ರಾಜ್ಯಕ್ಕೆ ಬೆಳಕು ಕೊಡುವ ರಾಯಚೂರಿನಲ್ಲಿ 16 ವರ್ಷವಾದರೂ ಆರಂಭವಾಗದ ವಿದ್ಯುತ್ ವಿತರಣಾ ಕೇಂದ್ರಗಳು

ದೇವದುರ್ಗಾದಲ್ಲಿ 110 ಕೆವಿ ಸ್ಟೇಷನ್, ಮಸರಕಲ್ ನಲ್ಲಿ 33 ಹಾಗೂ ಜಾಲಹಳ್ಳಿಯಲ್ಲಿ 33 ಕೆವಿ ಸ್ಟೇಷನ್ ಗಳಿವೆ, ಈ ಸ್ಟೇಷನ್ ಗಳನ್ನು ಕ್ರಮವಾಗಿ 220 ಕೆವಿ, 110, 110 ಕೆವಿ ಸ್ಟೇಷನ್ ಗಳನ್ನಾಗಿ ಮೇಲ್ದರ್ಜೇಗೇರಿಸಿ ಸರಕಾರ 2004 ರಲ್ಲಿ ಸರಕಾರ ಮಂಜೂರಾತಿ ನೀಡಿದೆ.

ಆರಂಭವಾಗದ ವಿದ್ಯುತ್ ವಿತರಣಾ ಕೇಂದ್ರಗಳು

ಆರಂಭವಾಗದ ವಿದ್ಯುತ್ ವಿತರಣಾ ಕೇಂದ್ರಗಳು

  • Share this:
ರಾಯಚೂರು(ಫೆ.14): ರಾಜ್ಯಕ್ಕೆ ಸರಬರಾಜಾಗುವ ವಿದ್ಯುತ್ ನಲ್ಲಿ ಶೇ 40ರಷ್ಟು ಪಾಲು ರಾಯಚೂರಿನಲ್ಲಿ ಉತ್ಪಾದನೆಯಾಗುತ್ತಿದೆ. ರಾಜ್ಯಕ್ಕೆ ಬೆಳಕು ನೀಡುವ ರಾಯಚೂರು ಜಿಲ್ಲೆಯಲ್ಲಿಯೇ ವಿದ್ಯುತ್ ಸಮಸ್ಯೆ, ಆಗಾಗ ವಿದ್ಯುತ್ ಕೈ ಕೊಡುತ್ತಿದೆ. ಇದಕ್ಕೆ ಕಾರಣ ವಿದ್ಯುತ್ ವಿತರಣಾ ವ್ಯವಸ್ಥೆ ಸರಿ ಇಲ್ಲದಿರುವುದು, ಸಮರ್ಪಕ ವಿದ್ಯುತ್ ವಿತರಣೆಗಾಗಿ ಸರಕಾರದಿಂದ ಯೋಜನೆಗಳು ಮಂಜೂರಾದರೂ ನಿಗದಿತ ಸಮಯಕ್ಕೆ ಕಾಮಗಾರಿಗಳು ಪೂರ್ಣ ಗೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ದೇವದುರ್ಗಾ ತಾಲೂಕಿನಲ್ಲಿ ವಿದ್ಯುತ್  ಪ್ರಸರಣ ಕೇಂದ್ರಗಳು ಮೇಲ್ದರ್ಜೇಗೇರಿಸಿ ಸರಕಾರ ಮಂಜೂರಾದರೂ ಇಲ್ಲಿಯವರೆಗೂ ಕಾಮಗಾರಿಗಳು ಆರಂಭವಾಗಿಲ್ಲ. ಇದು ಅಧಿಕಾರಿಗಳ ದಿವ್ಯನಿರ್ಲಕ್ಷ್ಯ ಕ್ಕೆ ಸಾಕ್ಷಿಯಾಗಿದೆ.

ಆರ್ ಟಿಪಿಎಸ್ ಹಾಗೂ ವೈಟಿಪಿಎಸ್ ಗೆ ಭೂಮಿ ಕೊಟ್ಟು, ಧೂಳು, ಅಧಿಕ ಶಾಖದಿಂದ ರಾಯಚೂರು ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಇಂಥ ಜಿಲ್ಲೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಆದರೆ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸಿ ಕೊಡುವ ಜಿಲ್ಲೆಯ ಜನತೆ ಸ್ವಲ್ಪ ನೆಮ್ಮದಿಯಿಂದ ಇರಬಹುದು. ಆದರೆ ಇಲ್ಲಿ ಜನತೆ ಪರಿಸರ ನಾಶ ಒಂದು ಕಡೆ, ಇನ್ನೊಂದು ಕಡೆ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ಹಾಗಂತ ಸರಕಾರ ಇಲ್ಲಿ ಯೋಜನೆಗಳನ್ನು ನೀಡಿಲ್ಲ ಎಂದಲ್ಲ, ಇಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಿದ್ದರೂ ಈ ಯೋಜನೆಗಳು ಕಾರ್ಯಾರಂಭ ಮಾಡುತ್ತಿಲ್ಲ. ಇದು ಜಿಲ್ಲೆಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂಥ ಮಟ್ಟದಲ್ಲಿದೆ ಎನ್ನುವುದನ್ನು ಪುಷ್ಠೀಕರಿಸುತ್ತಿದೆ.

Petrol Diesel Price: ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಯಾವ್ಯಾವ ನಗರಗಳಲ್ಲಿ ಎಷ್ಟೆಷ್ಟಿದೆ ರೇಟು?

ದೇವದುರ್ಗಾ ತಾಲೂಕಿನಲ್ಲಿ ದೇವದುರ್ಗಾದಲ್ಲಿ 110 ಕೆವಿ ಸ್ಟೇಷನ್, ಮಸರಕಲ್ ನಲ್ಲಿ 33 ಹಾಗೂ ಜಾಲಹಳ್ಳಿಯಲ್ಲಿ 33 ಕೆವಿ ಸ್ಟೇಷನ್ ಗಳಿವೆ, ಈ ಸ್ಟೇಷನ್ ಗಳನ್ನು ಕ್ರಮವಾಗಿ 220 ಕೆವಿ, 110, 110 ಕೆವಿ ಸ್ಟೇಷನ್ ಗಳನ್ನಾಗಿ ಮೇಲ್ದರ್ಜೇಗೇರಿಸಿ ಸರಕಾರ 2004 ರಲ್ಲಿ ಸರಕಾರ ಮಂಜೂರಾತಿ ನೀಡಿದೆ. ಈ ಸ್ಟೇಷನ್ ಗಳಿಗೆ ಕೆಪಿಟಿಸಿಎಲ್ ನಿಂದ ಭೂಮಿ ಗುರುತಿಸಿ ಸ್ಟೇಷನ್ ಮೇಲ್ದರ್ಜೇಗೇರಿಸಬೇಕಾಗಿದೆ. ಆದರೆ ಸರಕಾರದಿಂದ ಮಂಜೂರಾಗಿ 16 ವರ್ಷವಾದರೂ ಇಲ್ಲಿಯವರೆಗೂ ಸ್ಟೇಷನ್ ಗಳಿಗೆ ಬೇಕಾಗುವ ಭೂಮಿ ಗುರುತಿಸಿಲ್ಲ.

ಇದರಲ್ಲಿ ಜಾಲಹಳ್ಳಿ ಗ್ರಾಮದಲ್ಲಿರುವ 33 ಕೆವಿ ಸ್ಟೇಷನ್ ತಗ್ಗಿನಲ್ಲಿದೆ. ಮಳೆಗಾಲದಲ್ಲಿ ಈ ಸ್ಟೇಷನ್ ಹೊಂಡವಾಗುತ್ತದೆ.  ಸುಮಾರು 3-4 ತಿಂಗಳು ಈ ಸ್ಟೇಷನ್ ವಿದ್ಯುತ್ ಪ್ರಸರಣ ಸ್ಥಗಿತಗೊಳಿಸುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ವಿದ್ಯುತ್ ಭೂಮಿಯಲ್ಲಿ ಪ್ರವಹಿಸಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಈ ಸ್ಟೇಷನ್ ಬಂದ್ ಮಾಡಿ ಪಕ್ಕದ ಸ್ಟೇಷನ್ ಗಳಿಂದ ವಿದ್ಯುತ್ ವಿತರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆಗಾಗ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ.

ಇದು ಜಾಲಹಳ್ಳಿಯದು ಒಂದು ಸಮಸ್ಯೆಯಾದರೆ ಮಸರಕಲ್ ಹಾಗೂ ದೇವದುರ್ಗಾ ಸ್ಟೇಷನ್ ಗಳಲ್ಲಿಯೂ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗೆ ಫುಲ್ ಸ್ಟಾಫ್ ಇಟ್ಟು ಸಮರ್ಪಕ ವಿದ್ಯುತ್ ವಿತರಣೆಗೆ ವ್ಯವಸ್ಥೆಗೆ ಸರಕಾರದಿಂದ ಸ್ಟೇಷನ್ ಮೇಲ್ದರ್ಜೇಗೇರಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಯಾಗಿ ಶಾಸಕ ಶಿವನಗೌಡ ನಾಯಕ ಅಧಿಕಾರಿಗಳ ವಿರುದ್ದ ಫುಲ್ ಗರಂ ಆಗಿದ್ದರು.

ಪ್ರತ್ಯೇಕವಾಗಿ ಭೂಮಿ ಗುರುತಿಸಿ ಕೆಪಿಟಿಸಿಎಲ್ ಗೆ ನೀಡಲು ಮುಂದಾಗದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಟುವಾದ ಶಬ್ದಗಳಿಂದ ಆರೋಪಿಸಿದ್ದರು. ಈ ಸಭೆ ನಡೆದ ನಂತರವಾದರೂ ಕೆಪಿಟಿಸಿಎಲ್ ಅಧಿಕಾರಿಗಳು ಮೇಲ್ದರ್ಜೇಗೇರಿಸಿದ ಸ್ಟೇಷನ್ ಗಳ ಕಾಮಗಾರಿ ಆರಂಭಿಸುವುದೇ ಕಾದು ನೋಡಬೇಕು.
Published by:Latha CG
First published: