ದಸರಾ ಆನೆಗಳಿಗೆ ವರ್ಷಕ್ಕೊಮ್ಮೆ ಲಕ್ಷ-ಲಕ್ಷ ಹಣ ಬರುತ್ತಿದೆ. ಟೆಂಡರ್​ ಮೂಲಕ ವರ್ಷಕ್ಕೊಮ್ಮೆ ಆನೆಗಳಿಗಾಗಿ ಹಣ ವ್ಯಯ ಮಾಡುತ್ತಾರೆ. ಆದರೂ ಸಹ ಆನೆಗಳಿ ಸರಿಯಾದ ಆಹಾರ, ನೀರಿನ ವ್ಯವಸ್ಥೆ ಇಲ್ಲ.ಸರ್ಕಾರದಿಂದ ಕ್ಯಾಂಪ್​​​ನಲ್ಲಿರುವ ಆನೆಗಳಿಗೆ ಬೆಲ್ಲ, ಭತ್ತ, ಒಣಹುಲ್ಲು, ತೆಂಗಿನಕಾಯಿ, ಅಕ್ಕಿ, ಉಪ್ಪು ಇನ್ನೂ ಮೊದಲಾದ ಆಹಾರ ಪದಾರ್ಥ ನೀಡಬೇಕು. ಆದರೆ ಈ ಎಲ್ಲಾ ಆಹಾರ ಪೂರೈಕೆಯಾಗುತ್ತಿದೆಯೇ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಆನೆ ಆಹಾರವನ್ನು ಟೆಂಡರ್​​ದಾರರೇ ನುಂಗುತ್ತಿದ್ದಾರಾ? ಎಂಬ ಅನುಮಾನವೂ ಸಹ ಕಾಡುತ್ತಿದೆ.

ಈಗಾಗಲೇ ಸ್ಥಳೀಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆದರೂ, ಈ ವರೆಗೂ ಯಾವುದೇ ವ್ಯವಸ್ಥೆ ಆಗಿಲ್ಲ. ಇದು ನಿರ್ಲಕ್ಷ್ಯವೊ.? ಅಥವಾ ಬೇಜವಬ್ದಾರಿಯೋ.? ತಿಳಿಯದಾಗಿದೆ. ದ್ರೋಣ ಹಾಗೂ ಹುಣಸೂರಿನ ಆನೆ ಸಾವಿನಿಂದ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

First published: April 30, 2019, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading